ETV Bharat / sukhibhava

ನಡವಳಿಕೆ ಬದಲಾವಣೆಗೆ ಕಾರಣವಾಗಲಿದೆ ಗೇಮಿಂಗ್​ ಚಟ: ಎಚ್ಚರ ಎಂದ ತಜ್ಞರು

author img

By ETV Bharat Karnataka Team

Published : Dec 15, 2023, 12:58 PM IST

ಅನೇಕ ಮಂದಿ ತಮಗೆ ಗೇಮಿಂಗ್​ ಚಟ ಇದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ದರಿರುವುದಿಲ್ಲ. ಇದು ದೊಡ್ಡ ಸವಾಲಿನ ವಿಚಾರವಾಗಿದೆ.

Gaming addiction is leading to behavioral changes

ಲಖನೌ: ಗೇಮಿಂಗ್​ ಚಟವೂ​ (ಆನ್​ಲೈನ್​​ ಆಟದ ಚಟ) ಮಕ್ಕಳು ಮತ್ತು ವಯಸ್ಕರಲ್ಲಿ ನಟುವಳಿಕೆ ಬದಲಾವಣೆಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ನಿಮ್ಮ ಮಗುವು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುವುದು, ನಿತ್ಯದ ಚಟುವಟಿಕೆ ಯಲ್ಲಿ ಆಸಕ್ತಿ ಕಳೆದುಕೊಳ್ಳುವುದು. ತಿನ್ನುವಿಕೆ ಮತ್ತು ನಿದ್ರೆಯಲ್ಲಿ ಕೊರತೆ ಕಾಣುತ್ತಿದ್ದಂತೆ ತಕ್ಷಣಕ್ಕೆ ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಎಂದು ಸಲಹೆ ನೀಡಲಾಗಿದೆ.

ಹೆಡ್​​ ಡಿಜಿಟಲ್​ ವರ್ಕ್​ ಎಂಬ ವಿಷಯದ ಆಧಾರದ ಮೇಲೆ ಲಖನೌ ಯುನಿವರ್ಸಿಟಿ ಸೋಷಿಯಲ್​ ವರ್ಕ್​ ವಿಭಾಗವೂ ವಿಶೇಷ ಕಾರ್ಯಗಾರವನ್ನು ಆಯೋಜಿಸಿತ್ತು. ಇದರಲ್ಲಿ ಮಾತನಾಡಿರುವ ತಜ್ಞರು ಆನ್​ಲೈನ್ ಗೇಮಿಂಗ್​​ಗಳ ಕುರಿತು ಬೆಳಕು ಹೆಚ್ಚಿದ್ದು, ಈ ಚಟದಿಂಗ ಮುಕ್ತಿ ಹೊಂದುವ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕ್ಲಿನಿಕಲ್​ ಸೈಕಾಲಾಜಿಸ್ಟ್​​ ಡಾ ಪಿಕೆ ಖತ್ರಿ ಮಾತನಾಡಿ, ನಿಮ್ಮ ಸುತ್ತಮುತ್ತ ಈ ರೀತಿಯ ಲಕ್ಷಣಗಳನ್ನು ಹೊಂದಿರುವವರು ಕಂಡು ಬಂದರೆ ಯಾವುದೇ ಮುಜುಗರವಿಲ್ಲದೇ ಅವರಿಗೆ ಸಮಾಲೋಚಕರ ಸಹಾಯ ನೀಡಿ ಎಂದಿದ್ದಾರೆ.

ಅನೇಕ ಮಂದಿ ತಮಗೆ ಗೇಮಿಂಗ್​ ಚಟ ಇದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ದರಿರುವುದಿಲ್ಲ. ಇದು ದೊಡ್ಡ ಸವಾಲಿನ ವಿಚಾರವಾಗಿದೆ. ಅವರಿಗೆ ಈ ರೀತಿ ಚಟ ಇದ್ದರೆ, ಅದರ ನಿರ್ವಹಣೆಗೆ ಅವರು ಮುಂದೆ ಬರುವುದಿಲ್ಲ. ಅಷ್ಟೇ ಅಲ್ಲದೇ, ಜನರಲ್ಲಿ ಮನಶಾಸ್ತ್ರಜ್ಞ ಮತ್ತು ಮನೋವೈದ್ಯರ ನಡುವೆ ವ್ಯತ್ಯಾಸ ತಿಳಿದಿರುವುದಿಲ್ಲ. ಆನ್​ಲೈನ್​​ ಆಟದ ಬಗ್ಗೆ ಯಾರಾದರೂ ಚಟ ಹೊಂದಿದ್ದರೆ, ಅವರನ್ನು ಮನಶಾಸ್ತ್ರಜ್ಞರ ಬಳಿ ಸಮಾಲೋಚನೆ ನಡೆಸಬೇಕು. ಮನಶಾಸ್ತ್ರಜ್ಞರ ಜೊತೆಗಿನ ಕೆಲವು ಸಮಾಲೋಚನಾ ಸೆಷನ್​ಗಳು ಈ ವಿಚಾರ ನಿರ್ವಹಣೆಗೆ ಸಹಾಯ ಮಾಡುತ್ತಾರೆ. ಇದು ಆಗದೇ ಹೋದಲ್ಲಿ ಮಾತ್ರ ಮನೋವೈದ್ಯರ ಬಳಿ ಹೋಗಬೇಕು ಎಂದಿದ್ದಾರೆ.

ಒಂದು ವಿದ್ಯಾರ್ಥಿಗಳಲ್ಲಿ ಈ ರೀತಿಯ ಗೇಮಿಂಗ್​ ಚಟ ಪತ್ತೆಯಾದಲ್ಲಿ ಅವರು ಇದನ್ನು ಜವಾಬ್ದಾರಿಯಂತೆ ನಿರ್ವಹಣೆ ಮಾಡಲು ಮುಂದಾಗಬೇಕು. ಆನ್​ಲೈನ್​ ಗೇಮಿಂಗ್​ಗಳನ್ನು ಆರ್​ಎನ್​ಜಿ ಸರ್ಟಿಫಿಕೇಟ್​ ಮೂಲಕ ಯಾವುದೋ ನಂಬರ್​ ಜೆನರೆಟ್​ ಮೂಲಕ ಮಾಡಲಾಗುವುದು. ಈ ವೇಳೆ, ಅವರು ಯಾವುದೇ ತಾರತಮ್ಯ ಇಲ್ಲದೇ ಯಾವುದಾದರೂ ಗುಂಪು ಅಥವಾ ಆಟಗಾರರ ಜೊತೆಗೆ ಆಡುತ್ತಾರೆ. ಈ ವೇಳೆ, ಪ್ರತಿ ಆಟಗಾರರು ಗೆಲ್ಲುವ ಮತ್ತು ಸೋಲು ಸಾಧ್ಯತೆ ಇರುತ್ತದೆ. ಈ ಆಟಗಳು ಯಾವುದೇ ಹೊರಗಿನ ಅಂಶದ ಪ್ರಭಾವವನ್ನು ಹೊಂದಿರುವುದಿಲ್ಲ ಎಂದರು.

ಲಖನೌ ಪಶ್ಚಿಮದ ಹೆಚ್ಚುವರಿ ಪೊಲೀಸ್​ ಉಪ ಆಯುಕ್ತ ಮತ್ತು ಸೈಬರ್​ ತಜ್ಞ ಚಿರಂಜೀವಿ ನಾಥ್​​ ಸಿನ್ಹಾ ಮಾತನಾಡಿ, ಇವುಗಳಿಂದಾಗಿ ಇಂದು ಆನ್​ ಲೈನ್​ ವಂಚನೆ ಮತ್ತು ಸ್ಕಾಮ್​ಗಳು ಸಂತ್ರಸ್ತರಾಗುತ್ತಿದ್ದೇವೆ. ಅಲ್ಲದೇ ಡೀಪ್​ಫೇಕ್​ನಂತಹ ತಂತ್ರಜ್ಞಾನವನ್ನು ಪೊನೋಗ್ರಾಫಿ ಮತ್ತು ವ್ಯಕ್ತಿಯ ಖಾಸಗಿ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆನ್​ಲೈನ್​ ಗೇಮ್​ಗಳು ಸಿಹಿಯಾಗಿದ್ದು, ಉತ್ತಮ ರುಚಿ ಕೊಡುತ್ತದೆ. ಆದರೆ, ಇವುಗಳನ್ನು ಪ್ರತಿ ನಿತ್ಯ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಆನ್​ಲೈನ್​ ಗೇಮ್​ಗಳು ಕೇವಲ ಒಂದು ಭಾಗವಾಗಬೇಕು ಹೊರತು ಜೀವನವನ್ನೇ ಬದಲಾಯಿಸಬಹುದು ಎಂದರು.

ರಾಜ್ಯ ಶಿಕ್ಷಣ ಸಚಿವ ಸಂದೀಪ್​ ಸಿಂಗ್​ ಮಾತನಾಡಿ, ಯುವ ಜನತೆ ತಮ್ಮ ಶಕ್ತಿಯನ್ನು ರಾಷ್ಟ್ರದ ಉತ್ತಮಪಡಿಸುವಿಕೆಗೆ ಉಪಯೋಗಿಸಬೇಕೇ ಹೊರತು. ಈ ರೀತಿ ಆನ್​ಲೈನ್​ ಗೇಮ್​ಗಳಲ್ಲಿ ನಷ್ಟ ಮಾಡಬಾರದು. ಗೇಮ್​ ಚಟಗಳು ನಮ್ಮ ಯುವ ಜನರನ್ನು ದೈಹಿಕವಾಗಿ ಅಸಕ್ರಿಯಗೊಳಿಸಿ, ಸಾಮಾಜಿಕವಾಗಿ ಅವರನ್ನು ದೂರ ಮಾಡಿ, ಅವರಲ್ಲಿ ಸಂವನ ಕೌಶಲ್ಯವನ್ನೇ ಹಾಳು ಮಾಡುತ್ತದೆ ಎಂದರು. (ಐಎಎನ್​ಎಸ್​)

ಇದನ್ನೂ ಓದಿ: ದಿನಕ್ಕೆ 4 ಗಂಟೆಗಿಂತ ಹೆಚ್ಚು ಸ್ಮಾರ್ಟ್​ಫೋನ್​ ಬಳಕೆಯಿಂದ ಆರೋಗ್ಯ ಸಮಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.