ETV Bharat / sukhibhava

ಭಾರತದಲ್ಲಿ ಬಾಯಿಯ ಕ್ಯಾನ್ಸರ್​ನಿಂದ ಪ್ರತಿ ಗಂಟೆಗೆ 5 ಜನ ಬಲಿ: ಇದಕ್ಕೆ ಕಾರಣ ಹೀಗಿದೆ.. - ಕ್ಯಾನ್ಸರ್​ನ ಕೆಲವು ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ

ಬಾಯಿಯ ಕ್ಯಾನ್ಸರ್ ಭಾರತದಲ್ಲಿ ಒಂದು ಪ್ರಮುಖ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಭಾರತದಲ್ಲಿ, ಬಾಯಿಯ ಕ್ಯಾನ್ಸರ್‌ನಿಂದ ಪ್ರತಿ ಗಂಟೆಗೆ ಐದಕ್ಕೂ ಹೆಚ್ಚು ಜನರು ಸಾಯುತ್ತಾರೆ. ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಸಡಿನಲ್ಲಿ ಗಡ್ಡೆಗಳಾದಂತಾದರೆ, ಬಾಯಿಯಲ್ಲಿ ಉರಿ ಕಂಡುಬರುವುದು ಕೂಡಾ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ.

ಬಾಯಿಯ ಕ್ಯಾನ್ಸರ್
ಬಾಯಿಯ ಕ್ಯಾನ್ಸರ್
author img

By

Published : Feb 24, 2022, 8:13 PM IST

ಬಾಯಿಯ ಕ್ಯಾನ್ಸರ್‌ ಸಾಮಾನ್ಯವಾಗಿ ತಂಬಾಕು ಸೇವನೆ, ಧೂಮಪಾನಗಳಿಂದ ಉಂಟಾಗುತ್ತೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಬಾಯಿ ಕ್ಯಾನ್ಸರ್​​ ಬಗ್ಗೆ ಎಚ್ಚರಿಸುವ ಅನೇಕ ಸಂದೇಶಗಳನ್ನು ನೋಡುತ್ತೇವೆ. ಉದಾಹರಣೆಗೆ ಸಿಗರೇಟ್ ಪ್ಯಾಕೆಟ್‌, ಸಿನಿಮಾ, ಜಾಹೀರಾತು ಮತ್ತು ದೂರದರ್ಶನದಲ್ಲಿಯೂ ಸಹ ಕಾಣುತ್ತೇವೆ.

ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಸಡಿನಲ್ಲಿ ಗಡ್ಡೆಗಳಾಗುವುದು, ಬಾಯಲ್ಲಿ ಉರಿ ಕಂಡುಬರುವುದು ಕೂಡ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ. ಜಾಗತಿಕವಾಗಿ ಬಾಯಿಯ ಕ್ಯಾನ್ಸರ್ ಹೊಂದಿರುವ ಐದು ಜನರಲ್ಲಿ ನಾಲ್ವರು ತಂಬಾಕನ್ನು ಬಳಸುತ್ತಾರೆ ಮತ್ತು ಸುಮಾರು 70 ಪ್ರತಿಶತದಷ್ಟು ಜನರು ಅತಿಯಾಗಿ ಕುಡಿಯುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

ಇದನ್ನೂ ಓದಿ: ಮಕ್ಕಳ ಲವಲವಿಕೆ- ಮಾನಸಿಕ ಬಲವರ್ಧನೆಗೆ ದೈಹಿಕ ಶಿಕ್ಷಣ ಅತ್ಯಗತ್ಯ: ಪಾಠದಷ್ಟೇ ಆಟವೂ ಮುಖ್ಯ

ಭಾರತದಲ್ಲಿ 274.9 ಮಿಲಿಯನ್ ತಂಬಾಕು ಬಳಕೆದಾರರಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ - 5, 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಭಾರತೀಯ ಪುರುಷರಲ್ಲಿ 18.8 ಪ್ರತಿಶತದಷ್ಟು ಜನರು ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ 1.3 ಪ್ರತಿಶತದಷ್ಟು ಜನರು ಆಲ್ಕೋಹಾಲ್ ಸೇವಿಸುತ್ತಾರೆ.

ಬಾಯಿಯ ಕ್ಯಾನ್ಸರ್ ಎಂದರೇನು? ಇದು ತುಟಿಗಳ ವರ್ಮಿಲಿಯನ್ ಗಡಿಗಳ ಮಾರಕತೆಯನ್ನು ಮತ್ತು ನಾಲಿಗೆಯ ಮುಂಭಾಗದ ಮೂರನೇ ಎರಡರಷ್ಟು ಸೇರಿದಂತೆ ಬಾಯಿಯ ಕುಹರದ ಎಲ್ಲಾ ಮೇಲ್ಮೈಗಳನ್ನು ಒಳಗೊಂಡಿದೆ. ಈ ಕ್ಯಾನ್ಸರ್​​ ಪ್ರಧಾನವಾಗಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮಗಳಿಂದ ಸಂಭವಿಸುತ್ತದೆ ಮತ್ತು ಹೆಚ್ಚು ಮಾರಕ, ಅಸಮರ್ಥತೆ ಮತ್ತು ವಿಕಾರಗೊಳಿಸುತ್ತವೆ. ಐತಿಹಾಸಿಕವಾಗಿ, ಕೊನೆಯ ಹಂತದ ರೋಗನಿರ್ಣಯ ಮತ್ತು ಮಧ್ಯಸ್ಥಿಕೆಯಿಂದಾಗಿ ಬಾಯಿಯ ಕ್ಯಾನ್ಸರ್‌ಗೆ ಸಂಬಂಧಿಸಿದ ಸಾವಿನ ಪ್ರಮಾಣವು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್​​ ನಂತಹ ಕೆಲವು ಸಾಮಾನ್ಯ ಕ್ಯಾನ್ಸರ್ ಪ್ರಕಾರಗಳು, ಆರಂಭಿಕ ಪತ್ತೆ ಮತ್ತು ಉತ್ತಮ ಅಭ್ಯಾಸಗಳ ಪ್ರಕಾರ ಚಿಕಿತ್ಸೆ ನೀಡಿದಾಗ ಹೆಚ್ಚಿನ ಗುಣಪಡಿಸುವ ಸಂಭವನೀಯತೆಯನ್ನು ಹೊಂದಿವೆ. ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ ನೀವು ಆನುವಂಶಿಕತೆಯನ್ನು ಹೊಂದಿದ್ರೆ, ಪರಿಗಣಿಸಲು ಕೆಲವು ಪ್ರಮುಖ ಕ್ರಮಗಳು ಇಲ್ಲಿವೆ:

ಜೀವನಶೈಲಿಯ ಆಯ್ಕೆ: ತಂಬಾಕು ಮತ್ತು ವೀಳ್ಯದೆಲೆ ಅಥವಾ ಅಡಿಕೆ (ಸುಪಾರಿ) ಸೇವನೆ, ಸಿಗರೇಟ್, ಬೀಡಿ, ಪೈಪ್‌ಗಳು, ಸಿಗಾರ್‌ಗಳು ಮತ್ತು ಜಗಿಯುವ ತಂಬಾಕು ಇವೆಲ್ಲಾ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

ಕ್ಯಾನ್ಸರ್​​ ಬರದಂತೆ ತಡೆಯಲು ಆಗಾಗ್ಗೆ ಬಾಯಿಯ ತಪಾಸಣೆ ಮಾಡಿಸಿ: ನಿಯಮಿತ ತಪಾಸಣೆಗಳು ಮತ್ತು ವೈದ್ಯರಿಂದ ಇತರ ನಿಯಮಿತ ಆರೋಗ್ಯ ಪರೀಕ್ಷೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ.

ಕ್ಯಾನ್ಸರ್​ನ ಕೆಲವು ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ: ಬಾಯಿಯ ಕ್ಯಾನ್ಸರ್​, ತುಟಿ, ನಾಲಿಗೆ ಅಥವಾ ಗಂಟಲು ಅಗಿಯುವಾಗ ಅಥವಾ ನುಂಗುವಾಗ ಯಾವುದೇ ನೋವು ಆದ್ರೆ ಅದನ್ನು ನಿರ್ಲಕ್ಷಿಸಬೇಡಿ. ಪ್ರಸ್ತುತ, ಹೆಚ್ಚಿನ ರೋಗಿಗಳನ್ನು ದೃಷ್ಟಿ ಪರೀಕ್ಷೆಯ ಮೂಲಕ ಕಂಡುಹಿಡಿಯಲಾಗುತ್ತಿದೆ. ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ಮೆಟಾಸ್ಟಾಸೈಸಿಂಗ್ ಹಂತಕ್ಕೆ ಪತ್ತೆಯಾಗುವುದಿಲ್ಲ.

ಯಾವಾಗಲೂ ಆರೋಗ್ಯಕರ ಆಹಾರ ಮತ್ತು ಹಲ್ಲಿನ ನೈರ್ಮಲ್ಯವನ್ನು ಕಪಾಡಿ: ಉತ್ತಮ, ಸಮತೋಲಿತ ಪೋಷಣೆಯು ನಮ್ಮ ದೇಹ ಸರಾಗವಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳುವ ಜೊತೆಗೆ ನಿಮ್ಮ ಊಟದಲ್ಲಿ ಎಲ್ಲಾ ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಸೇರಿಸಿ.

ಹೆಚ್ಚುವರಿ ಕ್ಯಾಲೋರಿ, ಸಕ್ಕರೆ ಸೇವನೆ ಮತ್ತು ಕೆಂಪು ಮಾಂಸದ ಸೇವನೆ ಕಡಿಮೆ ಮಾಡಿ: ಇವುಗಳು ನಿಮ್ಮ ಬಾಯಿಯ ಕ್ಯಾನ್ಸರ್ ಅಪಾಯವನ್ನು ಉಲ್ಬಣಗೊಳಿಸುತ್ತವೆ. ಗೋಮಾಂಸ, ಕುರಿ ಮರಿ ಮತ್ತು ಹಂದಿ ಮಾಂಸದಂತಹ ಕೆಂಪು ಮಾಂಸವನ್ನು ಕಾರ್ಸಿನೋಜೆನಿಕ್ ಎಂದು ವರ್ಗೀಕರಿಸಲಾಗಿದೆ. ಅಂದರೆ ಇದು ಕ್ಯಾನ್ಸರ್​ಗೆ ಕಾರಣವಾಗಬಹುದು. ಕೆಂಪು ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.

ತಂಬಾಕು ಉತ್ಪನ್ನಗಳು ಮತ್ತು ಆಲ್ಕೋಹಾಲ್‌ನಿಂದ ದೂರವಿರಿ: ನೀವು ತಂಬಾಕು ಅಥವಾ ಆಲ್ಕೋಹಾಲ್ ಸೇವಿಸದಿದ್ದರೆ, ಪ್ರಾರಂಭಿಸದಿರುವುದು ಒಳ್ಳೆಯದು. ಒಂದು ವೇಳೆ ನೀವು ಇವುಗಳನ್ನು ಸೇವಿಸುತ್ತಿದ್ದರೇ, ತ್ಯಜಿಸುವುದು ಉತ್ತಮ.

ಕೆಲವರಲ್ಲಿ 6 ತಿಂಗಳ ಅವಧಿಯಲ್ಲಿಯೇ ಕ್ಯಾನ್ಸರ್​​ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ 10 ವರ್ಷ, 20 ವರ್ಷಗಳ ಬಳಿಕ ಕಾಣಿಸಬಹುದು. ಕ್ಯಾನ್ಸರ್ ಆದ ಜಾಗಕ್ಕೆ ಶಸ್ತ್ರಚಿಕಿತ್ಸೆ ಮಾಡುವುದು. ಇನ್ನೂ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಲು ಕರೆಂಟ್ ಅಥವಾ ರೇಡಿಯೇಶನ್​ನನ್ನು ಸಹ ಬಳಸಲಾಗುತ್ತದೆ. ಇನ್ನೂ ಕೆಲವು ಸಮಯದಲ್ಲಿ ಇಂಜೆಕ್ಷನ್ ಅಥವಾ ಕಿಮೋಥೆರಪಿ ಕೊಡುತ್ತಾರೆ. ಈ ಎಲ್ಲಾ ಚಿಕಿತ್ಸೆಯನ್ನು ಕೊಟ್ಟು ಕಾಯಿಲೆಯನ್ನು ಗುಣಪಡಿಸಬಹುದು. ಆದರೆ ಈ ಚಿಕಿತ್ಸೆಗಳ ಬಳಿಕ ರೋಗಿಯು ಮೊದಲಿನಂತೆ ಮಾತನಾಡಲು ಹಾಗು ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.