ETV Bharat / sukhibhava

ಇನ್ನೆರಡು ವರ್ಷದಲ್ಲಿ ಕಡಿಮೆ ಬೆಲೆಗೆ ಹಾರ್ಟ್ ವಾಲ್ವ್ ಲಭ್ಯ.. ಬಡ ಹೃದ್ರೋಗಿಗಳಿಗೂ ಸಿಗಲಿದೆ ಮರುಜೀವ - ಕಡಿಮೆ ಬೆಲೆಗೆ ದೇಶಿಯ ವಾಲ್ಟ್​ಗಳು

ಮುಂದಿನ ಎರಡು ವರ್ಷದಲ್ಲಿ ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ದೊರಕಲಿದ್ದು, ಅತಿ ಕಡಿಮೆ ಬೆಲೆಗೆ ದೇಶಿಯ ವಾಲ್ಟ್​ಗಳು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರಿಗೆ ಲಭಿಸಲಿದೆ. ಶೇಕಡ 80ರಷ್ಟು ಹಣ ದೇಶಿಯ ವಾಲ್ಟ್​ಗಳಿಂದ ಉಳಿತಾಯ ಆಗಲಿದ್ದು, ಬಡವರಿಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ.

heart-valves-rate-high-in-india
ಇನ್ನೆರಡು ವರ್ಷದಲ್ಲಿ ಕಡಿಮೆ ಬೆಲೆಗೆ ಹಾರ್ಟ್ ವಾಲ್ವ್ ಲಭ್ಯ
author img

By

Published : Oct 23, 2022, 8:26 PM IST

ಬೆಂಗಳೂರು: ದುಬಾರಿ ಬೆಲೆ ಎಂಬ ಕಾರಣಕ್ಕೆ ಸಾಕಷ್ಟು ಬಡ ರೋಗಿಗಳು ಸಕಾಲಕ್ಕೆ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿದ್ದಾರೆ. ಆದರೆ ಇಂಥವರ ಪಾಲಿಗೆ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ಲಭಿಸುವ ನಿರೀಕ್ಷೆ ಮೂಡುತ್ತಿದೆ.

ಭಾರತ ಹೃದ್ರೋಗಿಗಳ ರಾಜಧಾನಿ.. ಹೃದಯ ಸಂಬಂಧಿ ಸಮಸ್ಯೆ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೇ ಇರುವುದು ಮತ್ತು ಅತ್ಯಂತ ಪ್ರಮುಖವಾಗಿ ಹಣದ ಸಮಸ್ಯೆ ಹಿನ್ನೆಲೆ ಸಕಾಲಕ್ಕೆ ಬಡವರು ಹೃದಯ ಚಿಕಿತ್ಸೆಗೆ ಒಳಗಾಗದಿರುವುದು ಸಾವು ನೋವು ಹೆಚ್ಚಳಕ್ಕೆ ಕಾರಣವಾಗಿದೆ. ಭಾರತ ದೇಶ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಹೃದ್ರೋಗಿಗಳ ಸಾವಿನ ಅಂಕಿ ಅಂಶವನ್ನು ಹೊಂದಿದೆ. ಹೃದ್ರೋಗಿಗಳ ವಿಶ್ವದ ರಾಜಧಾನಿ ಎಂದು ಭಾರತ ಕರೆಸಿಕೊಳ್ಳುತ್ತಿದೆ.

ಇದಕ್ಕೆ ಕಾರಣ ಜನರ ಬಡತನ ಹಾಗೂ ದುಬಾರಿ ಚಿಕಿತ್ಸೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಹಂತ ಹಂತವಾಗಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದ ಅಜಗಜಾಂತರ ಸರಿದೂಗಿಸುವ ಕಾರ್ಯ ಮಾತ್ರ ಸಾಧ್ಯವಾಗುತ್ತಿಲ್ಲ.

ಸ್ಟಾರ್ಟ್​ಅಪ್​, ಮೇಕ್​ ಇನ್​ ಇಂಡಿಯಾದಲ್ಲಿ ಹೊಸತನ.. ಆದರೆ ಕಳೆದ ಎರಡು ವರ್ಷಗಳಿಂದೇಚೆಗೆ ಆರೋಗ್ಯ ಕ್ಷೇತ್ರಗಳಲ್ಲಿಯೂ ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಾಕಷ್ಟು ಹೊಸತನಗಳ ಅಳವಡಿಕೆ ಆಗುತ್ತಿದೆ. ಹೊಸ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಸ್ಥಾಪನೆಗೊಳ್ಳುತ್ತಿದ್ದು ದೇಶ ವಿದೇಶಗಳನ್ನು ಅವಲಂಬಿಸಿದ್ದ ಚಿಕಿತ್ಸಾ ಪದ್ಧತಿ ಇತ್ತು. ಈಗ ಅದು ದೇಶಿಯ ಆಗುತ್ತಿದೆ. ವಿವಿಧ ಹಂತದ ಚಿಕಿತ್ಸೆಗೆ ವಿದೇಶದ ಪರಿಕರಗಳನ್ನು ಅವಲಂಬಿಸಿದ್ದ ಭಾರತ ಇದೀಗ ನಿಧಾನವಾಗಿ ಸ್ವಾವಲಂಬಿ ಆಗುತ್ತಿದೆ. ಇವುಗಳಲ್ಲಿ ಒಂದು ವಾಲ್ವ್ ಅಳವಡಿಕೆ.

ಇನ್ನೆರಡು ವರ್ಷದಲ್ಲಿ ಕಡಿಮೆ ಬೆಲೆಗೆ ಹಾರ್ಟ್ ವಾಲ್ವ್ ಲಭ್ಯ.. ಡಾ. ಪ್ರಶಾಂತ್ ರಾಯ್ಸದ್ ಮಾಹಿತಿ

ಹೃದಯ ಸಂಬಂಧಿ ಸಮಸ್ಯೆ ಅನುಭವಿಸುತ್ತಿರುವವರಿಗೆ ವಾಲ್ವ್ ಅಳವಡಿಸುವುದು ಸರ್ವೇ ಸಾಮಾನ್ಯ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಇತರೆ ಆಧುನಿಕ ವಿಧಾನಗಳ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ರಕ್ತನಾಳಗಳು ಬ್ಲಾಕ್ ಆದ ಭಾಗದಲ್ಲಿ ವಾಲ್ವ್ ಅಳವಡಿಸುವುದು ಸಾಮಾನ್ಯ. ಇದಕ್ಕಾಗಿ ಇದುವರೆಗೂ ಭಾರತ ಯುರೋಪ್ ಸೇರಿದಂತೆ ವಿವಿಧ ಅಭಿವೃದ್ಧಿತ ರಾಷ್ಟ್ರಗಳನ್ನು ಅವಲಂಬಿಸಿತ್ತು. ಈಗೀಗ ಈ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಲಾಗುತ್ತಿದೆ. ವಿದೇಶಗಳಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ತರುತ್ತಿದ್ದ ವಾಲ್ಟ್​ಗಳನ್ನು ದೇಶದಲ್ಲಿಯೇ ಅಭಿವೃದ್ಧಿ ಪಡಿಸಲಾಗುತ್ತಿದೆ.

ಬಡವರಿಗೂ ಅನುಕೂಲ.. ಮುಂದಿನ ಎರಡು ವರ್ಷದಲ್ಲಿ ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ದೊರಕಲಿದ್ದು, ಅತಿ ಕಡಿಮೆ ಬೆಲೆಗೆ ದೇಶಿಯ ವಾಲ್ಟ್​ಗಳು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರಿಗೆ ಲಭಿಸಲಿದೆ. ಶೇಕಡ 80ರಷ್ಟು ಹಣ ದೇಶಿಯ ವಾಲ್ಟ್​ಗಳಿಂದ ಉಳಿತಾಯ ಆಗಲಿದ್ದು, ಬಡವರಿಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವ ಆಶಾಭಾವ ಮೂಡಿದೆ.

ಹೃದಯದ ವಾಲ್ವ್ ಅಳವಡಿಕೆ ವಿಚಾರವಾಗಿ ಈಟಿವಿ ಭಾರತ್ ಜೊತೆ ಮಾತನಾಡಿದ ಬೆಂಗಳೂರಿನ ಪೀಪಲ್ಸ್ ಟ್ರೀ ಆಸ್ಪತ್ರೆಯ ಆಪರೇಷನ್ ವಿಭಾಗದ ಅಧ್ಯಕ್ಷ ಡಾ. ಪ್ರಶಾಂತ್ ರಾಯ್ಸದ್, ತೆರೆದ ಹೃದಯ ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಸ್ಟಂಟ್ ಅಳವಡಿಕೆ ಅನಿವಾರ್ಯ. ಇದಕ್ಕೆ ಅಗತ್ಯವಿರುವ ವಾಲ್ಟ್​ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಇವುಗಳ ಉತ್ಪಾದನೆ ಆಗದ ಹಿನ್ನೆಲೆ ಸಹಜವಾಗಿ ದುಬಾರಿ ಆಗಲಿದೆ. ದುಬಾರಿ ಎನ್ನುವ ಕಾರಣಕ್ಕೆ ಹೆಚ್ಚಿನವರು ಈ ಚಿಕಿತ್ಸೆಯತ್ತ ಗಮನ ಹರಿಸುತ್ತಿಲ್ಲ ಎಂದರು.

ಹೀಗಾಗಿ ವಾಲ್ಟ್​ಗಳ ಬಳಕೆ ಕಡಿಮೆ ಆಗುವ ಜೊತೆಗೆ, ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಕಾರಣದಿಂದ ದುಬಾರಿ ಆಗಿದೆ. ದೇಶದಲ್ಲಿ ವಾಲ್ಟ್​ಗಳ ಬಳಕೆ ಹೆಚ್ಚಾದರೆ ಹಾಗೂ ಭಾರತದಲ್ಲಿ ಇದರ ಉತ್ಪಾದನೆ ಆರಂಭವಾದರೆ ಸಹಜವಾಗಿ ಬೆಲೆ ಕಡಿಮೆ ಆಗಲಿದೆ. ಸದ್ಯ ಇದರ ವೆಚ್ಚ 12 ರಿಂದ 20 ಲಕ್ಷ ರೂ. ವರೆಗೂ ಆಗುತ್ತಿದ್ದು, ದೇಶದಲ್ಲೇ ಉತ್ಪಾದನೆ ಹೆಚ್ಚಿದರೆ ಇವುಗಳ ಬೆಲೆ ಎರಡರಿಂದ ನಾಲ್ಕು ಲಕ್ಷದ ಒಳಗೆ ಬರಬಹುದು. ಶೇಕಡಾ 80 ರಿಂದ 90 ರ ವರೆಗೂ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಅಬ್ದುಲ್ ಕಲಾಂ ಸ್ಟಂಟ್ ಉತ್ಪಾದನೆ ಹೆಚ್ಚಾಯ್ತು. ಇದಾದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ಸ್ಟಂಟ್​ಗಳ ಉತ್ಪಾದನೆ ಆಗುತ್ತಿದೆ. ಅದೇ ರೀತಿ ಉಳಿದ ಸಾಧನಗಳು ಭಾರತದಲ್ಲಿ ಉತ್ಪಾದನೆ ಆಗುತ್ತಿವೆ. ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಪರಿಚಯಿಸಲಾಗುತ್ತಿದೆ. ವೈದ್ಯಕೀಯ ಉಪಕರಣಗಳು ಹಾಗೂ ಸಾಧನಗಳನ್ನು ಮುಂಬರುವ ದಿನಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುವ ರಾಷ್ಟ್ರವಾಗಿಯೂ ನಾವು ಹೊರಹೊಮ್ಮಬಹುದು. ಸದ್ಯ ಭಾರತಕ್ಕೆ ಯುರೋಪ್ ಅಮೆರಿಕ ಮತ್ತು ಜಪಾನ್ ದೇಶಗಳಿಂದ ವೈದ್ಯಕೀಯ ಉಪಕರಣಗಳು ಹಾಗೂ ಸಾಧನಗಳು ಆಮದಾಗುತ್ತಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಹೃದಯ ವೈಫಲ್ಯ ಪತ್ತೆಗೆ ಹೊಸ ತಂತ್ರಜ್ಞಾನ: 8 ನಿಮಿಷ ಸಾಕು !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.