ETV Bharat / sukhibhava

ಬೇಸಿಗೆ ಟ್ಯಾನ್​ನಿಂದ ಮುಕ್ತಿ ಪಡೆಯಲು ಇಲ್ಲಿವೆ 10 ಸರಳ ಉಪಾಯಗಳು

ಸುಡು ಬಿಸಿಲಿಗೆ ಮೈ ಒಡ್ಡುವುದರಿಂದ ಉಂಟಾಗುವ ಈ ಟ್ಯಾನಿಂಗ್​ ಹಲವು ವೇಳೆ ಸಮಸ್ಯೆಗೆ ಪರಿಹಾರ ಮಾಡುತ್ತದೆ.

Here are 10 simple tips to get rid of summer tan

author img

By

Published : Apr 18, 2023, 4:18 PM IST

ನವದೆಹಲಿ: ಬೇಸಿಗೆಯಲ್ಲಿ ನಿರಂತಕವಾಗಿ ಹೊರಗಿನ ಚಟುವಟಿಕೆಗಳಿಗೆ ಯೋಜನೆ ರೂಪಿಸಬಹುದು. ಚಾರಣ ಸೇರಿದಂತೆ ಇನ್ನಿತರ ಮೋಜುಗಳಿಗೆ ಬೇಸಿಗೆ ಸೂಕ್ತ ಸಮಯ. ಆದರೆ, ಮೈಮರೆತು ಬಿಸಿಲಿನ ಓಡಾಟ ಹೆಚ್ಚು ಮಾಡುವುದರಿಂದ ದೇಹವನ್ನು ಟ್ಯಾನ್​ ಆಗಿಸುವ ಭಯ ಮೂಡುತ್ತದೆ. ಸುಡು ಬಿಸಿಲಿಗೆ ಮೈಯನ್ನು ಒಡ್ಡುವುದುರಿಂದ ಚರ್ಮ ಕಂದುಬಣ್ಣಕ್ಕೆ​ ತಿರುಗುವ ಸಾಧ್ಯತೆ ಇದೆ. ಈ ವೇಳೆ ಇಂತಹ ಚಟುವಟಿಕೆಯಿಂದ ದೂರ ಇರುವಂತೆ ಮಾಡುತ್ತದೆ. ಆದರೆ, ಇಂತಹ ಟ್ಯಾನಿಂಗ್​ನಿಂದ ತಪ್ಪಿಸಿಕೊಳ್ಳುವುದು ಇದೀಗ ಸುಲಭ. ಕೆಲವು ಸರಳ ಮನೆ ಮದ್ದುಗಳನ್ನು ಬಳಸಿಕೊಂಡು ಈ ಟ್ಯಾನಿಂಗ್​ ಅನ್ನು ತೊಡೆದು ಹಾಕಬಹುದು. ಇದಕ್ಕಾಗಿ ಆಯುರ್ವೇದಿಕ್​ ಸ್ಕೀನ್​ಕೇರ್​ ಮತ್ತು ಬ್ಯೂಟಿ ಪ್ರೊಡಕ್ಟ್​ ಬ್ರಾಂಡ್​ನ ಸಹ ಸಂಸ್ಥಾಪಕರಾದ ಶ್ರೀಧಾ ಸಿಂಗ್​ ಕೆಲವು ಆಯುರ್ವೇದಿಕ್​ ಉಪಾಯಗಳನ್ನು ನೀಡಿದ್ದಾರೆ

ಆಯುರ್ವೇದಿಕ್​ ಬಾಡಿ ಮಸಾಜ್​​: ಎರಡು ಟೀ ಸ್ಪೂನ್​ ತ್ರಿಫಲ ಚೂರ್ಣಕ್ಕೆ ಚಿಟಿಕೆ ಅರಿಶಿಣ, ಟಿ. ಸ್ಪೂನ್​ ಕಡಲೆ ಹಿಟ್ಟು ಮತ್ತು ಕೆಲವು ಹನಿ ರೋಸ್​ ವಾಟರ್​ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಈ ಮಿಶ್ರಣವನ್ನು ಟ್ಯಾನ್​ ಆಗಿರುವ ಜಾಗದಲ್ಲಿ ಚೆನ್ನಾಗಿ ಮಸಾಜ್​ ಮಾಡಿ, 15 ನಿಮಿಷದ ಬಳಿಕ ಚೆನ್ನಾಗಿ ತೊಳೆಯಿರಿ.

ಕಾಫಿ ಬಾಡಿ ಸ್ಕ್ರಬ್​: ಒಂದು ಅಥವಾ ಎರಡು ಟಿ. ಸ್ಪೂನ್​ ಬಾದಾಮಿ ಅಥವಾ ತೆಂಗಿನ ಎಣ್ಣೆ, ಅರ್ಥ ಚಮಚ ಸಕ್ಕರೆ, ಒಂದೆರಡು ಹನಿ ನಿಂಬೆ ರಸ, ಒಂದು ಟಿ. ಕಾಫಿ ಪೌಡರ್​ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದೇಹಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿ ಒಣಗಲು ಬಿಡಿ. ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ದಿನ ಹೀಗೆ ಮಾಡುವುದರಿಂದ ತ್ವಚೆ ಹೊಳಪು ಕಾಣುತ್ತದೆ.

ಪಪ್ಪಾಯ ಮಾಸ್ಕ್​: ಚರ್ಮಕ್ಕೆ ಅದ್ಭುತ ಪ್ರಯೋಜನ ನೀಡುವ ಪದಾರ್ಥದಲ್ಲಿ ಪಪ್ಪಾಯ ಕೂಡಾ ಒಂದು. ಈ ಹಣ್ಣಿನಲ್ಲಿ ಎನ್​ಜಿಮಾ ಇದ್ದು, ಇದು ಚರ್ಮವನ್ನು ಡಿ ಟ್ಯಾನ್​ ಮಾಡಿ, ಹೊಳಪು ನೀಡುತ್ತದೆ. ಹೆಚ್ಚುವರಿಯಾಗಿ ಇದು ಚರ್ಮದ ಹುಣ್ಣನ್ನು ನಿವಾರಣೆ ಮಾಡಿ, ದೇಹದ ಕಂದು ಬಣ್ಣವನ್ನು ತೆಗೆದು ಹಾಕುತ್ತದೆ. ಒಂದು ಟೇಬಲ್​ ಸ್ಪೂನ್​ ಜೇನು ತುಪ್ಪ ಮತ್ತು ಅರ್ಧ ಕಳಿತ ಪಪ್ಪಾಯ ತಿರುಳು ಒಂದು ಬಟ್ಟಲನ್ನು ತೆಗೆದುಕೊಂಡು ಅದನ್ನು ಟ್ಯಾನ್​ ಆದ ದೇಹದ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿ ಹತ್ತು ನಿಮಿಷದ ಬಳಿಕ ಚೆನ್ನಾಗಿ ತೊಳೆಯಿರಿ. ಇದಾದ ಬಳಿಕ ಮಾಶ್ಚರೈಸರ್ ಹಚ್ಚಿ. ​

ನಲ್ಪಮರದಿತೈಲಂ: ಈ ಎಣ್ಣೆ ದೇಹಕ್ಕೆ ಹೊಳಪಿನ ಜೊತೆಗೆ ಹಗುರ ಭಾವನೆಯನ್ನು ಉಂಟು ಮಾಡುತ್ತದೆ. ಜೊತೆಗೆ ಚರ್ಮಕ್ಕೆ ಬೇಕಾದ ಪೋಷಕಾಂಶದ ಆರೈಕೆ ಕೂಡಾ ಮಾಡುತ್ತದೆ.

ಅರಿಶಿಣ ಮತ್ತು ಕಡಲೆಹಿಟ್ಟಿನ ಪ್ಯಾಕ್​​: ಎರಡು ಟೇಬಲ್​ ಸ್ಪೂನ್​ ಕಡಲೆಹಿಟ್ಟಿಗೆ ಒಂದು ಟೀ ಸ್ಪೂನ್​ ಹಾಲು ಅಥವಾ ಮೊಸರು ಮತ್ತು ಒಂದು ಟಿ. ಸ್ಪೂನ್​ ಅರಿಶಿಣ ಪುಡಿಯ ಗಟ್ಟಿ ಪ್ಯಾಪ್​ ಮಾಡಿ. ಸೂರ್ಯನಿಂದ ಬಾಧಿತ ಪ್ರದೇಶಗಳಿಗೆ ಚೆನ್ನಾಗಿ ಹಚ್ಚಿ. 30 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಾಳೆಹಣ್ಣು ಮತ್ತು ಜೇನುತುಪ್ಪದ ಪ್ಯಾಕ್​: ಚೆನ್ನಾಗಿ ಕಳಿತ ಬಾಳೆಹಣ್ಣಿಗೆ ಒಂದು ಚಮಚ ಜೇನುತುಪ್ಪ, ಕೆಲವು ಹನಿ ಹಾಲು ಮತ್ತು ಮಲೈ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಟ್ಯಾನ್( ಚರ್ಮ ಕಂದು ಬಣ್ಣಕ್ಕೆ ತಿರುಗಿರುವ)​ ಆಗಿರುವ ಕಡೆ ಹಚ್ಚಿ. 15 ನಿಮಿಷದ ಬಳಿಕ ಚೆನ್ನಾಗಿ ತೊಳೆಯಿರಿ.

ತೆಂಗಿನ ಹಾಲು: ನೈಸರ್ಗಿಕವಾಗಿ ಕಂದುಬಣ್ಣವನ್ನು ಸುಲಭವಾಗಿ ಇದು ಶಮನ ಮಾಡುತ್ತದೆ. ವಿಟಮಿನ್​ ಸಿ ಮತ್ತು ಲ್ಯಾಕ್ಟಿಕ್​ ಆಮ್ಲ ತೆಂಗಿನ ಹಾಲಿನಲ್ಲಿ ಯಥೇಚ್ಛವಾಗಿದ್ದು, ಇದು ಚರ್ಮಕ್ಕೆ ಹೆಚ್ಚು ಪರಿಣಾಮಕಾರಿ. ಜೊತೆಗೆ ಇದು ಮಾಶ್ಚರೈಸರ್​ ಮಾಡಿ ಪೋಷಕಾಂಶವನ್ನು ನೀಡುತ್ತದೆ. ಇದರಿಂದ ಚರ್ಮ ಕೂಡ ಹೈಡ್ರೇಟ್​ ಆಗಿ ಇರುತ್ತದೆ.

ಹೆಸರುಬೇಳೆ, ಆಲೋವೆರಾ ಮತ್ತು ಟೊಮೆಟೊ ಪ್ಯಾಕ್​: ಆಲೋವೇರಾಗೆ ಟೊಮೇಟೊ, ಹೆಸರು ಬೇಳೆ ಹಾಕಿ ಮಿಕ್ಸ್​ ಮಾಡಿ, ಪೇಸ್ಟ್​ ತಯಾರಿಸಿ, ಈ ಪೇಸ್ಟ್​​ ಅನ್ನು ದೇಹದ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ವಾರದಲ್ಲಿ ಎರಡು ವಾರ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು.

ಅಕ್ಕಿಹಿಟ್ಟಿನ ಸ್ಕ್ರಾಬ್​: 1-2 ಸ್ಪೂನ್​ ಅಕ್ಕಿ ಹಿಟ್ಟಿಗೆ ಹಾಲು ಹಾಕಿ ಬೆನ್ನಾಗಿ ಮಿಶ್ರಣ ಮಾಡಿ, ಬಳಿಕ ಕೈ-ಕಾಲು ಮುಖಕ್ಕೆ ಹಚ್ಚಿ. 20 ನಿಮಿಷವಾದ ಬಳಿಕ ಸಾಮಾನ್ಯ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

ಸನ್​ಸ್ಕ್ರೀನ್​ ಬಳಕೆ: ಚರ್ಮವೂ ಬಿಸಲಿಗೆ ಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ತೆಗೆಯಲು ತಿಂಗಳು ಕಾಲ ಬೇಕಾಗುವುದು. ಈ ಹಿನ್ನೆಲೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವ ಮೊದಲು ಸನ್​ಸ್ಕ್ರೀನ್​ ಹಚ್ಚುವುದು ಅವಶ್ಯ.

ಇದನ್ನೂ ಓದಿ: ಸಸ್ಯಹಾರಿಗಳಲ್ಲಿ ಕಾಡುವ ವಿಟಮಿನ್​ ಬಿ 12 ಕೊರತೆಗೆ ಇಲ್ಲಿದೆ ಪರಿಹಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.