ETV Bharat / sukhibhava

ಜಾಗತಿಕ ಆಟಿಸಂ ಜಾಗೃತಿ ದಿನ 2023: ಬೇಕಿದೆ ಈ ಅಸ್ವಸ್ಥತೆ ಕುರಿತು ಜಾಗ್ರತೆ - ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​​ ಬಗ್ಗೆ ಸಮಾಜದಲ್ಲಿ

ಮಕ್ಕಳ ನರ ಬೆಳವಣಿಗೆ ಮೇಲೆ ಸಮಸ್ಯೆ ಬೀರುವ ಈ ಅಸ್ವಸ್ಥತೆ ಕುರಿತು ಜನರಲ್ಲಿ ಸಾಕಷ್ಟು ಅರಿವಿನ ಕೊರತೆ ಇದೆ.

Global Autism Awareness Day 2023: Awareness of this disorder is needed

author img

By

Published : Apr 1, 2023, 1:28 PM IST

ಹೈದ್ರಾಬಾದ್​: ಜಗತ್ತಿನಲ್ಲಿ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​​ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಇದೆ. ಈ ಸಮಸ್ಯೆಯಲ್ಲಿ ನರವೈಜ್ಞಾನಿಕ ಅಸಹಜತೆಗಳಿಂದ ಮಗು ಬಳಲುತ್ತಿದ್ದು, ಸಂವಹನ ಕೊರತೆ ಎದುರಿಸುತ್ತಿರುತ್ತದೆ. ಈ ಹಿನ್ನೆಲೆ ಈ ಆಟಿಸಂ ಸ್ಥಿತಿ ಮತ್ತು ಅದರಿಂದ ಜನರು ಬಳಲುತ್ತಿರುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಏಪ್ರಿಲ್​ 2ಅನ್ನು ವಿಶ್ವ ಅಟಿಸಂ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ. ಈ ವರ್ಷ ಈ ದಿನವನ್ನು "Transformation: Toward a Neuro-Inclusive World for All”​ ಎಂಬ ಘೋಷವಾಕ್ಯದಿಂದ ಆಚರಿಸಲಾಗುತ್ತದೆ.

ರೋಗ ಪತ್ತೆ ಕಷ್ಟ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​ ಹೊಂದಿರುವ ಮಗುವು ನರ ಬೆಳವಣಿಗೆ ಅಸ್ವಸ್ಥತೆಯನ್ನು ಹೊಂದಿರುತ್ತದೆ. ಆಟಿಸಂ ಅನ್ನು ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (ಎಡಿಎಸ್)​ ಎಂದು ಪರಿಚಿತವಾಗಿದೆ. ಮಗು ಜನಿಸಿದ ಮೂರು ವರ್ಷದೊಳಗೆ ಈ ಸಮಸ್ಯೆ ಬೆಳಕಿಗೆ ಬರುತ್ತದೆ. ಈ ಅಸ್ವಸ್ಥತೆಯಿಂದ ಮಗು ಜೀವನ ಪರ್ಯಂತ ಸಮಸ್ಯೆ ಅನುಭವಿಸುವಂತೆ ಆಗುತ್ತದೆ. ಪುರುಷರು ಮತ್ತು ಮಹಿಳೆ ಇಬ್ಬರಲ್ಲೂ ಈ ಸಮಸ್ಯೆ ಕಂಡು ಬರುತ್ತದೆ. ಇದು ಮಗು ಜನಿಸಿದ ವೇಳೆ ಪತ್ತೆಯಾಗುವುದಿಲ್ಲ. ಆದರೆ, ಕಾಲ ಕ್ರಮೇಣ ಈ ಸಮಸ್ಯೆಯು ಪತ್ತೆಯಾಗುತ್ತದೆ. ಈ ಸಮಸ್ಯೆಗೆ ಕಾರಣ ಪರಿಸರ ಜೊತೆಗೆ ಅನುವಂಶಿಕತೆಯಾಗಿದೆ. ಮಕ್ಕಳ ನಡವಳಿಕೆಯ ಮೌಲ್ಯಮಾಪನ, ಶ್ರವಣ ಮತ್ತು ದೃಷ್ಟಿ ಸಮಸ್ಯೆಗಳನ್ನು ಪರಿಶೀಲಿಸಲು ಆಡಿಯೋ-ದೃಶ್ಯ ಪರೀಕ್ಷೆಗಳು, ಔದ್ಯೋಗಿಕ ಚಿಕಿತ್ಸೆ, ಸ್ಕ್ರೀನಿಂಗ್ ಮತ್ತು ಅಭಿವೃದ್ಧಿ ಪ್ರಶ್ನಾವಳಿಗಳಂತಹ ವಿವಿಧ ಸ್ಕ್ರೀನಿಂಗ್‌ಗಳ ಮೂಲಕ ಆಟಿಸಂ ಅನ್ನು ಕಂಡುಹಿಡಿಯಬಹುದು.

ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​​ ಅನುಭವಿಸುವ ಮಕ್ಕಳು ಸಾಮಾಜೀಕರಣದಲ್ಲಿ ತೊಂದರೆ ಅನುಭವಿಸುತ್ತಾರೆ ಮುಖದ ಭಾವನೆ ವ್ಯಕ್ತಪಡಿಸುವಲ್ಲಿ ಕೂಡ ಅವರು ವಿಫಲರಾಗುತ್ತಾರೆ. ಇದರಿಂದಾಗಿ ಅವರು ಮಾತನಾಡುವ ಮತ್ತು ಧ್ವನಿಯಲ್ಲಿ ತೊಂದರೆ ಅನುಭವಿಸುತ್ತಾರೆ. ಈ ಮಕ್ಕಳು ಏಕಾಗ್ರತೆ ಸಮಸ್ಯೆಯನ್ನು ಅನುಭವಿಸುವ ಜೊತೆಗೆ ಅವರ ಬೌದ್ಧಿಕ ಮತ್ತು ಭಾವನಾತ್ಮಕ ಅಭಿವೃದ್ಧಿಯಲ್ಲಿ ಸಾಮಾಜಿಕ ಪರಿಸ್ಥಿತಿ ಮತ್ತು ಸಂವಹನದಲ್ಲಿ ತೊಡಕನ್ನು ಅನುಭವಿಸುತ್ತಾರೆ.

ನಿರ್ದಿಷ್ಟ ಚಿಕಿತ್ಸೆ ಇಲ್ಲ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​ ಸಮಸ್ಯೆ ಹೊಂದಿರುವವರಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ ಎಂದು ಕೆಲವು ತಜ್ಞರು ತಿಳಿಸುತ್ತಾರೆ. ಇಬ್ಬರು ರೋಗಿಗಳಿಗೆ ಒಂದೇ ರೀತಿಯ ಚಿಕಿತ್ಸೆಯು ಅಗತ್ಯವಾಗಿ ಕೆಲಸ ಮಾಡುವುದಿಲ್ಲ ಎಂದು ಕೆಲವು ವೈದ್ಯರು ಹೇಳುತ್ತಾರೆ. ಕೆಲವು ಚಿಕಿತ್ಸೆಯ ಗುರಿಯು ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಯ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ಇದನ್ನು ವಿವಿಧ ಮಾತು ಮತ್ತು ಔದ್ಯೋಗಿಕ ಚಿಕಿತ್ಸೆಗಳು, ಸಾಮಾಜಿಕ ಕೌಶಲ್ಯಗಳ ತರಬೇತಿ, ಔಷಧೋಪಚಾರ ಮತ್ತು ಆಹಾರ ವಿಧಾನಗಳ ಸಹಾಯದಿಂದ ನಿರ್ವಹಿಸಬಹುದು. ಔಷಧಿ, ವರ್ತನೆಯ ಶಿಕ್ಷಣ ಮತ್ತು ಸಾಮಾಜಿಕ ಸಂವಹನ ಕೌಶಲ್ಯಗಳ ಮೂಲಕ ಆಟಿಸಂ ಚಿಕಿತ್ಸೆ ನೀಡಬಹುದು. ಸಕಾರಾತ್ಮಕ ನಡವಳಿಕೆಯನ್ನು ಅನುಷ್ಠಾನಗೊಳಿಸುವುದು ಮತ್ತು ಕಾರ್ಯಕ್ಷಮತೆ ವರ್ಧನೆಯಂತಹ ಮಾನಸಿಕ ತಂತ್ರಗಳನ್ನು ಕಲಿಸುವುದು ಅವಶ್ಯವಾಗಿರುತ್ತದೆ.

ಇದನ್ನೂ ಓದಿ: ಮಕ್ಕಳ ಜೊತೆ ಪೋಷಕರು ಹೇಗಿರಬೇಕು... ಸಂದರ್ಶನದಲ್ಲಿ ವೇದಾಪ್ರದಾ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.