ETV Bharat / sukhibhava

ತಿನ್ನುವ ಆಹಾರಕ್ಕೂ ಕಾಲಿಟ್ಟ ರಾಸಾಯನಿಕಗಳು.. ಇದನ್ನು ತಡೆಯುವ ಬಗೆ ಹೀಗೆ.. - chemicals

ಮನೆಯ ತೋಟದಲ್ಲಿ ಕೆಲಸ ಮಾಡುವುದರಿಂದ ವ್ಯಾಯಾಮವಾಗಿ ದೇಹವೂ ಆರೋಗ್ಯಕರವಾಗಿರುತ್ತದೆ. ಅಲ್ಲದೇ ಅತ್ಯುತ್ತಮ ತರಕಾರಿಗಳನ್ನು ನಾವು ಸುಲಭವಾಗಿ ಪಡೆಯಬಹುದುದಾಗಿದೆ. ತೋಟಗಾರಿಕೆ ಇಲಾಖೆಯು ತಮ್ಮ ಕೃಷಿಗೆ ಸಬ್ಸಿಡಿಗಳನ್ನು ಒದಗಿಸುವುದರಿಂದ, ಇಲಾಖೆಯು ವ್ಯಾಪಕವಾಗಿ ಸುದ್ದಿ ನೀಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಮನೆಯಲ್ಲಿ ತೋಟಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಬೇಕು..

ತಿನ್ನುವ ಆಹಾರಕ್ಕೂ ಕಾಲಿಟ್ಟು ರಾಸಾಯನಿಕಗಳು
ತಿನ್ನುವ ಆಹಾರಕ್ಕೂ ಕಾಲಿಟ್ಟು ರಾಸಾಯನಿಕಗಳು
author img

By

Published : Sep 6, 2020, 5:38 PM IST

ರಾಸಾಯನಿಕಗಳನ್ನು ಹಾಕಿ ಬೆಳೆದ ತರಕಾರಿಗಳನ್ನು ತಾಯಿ ತಿನ್ನುವುದರಿಂದ ಆಕೆಯ ಹಾಲು ಕೂಡ ಇಂದು ವಿಷಕಾರಿಯಾಗುತ್ತಿದೆ. ಸುರಕ್ಷಿತ ಆಹಾರ ಪದ್ಧತಿಗಾಗಿ ಜನರು ತಮ್ಮ ಮನೆಯಲ್ಲೇ ತರಕಾರಿಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಕೃಷಿಯತ್ತ ಹೆಜ್ಜೆ ಹಾಕಬೇಕಾಗಿದೆ.

ರಾಸಾಯನಿಕಗಳನ್ನು ಬಳಸುವುದರಿಂದ ಆಗುವ ತೊಂದರೆ : ರಾಸಾಯನಿಕಗಳ ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರೂ, ಅವುಗಳ ಬಳಕೆ ನಿರೀಕ್ಷೆಯಂತೆ ಕ್ಷೀಣಿಸುತ್ತಿಲ್ಲ. ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಪರಿಸರ ಕಲುಷಿತಗೊಳ್ಳುತ್ತಿದೆ ಮತ್ತು ಮಣ್ಣಿನ ಫಲವತ್ತತೆ ಕ್ರಮೇಣ ಕಡಿಮೆಯಾಗುತ್ತಿದೆ. ಮಣ್ಣಿನ ರಕ್ಷಣೆಗಾಗಿ ಕೇಂದ್ರ ಸರ್ಕಾರವು 2015ರಲ್ಲಿ ಮಣ್ಣಿನ ಪರೀಕ್ಷಾ ಕಾರ್ಡ್‌ಗಳ ವ್ಯವಸ್ಥೆ ಪರಿಚಯಿಸಿದರೂ ಪರಿಸ್ಥಿತಿ ಬದಲಾಗಿಲ್ಲ.

ಯೂರಿಯಾವನ್ನು ಹೆಚ್ಚು ಬಳಸುವುದರಿಂದ ಹೆಚ್ಚಿನ ಇಳುವರಿ ಸಿಗುತ್ತದೆ ಎಂಬ ತಪ್ಪು ಕಲ್ಪನೆಯಿಂದಾಗಿ, ರೈತರು ಇದನ್ನು ಅನಗತ್ಯ ಬಳಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಅವರು ತಮ್ಮ ಮಣ್ಣನ್ನು ಪರೀಕ್ಷಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳ ಆಧಾರದ ಮೇಲೆ ಸೂಕ್ತ ರಸಗೊಬ್ಬರಗಳನ್ನು ಹಾಕಬೇಕು. ಆದರೆ, ರೈತರು ಯಾವುದೇ ಪರೀಕ್ಷೆಗಳನ್ನು ಮಾಡುತ್ತಿಲ್ಲ. ಉದಾಹರಣೆಗೆ, ಮಣ್ಣಿನಲ್ಲಿ ಸಾರಜನಕ ಮತ್ತು ರಂಜಕ ಅಧಿಕವಾಗಿದ್ದಾಗ, ಅವುಗಳನ್ನು ಬಳಸಬಾರದು. ಮಣ್ಣಿನ ಪರೀಕ್ಷೆ ಮಾಡದೇ ಇವುಗಳನ್ನು ಹಾಕಿದಾಗ, ಇಳುವರಿ ಹೆಚ್ಚಾಗುವುದಿಲ್ಲ. ಬದಲಿಗೆ ವೆಚ್ಚ ಹೆಚ್ಚಾಗುತ್ತದೆ.

ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕ : ತೆಲುಗು ರಾಜ್ಯಗಳಲ್ಲಿ ಸುಮಾರು 50 ಪ್ರತಿಶತದಷ್ಟು ಮಣ್ಣಿನಲ್ಲಿ ಸತುವು, 30 ಪ್ರತಿಶತದಷ್ಟು ರಂಜಕ, 17 ರಷ್ಟು ಕಬ್ಬಿಣ, ಶೇ.12ರಷ್ಟು ಬೋರಾನ್ ಮತ್ತು ಶೇ.5ರಷ್ಟು ಮ್ಯಾಂಗನೀಸ್ ಕೊರತೆಯಿದೆ ಎಂದು ಅಧ್ಯಯನವೊಂದು ತಿಳಿಸಿದೆ. ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಜಾಗರೂಕತೆಯಿಂದ ಮತ್ತು ಅಗತ್ಯವಿದ್ದಲ್ಲಿ ಮಾತ್ರ ಬಳಸಿದರೆ ಕೃಷಿ ವೆಚ್ಚ ಕಡಿಮೆ ಮಾಡಬಹುದು ಎಂಬ ಅರಿವು ರೈತರಲ್ಲಿ ಇಲ್ಲ. ವಿಶ್ವಾದ್ಯಂತ ಅನೇಕ ಕೀಟನಾಶಕಗಳನ್ನು ನಿಷೇಧಿಸಲಾಗಿದ್ದರೂ, ನಾವು ಅವುಗಳನ್ನು ಇಂದಿಗೂ ಬಳಸುತ್ತಿದ್ದೇವೆ.

ಕೇರಳದಲ್ಲಿ ಎಂಡೋಸಲ್ಫಾನ್​ನನ್ನು ವಿವೇಚನೆಯಿಲ್ಲದೆ ಬಳಸುತ್ತಿರುವುದರಿಂದ, ಅದರಿಂದಾಗುವ ಅಡ್ಡಪರಿಣಾಮಗಳನ್ನು ನಾವು ಇನ್ನೂ ಅನುಭವಿಸುತ್ತಿದ್ದೇವೆ. ಕೆಲ ಕೀಟನಾಶಕಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕರಡು ಪ್ರಸ್ತಾಪಗಳನ್ನು ಮಾಡಿದೆ. ಆದರೆ, ಈವರೆಗೂ ಅವುಗಳನ್ನು ರದ್ದುಪಡಿಸಲು ಯಾವುದೇ ಕಠಿಣ ಕಾನೂನು ಜಾರಿಗೆ ಬಂದಿಲ್ಲ.

ತೆಲುಗು ರಾಜ್ಯಗಳಲ್ಲಿ ಹೆಚ್ಚು ರಾಸಾಯನಿಕಗಳ ಬಳಕೆ : ಇತ್ತೀಚೆಗೆ 27 ಪ್ರಮುಖ ಕೀಟನಾಶಕಗಳನ್ನು ನಿಷೇಧಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಬಿಡುಗಡೆ ಮಾಡಿದೆ. ಈ ಕೀಟನಾಶಕಗಳು ಮಾನವನ ಆರೋಗ್ಯವನ್ನು ಹೇಗೆ ನಾಶಪಡಿಸುತ್ತಿವೆ ಎಂಬುದನ್ನು ಸರ್ಕಾರ ದಾಖಲೆಯಲ್ಲಿ ವಿವರಿಸಿದೆ. ಆದರೂ ಸರ್ಕಾರ ಇವುಗಳನ್ನು ನಿಷೇಧಿಸಲು ಇನ್ನೂ ವಿಳಂಬ ಮಾಡುತ್ತಿದೆ. ರಾಸಾಯನಿಕಗಳ ಬಳಕೆ ಕಡಿಮೆ ಮಾಡುವ ಬದಲು ಹೆಚ್ಚುತ್ತಿದೆ ಎಂಬುದು ಆತಂಕಕಾರಿ.

ತೆಲುಗು ರಾಜ್ಯಗಳಲ್ಲಿ ರಾಸಾಯನಿಕಗಳ ಬಳಕೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂಬ ಇತ್ತೀಚಿನ ಸುದ್ದಿ ಇದಕ್ಕೆ ಸಾಕ್ಷಿಯಾಗಿದೆ. ಈ ಕ್ಷಣದಲ್ಲಿ ಜನರು ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪನ್ನು ಖರೀದಿಸಲು ಹೆದರುತ್ತಾರೆ. ರೈತನು ಉತ್ಪನ್ನಗಳನ್ನು ವಿತರಿಸಿದ ನಂತರವೂ ವ್ಯಾಪಾರಿಗಳು ನಿಷೇಧಿತ ರಾಸಾಯನಿಕಗಳನ್ನು ಬಳಸುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳು, ತರಕಾರಿಗಳು ಇತ್ಯಾದಿಗಳು ಸಮಯಕ್ಕಿಂತ ಮೊದಲೇ ಹಣ್ಣಾಗುತ್ತಿವೆ.

ಕೊರೊನಾದೊಂದಿಗೆ ಜಾಗೃತಿ ಹೆಚ್ಚಾಗಿದೆ : ಕೊರೊನಾ ಸಾಂಕ್ರಾಮಿಕವು ಸಾರ್ವಜನಿಕರಲ್ಲಿ ನೈರ್ಮಲ್ಯ, ಸುರಕ್ಷಿತ ಆಹಾರದ ಬಳಕೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ದಿನಕ್ಕೆ 300 ಗ್ರಾಂ ತರಕಾರಿಗಳು ಮತ್ತು ಪ್ರತಿ ವ್ಯಕ್ತಿಗೆ 100 ಗ್ರಾಂ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಮನೆಯಲ್ಲಿ ತರಕಾರಿಗಳನ್ನು ಬೆಳೆಸಲು ಈಗ ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಸರ್ವತೋಮುಖ ಕಲಬೆರಕೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗಿರುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇದೆ.

ವ್ಯಾಪಕವಾಗಿ ಪ್ರಚಾರ ಮಾಡಬೇಕು : ಇತ್ತೀಚಿನ ದಿನಗಳಲ್ಲಿ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸದೆ, ಹಳ್ಳಿಗಳಲ್ಲಿನ ಮನೆಯ ಸುತ್ತ ಅಥವಾ ಪಟ್ಟಣ, ನಗರಗಳ ಬಾಲ್ಕನಿಗಳಲ್ಲಿ ಮತ್ತು ಛಾವಣಿಯ ಮೇಲ್ಭಾಗಗಳಲ್ಲಿ ಬೆಳೆಯುವ ಪ್ರವೃತ್ತಿ ಹೆಚ್ಚುತ್ತಿದೆ. ತೋಟಗಾರಿಕೆ ಇಲಾಖೆ ಸಹ ಅವರ ಕೃಷಿಗೆ ಸಹಾಯಧನ ನೀಡುತ್ತಾ ಪ್ರೋತ್ಸಾಹಿಸುತ್ತಿದೆ. ಈ ರೀತಿ ತರಕಾರಿಗಳನ್ನು ಬೆಳೆಯುವುದರಿಂದ ವರ್ಷಪೂರ್ತಿ ರಾಸಾಯನಿಕಯುಕ್ತ ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಬಹುದು. ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡಿ, ಪರಿಸರ ಸ್ವಚ್ಛ ಹಸಿರು ಮಯವಾಗಿಡಲು ಸಹಾಯವಾಗುತ್ತದೆ.

ಮನೆಯ ತೋಟದಲ್ಲಿ ಕೆಲಸ ಮಾಡುವುದರಿಂದ ವ್ಯಾಯಾಮವಾಗಿ ದೇಹವೂ ಆರೋಗ್ಯಕರವಾಗಿರುತ್ತದೆ. ಅಲ್ಲದೇ ಅತ್ಯುತ್ತಮ ತರಕಾರಿಗಳನ್ನು ನಾವು ಸುಲಭವಾಗಿ ಪಡೆಯಬಹುದುದಾಗಿದೆ. ತೋಟಗಾರಿಕೆ ಇಲಾಖೆಯು ತಮ್ಮ ಕೃಷಿಗೆ ಸಬ್ಸಿಡಿಗಳನ್ನು ಒದಗಿಸುವುದರಿಂದ, ಇಲಾಖೆಯು ವ್ಯಾಪಕವಾಗಿ ಸುದ್ದಿ ನೀಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಮನೆಯಲ್ಲಿ ತೋಟಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಬೇಕು.

ಸರ್ಕಾರದ ಪಾತ್ರ ಮತ್ತು ಪ್ರೋತ್ಸಾಹ : ಸುರಕ್ಷಿತ ಆಹಾರದ ಕಡೆಗೆ ಜನರ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಲು ಮತ್ತು ಬದಲಾಯಿಸಲು ಸರ್ಕಾರಗಳು ಸಾವಯವ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುವ ಅಗತ್ಯವಿದೆ. ಸಾವಯವ ಕೃಷಿಯ ಪ್ರಾಮುಖ್ಯತೆ ಹೆಚ್ಚುತ್ತಿರುವ ಸಮಯದಲ್ಲಿ, ರಾಸಾಯನಿಕ ಮುಕ್ತ ಜೀವನ ಮತ್ತು ಸಾವಯವ ಗೊಬ್ಬರಗಳ ಬಳಕೆ ಪ್ರೋತ್ಸಾಹಿಸಬೇಕು. ಅವುಗಳ ಗುಣಮಟ್ಟವನ್ನು ಕೂಲಂಕಷವಾಗಿ ಪರೀಕ್ಷಿಸಲು ಕೇಂದ್ರವು ಇತ್ತೀಚೆಗೆ ಕ್ರಮ ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಇದರ ಭಾಗವಾಗಿ ರಸಗೊಬ್ಬರ ಪರೀಕ್ಷೆಗಳ ಮೇಲ್ವಿಚಾರಣೆ ಮತ್ತು ಅವುಗಳಲ್ಲಿ ಕೆಲಸ ಮಾಡುವವರಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ಆದೇಶಿಸಿದೆ.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಬೇರೂರಿರುವ ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ವ್ಯಾಪಕವಾಗಿ ಉತ್ತೇಜಿಸಬೇಕು. ಕೊರೊನಾ ನಂತರದ ಪರಿಸ್ಥಿತಿಗಳನ್ನು ಒಂದು ಅವಕಾಶವಾಗಿ ಬಳಸಿಕೊಂಡು ಮನೆಯಲ್ಲಿ ಬೆಳೆದ ತರಕಾರಿಗಳನ್ನು ಉತ್ತೇಜಿಸುವುದರಿಂದ ಆರೋಗ್ಯ ಮತ್ತು ಪರಿಸರ ಸುಧಾರಿಸುತ್ತದೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಸುರಕ್ಷಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ನಾವು ಸೇವಿಸುವ ಆಹಾರವು ರಾಸಾಯನಿಕಗಳಿಂದ ವಿಷಪೂರಿತವಾಗಿದೆ ಮತ್ತು ಮಾರಣಾಂತಿಕ ಕಾಯಿಲೆಗಳನ್ನು ತರುತ್ತಿದೆ. ಈ ಸಮಯದಲ್ಲಿ ಸುರಕ್ಷಿತ ಆಹಾರ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುವುದು ಮೊದಲಿಗಿಂತ ಈಗ ಅಗತ್ಯ.

ಈ ನಿಟ್ಟಿನಲ್ಲಿ ರಾಸಾಯನಿಕಗಳ ಬಳಕೆ ಗಮನಾರ್ಹವಾಗಿ ಕಡಿಮೆ ಮಾಡಬೇಕು. ಸಾವಯವ ಕೃಷಿ ಪದ್ಧತಿಗಳನ್ನು ಜನಪ್ರಿಯಗೊಳಿಸಬೇಕು ಮತ್ತು ಮನೆಯಲ್ಲಿ ಬೆಳೆದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.