ETV Bharat / sukhibhava

ದೀರ್ಘ ಕಾಲದ ಕೋವಿಡ್; ಕೂದಲು ಉದುರುವಿಕೆ, ಕಡಿಮೆ ಕಾಮಾಸಕ್ತಿಗೂ ಕಾರಣವಾಗಲಿದೆಯಂತೆ! - etvbharatkannada

ಇಲ್ಲಿಯವರೆಗೆ ನಾವು ವಾಸನೆ ಮತ್ತು ರುಚಿ, ಉಸಿರಾಟದ ತೊಂದರೆ, ಆಯಾಸ ಇತ್ಯಾದಿಗಳನ್ನು ಒಳಗೊಂಡಂತೆ ಬೆರಳೆಣಿಕೆಯಷ್ಟು ದೀರ್ಘಕಾಲದ ಕೋವಿಡ್​ ಲಕ್ಷಣಗಳನ್ನು ಮಾತ್ರ ತಿಳಿದಿದ್ದೇವೆ. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ, ಸುಮಾರು 62 ದೀರ್ಘ ಕೊರೊನಾ ರೋಗಲಕ್ಷಣಗಳನ್ನು ಗುರುತಿಸಲಾಗಿದೆ.

ದೀರ್ಘ ಕಾಲದ ಕೋವಿಡ್​ ಲಕ್ಷಣಗಳಲ್ಲಿ ಕೂದಲು ಉದುರುವಿಕೆ, ಕಡಿಮೆ ಕಾಮಾಸಕ್ತಿ ಸಮಸ್ಯೆ ಇರಲಿದೆ!

author img

By

Published : Jul 26, 2022, 4:22 PM IST

ಇಂಗ್ಲೆಂಡ್​​​​ನಲ್ಲಿ ಸುಮಾರು 2 ಮಿಲಿಯನ್ ಜನರು ಕೊರೊನಾ ಸೋಂಕಿನ ನಂತರ ನಿರಂತರ ರೋಗಲಕ್ಷಣಗಳನ್ನು ಹೊಂದಿದ್ದಾರಂತೆ. ಇದನ್ನು ದೀರ್ಘ ಕಾಲದ ಕೋವಿಡ್​ ಎಂದು ಕರೆಯಲಾಗುತ್ತಿದೆ. ಆಯಾಸ ಮತ್ತು ಉಸಿರಾಟದ ತೊಂದರೆಯಂತಹ ಸಾಮಾನ್ಯ ಲಕ್ಷಣಗಳು ಇದರಲ್ಲಿ ಕಂಡು ಬರುತ್ತಿವೆ. ಜೊತೆಗೆ ಜನರ ದೈನಂದಿನ ಚಟುವಟಿಕೆಗಳು, ಜೀವನದ ಗುಣಮಟ್ಟ ಮತ್ತು ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಇದು ಗಮನಾರ್ಹ ಪರಿಣಾಮ ಬೀರುತ್ತವೆ.

ಆದರೆ, ದೀರ್ಘಕಾಲದ ಕೊರೊನಾ ಲಕ್ಷಣಗಳು ಇದಕ್ಕಿಂತ ಇನ್ನೂ ಹೆಚ್ಚು ವಿಸ್ತಾರವಾಗಿವೆ. ನೇಚರ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಇದನ್ನು ಕಂಡುಕೊಳ್ಳಲಾಗಿದೆ. ದೀರ್ಘ ಕೋವಿಡ್​ಗೆ ಸಂಬಂಧಿಸಿದ 62 ರೋಗಲಕ್ಷಣಗಳನ್ನು ಇದರಲ್ಲಿ ಗುರುತಿಸಲಾಗಿದೆ.

ದೀರ್ಘಾವಧಿಯ ಕೋವಿಡ್​ ಅನ್ನು ಅರ್ಥಮಾಡಿಕೊಳ್ಳಲು ಮೊದಲು ಕೈಗೊಂಡ ಕಾರ್ಯ ಎಂದರೆ ಅದುವೇ ಆಸ್ಪತ್ರೆಗೆ ದಾಖಲಾದ ರೋಗಿಗಳ ಅಧ್ಯಯನ. ಕೋವಿಡ್​ ಸೋಂಕಿತ ಹೆಚ್ಚಿನ ಜನರನ್ನು ಪ್ರಾಥಮಿಕ ಆರೈಕೆಯಲ್ಲಿಯೇ ಸರಿಪಡಿಸಲಾಗಿದೆ. ಆದ್ದರಿಂದ, ಸೌಮ್ಯವಾದ ಆರಂಭಿಕ ಸೋಂಕುಗಳಿರುವ ಜನರಲ್ಲಿ ದೀರ್ಘಕಾಲದ ಕೋವಿಡ್​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಅಧ್ಯಯನದಲ್ಲಿ 2020 ರ ಜನವರಿಯಿಂದ ಏಪ್ರಿಲ್ 2021 ರವರೆಗೆ ಕೋವಿಡ್​ನ ದೃಢೀಕೃತ ರೋಗ ನಿರ್ಣಯದೊಂದಿಗೆ ಇಂಗ್ಲೆಂಡ್‌ನಲ್ಲಿ 450,000 ಕ್ಕೂ ಹೆಚ್ಚು ಜನರು ಮತ್ತು ಕೋವಿಡ್​​​ನ ಯಾವುದೇ ಪೂರ್ವ ಇತಿಹಾಸವಿಲ್ಲದ 1.9 ಮಿಲಿಯನ್ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಇದರಲ್ಲಿ ಪ್ರಾಥಮಿಕ ಆರೈಕೆ ಮಾಹಿತಿ ವಿಶ್ಲೇಷಿಸಲಾಗಿದೆ.

ಎರಡೂ ಗುಂಪುಗಳನ್ನು ಅವರ ಜನಸಂಖ್ಯಾ, ಸಾಮಾಜಿಕ ಮತ್ತು ಕ್ಲಿನಿಕಲ್ ಗುಣಲಕ್ಷಣಗಳ ವಿಷಯದಲ್ಲಿ ಬಹಳ ನಿಕಟ ಇರುವುದನ್ನು ಗುರ್ತಿಸಿದ್ದೇವೆ. ನಂತರ ನಾವು 115 ರೋಗಲಕ್ಷಣಗಳ ವರದಿಯಲ್ಲಿನ ಸಂಬಂಧಿತ ವ್ಯತ್ಯಾಸಗಳನ್ನು ನಿರ್ಣಯಿಸಲಾಗಿದೆ. ಕೋವಿಡ್​ ಇದ್ದವರಲ್ಲಿ ಅವರು ಸೋಂಕಿಗೆ ಒಳಗಾದ ಕನಿಷ್ಠ 12 ವಾರಗಳ ನಂತರ ಇದನ್ನು ಮಾಪನ ಮಾಡಿಲಾಗಿದೆಯಂತೆ.

ಕೋವಿಡ್​ನೊಂದಿಗೆ ರೋಗನಿರ್ಣಯ ಮಾಡಿದ ಜನರಲ್ಲಿ ಬಹುತೇಕ 62 ರೋಗಲಕ್ಷಣಗಳನ್ನು ಕಂಡುಕೊಂಡಿದ್ದೇವೆ ಎಂದು ತಜ್ಞರು ತಿಳಿಸಿದ್ದಾರೆ. ಅವುಗಳಲ್ಲಿ 20 ಲಕ್ಷಣಗಳನ್ನು ಮಾತ್ರ ದೀರ್ಘಕಾಲದ ಕೋವಿಡ್​ಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕ್ಲಿನಿಕಲ್ ಪ್ರಕರಣದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ವಾಸನೆಯ ಅರಿವಿನ ನಷ್ಟ, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳನ್ನು ಇದರಲ್ಲಿ ನಿರೀಕ್ಷಿಸಲಾಗಿದೆ.

ಗಂಭೀರ ಸಮಸ್ಯೆ ಪತ್ತೆ: ಅದರಲ್ಲೂ ಪ್ರಮುಖವಾಗಿ 12 ವಾರಗಳಿಗೂ ಹೆಚ್ಚಿನ ದಿನಗಳ ನಂತರ ಕೋವಿಡ್​ ನೊಂದಿಗೆ ಬಲವಾಗಿ ಸಂಬಂಧ ಇರುವುದನ್ನೂ ನಾವು ಕಂಡುಕೊಂಡಿದ್ದೇವೆ. ಕೆಲವು ರೋಗಲಕ್ಷಣಗಳು ಆಶ್ಚರ್ಯಕರವಾಗಿವೆ. ಉದಾಹರಣೆಗೆ ಕೂದಲು ಉದುರುವುದು ಮತ್ತು ಲೈಂಗಿಕತೆಯಲ್ಲಿ ಕಡಿಮೆ ಆಸಕ್ತಿ , ಎದೆ ನೋವು, ಜ್ವರ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಅಂಗಗಳ ಊತವನ್ನು ಒಳಗೊಂಡಿವೆ.

ಸಮೀಕ್ಷೆಗಳಲ್ಲಿ ವರದಿಯಾದ ದೀರ್ಘಕಾಲದ ಕೋವಿಡ್​ನ ರೋಗಲಕ್ಷಣಗಳ ವಿಸ್ತಾರ ಮತ್ತು ವೈವಿಧ್ಯತೆ ಗಮನಿಸಿದರೆ, ದೀರ್ಘವಾದ ಕೋವಿಡ್​ ಒಂದೇ ರೀತಿಯಲ್ಲಿ ಇರುವುದಿಲ್ಲ ಬದಲಿಗೆ ಸೋಂಕಿನ ಪರಿಣಾಮವಾಗಿ ವಿಭಿನ್ನ ಆರೋಗ್ಯ ಪರಿಸ್ಥಿತಿ ನಿರ್ಮಾಣ ಆಗಲಿವೆ. ವರದಿಯಾದ ರೋಗಲಕ್ಷಣಗಳ ಸಮೂಹಗಳ ಆಧಾರದ ಮೇಲೆ ದೀರ್ಘವಾದ ಕೋವಿಡ್​ ಅನ್ನು ಮೂರು ವಿಭಿನ್ನ ಗುಂಪುಗಳಾಗಿ ವರ್ಗೀಕರಿಸಬಹುದು ಎಂದು ವಿಶ್ಲೇಷಣೆ ಸೂಚಿಸುತ್ತದೆ.

ಮೂರು ವಿಭಾಗ: ಅಧ್ಯಯನದಲ್ಲಿ ದೀರ್ಘಕಾಲದ ಕೋವಿಡ್​ ಹೊಂದಿರುವ ಸುಮಾರು 80 ಪ್ರತಿಶತದಷ್ಟು ಜನರನ್ನು ಒಳಗೊಂಡಿರುವ ಅತಿದೊಡ್ಡ ಗುಂಪು, ಆಯಾಸ, ತಲೆನೋವು ಹಾಗೂ ಇತರ ದೇಹದ ನೋವಿನಿಂದ ಹಿಡಿದು ವಿಶಾಲವಾದ ರೋಗಲಕ್ಷಣಗಳನ್ನು ಎದುರಿಸುತ್ತಿದೆ. 15 ಪ್ರತಿಶತವನ್ನು ಪ್ರತಿನಿಧಿಸುವ ಎರಡನೇ ದೊಡ್ಡ ಗುಂಪು, ಪ್ರಧಾನವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆ, ಆತಂಕ, ಮೆದುಳಿನ ಮಂಜು ಮತ್ತು ನಿದ್ರಾಹೀನತೆ ಸೇರಿದಂತೆ ಅರಿವಿನ ಲಕ್ಷಣಗಳನ್ನು ಹೊಂದಿತ್ತು. ಮೂರನೇ ಮತ್ತು ಚಿಕ್ಕ ಗುಂಪಾದ ಉಳಿದ 5 ಪ್ರತಿಶತ ಮುಖ್ಯವಾಗಿ ಉಸಿರಾಟದ ಲಕ್ಷಣಗಳಾದ ಉಸಿರಾಟದ ತೊಂದರೆ, ಕೆಮ್ಮು ಮತ್ತು ಉಬ್ಬಸವನ್ನು ಎದುರಿಸಿದೆಯಂತೆ.

ಸಾಮಾನ್ಯ ವೈದ್ಯರ ಸಮಾಲೋಚನೆಗಳ ಸಮಯದಲ್ಲಿ ವರದಿ ಮಾಡಲಾದ ರೋಗಲಕ್ಷಣಗಳನ್ನು ಮಾತ್ರ ನಾವು ನಿರ್ಣಯಿಸಲು ಸಾಧ್ಯವಾಯಿತು.ಸಹಜವಾಗಿ, ಪ್ರತಿಯೊಬ್ಬರೂ ರೋಗಲಕ್ಷಣ ವೈದ್ಯರಿಗೆ ತಿಳಿಯುವುದಿಲ್ಲ. ಆದ್ದರಿಂದ ನಮ್ಮ ಅಧ್ಯಯನವು ದೃಢಪಡಿಸಿದ ಕೋವಿಡ್​ ಇತಿಹಾಸವನ್ನು ಹೊಂದಿರುವ ಮತ್ತು ಇತಿಹಾಸ ಹೊಂದಿರದಿಲ್ಲದ ಜನರ ನಡುವೆ ವರದಿಯಾದ ರೋಗಲಕ್ಷಣಗಳಲ್ಲಿನ ವ್ಯತ್ಯಾಸಗಳನ್ನು ಹೋಲಿಸಲು ಸಾಧ್ಯವಾಗಿಲ್ಲ. ಈ ಗುಂಪಿನಲ್ಲಿನ ಕೆಲವು ರೋಗಿಗಳು ಕೋವಿಡ್​ ಅನ್ನು ಹೊಂದಿದ್ದರೂ ಪರೀಕ್ಷೆಗೆ ಒಳಗಾಗದೇ ಹಾಗೆ ಇರುವುದನ್ನೂ ಸಹ ಮನಗಂಡಿರುವುದರಿಂದ ಇದರ ಹೋಲಿಕೆಯನ್ನು ನಿರ್ಬಂಧ ಮಾಡಲಾಗಿದೆ.

ಸಂಶೋದಕರಿಗೆ ಸಹಕಾರ ಅಗತ್ಯ: ಕೋವಿಡ್​ನ ದೀರ್ಘಕಾಲದ ಆರೋಗ್ಯ ಪರಿಣಾಮಗಳಿಂದ ಬಳಲುತ್ತಿರುವ ಯುಕೆ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರನ್ನು ಕಂಡುಹಿಡಿಯಲು ವೈದ್ಯರು ಮತ್ತು ಸಂಶೋಧಕರಿಗೆ ದೀರ್ಘಕಾಲದ ಕೋವಿಡ್​ ರೋಗಲಕ್ಷಣಗಳನ್ನು ಸೆರೆಹಿಡಿಯಲು ಹಾಗೂ ಉತ್ತಮ ಆರೈಕೆಯನ್ನು ಒದಗಿಸಲು ಸಮಗ್ರ ಸಾಧನಗಳ ಅಗತ್ಯವಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.

ದೀರ್ಘಕಾಲದ ಕೋವಿಡ್​ ರೋಗಲಕ್ಷಣಗಳ ಸ್ಪೆಕ್ಟ್ರಮ್ ಅನ್ನು ಗುರಿಯಾಗಿಟ್ಟುಕೊಂಡು ಸಂಭಾವ್ಯ ಚಿಕಿತ್ಸೆಗಳನ್ನು ಮೌಲ್ಯಮಾಪನ ಮಾಡಲು ನಮಗೆ ಕ್ಲಿನಿಕಲ್ ಪ್ರಯೋಗಗಳ ಅಗತ್ಯವಿದೆ. ಇದು ದೀರ್ಘ ಕೋವಿಡ್​ ಹೊಂದಿರುವ ಜನರ ಜೀವನದ ಗುಣಮಟ್ಟವನ್ನು ಆಶಾದಾಯಕವಾಗಿ ಸುಧಾರಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪುರುಷರು ಎದುರಿಸುವ ನಾಲ್ಕು ಸಾಮಾನ್ಯ ಲೈಂಗಿಕ ಆರೋಗ್ಯ ಸಮಸ್ಯೆಗಳಿವು: ಚಿಂತೆ ಬೇಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.