ETV Bharat / sukhibhava

ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಬೇಕೇ? ಹಾಗಾದರೆ, 'ಸ್ಕಿನ್​ ಫಾಸ್ಟಿಂಗ್'​ ಬಗ್ಗೆ ತಿಳಿದುಕೊಳ್ಳಿ.. - How to do skin fasting

ಸ್ಕಿನ್ ಫಾಸ್ಟಿಂಗ್ ಅಂದರೆ ಚರ್ಮವನ್ನು ಸ್ವಾಭಾವಿಕವಾಗಿ ಇರಲು ಬಿಡುವುದು ಮತ್ತು ನಿಯಮಿತ ಸ್ಕಿನ್​ ಕೇರ್​​ ದಿನಚರಿಯನ್ನು ಬಿಟ್ಟುಬಿಡುವುದು, ಅಂದರೆ ಕ್ಲೆನ್ಸರ್, ಟೋನರ್, ಸನ್​ಸ್ಕ್ರೀನ್​​, ಮಾಯಿಶ್ಚರೈಸರ್ ಇತ್ಯಾದಿಗಳನ್ನು ಬಳಸದಿರುವುದು ಅಥವಾ ಅದನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು.

Get Glowing Naturally With Skin Fasting
ಸ್ಕಿನ್​ ಫಾಸ್ಟಿಂಗ್
author img

By

Published : Sep 22, 2021, 8:46 PM IST

ಚರ್ಮದ ಆರೈಕೆ ವಿಧಾನಗಳಲ್ಲಿ 'ಸ್ಕಿನ್ ಫಾಸ್ಟಿಂಗ್' ಸಹ ಒಂದಾಗಿದ್ದು, ಇತ್ತೀಚಿಗೆ ಸಾಕಷ್ಟು ಚಾಲ್ತಿಯಲ್ಲಿದೆ. ಈ ಪ್ರಕ್ರಿಯೆಯು ಚರ್ಮದ ನೈಸರ್ಗಿಕ ಹೊಳಪು ಹೆಚ್ಚಿಸುವುದಲ್ಲದೆ, ಚರ್ಮದ ಇತರೆ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

'ಸ್ಕಿನ್ ಫಾಸ್ಟಿಂಗ್' ಎಂದರೇನು?

ನಿಮ್ಮ ಸೌಂದರ್ಯ ವರ್ಧನೆಗಾಗಿ ಪ್ರತಿ ದಿನ ನೀವು ನಿಮ್ಮ ಚರ್ಮದ ಆರೈಕೆಯನ್ನು ಮಾಡುತ್ತಲೇ ಇರುತ್ತೀರಿ. ಆದರೆ ಈ ಮಧ್ಯೆ ಸ್ವಲ್ಪ ಸಮಯದ ಕಾಲ ನಿಮ್ಮ ತ್ವಚೆಗೆ ಯಾವುದೇ ಆರೈಕೆ ಮಾಡದೆ ಅಥವಾ ಯಾವುದೇ ಉತ್ಪನ್ನಗಳನ್ನು ಬಳಕೆ ಮಾಡದೆ ಇದ್ದರೆ ಆ ಸಮಯವನ್ನು ಸ್ಕಿನ್ ಫಾಸ್ಟಿಂಗ್ ಎಂದು ಕರೆಯಲಾಗುತ್ತದೆ.

'ಸ್ಕಿನ್ ಫಾಸ್ಟಿಂಗ್' ನಿಂದ ನೈಸರ್ಗಿಕ ಹೊಳಪು:

ಭಾರತದಲ್ಲಿ ಉಪವಾಸ ಎಂಬುದು ಒಂದು ಪುರಾತನ ಸಂಪ್ರದಾಯವಾಗಿದೆ. ಇದು ವರ್ಷವಿಡೀ ಆಚರಿಸುವ ಕೆಲವು ಹಬ್ಬಗಳು ಮತ್ತು ಇತರ ವಿಶೇಷ ದಿನಗಳೊಂದಿಗೆ ಧಾರ್ಮಿಕ ಸಂಬಂಧವನ್ನು ಹೊಂದಿದೆ. ಇದನ್ನು ಹೊರತುಪಡಿಸಿ, ನಿಯಮಿತ ಉಪವಾಸವು ನಮ್ಮ ಆರೋಗ್ಯಕ್ಕೆ ಕೆಲವು ಪ್ರಯೋಜನಗಳನ್ನು ಒದಗಿಸುತ್ತದೆ. ಅದೇ ರೀತಿ ಚರ್ಮವನ್ನು ಆರೋಗ್ಯವಾಗಿಡಲು, 'ಸ್ಕಿನ್ ಫಾಸ್ಟಿಂಗ್' ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಲ್ಲಿರುವ ವಿಚಾರ ಹಾಗೂ ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ ಚರ್ಮದ ಉಪವಾಸ(ಸ್ಕಿನ್ ಫಾಸ್ಟಿಂಗ್) ಉತ್ತಮ ಎಂದು ಸೌಂದರ್ಯ ತಜ್ಞರು ಪ್ರತಿಪಾದಿಸುತ್ತಾರೆ.

'ಸ್ಕಿನ್ ಫಾಸ್ಟಿಂಗ್' ಹೇಗೆ?

ಸೌಂದರ್ಯ ತಜ್ಞೆ ಮೀನು ವರ್ಮಾ ಅವರು ಮಾಲಿನ್ಯ, ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ ಮತ್ತು ಓವರ್​ ಮೇಕಪ್, ವಿಶೇಷವಾಗಿ ರಾಸಾಯನಿಕ ಆಧಾರಿತ ಉತ್ಪನ್ನಗಳ ಬಳಕೆ ನಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು ಎಂದು ವಿವರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ಕಿನ್ ಫಾಸ್ಟಿಂಗ್ ಅಂದರೆ ಚರ್ಮವನ್ನು ಸ್ವಾಭಾವಿಕವಾಗಿ ಇರಲು ಬಿಡುವುದು ಮತ್ತು ನಿಯಮಿತ ಸ್ಕಿನ್​ ಕೇರ್​​ ದಿನಚರಿಯನ್ನು ಬಿಟ್ಟುಬಿಡುವುದು, ಉದಾಹರಣೆಗೆ ಕ್ಲೆನ್ಸರ್, ಟೋನರ್, ಸನ್​ಸ್ಕ್ರೀನ್​​, ಮಾಯಿಶ್ಚರೈಸರ್ ಇತ್ಯಾದಿಗಳನ್ನು ಬಳಸದಿರುವುದು ಅಥವಾ ಅದನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಪ್ರಯೋಜನಕಾರಿ ಅಂತಾರೆ.

ಪ್ರಸ್ತುತ ದಿನಗಳಲ್ಲಿ ಜನರು ತಮ್ಮ ಚರ್ಮದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ ಎಂದು ಮೀನು ವರ್ಮಾ ಹೇಳುತ್ತಾರೆ. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅಸಂಖ್ಯಾತ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳ ಅತಿಯಾದ ಬಳಕೆಯು ಚರ್ಮದ ನೈಸರ್ಗಿಕ ರೂಪದ ಮೇಲೆ ಪರಿಣಾಮ ಬೀರಬಹುದು. ಚರ್ಮದಲ್ಲಿ ಕಂಡುಬರುವ ನೈಸರ್ಗಿಕ ಎಣ್ಣೆ ಅಂಶ ಒಣಗಲು ಆರಂಭವಾಗುತ್ತದೆ ಮತ್ತು ನಮ್ಮ ಚರ್ಮವು ಶುಷ್ಕ, ನಿರ್ಜೀವ ಮತ್ತು ಕಳೆಗುಂದುತ್ತದೆ.

ಸ್ಕಿನ್​​ ಫಾಸ್ಟಿಂಗ್​​ನಲ್ಲಿ, ಹಲವು ವಿಧದ ಮೇಕಪ್ ಉತ್ಪನ್ನಗಳು ಮತ್ತು ಇತರ ತ್ವಚೆ ಉತ್ಪನ್ನಗಳು (ವಿಶೇಷವಾಗಿ ರಾಸಾಯನಿಕ ಆಧಾರಿತ), ನಿಯಮಿತ ಮಧ್ಯಂತರಗಳಲ್ಲಿ ಬಳಸುವುದಿಲ್ಲ ಅಥವಾ ಒಂದು ದಿನ ಅಥವಾ ಎರಡು ದಿನ ಇತಿಮಿತಿಯಲ್ಲಿ ಬಳಸಲಾಗುತ್ತದೆ.

ದೈನಂದಿನ ಚರ್ಮದ ಆರೈಕೆ ಕಡ್ಡಾಯ:

ಪುರುಷರು ಮತ್ತು ಮಹಿಳೆಯರು ತಮ್ಮ ಚರ್ಮದ ಪ್ರಕಾರಕ್ಕನುಗುಣವಾಗಿ ಉತ್ಪನ್ನಗಳನ್ನು ಬಳಸಬೇಕು, ದೈನಂದಿನ ಬಳಕೆಗಾಗಿ ಕನಿಷ್ಠ ರಾಸಾಯನಿಕ ಬಳಕೆಯ ಉತ್ಪನ್ನಗಳನ್ನು ಬಳಸಬೇಕು ಎಂದು ಮೀನು ವರ್ಮಾ ವಿವರಿಸುತ್ತಾರೆ. ಸಾಧ್ಯವಾದರೆ, ಗಿಡಮೂಲಿಕೆ ಅಥವಾ ನೈಸರ್ಗಿಕ ಉತ್ಪನ್ನಗಳಿಗೆ ಆದ್ಯತೆಯನ್ನು ನೀಡಬೇಕು, ಏಕೆಂದರೆ ಅವು ಚರ್ಮದ ನೈಸರ್ಗಿಕ ವಿನ್ಯಾಸದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.ಇದರ ಜೊತೆಯಲ್ಲಿ, ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸಮತೋಲಿತ ಚರ್ಮದ ಆರೈಕೆಯನ್ನು ಅನುಸರಿಸುವುದು ಮುಖ್ಯವಾಗಿದೆ. ಅನೇಕ ಜನರು, ಚರ್ಮದ ಆರೈಕೆಯ ಹೆಸರಿನಲ್ಲಿ, ಬಹಳಷ್ಟು ಚರ್ಮದ ಆರೈಕೆ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲು ಪ್ರಾರಂಭಿಸುತ್ತಾರೆ, ಇದು ಚರ್ಮಕ್ಕೆ ಪ್ರಯೋಜನವಾಗುವ ಬದಲು, ಹಾನಿ ಮಾಡುತ್ತದೆ. ಉತ್ತಮ ಚರ್ಮದ ಆರೈಕೆಗಾಗಿ, ಕ್ಲೆನ್ಸರ್, ಸನ್ ಸ್ಕ್ರೀನ್, ಡೇ ಕ್ರೀಮ್ ಮತ್ತು ನೈಟ್ ಕ್ರೀಮ್ ಬಳಕೆ ಸಾಕು.

ಸ್ಕಿನ್​ ಫಾಸ್ಟಿಂಗ್​ ಮಾಡುವುದು ಹೇಗೆ?

  • ಸ್ಕಿನ್​ ಫಾಸ್ಟಿಂಗ್ ಪ್ರಕ್ರಿಯೆಯು ಚರ್ಮಕ್ಕೆ ನೈಸರ್ಗಿಕ ಹೊಳಪು ತರುತ್ತದೆ ಮತ್ತು ಇದು ಒಳಗಿನಿಂದ ಚರ್ಮವನ್ನು ವಿಷಮುಕ್ತಗೊಳಿಸುತ್ತದೆ. ಸ್ಕಿನ್​ ಫಾಸ್ಟಿಂಗ್ ಹೇಗೆ ಮಾಡಬೇಕೆಂಬುದು ಇಲ್ಲಿದೆ:
  • ಮೊದಲಿಗೆ, ಮಲಗುವ ಮುನ್ನ ನಿಮ್ಮ ಚರ್ಮವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ಯಾವುದೇ ಚರ್ಮ ಆರೈಕೆ ಉತ್ಪನ್ನವನ್ನು ಹಚ್ಚಿಕೊಳ್ಳದೇ ಮಲಗಿಕೊಳ್ಳಿ.
  • ಬೆಳಿಗ್ಗೆ ಎದ್ದಾಗ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
  • ನಿಮ್ಮ ಮುಖ ಒಣಗುವವರೆಗೆ ಯಾವುದೇ ಉತ್ಪನ್ನವನ್ನು ಬಳಸಬೇಡಿ.
  • ಸ್ಕಿನ್​ ಫಾಸ್ಟಿಂಗ್​ ಅವಧಿಯಲ್ಲಿ ಯಾವುದೇ ಉತ್ಪನ್ನವನ್ನು ಬಳಸದೆ, ನಿಮ್ಮ ಚರ್ಮವು ಎಷ್ಟು ಸಮಯದವರೆಗೆ ನೈಸರ್ಗಿಕವಾಗಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ನಿರ್ಧರಿಸಬಹುದು.
  • ತುಂಬಾ ಒಣ ಚರ್ಮ ಹೊಂದಿರುವವರು ಲಘು ಎಣ್ಣೆ ಅಥವಾ ನೀರು ಆಧಾರಿತ ಮಾಯಿಶ್ಚರೈಸರ್ ಅನ್ನು ನೀರಿನಿಂದ ಮುಖ ತೊಳೆದ ನಂತರ ಸಣ್ಣ ಪ್ರಮಾಣದಲ್ಲಿ ಬಳಸಬಹುದು.

ನೆನಪಿನಲ್ಲಿಡಬೇಕಾದ ವಿಷಯಗಳು:

  • ನಿಮಗೆ ಯಾವುದೇ ಚರ್ಮ ರೋಗ ಇದ್ದರೆ ಇದನ್ನು ಮಾಡಬೇಡಿ.
  • ತುಂಬಾ ನೀರು ಕುಡಿ. ನಿಮ್ಮ ದೇಹವು ನಿರ್ಜಲೀಕರಣಗೊಂಡಿದ್ದರೆ, ಅದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
  • ಒಂದು ವಾರಕ್ಕಿಂತ ಹೆಚ್ಚು ಕಾಲ ಇದನ್ನು ಮಾಡಬೇಡಿ
  • ನೀವು ಚರ್ಮದ ಚಿಕಿತ್ಸೆಗೆ ಒಳಗಾಗುತ್ತಿದ್ದರೆ ಸ್ಕಿನ್​ ಫಾಸ್ಟಿಂಗ್​ ಮಾಡಬೇಡಿ
  • ಯಾವಾಗಲೂ ಹಗುರವಾದ, ಸಮತೋಲಿತ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ
  • ಒತ್ತಡ ಮತ್ತು ಆತಂಕದಿಂದ ದೂರವಿರಲು ಪ್ರಯತ್ನಿಸಿ

ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದಾಗ ಮಾತ್ರ ಸ್ಕಿನ್​ ಫಾಸ್ಟಿಂಗ್​ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಮೀನು ವರ್ಮಾ ಹೇಳುತ್ತಾರೆ. ಆದ್ದರಿಂದ, ಯಾವಾಗಲೂ ಪೌಷ್ಟಿಕ ಆಹಾರವನ್ನು ಸೇವಿಸಿ, ಸಂತೋಷವಾಗಿರಿ, ಪ್ರತಿದಿನ ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.