ನಮಗೆ ವಯಸ್ಸಿನೊಂದಿಗೆ ಭೌತಿಕವಾಗಿ ಆಗುವ ಕೆಲ ಬದಲಾವಣೆಗಳನ್ನು ನಿಯಂತ್ರಿಸಲು ಕಷ್ಟಸಾಧ್ಯ. ಆದರೆ, ಉತ್ತಮ ಆರೋಗ್ಯಾಭ್ಯಾಸಗಳಿಂದ ವೃದ್ಧಾಪ್ಯದ ಲಕ್ಷಣಗಳು ಕಾಣದಂತೆ ತಡೆಯಲು ಸಾಧ್ಯವಿದೆ. ಇದಕ್ಕಾಗಿ ನಾವು ಸೇವಿಸುವ ಆಹಾರದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕೆನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ, ಎಂತಹ ಆಹಾರಗಳನ್ನು ನಾವು ಸೇವಿಸಬೇಕು, ಇಲ್ಲಿದೆ ಮಾಹಿತಿ...
- ಚರ್ಮದ ಮೇಲಿನ ಸುಕ್ಕುಗಳು ವೃದ್ಧಾಪ್ಯವನ್ನು ಎತ್ತಿ ತೋರಿಸುತ್ತವೆ. ಹೀಗಾಗಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಡ್ ಒಳಗೊಂಡಿರುವ ಅಕ್ಕಿ, ಸಜ್ಜೆ, ಬೇಳೆ, ಕೆಂಪಕ್ಕಿ ಸೇವನೆಯಿಂದ ಚರ್ಮದ ಮೇಲೆ ಬೇಗ ಸುಕ್ಕುಗಳನ್ನು ಬಾರದಂತೆ ಸಹಾಯ ಮಾಡುತ್ತದೆ.
- ಸಿರಿಧಾನ್ಯಗಳು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುತ್ತವೆ. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಸಿರಿಧಾನ್ಯಗಳು ಕಡ್ಡಾಯವಾಗಿ ಸೇವಿಸುವುದು ಒಳ್ಳೆಯದು. ಇದರಲ್ಲಿ ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಖನಿಜಾಂಶಗಳು ಅಧಿಕವಾಗಿ ಇರುತ್ತದೆ.
- ಬೀನ್ಸ್ ಕೂಡ ನಮ್ಮ ಆಹಾರದ ಭಾಗವಾಗಿರುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಕಾರ್ಬೋಹೈಡ್ರೇಟ್ನೊಂದಿಗೆ ಪ್ರೋಟೀನ್‌ಗಳೂ ಸೇರಿವೆ. ಇದು ದೇಹಕ್ಕೆ ಅಗತ್ಯವಾದ ಒಂಬತ್ತು ಅಮೈನೋ ಆಮ್ಲಗಳಲ್ಲಿ ಎಂಟು ಅಮೈನೋ ಆಮ್ಲಗಳು ಬೀನ್ಸ್ನಿಂದಲೇ ಸಿಗುತ್ತವೆ.
- ಸೂರ್ಯಕಾಂತಿ, ಕುಂಬಳಕಾಯಿ ಮತ್ತು ಅಗಸೆ ಬೀಜಗಳಲ್ಲೂ ವಿಟಮಿನ್-ಇ ಸಮೃದ್ಧವಾಗಿವೆ. ಇವುಗಳ ಸೇವನೆಯಿಂದ ಚರ್ಮ ತುಂಬಾ ಮೃದುವಾಗಿ ಇರುವಂತೆ ನೋಡಿಕೊಳ್ಳುತ್ತವೆ.
- ಡ್ರೈಪ್ರೂಟ್ಸ್, ಅಂಜೂರದ ಹಣ್ಣುಗಳು ಮತ್ತು ಮಸೂರ ಬೇಳೆಯಲ್ಲಿ ಸೇವನೆಯೂ ಅಗತ್ಯವಾಗಿದೆ. ಯಾಕೆಂದರೆ ಇವುಗಳಲ್ಲಿ ಜೀವಸತ್ವಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ.
- ಸಂಪೂರ್ಣ ಸಸ್ಯಾಹಾರಿಗಳು ಆಗಿದ್ದರೆ ಹೆಚ್ಚು ಕಾಳುಗಳು, ಚೀಸ್ ಸೇವಿಸಬೇಕು. ಮಾಂಸಾಹಾರಿಗಳು ಮೊಟ್ಟೆ, ಮೀನು, ವಿಶೇಷವಾಗಿ ಸಾಲ್ಮನ್ ಮೀನು ತಿನ್ನಬೇಕು. ಅದರಲ್ಲೂ ವಾರಕ್ಕೊಮ್ಮೆ ಸಾಲ್ಮನ್ ಮೀನು ತಿನ್ನುವುದರಿಂದ ವಯಸ್ಸಾದಂತೆ ಕಾಣುವುದು ತಡೆಯಬಹುದು.
- ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಆಲಿವ್ ಎಣ್ಣೆ ಕೂಡ ಚರ್ಮಕ್ಕೂ ಒಳ್ಳೆಯದು.