ETV Bharat / sukhibhava

Heart Transplant Day: ಯುವ ಜನತೆಯಲ್ಲಿ ಕಾಡುತ್ತಿರುವ ಹೃದಯ ಸಮಸ್ಯೆ; ಹೃದಯ ಕಸಿ ಚಿಕಿತ್ಸೆ ಬಗ್ಗೆ ಮೂಡಿಸಬೇಕಿದೆ ಜಾಗೃತಿ - ಯುವ ಜನತೆ ಕೂಡ ಇಂತಹ ಅಪಾಯ

ಹೃದಯ ಸಂಬಂಧಿ ವಿಚಾರಗಳ ಕುರಿತು ಜನರಲ್ಲಿ ಜಾಗೃತಿ ಜೊತೆಗೆ ಕಾಳಜಿ ಮೂಡಿಸುವ ಅವಶ್ಯಕತೆ ಇದೆ.

heart-transplant-day-surge-in-youth-heart-problems-prompts-global-transplant-concerns

author img

By

Published : Aug 3, 2023, 10:21 AM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿದೆ. ಯುವ ಜನತೆ ಕೂಡ ಇಂತಹ ಅಪಾಯದಲ್ಲಿ ಸಿಲುಕುತ್ತಿದ್ದಾರೆ. ಯುವ ಜನತೆ ವ್ಯಾಯಾಮ ಅಥವಾ ಡ್ಯಾನ್ಸ್​ನಂತಹ ಅಭ್ಯಾಸದ ವೇಳೆ ದಿಢೀರ್​ ಎಂದು ಸಾವನ್ನಪ್ಪುತ್ತಿದ್ದು, ಇದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಹೃದಯಾಘಾತವಾಗಿದೆ. ಬಹುತೇಕ ಪ್ರಕರಣದಲ್ಲಿ ಕೆಲವರು ಮಾತ್ರ ಹೃದಯ ಕಸಿ (heart transplant) ಒಳಗಾಗುತ್ತಿದ್ದಾರೆ.

ಹೃದಯ ಕಸಿ ಚಿಕಿತ್ಸೆಯಲ್ಲಿ ಅನಾರೋಗ್ಯಯುತ ರೋಗಿಯ ಹೃದಯಕ್ಕೆ ಆರೋಗ್ಯಯುತ ದಾನಿಗಳು ಹೃದಯವನ್ನು ಜೋಡಿಸಲಾಗುವುದು. ಯಾವಾಗ ಇತರ ಚಿಕಿತ್ಸೆಗಳು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂದು ತಿಳಿಯುತ್ತದೆ. ಆಗ ವೈದ್ಯರು ಈ ಚಿಕಿತ್ಸೆಯ ಆಯ್ಕೆ ಮಾಡುತ್ತಾರೆ. ಜಾಗತಿಕವಾಗಿ ಹೃದಯ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಅದರಲ್ಲೂ ಕೋವಿಡ್​ ಆದ ಬಳಿಕ ಈ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಈ ಹೃದಯ ರೋಗದ ಸಮಸ್ಯೆ ಪರಿಹಾರ ಕುರಿತು ಕಾಳಜಿ ಮೂಡಿಸುವ ಅಗತ್ಯ ಇದೆ.

ರಾಷ್ಟ್ರೀಯ ಹೃದಯ ಕಸಿ ದಿನದಂದು ಈ ಕುರಿತು ಅರಿವು ಮೂಡಿಸುವ ಜೊತೆಗೆ ಇದರ ಜೊತೆಗಿರುವ ಸವಾಲುಗಳನ್ನು ತಿಳಿಸಲಾಗುವುದು. ಹೃದಯ ಕಸಿ ಚಿಕಿತ್ಸೆಗಿಂತ ಸೂಕ್ತ ಹೃದಯ ದಾನಿಗಳು ಸಿಗುವುದು ದೊಡ್ಡ ಸವಾಲು. ಕಾರಣ ಇದು ರೋಗಿಗಳು ಮತ್ತು ದಾನಿಗಳ ಹೃದಯ ಸೇರಿದಂತೆ ಹಲವು ವೈದ್ಯಕೀಯ ವಿಚಾರಗಳನ್ನು ಸರಿಹೊಂದಿರಬೇಕು. ಜೊತೆಗೆ ದಾನಿಗಳು ಮರಣ ಹೊಂದಿರಬೇಕು. ಅವರ ಕುಟುಂಬ ಈ ರೀತಿಯ ಕಸಿಗೆ ಮರಣ ಹೊಂದಿದ ಕುಟುಂಬದ ಒಪ್ಪಿಗೆ ಅಗತ್ಯವಾಗಿದೆ. ಜೊತೆಗೆ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಇದ್ದರೂ ಇದು ಸಂಕೀರ್ಣ ಮತ್ತು ಕಷ್ಟದ ಪ್ರಕ್ರಿಯೆಯಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಯಶಸ್ವಿ ಹೃದಯ ಕಸಿ ಶಸ್ತ್ರ ಚಿಕಿತ್ಸೆ ಆಗಸ್ಟ್​ 3 1994 ರಂದು ನಡೆಸಲಾಯಿತು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ಗುರುತಿಸಲಾಗಿದೆ. ಹೆಸರಾಂತ ಹೃದಯ ಶಸ್ತ್ರಚಿಕಿತ್ಸಕರಾದ ಪಿ ವೇಣುಗೋಪಾಲ್​ ಮತ್ತು ಅವರ ಭಾರತೀಯ ವೈದ್ಯರ ತಂಡ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇದರ ಮಹತ್ವ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಭಾಗವಾಗಿ ಈ ದಿನವನ್ನು ಭಾರತದಲ್ಲಿ ವಿಶ್ವ ಹೃದಯ ಕಸಿ ಶಸ್ತ್ರಚಿಕಿತ್ಸೆ ದಿನವಾಗಿ ಆಚರಿಸಲಾಗುತ್ತಿದೆ.

ಹೃದಯ ಕಸಿಗೆ ಒಳಪಟ್ಟ ರೋಗಿಯನ್ನು ಶಸ್ತ್ರ ಚಿಕಿತ್ಸೆ ಬಳಿಕ ಅವರು ಸಾಮಾನ್ಯ ಜೀವನಕ್ಕೆ ಮರಳುವವರೆಗೆ ಕಣ್ಗಾವಲಿನಿಂದ ನೋಡಿಕೊಳ್ಳಲಾಗುವುದು. ಈ ವೇಳೆ ವೈದ್ಯರು ಸೂಚಿಸಿದ ಚಿಕಿತ್ಸೆ, ಉತ್ತಮ ಆರೋಗ್ಯ ನೋಡಿಕೊಳ್ಳುವುದು ನಿರ್ಣಯಕವಾಗಿರುತ್ತದೆ. ಅಲ್ಲದೇ, ಕಸಿ ಮಾಡಿದ ಹೃದಯವು ಅನೇಕ ವೇಳೆ ತಿರಸ್ಕಾರಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಉತ್ತಮ ಸಮತೋಲಿತ ಆರೋಗ್ಯಕರ ಡಯಟ್​​, ಕಡಿಮೆ ಉಪ್ಪು ಮತ್ತು ಕೊಬ್ಬಿನ ಸೇವನೆ ಜೊತೆಗೆ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಪೋಷಕಾಂಶಯುಕ್ತ ಆಹಾರಗಳು ರೋಗಿಯನ್ನು ಗುಣಮುಖವಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೃದಯ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು ತಂಬಾಕು, ಮದ್ಯ, ಮಾದಕ ವಸ್ತುಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಇಲ್ಲದೇ ಹೋದಲ್ಲಿ ಇದು ನಕರಾತ್ಮಕ ಪರಿಣಾಮ ಬೀರುತ್ತದೆ. ಆರೋಗ್ಯಯುತ ಜೀವನಶೈಲಿ ಹೊಂದುವುದು ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ನಿಯಮಿತ ವೈದ್ಯಕೀಯ ತಪಾಸಣೆಯಿಂದ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಉತ್ತಮ ಜೀವನ ನಡೆಸಬಹುದು.

ಇದನ್ನೂ ಓದಿ: ಜಾಗತಿಕವಾಗಿ ಪ್ರತಿ ನಾಲ್ಕನೆ ವ್ಯಕ್ತಿಯಲ್ಲಿ ಕಾಡುತ್ತಿದೆ ರಕ್ತ ಹೀನತೆ ಸಮಸ್ಯೆ; ಮಹಿಳೆಯರಲ್ಲೇ ಅಧಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.