ಆತಂಕದೊಂದಿಗೆ ಹೃದಯಾಘಾತ ಸಂಬಂಧ ಹೊಂದಿದೆ ಎಂದು ಇಎಸ್ಸಿ ಅಕ್ಯೂಟ್ ಕಾರ್ಡಿಯೋವಾಸ್ಕುಲರ್ ಕೇರ್ 2023ನಲ್ಲಿ ತಿಳಿಸಲಾಗಿದೆ. ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ವೈಜ್ಞಾನಿಕ ಸಭೆಯಲ್ಲಿ ಈ ಕುರಿತು ಅಧ್ಯಯನ ಮಂಡಿಸಲಾಗಿದೆ. ಇದರನುಸಾರ ನಾಲ್ಕು ತಿಂಗಳ ಕಾಲ ದೀರ್ಘ ಆತಂಕದಿಂದ ಹೃದಯ ಬಡಿತ ಹೆಚ್ಚುವ ಸಾಧ್ಯತೆ ಇದೆ. ಶೇ 23ರಷ್ಟು ಪುರುಷರಿಗೆ ಹೋಲಿಸಿದರೆ ಶೇ 40ರಷ್ಟು ಮಹಿಳೆಯರಲ್ಲಿ ಈ ಸೂಚನೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಪ್ರತಿಯೊಬ್ಬರೂ ಆತಂಕ ಹೊಂದುವುದು ಸಹಜ. ಇದರಿಂದಾಗಿ ಯಾವುದೇ ರೀತಿಯ ಸುಳಿವು ಇರದೇ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಡೆನ್ಮಾರ್ಕ್ನ ರೆಗ್ಸ್ ಹಾಸ್ಪಿಟಲ್ನ- ಕೂಪನ್ಹೆಗನ್ ಯುನಿವರ್ಸಿಟಿ ಹಾಸ್ಪಿಟಲ್ ಡಾ.ಜೋಸೆಫರ್ ಕಜೆಗಾರ್ಡ್ ತಿಳಿಸಿದ್ದಾರೆ.
ಹೃದಯಾಘಾತಕ್ಕೆ ಕಾರಣಗಳು ಹಲವು..: ಅನೇಕ ಬಾರಿ ಹೃದಯಾಘಾತದಲ್ಲಿ ರೋಗಿ ಮತ್ತು ಅವರ ಕುಟುಂಬಗಳು ಇದಕ್ಕೆ ಕಾರಣಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗುತ್ತವೆ. ಕೆಲವು ಹೃದಯಾಘಾತ ಪ್ರಕರಣಗಳಲ್ಲಿ ವೈದ್ಯರ ಚಿಕಿತ್ಸೆಗೆ ಅದರ ಕಾರಣ ಪತ್ತೆ ಮಾಡುವುದು ಅವಶ್ಯಕ. ಹಲವು ಸಂದರ್ಭದಲ್ಲಿ ಒತ್ತಡ ಮತ್ತು ಆತಂಕವೇ ಇದಕ್ಕೆ ಕಾರಣವಾಗುತ್ತದೆ. ಮಹಿಳೆಯರು ಮಾನಸಿಕವಾಗಿ ಹೆಚ್ಚು ತೊಂದರೆಗೆ ಒಳಗಾಗಿದ್ದು, ಅವರಿಗೆ ಹೆಚ್ಚಿನ ಬೆಂಬಲದ ಅವಶ್ಯಕತೆ ಇದೆ ಎಂದು ಅಧ್ಯಯನ ಹೇಳುತ್ತದೆ.
ಕೈಗಾರಿಕೋದ್ಯಮ ದೇಶಗಳಲ್ಲಿ ಹೃದಯಾಘಾತದಿಂದ ಪ್ರತಿ ಐವರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಹೃದಯ ಅನೀರಿಕ್ಷಿತವಾಗಿ ರಕ್ತ ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ತಕ್ಷಣಕ್ಕೆ ಈ ರಕ್ತ ಪರಿಚಲನೆ ನಡೆಯದಿದ್ದರೆ, 10 ರಿಂದ 20 ನಿಮಿಷದ ಅವಧಿಯಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇದೆ. ಹೃದಯಾಘಾತಕ್ಕೆ ಒಳಗಾದ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂಖ್ಯೆ ಶೇ 10ಕ್ಕಿಂತ ಕಡಿಮೆ ಇದೆ.
ಹೃದಯಾಘಾತದ ನಂತರದ ಪರಿಣಾಮ: ಆತಂಕ ಮತ್ತು ಒತ್ತಡ ಗಂಭೀರವಾದ ಸಮಸ್ಯೆಯಾಗಿದ್ದು, ಇದು ಜೀವಿತಾವಧಿಯ ಮಟ್ಟ ಕಡಿಮೆ ಮಾಡುತ್ತದೆ. ಈ ಅಧ್ಯಯನ ಹೃದಯಾಘಾತಕ್ಕೆ ಒಳಗಾದ ಪುರುಷ ಮತ್ತು ಮಹಿಳೆಯರ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ನಲ್ ಆತಂಕ ಮತ್ತು ಒತ್ತಡ ಲಕ್ಷಣ ಕಾಣಬಹುದು ಎಂದು ತಿಳಿಸಿದೆ. ಅಲ್ಲದೇ, ಈ ಲಕ್ಷಣಗಳು ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನವಾಗಿದೆ.
ಅಧ್ಯಯನಕ್ಕಾಗಿ 2016 ಮತ್ತು 2021 ನಡುವೆ ಸಮುದಾಯದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಯಲ್ಲಿರುವ ರೋಗಿಗಳನ್ನು ಒಳಪಡಿಸಿಕೊಳ್ಳಲಾಗಿದೆ. ಇದರಲ್ಲಿ ಶೇ 18ರಷ್ಟು ಭಾಗಿದಾರರು ಮಹಿಳೆಯರು. ರೋಗಿಗಳ ನಾಲ್ಕು ತಿಂಗಳ ಫಾಲೋ ಅಪ್ ಬಳಿಕ ಮನೋವೈಜ್ಞಾನಿಕ ಲಕ್ಷಣಗಳನ್ನು ಪತ್ತೆ ಮಾಡಲಾಯಿತು. ಆತಂಕ ಮತ್ತು ಒತ್ತಡವನ್ನು ಹಾಸ್ಪಿಟನ್ ಆಕ್ಸೈಟಿ ಮತ್ತು ಡಿಪ್ರೆಷನ್ ಸ್ಕೇಲ್ (ಎಚ್ಎಡಿಎಸ್)ನಲ್ಲಿ ಮಾಪನ ಮಾಡಲಾಯಿತು. ಇದರಲ್ಲಿ 0-3 ಗಂಟೆ ಅವಧಿಯಲ್ಲಿ ರೋಗಿಗಳು ತತ್ಕ್ಷಣದಲ್ಲಿ 14 ಬಾರಿ ಆತಂಕಕ್ಕೆ ಒಳಗಾಗಿರುವ ಅನುಭವ ತಿಳಿಸಿದ್ದಾರೆ.
ಫಲಿತಾಂಶದ ಅನುಸಾರ, ಶೇ 23ರಷ್ಟು ಮಹಿಳೆಯರು ಶೇ 11ರಷ್ಟು ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಆತಂಕ ಅನುಭವಿಸಿದ್ದಾರೆ. ಮಹಿಳೆಯರಲ್ಲಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ನಲ್ ಪುರುಷರಿಗೆ ಹೋಲಿಸಿದರೆ ಹೆಚ್ಚಿದೆ. ಮಹಿಳೆಯರಲ್ಲಿ ಆತಂಕ ಪದೇ ಪದೆ ಕಾಡುತ್ತದೆ. ನಮ್ಮ ಫಲಿತಾಂಶದ ಅನುಸಾರ ಹೃದಯಾಘಾತದ ಸಂತ್ರಸ್ತರು ಮಾನಸಿಕ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಫಾಲೋ ಅಪ್ ಅವಶ್ಯಕತೆ ಇದೆ. ಆತಂಕ, ಖಿನ್ನತೆ ಮತ್ತು ಒತ್ತಡದೊಂದಿಗೆ ಹೃದಯಾಘಾತ ಸಂಬಂದ ಹೊಂದಿದ್ದು, ಆರೋಗ್ಯ ಕಾರ್ಯಕರ್ತರು ಈ ಕುರಿತು ರೋಗಿಗಳಿಗೆ ಮನವರಿಕೆ ಮಾಡುವ ಅವಶ್ಯಕತೆ ಇದೆ ಎಂದಿದ್ದಾರೆ ವೈದ್ಯರು.
ಇದನ್ನೂ ಓದಿ: ರಸ್ತೆ ಮಾಲಿನ್ಯದಿಂದಾಗಿಯೂ ರಕ್ತದೊತ್ತಡ ಹೆಚ್ಚುವ ಸಾಧ್ಯತೆ; ಸಂಶೋಧನೆಯಲ್ಲಿ ಬಯಲು