ಕೌಲಲಾಂಪುರ: ಕಳೆದ ವಾರದಲ್ಲಿ ದಾಖಲೆಯಾದ ಜಾಗತಿಕ ಉಷ್ಣಾಂಶ ಏರಿಕೆ ಘಟನೆ ಅನೇಕ ಪರಿಸರ ತಜ್ಞರಲ್ಲಿ ಆತಂಕ ಹೆಚ್ಚಿಸಿದೆ. ಚೀನಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡುತ್ತಿದೆ. ಅತಿ ಹೆಚ್ಚಿನ ಉಷ್ಣಾಂಶದ ಪರಿಸ್ಥಿತಿಯು ಎಲ್ ನಿನೋ ಪರಿಸ್ಥಿತಿ ಮತ್ತು ಪರಿಸರದಲ್ಲಿ ಹೆಚ್ಚಾಗುತ್ತಿರುವ ಕಾರ್ಬೋನ್ ಡೈಆಕ್ಸೆಡ್ ಬಿಡುಗಡೆ ಸಂಯೋಜನೆಯಾಗಿದೆ. ಬಿಸಿಲು ಮತ್ತು ಒಣ ಪರಿಸ್ಥಿತಿಗಳು ಎಲ್ ನಿನೋ ಜೊತೆ ಸಂಬಂಧ ಹೊಂದಿದ್ದು, ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಲೇಷಿಯಾ ಸೇರಿದಂತೆ ಏಷ್ಯಾದ ಕೆಲವು ಭಾಗದಲ್ಲಿ ಈ ತಿಂಗಳು ಶಾಖದ ಅಲೆ ಹೆಚ್ಚಿದೆ. ಜೂನ್ನಲ್ಲಿ ಮಲೇಷಿಯಾದಲ್ಲಿ ಬಿಸಿಲ ತಾಪಮಾನದಿಂದ 39 ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಮಲೇಷಿಯಾ ಆರೋಗ್ಯ ಸಚಿವರು ತಿಳಿಸಿದ್ದಾರೆ. 23 ಮಂದಿ ಶಾಖದ ಹೊಡೆತಕ್ಕೆ ತತ್ತರಿಸಿದರೆ, 11 ಮಂದಿ ಹೀಟ್ ಕ್ರಾಂಪ್ಸ್ ಮತ್ತು ಐದು ಮಂದಿ ಶಾಖದ ಪಾರ್ಶ್ವವಾಯುಗೆ ಒಳಗಿದ್ದಾರೆ. ಬಿಸಿಲ ಹೊಡೆತ ಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ಮಲೇಷಿಯಾದ 20 ಜಾನುವಾರುಗಳು ಶಾಖದ ಹೊಡೆತಕ್ಕೆ ಸಿಕ್ಕು ಸಾವನ್ನಪ್ಪಿವೆ.
ಎಲ್ ನಿನೋ ಪರಿಣಾಮ: ಶಾಖದ ಅಲೆ ಬಳಿಕ ಈ ಪ್ರದೇಶವೂ ಸದ್ಯ ಸಣ್ಣ ಎಲ್ ನಿನೋ ಪರಿಸ್ಥಿತಿಯೊಂದಿಗೆ ಬಳಲುತ್ತದೆ. ಈ ಪರಿಸ್ಥಿತಿ ಸೆಪ್ಟೆಂಬರ್ವರೆಗೆ ಇರಲಿದ್ದು, ನವೆಂಬರ್ನಲ್ಲಿ ಹೆಚ್ಚಾಗಬಹುದು. ಮಲೇಷಿಯಾದಲ್ಲಿ ಮಳೆ ಪ್ರಮಾಣ ಕೂಡ 20 ರಿಂದ 40ರಷ್ಟು ಕಡಿಮೆಯಾಗಿದೆ. ಎಲ್ ನಿನೋ ಪರಿಸ್ಥಿತಿ 2023ರವರೆಗೆ ನಿಧಾನವಾಗಿ ಬಲಗೊಳ್ಳಲಿದ್ದು, ಶೇ 90ರಷ್ಟು ಆವರಿಸಲಿದೆ.
ಎಲ್ ನಿನೋ ಹೆಚ್ಚಿನ ತಾಪಮಾನ ಮತ್ತು ಕಡಿಮೆ ಮಳೆಯ ಪರಿಸ್ಥಿತಿಯಾಗಿದೆ. ಹೆಚ್ಚಿನ ಉಷ್ಣಾಂಶದಿಂದ ಕಾಡ್ಗಿಚ್ಚಿನಂತಹ ಪರಿಸ್ಥಿತಿ ಎದುರಾಗಬಹುದು. ಗಮನಾರ್ಹ ಪ್ರಮಾಣದ ಹೊಗೆ ಮತ್ತು ಮಾಲಿನ್ಯದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಬದಲಾವಣೆಗಳು ಮಾನವನ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಗಂಭೀರ ಹವಾಮಾನ ಪರಿಸ್ಥಿತಿಯಿಂದ ಜೀವ ಮತ್ತು ಜೀವವ್ಯವಸ್ಥೆ ಉಳಿಸಿಕೊಳ್ಳಲು ನಾವು ಸಿದ್ದರಾಗಬೇಕಿದೆ ಎಂದು ಇದೇ ವೇಳೆ ಕರೆ ನೀಡಿದ್ದಾರೆ.
ರೋಗಗಳ ಹೆಚ್ಚಳಕ್ಕೆ ಕಾರಣ: ಎಲ್ ನಿನೋ ಪರಿಣಾಮವಾಗಿ ವಾಹಕದಿಂದ ಹರಡುವ ರೋಗಗಳು ಅಂದರೆ ಮಲೇರಿಯಾ, ಡೆಂಘಿ, ಹಳದಿ ಜ್ವರ, ನೀರಿನ ಸಂಬಂಧಿತ ಜ್ವರಗಳಾದ ಕಾಲರಾ, ಟೈಫಾಯ್ಡ್, ಅತಿಸಾರದ ಸೋಂಕುಗಳು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯದ ಮೇಲೆ ಒತ್ತಡ, ಪಾರ್ಶ್ವವಾಯುನಂತಹ ಸಮಸ್ಯೆ ಪರಿಸರ ಬದಲಾವಣೆ ಸಮಸ್ಯೆಗಳ ಉಲ್ಬಣಕ್ಕೂ ಎಲ್ ನಿನೋ ಕಾರಣವಾಗಲಿದೆ.
ಡಬ್ಲ್ಯೂಎಂಒ ಪ್ರಕಾರ, ಎಲ್ ನಿನೋ ತಾಪಮಾನದ ದಾಖಲೆಗಳನ್ನು ಮುರಿಯಲಿದ್ದು, ಜಾಗತಿಕ ಮತ್ತು ಸಮುದ್ರದ ಮೇಲ್ಮೈ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೆಚ್ಚಿನ ತಾಪಮಾನದಿಂದ ಬಿಸಿಲು, ಒಣ ಪರಿಸ್ಥಿತಿ ಹೆಚ್ಚಲಿದೆ. ದೀರ್ಘಕಾಲದ ಉಷ್ಣ ತಾಪಮಾನಕ್ಕೆ ಒಳಗಾದಾಗ ಬೆವರುವಿಕೆ, ಒಣ ತ್ವಚೆ ಮತ್ತು ಶಾಖದ ದದ್ದು ಸೇರಿದಂತೆ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಇದು ನಮ್ಮ ಚಯಾಪಚಯನದ ಮೇಲೂ ಕೂಡ ಪರಿಣಾಮ ಬೀರಲಿದ್ದು ಹೃದಯ, ಕಿಡ್ನಿ, ಶ್ವಾಸಕೋಶದಂತಹ ಪ್ರಮುಖ ಅಂಗಾಂಗಗಳು ಪರಿಣಾಮಕ್ಕೆ ಒಳಗಾಗಲಿದೆ.
ಇದನ್ನೂ ಓದಿ: Heart Health: ಸುಧಾರಿತ ಉಷ್ಣ ಕೂಡ ಹೃದಯಕ್ಕೆ ಅಪಾಯಕಾರಿ; ಅಧ್ಯಯನದಿಂದ ಬಯಲು