ETV Bharat / sukhibhava

ಶಾರ್ಟ್​ ಹೇರ್​ ಆದ್ರೆ ಏನಂತೆ? ಇಲ್ಲಿದೆ ನೋಡಿ ಟ್ರೆಂಡಿ ಹೇರ್​ ಸ್ಟೈಲ್​ ಐಡಿಯಾ

ಸಣ್ಣ ಕೂದಲಿಗೆ ಯಾವ ಕೇಶ ವಿನ್ಯಾಸ ಮಾಡಿದರೆ ಸೂಕ್ತ? ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಪರಿಹಾರ ಇಲ್ಲಿದೆ.

author img

By

Published : May 9, 2023, 10:32 AM IST

Here is a trendy hairstyle idea for Frizzy hair

ಕೂದಲು ಉದುರುವ ಸಮಸ್ಯೆ ಅನೇಕರನ್ನು ಬಾಧಿಸುತ್ತದೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಉಂಟಾಗುವ ಈ ತೊಂದರೆಯಿಂದ ಅವರು ತಮ್ಮ ನೆಚ್ಚಿನ ಕೇಶ ವಿನ್ಯಾಸ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದು. ಚಿಂತೆ ಬೇಡ. ನಿಮ್ಮ ಮುರಿದ, ತೆಳುವಾದ ಕೂದಲನ್ನು ಸುಲಭವಾಗಿ ನಿಭಾಯಿಸಬಹುದು ಎನ್ನುತ್ತಾರೆ ಹೇರ್​ ಕೇರ್​ ಬ್ರಾಂಡ್​ನ ಬ್ಯುಸಿನೆಸ್​ ಮ್ಯಾನೇಜರ್​ ಭಾವುನ್​ ಭೇದಾ.

ಮೆಸ್ಸಿ ಬನ್​: ಸಣ್ಣ ಮತ್ತು ಪುಡಿಕೂದಲು ನಿಮಗಿದ್ದರೆ ಬಹುತೇಕರ ಅಚ್ಚುಮೆಚ್ಚಿನ ವಿನ್ಯಾಸವಾದ ಮೆಸ್ಸಿ ಬನ್​ ಟ್ರೈ ಮಾಡಬಹುದು. ಇದು ಕ್ಲಾಸಿಕ್​ ಹೇರ್​ಸ್ಟೈಲ್​. ನಿಮ್ಮ ಸುಕ್ಕುಗಟ್ಟಿದ ಕೂದಲನ್ನು ನೈಸರ್ಗಿಕವಾಗಿ ಕಾಪಾಡುತ್ತದೆ. ಸಡಿಲವಾಗಿ ಆಗುವ ಈ ಬನ್​ ನಿಮ್ಮ ಕೂದಲ ರಕ್ಷಣೆ ಮಾಡುತ್ತದೆ.

ಲೋ ಪೋನಿಟೇಲ್​: ಬೆಳಗಿನ ಬಿಡುವಿಲ್ಲದ ಸಮಯದಲ್ಲಿ ಯಾವ ಕೇಶ ವಿನ್ಯಾಸ ಮಾಡುವುದು ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಪೋನಿಟೈಲ್​ ಸೂಕ್ತ. ಇದನ್ನು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಲು ಕೂದಲ ಮುಂಭಾಗದಲ್ಲಿ ಕೊಂಚ ಟ್ವಿಸ್ಟ್​ ಕೊಡಬಹುದು.

ಟಾಪ್​ ನಾಟ್​: ಕಡಿಮೆ ಅವಧಿಯಲ್ಲಿ ಸುಲಭವಾದ ಕೇಶವಿನ್ಯಾಸದಲ್ಲಿ ಇದು ಕೂಡ ಒಂದು. ಕೂದಲನ್ನು ಸೇರಿಸಿ ಅದನ್ನು ಪೋನಿಟೇಲ್​ ರೀತಿ ಹಾಕಬಹುದು. ಕೂದಲನ್ನು ಚೆನ್ನಾಗಿ ಟ್ವಿಸ್ಟ್​ ಮಾಡಿ, ತುರುಬಿನ ರೀತಿ, ಬಾಬಿ ಪಿನ್​ನಲ್ಲಿ ಕಟ್ಟಿ .

ಹಾಫ್​ ಅಪ್​-ಹಾಫ್​ ಡೌನ್​: ಬಹುತೇಕರ ನೆಚ್ಚಿನ ಕೇಶ ವಿನ್ಯಾಸದಲ್ಲಿ ಇದು ಕೂಡಾ ಒಂದು. ಅರ್ಧ ಕೂದಲನ್ನು ಜುಟ್ಟಿನ ರೀತಿ ಬಿಗಿದು, ಕೆಳಗಿನ ಅರ್ಧ ಕೂದಲನ್ನು ಹಾಗೇ ಗಾಳಿಯಲ್ಲಿ ಹಾರಾಡಲು ಬಿಡಿ. ಇದರಿಂದ ಕೂದಲು ಪದೇ ಪದೇ ಮುಖದ ಮೇಲೆ ಬರುವ ತೊಂದರೆ ಕಾಡದು.

ಫ್ರೆಂಚ್​ ಬ್ರೈಡ್​: ಪುಡಿಕೂದಲಿನ ಜೊತೆಗೆ ಸಣ್ಣ ಕೂದಲನ್ನು ಹೊಂದಿರುವವರಿಗೆ ಸೂಕ್ತವಾದ ಸ್ಟೈಲಿಶ್​ ಹೇರ್​ಸ್ಟೈಲ್​ ಇದಾಗಿದೆ. ಫ್ಯಾಷನ್ ಪ್ರಪಂಚದ ಅನುಮೋದಿತ ಟ್ರೆಂಡ್‌ಗಳಲ್ಲಿ ಇದು ಕೂಡ ಒಂದು. ಟ್ರೆಂಡಿಂಗ್ ಹೇರ್‌ಸ್ಟೈಲ್ ಆಗಿದ್ದು, ಕ್ಯಾಶುಯಲ್ ಸಂದರ್ಭಗಳಲ್ಲಿ ಪರಿಪೂರ್ಣವಾಗಿದೆ.

ಸೈಡ್​ ಬ್ರೈಡ್​​: ಉದ್ದ ಕೂದಲಿರುವವರಿಗೆ ಈ ಸ್ಟೈಲ್​ ಉತ್ತಮ ಆಯ್ಕೆ. ತಲೆಯ ಒಂದು ಬದಿಯಲ್ಲಿ ಎಲ್ಲ ಕೂದಲನ್ನೂ ಸೇರಿಸಿ, ಅದಕ್ಕೆ ಸಣ್ಣ ಜಡೆ ಹೆಣೆಯುವುದರಿಂದ ಕೂದಲಿನ ಅಂದ ಕೂಡ ಹೆಚ್ಚುತ್ತದೆ.

ಫಿಶ್​ಟೈಲ್​ ಬ್ರೈಡ್: ವಧುವಿನ ಕೇಶ ವಿನ್ಯಾಸದಲ್ಲಿ ಇದು ಟ್ರೆಂಡಿಯಾಗಿದ್ದು, ಸಣ್ಣ ಕೂದಲಿನವರಿಗೆ ಇದು ಉತ್ತಮ ಆಯ್ಕೆ. ಕೂದಲ ಕೂಡ ದಟ್ಟವಾಗಿರುವಂತೆ ಕಾಣುತ್ತದೆ. ಭಾರತೀಯ ಕೇಶ ವಿನ್ಯಾಸದಲ್ಲಿ ನಾಲ್ಕು ಕಾಲಿನ ಜಡೆಯ ರೀತಿಯಲ್ಲಿರುವ ಇದಕ್ಕೆ ಕೊಂಚ ತರಬೇತಿ ಬೇಕು. ಒಮ್ಮೆ ಇದನ್ನು ಕಲಿತರೆ ಇದರಲ್ಲಿ ನೀವು ಮಾಸ್ಟರ್​ ಆಗುತ್ತೀರಾ.

ಇದನ್ನೂ ಓದಿ: ನಿಮ್ಮ ನಿದ್ದೆಗೆ ಅಡ್ಡಿಪಡಿಸುವ ಅಭ್ಯಾಸಗಳಿವು; ಮೊದಲು ಬದಲಾಯಿಸಿಕೊಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.