ಹೈದರಾಬಾದ್: ಯಾವುದೇ ವಯಸ್ಸಿನಲ್ಲೂ ಆರೋಗ್ಯ ಮತ್ತು ಆಹಾರ ಕಾಳಜಿ ಮಾಡುವುದು ಅತ್ಯವಶ್ಯಕ. ಬಾಲ್ಯದಿಂದ ಯೌವನದವರೆಗೆ ಯುವತಿಯರಲ್ಲಿ ದೈಹಿಕ ಬದಲಾವಣೆ ಬಲುಬೇಗ ಆಗುತ್ತದೆ. ಈ ಸಮಯದಲ್ಲಿ ಹಾರ್ಮೋನು ಮತ್ತು ಇತರ ರೀತಿಯ ಬದಲಾವಣೆ ಆಗುತ್ತದೆ. ಅದರಲ್ಲೂ ಋತುಚಕ್ರ ಸಮಯದಲ್ಲಿ ಸರಿಯಾದ ರೀತಿಯ ಆರೋಗ್ಯಕದ ಕಾಳಜಿವಹಿಸುವುದು ಅವಶ್ಯ.
ಯುನಿಸೆಫ್ ಅನುಸಾರ, ಭಾರತದಲ್ಲಿ ಮಗು ಹೇರುವ ಹೊತ್ತಿಗೆ ಮಹಿಳೆ ಅಪೌಷ್ಟಿಕತೆಯಿಂದ ಬಳಲುತ್ತಿರುತ್ತಾಳೆ. ಮಹಿಳೆಯರಲ್ಲಿನ ಅಪೌಷ್ಟಿಕತೆ ಕೇವಲ ಆಕೆಯ ವಯಸ್ಸು ಅಥವಾ ಗರ್ಭಧಾರಣೆ ಸಮಯ ಕಾಳಜಿಯನ್ನು ಮಾತ್ರ ಹೊಂದಿಲ್ಲ. ಇದು ಯುವತಿ ಬಾಲ್ಯದಿಂದ ಅಭಿವೃದ್ಧಿ ವೇಳೆ ಪರಿಣಾಮ ಬೀರುತ್ತದೆ. ಅಪೌಷ್ಟಿಕಾಂಶತೆ ಮಾತ್ರವಲ್ಲದೇ ಶುಚಿತ್ವ ಕೂಡ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವನ್ನು ದೇಹದಲ್ಲಿನ ಕೆಲವು ರೀತಿಯ ಪೋಷಣೆಯ ಕೊರತೆಯ ರೂಪದಲ್ಲಿ ಮಾತ್ರವಲ್ಲದೆ ತೀವ್ರವಾದ ಸೋಂಕು ಅಥವಾ ಇತರ ಸಮಸ್ಯೆಗಳ ರೂಪದಲ್ಲಿಯೂ ಕಾಣಬಹುದು.
ಹುಡುಗಿಯರ ದೇಹದಲ್ಲಿ ಬಾಲ್ಯದಿಂದ ದೊಡ್ಡವರಾಗುವರೆಗೆ ದೇಹದಲ್ಲಿ ಅನೇಕ ಬದಲಾವಣೆ ಆಗುತ್ತದೆ. ಹರೆಯದಲ್ಲಿ ಯುವತಿಯರು ಋತುಬಂಧಕ್ಕೆ ಒಳಗಾಗುತ್ತಾರೆ. ಋತುಚಕ್ರಮದ ಅವಧಿಯು ಅವರ ದೇಹದ ದುರ್ಬಲತೆಗೆ ಕಾರಣವಾಗುತ್ತಿಲ್ಲ. ಯುವತಿಯರಲ್ಲಿ ದೈಹಿಕ ಬೆಳವಣಿಗೆ ಬೇಗ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರ ದೇಹದ ಸರಿಯಾದ ಬೆಳವಣಿಗೆಗೆ ಹೆಚ್ಚಿನ ಪೌಷ್ಟಿಕಾಂಶ ಬೇಕು.
ಸುಚಿತ್ವಕ್ಕೆ ಇರಲಿ ಹೆಚ್ಚಿನ ಆದ್ಯತೆ: ಇದೇ ಸಮಯದಲ್ಲಿ ಯುವತಿಯರಲ್ಲಿ ಮೂತ್ರ ಅಥವಾ ಗುಪ್ತಾಂಗದ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನಲೆ ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕೇವಲ ಋತುಬಂಧ ಅವಧಿ ಮಾತ್ರವಲ್ಲದೇ, ಸಾಮನ್ಯ ದಿನಗಳಲ್ಲೂ ಈ ವಿಷಯಗಳನ್ನು ನಿರ್ಲಕ್ಷಿಸಬಾರದು. ಕಾರಣ, ಅನೇಕ ಬಾರಿ ನಿರ್ಲಕ್ಷ್ಯ ನಮ್ಮ ಆರೋಗ್ಯ ಮರುಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಭೀರ ರೋಗಗಳಿಗೆ ಕಾರಣವಾಗುತ್ತದೆ.
ಹುಡುಗ ಆಗಲಿ ಹುಡುಗಿ ಆಗಲಿ ಮಕ್ಕಳಿಂದ ಯವೌನ ಅವಸ್ಥೆಗೆ ತಲುಪುವರೆಗೂ ಅವರ ದೇಹದಲ್ಲಿ ಪ್ರತಿ ನಿತ್ಯ ಬದಲಾವಣೆ ಕಾಣುತ್ತದೆ. ಈ ಸಮಯದಲ್ಲಿ ಅವರಿಗೆ ಹೆಚ್ಚಿನ ಪೋಷಕಾಂಶ ಅಗತ್ಯವಾಗಿದೆ. ಹುಡುಗರಿಗೆ ಹೋಲಿಕೆ ಮಾಡಿದಾಗ ಈ ಬದಲಾವಣೆ ಬಲು ಬೇಗ ಹುಡುಗಿಯರಲ್ಲಿ ಕಂಡು ಬರುತ್ತದೆ. ಪ್ರತಿ ತಿಂಗಳು ಅವರು ಋತುಚಕ್ರಕ್ಕೆ ಒಳಗಾಗುವ ಹಿನ್ನೆಲೆ ದೇಹದಲ್ಲಿ ಹಾರ್ಮೋನ್ ಬದಲಾವಣೆ ಆಗುತ್ತದೆ. ಈ ಹಿನ್ನೆಲೆ ಅವರಿಗೆ ಹೆಚ್ಚಿನ ಪೋಷಕಾಂಶ ಅಗತ್ಯವಾಗಿದೆ ಎನ್ನುತ್ತಾರೆ ದೆಹಲಿಯ ಮಕ್ಕಳ ತಜ್ಞರಾದ ಡಾ ರತಿ.
ಮಹಿಳೆಯರಲ್ಲಿ ಪೋಷಕಾಂಶದ ಕೊರತೆ ತುಸು ಹೆಚ್ಚು: ನಮ್ಮ ದೇಶದಲ್ಲಿ ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆಯರಲ್ಲಿ ಕಬ್ಬಿಣ ಮತ್ತು ಪೋಷಕಾಂಶದ ಕೊರತೆ ಕಂಡು ಬರುತ್ತದೆ. ಇದರ ಕೊರತೆ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಆಹಾರ ಮತ್ತು ಪಾನೀಯದ ವಿಚಾರದಲ್ಲಿ ವಿಶೇಷ ಕಾಳಜಿವಹಿಸಬೇಕು. ಯಾವುದೇ ವಯಸ್ಸಿನ ಮಕ್ಕಳಿಗಾದರೂ ಸಮತೋಲಿತ ಆಹಾರ ನೀಡುವುದು ಅವಶ್ಯ.
ಅವರ ಆಹಾರದಲ್ಲಿ ಕಾರ್ಬೋ ಹೈಡ್ರೆಟ್, ಪ್ರೋಟಿನ್, ಫೈಬರ್, ಎಲ್ಲಾ ರೀತಿಯ ವಿಟಮಿನ್, ಕ್ಯಾಲ್ಸಿಯಂ, ಮಿನರಲ್, ಜಿಂಕ್ ಮತ್ತು ಐರನ್ ಇರುವಂತೆ ನೋಡಿಕೊಳ್ಳಬೇಕು. ಅದರಲ್ಲೂ 10ರಿಂದ 18ವರ್ಷದ ಹುಡುಗಿಯರು ನಿತ್ಯ 2000 ಕ್ಯಾಲೋರಿ, 58 ಗ್ರಾಂ ಪ್ರೋಟಿನ್ ಮತ್ತು 600 ಮಿಲಿಗ್ರಾಂ ಕ್ಯಾಲ್ಸಿಯಂ ಸೇವಿಸಬೇಕು. ಅದೇ ಸಮಯಕ್ಕೆ ಅವಶ್ಯಕವಾದ ನೀರು ಸೇವನೆ ಕೂಡ ಅತ್ಯಗತ್ಯವಾಗಿದೆ
ಋತುಚಕ್ರದ ವೇಳೆ ಇರಲಿ ಜಾಗ್ರತೆ: ಉತ್ತರಾಖಂಡದ ಪ್ರಸೂತಿ ರೋಗ ತಜ್ಞರಾದ ಡಾ ವಿಜಯಲಕ್ಷ್ಮಿ ಹೇಳುವಂತೆ ಪೌಷ್ಟಿಕಾಂಶದ ಜೊತೆ, ಹುಡುಗಿರು ಶುಚಿತ್ವಕ್ಕೆ ಗಮನ ಕೊಡಬೇಕಿದೆ. ಋತುಚಕ್ರದ ಸಮಯದಲ್ಲಿ ಯಾವ ರೀತಿ ಮುಂಜಾಗ್ರತೆ ವಹಿಸಬೇಕು. ಈ ರೀತಿ ಕಾಳಜಿ ವಹಿಸದಿದ್ದರೆ ಸೋಂಕು ಅಥವಾ ಇನ್ನಿತರ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಯುವತಿಯರಲ್ಲಿ ಮೂತ್ರ ಅಥವಾ ಗುಪ್ತಾಂಗದ ಸೋಂಕು ಹೆಚ್ಚುತ್ತಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ. ದೊಡ್ಡ ನಗರದಲ್ಲೂ ಕೂಡ ಯುವತಿಯರು ಈ ಶುಚಿತ್ವದ ಬಗ್ಗೆ ಅರಿವು ಹೊಂದಿರುವುದಿಲ್ಲ.
ಅನೇಕ ಯುವತಿಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಹೇಗೆ ಬದಲಾಯಿಸಬೇಕು ಎಂದು ತಿಳಿದಿರುವುದಿಲ್ಲ ಇದು ಕೂಡ ಸೋಂಕಿಗೆ ಕಾರಣವಾಗುತ್ತದೆ. ಇದೇ ವೇಳೆ ಗುಪ್ತಾಂಗದ ಶುಚಿ ಬಗ್ಗೆ ಕೂಡ ಅವರಿಗೆ ತಿಳಿದಿರುವುದಿಲ್ಲ. ಸೋಪ್ ಅಥವಾ ಕೆಮಿಕಲ್ ಆಧಾರಿತ ಉತ್ಪನ್ನಗಳ ಬಳಕೆಯನ್ನು ತಡೆಗಟ್ಟಬೇಕು ಜೊತೆಗೆ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಬಗ್ಗೆ ತಿಳಿಯಬೇಕಿದೆ.
ಕೇವಲ ಈ ಸಮಯದಲ್ಲಿ ಮಾತ್ರವಲ್ಲದೇ, ಗುಪ್ತಾಂಗಗಳನ್ನು ಶುಚಿತ್ವ ಸದಾ ಕಾಪಾಡಬೇಕು. ನಿತ್ಯ ಒಳ ಉಡುಪಿಗಳನ್ನು ಬದಲಾವಣೆ ಮಾಡಬೇಕು. ದೀರ್ಘಕಾಲದವರೆಗೆ ಒಳ ಉಡುಪುಗಳ ಬದಲಾವಣೆ ಮಾಡದೇ ಹೋದಲ್ಲಿ ಯೋನಿಯೊಳಗೆ ಸೋಂಕು ಉಂಟಾಗುವ ಸಾಧ್ಯತೆ ಇದೆ. ಈ ರೀತಿ ಸಣ್ಣ ಸಣ್ಣ ವಿಚಾರದ ಬಗ್ಗೆ ಕಾಳಜಿ ವಹಿಸುವುದರಿಂದ ದೊಡ್ಡ ರೋಗಗಳನ್ನು ಬಾರದಂತೆ ತಡೆಯಬಹುದು. ಆರೋಗ್ಯಯುತ ಮಗುವೇ ಆರೋಗ್ಯಯುತ ಮಹಿಳೆಯಾಗಿ ಬೆಳೆಯಲು ಸಾಧ್ಯ. ಮಹಿಳೆ ಆರೋಗ್ಯವಾಗಿದ್ದಾಗ ಮಾತ್ರ ಆಕೆ ಆರೋಗ್ಯಯುತ ಮಗುವಿಗೆ ಜನ್ಮ ನೀಡಬಹುದು. ಇದೇ ಕಾರಣಕ್ಕೆ ಬಾಲ್ಯದಲ್ಲಿ ಡಯಟ್, ಶುಚಿತ್ವದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು.
ಇದನ್ನೂ ಓದಿ: ನಿಕಟ ಸಂಬಂಧ.. ನಿಮ್ಮ ಪೋಷಕರಿಗೆ ನೀವು ಕೇಳಬಹುದಾದ ಪ್ರಶ್ನೆಗಳಿವು..