ಬುದ್ಧಿಮಾಂದ್ಯತೆ ರೋಗ ರೋಗಿಗಳ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಈ ರೋಗದಲ್ಲಿ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಹೊರತಾಗಿ ಅನೇಕ ದೈಹಿಕ ರೋಗ, ಮಾನಸಿಕ ಅಸ್ವಸ್ಥತೆ ಕೂಡ ಇದಕ್ಕೆ ಕಾರಣ. ಡೆಮೆನ್ಶಿಯಾ ಯುವ ಜನರನ್ನು ಕೂಡ ಕಾಡಬಹುದಾಗಿದೆ. ಹಲವಾರು ಲಕ್ಷಣದಲ್ಲಿ ಇದು ಪರಿಣಾಮ ಬೀರಲಿದೆ.
ಹಾಲಿವುಡ್ ನಟ ಬ್ರೂಸ್ ಲೀ, ಫ್ರಂಟೊಟೆಂಪೊರಲ್ ಡೆಮೆನ್ಶಿಯಾದಿಂದ ಬಳಲುತ್ತಿರುವುದನ್ನು ಪತ್ತೆ ಮಾಡಲಾಗಿತ್ತು. ಫ್ರಂಟೊಟೆಂಪೊರಲ್ ಡೆಮೆನ್ಶಿಯಾ ಅಥವಾ ಎಫ್ಟಿಡಿ ಬುದ್ಧಿಮಾಂದ್ಯತೆಯ ಒಂದು ಸಾಮಾನ್ಯ ವಿಧ. ಇದು ಸಂಕೀರ್ಣ ಮತ್ತು ಗುಣಪಡಿಸಲಾಗದ ರೋಗವಾಗಿದ್ದು ಇದು ಮಿದುಳಿಗೆ ಹಾನಿ ಮಾಡುತ್ತದೆ. ಈ ರೋಗದ ಸಮಸ್ಯೆಗಳು ಕೇವಲ ನೆನಪಿನ ಶಕ್ತಿ ಕಳೆದುಕೊಳ್ಳುವುದರ ಜೊತೆಗೆ ಆಲೋಚಿಸುವ, ಅರ್ಥೈಸಿಕೊಳ್ಳುವ, ದೈನಂದಿನ ಕೆಲಸ ಮತ್ತು ಸೂಚನೆ ನಿರ್ವಹಣೆ ಮಾಡಲು ಕಷ್ಟವಾಗಿ ಬೇರೆಯವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವಂತೆ ಮಾಡುತ್ತದೆ.
ಅಸೋಸಿಯೇಷನ್ ಫಾರ್ ಫ್ರಂಟೊಟೆಂಪೊರಲ್ ಡೆಮೆನ್ಶಿಯಾ (ಎಎಫ್ಡಿಟಿ) ಪ್ರಕಾರ, ಬುದ್ಧಿಮಾಂದ್ಯತೆ ಪ್ರಮುಖ ವಿಧ ಪ್ರಾಂಟೊಟೆಂಪರಲ್ ಡೆಮೆನ್ಟಿಯಾ ಆಗಿದೆ. ಇದು ಸರಿಯಾದ ಸಮಯದಲ್ಲಿ ಪತ್ತೆಯಾಗುವುದಿಲ್ಲ. ಪ್ರಾರಂಭದಲ್ಲಿ ಇದರ ಸಾಮಾನ್ಯ ಲಕ್ಷಣಗಳು ಕಾಣುವುದಿಲ್ಲ. ಅದರಲ್ಲೂ ವಿಶೇಷವಾಗಿ ಮರೆಗುಳಿತ, ನೆನಪಿನ ಶಕ್ತಿ ಕಳೆದುಕೊಳ್ಳವಂತಹ ಲಕ್ಷಣಗಳು ಗೋಚರವಾಗುವುದಿಲ್ಲ. ಇಂತಹ ರೋಗಿಗಳ ಕಾಳಜಿವಹಿಸುವುದು ಸವಾಲು ಮತ್ತು ಕಷ್ಟದಾಯ ತ್ರಾಸದಾಯಕ ಕೆಲಸವಾಗಿರಲಿದೆ.
ಈ ಸಮಸ್ಯೆ ಪ್ರಾರಂಭದಲ್ಲಿ ನಡುವಳಿಕೆಯಲ್ಲಿ ಬದಲಾವಣೆ ಕಾಣಬಹುದು. ಮಾತು ಅಥವಾ ಭಾಷೆಗಳಲ್ಲಿ ಬದಲಾವಣೆ ಕಾಣುತ್ತದೆ. ಬಹುತೇಕ ಕೇಸ್ಗಳಲ್ಲಿ ಇದರ ಸಾಮಾನ್ಯ ಲಕ್ಷಣ ಎಂದು ಕಂಡು ಬಂದರೂ ಇದು ನರಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಯಾಗಿದೆ. ರೋಗಿಗಳಲ್ಲಿ ಎಫ್ಟಿಡಿ ಪತ್ತೆಯಾದಾಗ ಅವರಲ್ಲಿ ಸಾಕಷ್ಟು ಹಾನಿಯಾಗಿರುತ್ತದೆ. ನಿರ್ಧಾರಗಳನ್ನು, ಆಯ್ಕೆಗಳು ಮತ್ತು ಚಿಂತಿಸುವ ಸಾಮರ್ಥ್ಯ ಹೊಂದಿರುವ ನಮ್ಮ ಮಿದುಳಿನ ಮುಂಭಾಗ ಈ ರೋಗದಿಂದ ಹಾನಿಯಾಗುತ್ತದೆ. ಇದರ ಹೊರತಾಗಿ, ನಡುವಳಿಕೆಯಲ್ಲಿ ಬದಲಾವಣೆ, ಗಮನ ಹರಿಸುವುದು ಕಷ್ಟವಾಗುವುದು, ಯೋಜಿಸುವುದು, ಭಾವನೆ ನಿಯಂತ್ರಣ ಕೂಡ ಆಗುವುದಿಲ್ಲ.
ಫ್ರಂಟೊಟೆಂಪೊರಲ್ ಡೆಮೆನ್ಶಿಯಾ ಮಿದುಳಿನ ಒಂದು ಅರಥವಾ ಅನೇಕ ಭಾಗಗಳಿಗೆ ಹಾನಿ ಮಾಡಬಹುದು. ಸೈಕೊಸಿಸ್ ಅಥವಾ ಇನ್ನಿತರೆ ಇದಕ್ಕೆ ಕಾರಣವಾಗುತ್ತದೆ. ಹಾನಿಗೊಳಗಾದ ಪ್ರದೇಶದಲ್ಲಿ ಕೆಲವು ಅಸಹಜ ಪ್ರೊಟೀನ್ಗಳು ಒಟ್ಟುಗೂಡಬಹುದು. ಇದು ಈ ಸ್ಥಳದಲ್ಲಿ ಪ್ರತಿಕ್ರಿಯಿಸಲು ಶುರು ಮಾಡಬಹುದು. ಇದರಿಂದ ಜೀವಕೋಶಗಳು ಹಾನಿಯಾಗುವುದು. ಹಾಲೆಗಳು ಕುಗ್ಗುತ್ತವೆ. ಎಎಫ್ಟಿಎಇ ಪ್ರಕಾರ, ಎಫ್ಟಿಡಿ ಸಾಮಾನ್ಯವಾಗಿ 60 ವರ್ಷದೊಳಗಿನ ಜನರಲ್ಲಿ ಕಂಡು ಬರುತ್ತದೆ. 60 ವರ್ಷದ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಂಡು ಬರುವುದು ವಿರಳ. ಬಹುತೇಕ ಪ್ರಾಂಟೊಟೆಂಪರಲ್ ಡೆಮೆನ್ಶಿಯಾ ಬದಲಾಗಿ ನೆನಪಿನ ಶಕ್ತಿಗೆ ಸಂಬಂಧಿಸಿದೆ.
ಎಫ್‌ಟಿಡಿಯಿಂದ ಬಳಲುತ್ತಿರುವ ವ್ಯಕ್ತಿಯ ಸಾಮಾನ್ಯ ಜೀವನವು ಈ ರೋಗದ ಕಾರಣದಿಂದಾಗಿ ಹೆಚ್ಚು ಪರಿಣಾಮ ಬೀರುತ್ತದೆ. ಎಫ್‌ಟಿಡಿಯಿಂದ ಬಳಲುತ್ತಿರುವ ರೋಗಿಗಳ ವೈಯಕ್ತಿಕ ಮತ್ತು ಸಾಮಾಜಿಕ ಜೀವನವು ಹೆಚ್ಚು ಪರಿಣಾಮ ಬೀರುತ್ತದೆ, ಏಕೆಂದರೆ ಈ ರೋಗವು ಅವರ ಕೆಲಸ, ಆಲೋಚನೆ, ಮಾತನಾಡುವುದು, ನಡವಳಿಕೆ ಮತ್ತು ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಎಫ್ಟಿಡಿ ಪ್ರಕಾರ, ಫ್ರಂಟೊಟೆಂಪೊರಲ್ ಬುದ್ಧಿಮಾಂದ್ಯತೆಯಲ್ಲಿನ ಮೆದುಳಿಗೆ ಹಾನಿಯನ್ನು ಔಷಧಿಗಳೊಂದಿಗೆ ಸರಿಪಡಿಸಲಾಗುವುದಿಲ್ಲ. ಈ ರೋಗ ಒಮ್ಮೆ ಸಂಭವಿಸಿದಾಗ, ಮೆದುಳಿನ ಹಾನಿಯು ಕಾಲಾನಂತರದಲ್ಲಿ ಪ್ರಗತಿಯಾಗುತ್ತದೆ, ಅದಕ್ಕಾಗಿಯೇ ಇದನ್ನು ಪ್ರಗತಿಶೀಲ ಬುದ್ಧಿಮಾಂದ್ಯತೆ ಎಂದೂ ಕರೆಯುತ್ತಾರೆ.
ಈ ಎಫ್ಟಿಡಿಯ ಉಪಶಮನಕ್ಕೆ ಸರಿಯಾದ ಚಿಕಿತ್ಸೆ ಇಲ್ಲ. ಇದರ ಹೊರತಾಗಿ ಇದನ್ನು ಪತ್ತೆ ಮಾಡುವುದು ಕೂಡ ಕಷ್ಟವಾಗಿದೆ. ಇದಕ್ಕೆ ಇನ್ನು ಮೆಡಿಸಿನ್ ಕಂಡು ಹಿಡಿಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ, ಇದರ ಲಕ್ಷಣಗಳನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಕೆಲವು ಪರ್ಯಾಯ ಮೆಡಿಸಿನ್ ಮತ್ತು ವ್ಯಾಯಾಮ, ಥೆರಪಿಗಳನ್ನು ಅದರಲ್ಲೂ ವಿಶೇಷವಾಗಿ ಸ್ಪೀಚ್ ಥೆರಪಿ ನೀಡಲಾಗುತ್ತದೆ. ಉದಾಹರಣಗೆ ಪಾರ್ಕಿಸನ್ ರೀತಿಯ ಲಕ್ಷಣಗಳು ರೋಗಿಗಳಿಗೆ ಕಂಡು ಬಂದಿದರೆ ಅದಕ್ಕೆ ದೈಹಿಕ ಮತ್ತು ಅಕ್ಯೂಪನ್ಷನಲ್ ಥೆರಪಿ, ವ್ಯಾಯಾಮದ ಜೊತೆಗೆ ಪಾರ್ಕಿಸನ್ ಮೆಡಿಸಿನ್ ನೀಡಲಾಗುವುದು.
ಇದನ್ನೂ ಓದಿ: ಕಾಫಿ, ಚಹಾ ಸೇವನೆ ಮಾಡುವುದರಿಂದ ಸೊಂಟ ಮುರಿತದ ಅಪಾಯ ಕಡಿಮೆ ಮಾಡಬಹುದು.. ಅಧ್ಯಯನ