ನವದೆಹಲಿ: ಭಾರತದಲ್ಲಿ ಬೇಸಿಗೆ ಬೇಗೆ ಆರಂಭವಾಗಿದ್ದು, ಬಿಸಿ ಗಾಳಿಯ ಅಲೆಗೆ ಜನರು ತತ್ತರಿಸುತ್ತಿದ್ದಾರೆ. ಈ ಸಮಯದಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ದೇಶದೆಲ್ಲೆಡೆ ಸೋಮವಾರು 36 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿನ ತಾಪಮಾನ ದಾಖಲಾಗಿದೆ. ಅದರಲ್ಲೂ ಕೇಂದ್ರ ಮತ್ತು ಉತ್ತರ ಭಾರತದಲ್ಲಿ ಉಷ್ಣಾಂಶ 42 ಡಿಗ್ರಿ ದಾಖಲಾಗಿದೆ.
ದೆಹಲಿಯಲ್ಲಿ 40.6 ಡಿಗ್ರಿ ತಾಪಮಾನ ದಾಖಲಾಗಿದ್ದು, ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ. ಸತತ ಮೂರನೇ ದಿನ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದೆ. ಉನ್ನು ಈ ಕುರಿತು ಮಾತನಾಡಿದ ಪುಣೆಯ ಸೂರ್ಯ ಮಥರ್ ಅಂಡ್ ಚಿಲ್ಡ್ರನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ನಲ್ ಮೆಡಿಸಿನ್ನ ಡಾ ಅನುಪ್ ಲಟ್ನೆ, ಅತಿಯಾದ ತಾಪ ಮಾರಣಾಂತಿಕವಾಗಿದ್ದು, ವಿಶೇಷವಾಗಿ ಭಾರತದಲ್ಲಿ ತಂಪಾಗಿಸುವಿಕೆ ಕಡಿಮೆ ಇದೆ ಎಂದಿದ್ದಾರೆ.
ಶಾಖದ ಅಲೆ ಪರಿಣಾಮ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಮತ್ತು ಹಿರಿಯ ನಾಗರೀಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಹೊರ ಹೋಗುವುದುನ್ನು ತಪ್ಪಿಸಬೇಕು. ಈ ವರ್ಗದ ಜನರು ಅಧಿಕ ತಾಪಮಾನದ ಪರಿಸ್ಥಿತಿಯಿಂದ ಹೆಚ್ಚಿನ ನಿರ್ಜಲೀಕರಣ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಸೀನಿಯರ್ ಕನ್ಸ್ಲಟೆಂಟ್ ಡಾ ರಾಜೀವ್ ಗುಪ್ತಾ ತಿಳಿಸಿದ್ದಾರೆ.
ಶಾಖದ ಅಲೆಯಿಂದ ತಲೆ ಸುತ್ತು, ಬೇವರು, ವಾಂತಿ ಮತ್ತು ಸ್ನಾಯು ಸೆಳೆತ ಉಂಟಾಗಬಹುದು. ಬಹುತೇಕ ಪ್ರಕರಣದಲ್ಲಿ ಕೆಲವರು ಶಾಖದ ಸ್ಟ್ರೋಕ್ ಗೆ ಒಳಗಾಗಬಹುದು. ಜೊತೆಗೆ ಇದು ಅನೇಕರಲ್ಲಿ ಆಲಸ್ಯ, ದೇಹ ನೋವು, ದುರ್ಬಲತೆ ಮತ್ತು ಕಿಡ್ನಿ ಕಾರ್ಯ ಚಟುವಟಿಕೆಯಲ್ಲಿ ತೊಡಕು, ಬಿಪಿ ಇಳಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬಿಸಿ ಗಾಳಿ ಕುರಿತು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರಾಜ್ಯ ಸರ್ಕಾರ ಈಗಾಗಲೇ ಮಾರ್ಗದರ್ಶನವನ್ನು ಬಿಡುಗಡೆ ಮಾಡಿದೆ. ಶಾಲೆಗಳನ್ನು ಮಧ್ಯಾಹ್ನದ ಬಳಿಕ ಬಂದ್ ಮಾಡುವಂತೆ ಸೂಚಿಸಿದೆ. ಏತನ್ಮಾಥ್ಯೆ, ಭಾರತೀಯ ಹವಮಾನ ಇಲಾಖೆ (ಐಎಂಡಿ) ಕೂಢ ಜನರಿಗೆ ಈ ಬಿಸಿಲಿನಿಂದ ನಿರ್ಜಲೀಕರಣಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ನೀಡಿದೆ.
ಈ ಬಿಸಿಲಿನ ಸಮಯದಲ್ಲಿ ದಿನಕ್ಕೆ ಕನಿಷ್ಟ ಎಂದರೆ 2-2.5 ಲೀಟರ್ ನೀರನ್ನು ಕೂಡಿಸುತ್ತಿರಬೇಕು. ಯಾವುದಾದರೂ ಲಕ್ಷಣ ಕಂಡು ಬಂದರೆ, ಉಪ್ಪು ನೀರು, ಏಳನೀರು ಮತ್ತು ನಿಂಬೆ-ಉಪ್ಪು ನೀರನ್ನು ಸೇವಿಸುವುದು ಒಳಿತು. ಶಾಖ ಸಂಬಂಧಿತ ಸಮಸ್ಯೆ ನಿವಾರಣೆಗೆ ಹೆಚ್ಚು ಕಾಲ ಬಿಸಿಲಿಗೆ ಒಡ್ಡಿಕೊಳ್ಳದಂತೆ ಕಾಪಾಡಿಕೊಳ್ಳಬೇಕು. ಬಿಸಿಲಿನಲ್ಲಿ ವ್ಯಾಯಾಮವನ್ನು ಮಾಡುವುದು ಸೂಕ್ತವಲ್ಲ ಎಂದು ಕೂಡ ವೈದ್ಯರು ತಿಳಿಸಿದ್ದಾರೆ.
ಹೀಟ್ ಸ್ಟ್ರೋಕ್ ಗಂಭೀರ ವೈದ್ಯಕೀಯ ಸಮಸ್ಯೆಯಾಗಿದ್ದು, ತಕ್ಷಣಕ್ಕೆ ಅವರನ್ನು ತಂಪು ಮಾಡದಿದ್ದರೆ, ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಡಾ ಅಜಯ್ ಅಗರ್ವಾಲ್ ತಿಳಿಸಿದ್ದಾರೆ. ಈ ಹಿನ್ನೆಲೆ ದೇಹವನ್ನು ತಂಪಾಗಿಡುವ ಜೊತೆಗೆ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಈ ಸಮಯದಲ್ಲಿ ಕೆಫಿನ್ ಅಂಶ ಸೇವನೆ ಬೇಡ. ಹೆಚ್ಚು ದ್ರವ ಆಹಾರ ಸೇವಿಸುವುದು ಉತ್ತಮ. ಪಾನೀಯ ಬದಲಾಗಿ, ಜ್ಯೂಸ್, ಮಜ್ಜಿಗೆ ಸೇವನೆ ಸಹಾಯವಾಗುತ್ತದೆ. ಪ್ರೋಟಿನ್ ಅನ್ನು ಕಡಿಮೆ ಮಾಡಿ, ನೀರಿನಾಂಶ ಹೊಂದಿರುವ ತರಕಾರಿ ಮತ್ತು ಹಣ್ಣುಗಳ ಸೇವನೆ ಉತ್ತಮ ಎಂದಿದ್ದಾರೆ.
ಇದನ್ನು ಓದಿ: ಬೇಸಿಗೆ ಟ್ಯಾನ್ನಿಂದ ಮುಕ್ತಿ ಪಡೆಯಲು ಇಲ್ಲಿವೆ 10 ಸರಳ ಉಪಾಯಗಳು