ETV Bharat / sukhibhava

ಗರ್ಭಾವಸ್ಥೆಯಲ್ಲಿ ಮಧುಮೇಹ; ಆಹಾರ ಪದ್ಧತಿಯ ಬಗ್ಗೆ ಇರಲಿ ಗಮನ - ಮಧುಮೇಹದ ಇತಿಹಾಸ

ಗರ್ಭಾವಸ್ಥೆಯ ಸಂದರ್ಭ ಮಧುಮೇಹ ಕಂಡುಬಂದಲ್ಲಿ ಮಹಿಳೆಯರು ಹೆಚ್ಚಾಗಿ ಫೈಬರ್​ ಹೊಂದಿರುವ ಸಮೃದ್ಧ ಆಹಾರವನ್ನು ಸೇವಿಸಬೇಕು.

gestational diabetes; It is important to pay attention to the diet

author img

By

Published : Aug 9, 2023, 12:38 PM IST

ಗರ್ಭಿಣಿಯರು ಎದುರಿಸುತ್ತಿರುವ ಪ್ರಮುಖ ಆರೋಗ್ಯದ ಸವಾಲಿನಲ್ಲಿ ಮಧುಮೇಹವೂ ಒಂದು. ಈ ಹಿಂದೆ ಯಾವುದೇ ಮಧುಮೇಹದ ಇತಿಹಾಸವನ್ನು ಹೊಂದಿರದಿದ್ದರೂ ಗರ್ಭಾವಸ್ಥೆಯಲ್ಲಿ ಕೆಲವರಿಗೆ ಮಧುಮೇಹ ವರದಿಯಾಗುತ್ತದೆ. ಹೆರಿಗೆಯಾದ ಬಳಿಕ ಈ ಮಧುಮೇಹ ಕಣ್ಮರೆಯಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುವುದು. ಈ ಪರಿಸ್ಥಿತಿಯನ್ನು ಎದುರಿಸುವಾಗ ಆಹಾರ ಪದ್ಧತಿ ಸೇರಿದಂತೆ ಚಿಕಿತ್ಸೆಗಳಲ್ಲಿ ವೈದ್ಯರ ಸಲಹೆ ಪಾಲಿಸುವುದು ಅಗತ್ಯವಾಗಿದೆ. ಪೋಷಕಾಂಶ ತಜ್ಞರು, ಈ ಸಲಹೆಯಿಂದ ಹೊರ ಬರಲು ಕೆಲವು ಆಹಾರ ಪದ್ಧತಿಯ ನಿಯಮಗಳನ್ನು ತಿಳಿಸಿದ್ದಾರೆ.

ಗರ್ಭಾವಸ್ಥೆಯ ಸಮಯದಲ್ಲಿ ಮಧುಮೇಹ ಕಂಡುಬಂದಲ್ಲಿ ಮಹಿಳೆಯರು ಹೆಚ್ಚಾಗಿ ಫೈಬರ್​ ಹೊಂದಿರುವ ಸಮೃದ್ಧ ಆಹಾರವನ್ನು ಸೇವಿಸಬೇಕು. ಬೇಳೆ ಕಾಳು, ಹಣ್ಣು ಮತ್ತು ತರಕಾರಿಗಳಲ್ಲಿ ಫೈಬರ್​ ಯಥೇಚ್ಛ ಮಟ್ಟದಲ್ಲಿ ಲಭ್ಯವಾಗುತ್ತದೆ. ಇದು ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿ, ಶಕ್ತಿಯನ್ನು ನೀಡುತ್ತದೆ.

ನೀವು ಸೇವಿಸುವ ಆಹಾರವೂ ಹೆಚ್ಚಿನ ಪ್ರೋಟಿನ್​ ಹೊಂದಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೀನು, ಕೋಳಿ ಮುಂತಾದವುಗಳಲ್ಲಿ ಹೆಚ್ಚಿನ ಪ್ರೋಟಿನ್​ ಅಂಶ ಇರುತ್ತದೆ.

ಆರೋಗ್ಯಯುತ ಕೊಬ್ಬಿನ ಆಹಾರವನ್ನು ಸೇವಿಸಿ, ಒಣ ಹಣ್ಣುಗಳು, ಆಲಿವ್​ ಎಣ್ಣೆಯನ್ನು ಸೇವಿಸಬೇಕು. ಇದು ಇನ್ಸುಲಿನ್​ ಅನ್ನು ಅಭಿವೃದ್ಧಿ ಮಾಡುತ್ತದೆ. ಜೊತೆಗೆ ಇದು ಹೃದಯದ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿ. ಯೋಗರ್ಟ್​, ಚೀಸ್​ನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುವ ಜೊತೆಗೆ ತಾಯಿ ಮೂಳೆ ಬಲವರ್ಧನೆಗೂ ಅವಶ್ಯಕ. ಹಾಗೇ ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಹೂಕೋಸ್​​, ಪಾಲಕ್​ ಸೊಪ್ಪು, ಬ್ರಾಕೋಲಿ ಮತ್ತು ದಪ್ಪ ಮೆಣಸಿನ ಕಾಯಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್​ ಇದ್ದು, ಹೆಚ್ಚಿನ ವಿಟಮಿನ್​ ಮತ್ತು ಮಿನರಲ್ಸ್​ ಇರುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸುತ್ತದೆ.

ಎಣ್ಣೆಯಲ್ಲಿ ಕರಿದ ಆಹಾರ, ಪೇಸ್ಟ್ರಿ, ಬಿಳಿ ಬ್ರೆಡ್​, ಅಧಿಕ ಉಪ್ಪಿನ ಆಹಾರ, ಜಂಕ್​ ಆಹಾರ ಮತ್ತು ಅಧಿಕ ಕೊಬ್ಬು ಹೊಂದಿರುವ ಡೈರಿ ಉತ್ಪನ್ನಗಳನ್ನು ಸೇವಿಸದೇ ಇರುವುದು ಉತ್ತಮ. ಏಕೆಂದರೆ ಇವು ಕೂಡ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.

ಗರ್ಭಾವಸ್ಥೆಯ ಮಧುಮೇಹ: ಗರ್ಭಾವಸ್ಥೆಯಲ್ಲಿ ಮಹಿಳೆಯರ ರಕ್ತದ ಗ್ಲುಕೋಸ್​ ಮಟ್ಟವು ಹೆಚ್ಚಾಗುತ್ತದೆ. ಹಾರ್ಮೋನ್​ಗಳ ಬದಲಾವಣೆಯಿಂದ ಈ ಸಮಯದಲ್ಲಿ ಮಧುಮೇಹ ಅನೇಕರಲ್ಲಿ ಕಂಡು ಬರುತ್ತದೆ. ಮಧುಮೇಹ ಸಾಮಾನ್ಯವಾಗಿ 20-24ನೇ ವಾರದಲ್ಲಿ ಪತ್ತೆಯಾಗುತ್ತದೆ. ರಕ್ತದಲ್ಲಿ ಅತಿ ಹೆಚ್ಚಿನ ಗ್ಲುಕೋಸ್​ ಪ್ರಮಾಣ ಪತ್ತೆಯಾಗುವುದು ತಾಯಿಗೆ ಜೊತೆಗೆ ಹುಟ್ಟಲಿರುವ ಮಗುವಿನ ಮೇಲೆ ಅನೇಕ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಈ ಹಿನ್ನೆಲೆ ವೈದ್ಯರಿಂದ ಚಿಕಿತ್ಸೆ ಪಡೆದು, ಸಮಾಲೋಚನೆ ನಡೆಸುವುದು ಅಗತ್ಯ. ಅನೇಕ ಮಂದಿಗೆ ಹೆರಿಗೆ ಬಳಿಕ ಈ ಮಧುಮೇಹ ಕಣ್ಮರೆಯಾಗುತ್ತದೆ. ಒಂದು ವೇಳೆ ಹೆರಿಗೆ ಬಳಿಕವೂ ಮಹಿಳೆಯರಲ್ಲಿ ಮಧುಮೇಹ ಮುಂದುವರೆದರೆ ಅದನ್ನು ಟೈಪ್​ 2 ಮಧುಮೇಹ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Pregnancy Hypertension: ಗರ್ಭಿಣಿಯರಲ್ಲಿ ಕಾಡುವ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.