ETV Bharat / sukhibhava

ಹಣ್ಣು, ತರಕಾರಿ ಸೇವಿಸಿ.. ಗರ್ಭಪಾತದಿಂದ ಪಾರಾಗಿ.. - ಗರ್ಭಾವಸ್ಥೆಯಲ್ಲಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜ

ಇವು ಆರೋಗ್ಯಕರ ಸಮತೋಲಿತ ಆಹಾರವಾಗಿದ್ದು, ಗರ್ಭಾವಸ್ಥೆಯಲ್ಲಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತವೆ

Fruits and vegetables reduce the risk of miscarriage

author img

By

Published : Apr 20, 2023, 10:45 AM IST

ಗರ್ಭಪಾತಕ್ಕೆ ಅನೇಕ ಕಾರಣಗಳು ಇರುತ್ತವೆ. ಇದರಲ್ಲಿ ಆಹಾರಗಳು ಕೆಲವೊಮ್ಮೆ ಕಾರಣವಾಗಬಹುದು. ಆದರೆ, ಈ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನದಿಂದ ಕಂಡು ಕೊಳ್ಳಲಾಗಿದೆ. ಸಂಶೋಧನೆ ಅನುಸಾರ ಹಣ್ಣು, ತರಕಾರಿಗಳು, ಸಮುದ್ರಾಹಾರ, ಡೈರಿ ಉತ್ಪನ್ನಗಳು, ಮೊಟ್ಟೆಗಳು ಮತ್ತು ಧಾನ್ಯಗಳು ಈ ಗರ್ಭಪಾತದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಬರ್ಮಿಂಗ್​ ಹ್ಯಾಮ್​ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಗರ್ಭಿಣಿಯರ ಆಹಾರ ಪದ್ಧತಿ ಮೇಲೆ 20 ಅಧ್ಯಯನ ನಡೆಸಿ, ಪರಿಶೀಲನೆ ನಡೆಸಲಾಗಿದೆ.

ಫರ್ಟಿಲಿಟಿ ಅಂಡ್​ ಸ್ಟೆರಿಲಿಟಿ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಟಾಮಿಯ ರಾಷ್ಟ್ರೀಯ ಗರ್ಭಪಾತ ಸಂಶೋಧನಾ ತಂಡವು, ಹಣ್ಣು, ತರಕಾರಿ, ಸಮುದ್ರಾಹಾರ, ಡೈರಿ ಉತ್ಪನ್ನಗಳು, ಮೊಟ್ಟೆಗಳು ಮತ್ತು ಧಾನ್ಯಗಳಲ್ಲಿರುವ ಸಮೃದ್ಧ ಪೋಷಕಾಂಶ ಭರಿತ ಆಹಾರಗಳು ಗರ್ಭಪಾತ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತವೆ ಎಂದು ತಿಳಿಸಿದೆ. ಅಲ್ಲದೇ ಇದು ಆರೋಗ್ಯಕರ ಸಮತೋಲಿತ ಆಹಾರವಾಗಿದ್ದು, ಗರ್ಭಾವಸ್ಥೆಯಲ್ಲಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತವೆ ಎಂದು ಈ ಹಿಂದಿನ ಪುರಾವೆಗಳು ತೋರಿಸಿವೆ.

ಹಣ್ಣಿನ ಸೇವನೆ ಗರ್ಭಪಾತದ ಅಪಾಯವನ್ನು ಶೇ 61ರಷ್ಟು ಕಡಿಮೆ ಮಾಡುತ್ತದೆ. ತರಕಾರಿ ಸೇವನೆ ಶೇ 41ರಷ್ಟು, ಡೈರಿ ಉತ್ಪನ್ನಗಳು ಶೇ 37ರಷ್ಟು, ಧಾನ್ಯಗಳು ಶೇ 33ರಷ್ಟು ಸಮುದ್ರಾಹಾರ ಮತ್ತು ಮೊಟ್ಟೆಗಳಿಂದ ಶೇ 19ರಷ್ಟು ಗರ್ಭಪಾತದ ಅಪಾಯ ಕಡಿಮೆಯಾಗುತ್ತದೆ.

ಇದರ ಹೊರತಾಗಿ ಮೆಡಿಟರೇನಿಯನ್​ ಡಯಟ್​ ಅಥವಾ ಫರ್ಟಿಲಿಟಿ ಡಯಟ್​ ಸೇವನೆ ಕೂಡ ಗರ್ಭಪಾತ ಅಪಾಯದೊಂದಿಗೆ ಸಂಬಂಧ ಹೊಂದಿದೆಯಾ ಎಂಬುದರ ಮೇಲೆ ಡಾ ಯೆಲಿನ್​ ಚುಂಗ್​ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿದೆ. ಆದರೆ, ಈ ಆಹಾರ ಪದ್ಧತಿ ಕೂಡ ಗರ್ಭಪಾತದ ಅಪಾಯ ಕಡಿಮೆ ಮಾಡಿದೆ ಅಥವಾ ಹೆಚ್ಚಿಸಿದೆ ಎಂಬುದಕ್ಕೆ ಸಾಕ್ಷಿ ಇಲ್ಲ. ಆರೋಗ್ಯಕರ ಆಹಾರಗಳು ಗರ್ಭಪಾತ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಅಲ್ಲದೇ ಸಂಸ್ಕರಿಸಿದ ಆಹಾರ ಈ ಅಪಾಯ ಹೆಚ್ಚಿಸುವುದರೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ.

ಈ ಅಧ್ಯಯನಕ್ಕಾಗಿ ಮಹಿಳೆ ಗರ್ಭವತಿ ಆದ ಮೊದಲು ಮೂರು ತಿಂಗಳ ಅವಧಿ 63,838 ಆರೋಗ್ಯವಂತ ಮಹಿಳೆಯರ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಗರ್ಭಪಾತಕ್ಕೆ ಜೀವನಶೈಲಿ ಆಯ್ಕೆಯೂ ಪರಿಣಾಮ ಬೀರುತ್ತದೆ. ಇದೇ ಉದ್ದೇಶದಿಂದ ಗರ್ಭಿಣಿಯರು ಆಹಾರದ ಕುರಿತು ಹೆಚ್ಚು ಚರ್ಚೆ ನಡೆಸುತ್ತಾರೆ. ಈ ಸಂಬಂಧ ಜನರು ಕೂಡ ಮಾಹಿತಿ ತಿಳಿಯಲು ಬಯಸುತ್ತಾರೆ ಎಂದು ಜ್ಯೂಲಿಯೆಟ್​ ವಾರ್ಡ್​ ತಿಳಿಸಿದ್ದಾರೆ.

ದಂಪತಿಗಳು ಮಗುವನ್ನು ಹೊಂದಲು ಬಯಸಿದಾಗ ಅವರ ಜೀವನಶೈಲಿ ಸಕಾರಾತ್ಮಕವಾಗಿರುವಂತೆ ನಾವು ಅವರನ್ನು ಪ್ರೋತ್ಸಾಹ ಮಾಡುತ್ತೇವೆ. ಅಲ್ಲದೇ, ಗರ್ಭಾವಸ್ಥೆಯ ಸಮಯ ಮತ್ತು ಅದರ ಹೊರತಾದ ಸಂದರ್ಭದಲ್ಲೂ ಆರೋಗ್ಯಕರ ಆಯ್ಕೆ ಮುಂದುವರೆಸುವಂತೆ ಪ್ರೋತ್ಸಾಹಿಸುತ್ತೇವೆ. ಸಕಾರಾತ್ಮಕ ಜೀವನ ಶೈಲಿ ಆಯ್ಕೆ ಗರ್ಭಪಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಮಕ್ಕಳ ಅತ್ಯುತ್ತಮ ರೋಗ ನಿರೋಧಕ ವ್ಯವಸ್ಥೆಗೆ ಪೋಷಕರ ಈ ಪ್ರಯತ್ನ ಅವಶ್ಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.