ETV Bharat / sukhibhava

ಬೇಸಿಗೆಯಲ್ಲಿ ಬೇಗ ಹಾಳಾಗುತ್ತದೆ ಆಹಾರ; ಈ ವಿಚಾರದಲ್ಲಿ ಬೇಡ ನಿರ್ಲಕ್ಷ್ಯ - ಬೇಸಿಗೆಯ ಬೇಗೆಯಿಂದಾಗಿ ಆಹಾರಗಳು ವಿಷ

ಕ್ರಿಮಿಗಳು ಬೇಸಿಗೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಆಹಾರ ಬೇಗ ಹಾಳಾಗುತ್ತದೆ. ಈ ಸಮಯದಲ್ಲಿ ಕೀಟ, ಸೊಳ್ಳೆ ಅಥವಾ ಜಿರಳೆ ಮುಂತಾದವುಗಳು ಆಹಾರದ ಮೇಲೆ ಹರಿದಾಡುತ್ತವೆ. ಹೀಗಾಗಿ ಆಹಾರ ಹೆಚ್ಚು ಕಲುಷಿತಗೊಳ್ಳುತ್ತದೆ.

http://10.10.50.80:6060//finalout3/odisha-nle/thumbnail/17-April-2023/18273514_1001_18273514_1681713990931.png

author img

By

Published : Apr 17, 2023, 1:49 PM IST

ಹೈದ್ರಾಬಾದ್​: ಬೇಸಿಗೆಯಲ್ಲಿ ಆಹಾರ ಮತ್ತು ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಆಹಾರ ವಿಷವಾಗುವುದು. ಬೇಸಿಗೆಯ ಬೇಗೆಯಿಂದಾಗಿ ಆಹಾರ ವಿಷವಾಗುತ್ತದೆ. ಬೇಸಿಗೆಯಲ್ಲಿ ಬ್ಯಾಕ್ಟೀರಿಯ, ಇತರೆ ಇನ್ನಿತರ ಕೀಟ, ನೊಣ ಅಥವಾ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿದ್ದು, ಆಹಾರದ ಮೇಲೆ ಕೂರುವುದರಿಂದಲೂ ಕಲುಷಿತಗೊಳ್ಳುತ್ತದೆ.

ಈ ಕುರಿತು ಮಾತನಾಡಿರುವ ಡಾ. ಸುಖ್ಬೀರ್​ ಸಿಂಗ್​, ಕಲುಷಿತ ಆಹಾರ ಮತ್ತು ಅಶುಚಿತ್ವದ ಪರಿಸ್ಥಿತಿಯಿಂದಾಗಿ ಆಹಾರ ವಿಷವಾಗುತ್ತದೆ. ಬೇಸಿಗೆ ಸಮಯದಲ್ಲಿ ಈ ಸಮಸ್ಯೆ ಸಾಮಾನ್ಯ. ಆಹಾರ ವಿಷವಾಗುವುದನ್ನು ಪ್ರತಿ ಋತುಮಾನದಲ್ಲಿ ಕಾಣಬಹುದು. ಆದರೆ, ಈ ಬ್ಯಾಕ್ಟೀರಿಯ, ಕ್ರಿಮಿಗಳು ಬೇಸಿಗೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಆಹಾರ ಬೇಗ ಹಾಳಾಗುತ್ತದೆ. ಈ ಸಮಯದಲ್ಲಿ ಕೀಟ, ಸೊಳ್ಳೆ ಅಥವಾ ಜಿರಳೆ ಮುಂತಾದ ಆಹಾರದ ಮೇಲೆ ಹರಿದಾಡುತ್ತವೆ. ಇದರಿಂದ ಆಹಾರ ಹೆಚ್ಚು ಕಲುಷಿತಗೊಳ್ಳುತ್ತದೆ.

ಅಹಾರ ವಿಷವಾಗುವುದು ಹೊಟ್ಟೆ ನೋವಿನ ಸೋಂಕಿನಿಂದಾಗಿ. ಇದಕ್ಕೆ ಬ್ಯಾಕ್ಟೀರಿಯಾ, ವೈರಸ್​ಗಳು ಕಾರಣವಾಗಿರುತ್ತದೆ. ಬಹುತೇಕ ಪ್ರಕರಣದಲ್ಲಿ ಫುಡ್​ ಪಾಯಸನ್​ ಸಂದರ್ಭದಲ್ಲಿ ಹೆಚ್ಚಿನ ಸಮಯ ಆಹಾರ ವಿಷದ ಅಂಶ ಉತ್ಪತ್ತಿ ಮಾಡುತ್ತದೆ. ಬ್ಯಾಕ್ಟಿರೀಯ ಅತವಾ ವಿಷ ಪೂರಿತ ಆಹಾರ ಸೇವನೆ ಮಾಡಿದಾಗ ದೇಹದಲ್ಲಿ ಬೊಟೊಲಿಸಂ ಎಂಬ ವಿಷ ಉತ್ಪತ್ತಿ ಮಾಡುತ್ತದೆ. ಇದು ಸಾಮಾನ್ಯವಾಗಿ ಫುಡ್​ ಪಾಯಸನಿಂಗ್​ ಆಗಲು ಕಾರಣವಾಗುತ್ತದೆ.

ಈ ವೇಳೆ ದೇಹದ ಜೀರ್ಣಕ್ರಿಯೆ ದುರ್ಬಲವಾಗಿರುವವರಲ್ಲಿ ಕೂಡ ಈ ಸಮಸ್ಯೆ ಕಾಣಬಹುದು. ಈ ಪರಿಸ್ಥಿತಿಯಲ್ಲಿ ಕೊಂಚ ಎಚ್ಚರ ವಹಿಸಿದಾಗ ಅದು ತನ್ನಂತಾನೇ ಉಪಶಮನವಾಗುತ್ತದೆ. ಕೆಲವೊಮ್ಮೆ ದುರ್ಬಲ ರೋಗ ನಿರೋಧಕ ಶಕ್ತಿ ಕೂಡ ಈ ರೀತಿ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ದೇಹ ರೋಗ ನಿರೋಧಕ ಶಕ್ತಿ ಹೆಚ್ಚಿಲ್ಲದಿದ್ದಾಗ, ಇಲ್ಲ ಬ್ಯಾಕ್ಟೀರಿಯ ಅಥವಾ ವೈರಸ್​ಗಳಿಂದ ಕಲುಷಿತವಾದ ಆಹಾರ ಸೇವಿಸಿದಾಗ ನಮ್ಮ ಜೀರ್ಣಾಂಗದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರೋಗಿ ಗಂಭೀರ ಸಮಸ್ಯೆ ಕೂಡ ಅನುಭವಿಸುವಂತೆ ಮಾಡುತ್ತಿದೆ.

ಅನಾರೋಗ್ಯಕರ ಆಹಾರ, ಅನಾರೋಗ್ಯಕರ ಜೀವನಶೈಲಿ ಮತ್ತು ಶುಚಿತ್ವದ ನಿರ್ಲಕ್ಷ್ಯ ಕೂಡ ಆಹಾರದ ಕಲುಷಿತಕ್ಕೆ ಕಾರಣ. ಈ ಹಿನ್ನೆಲೆ ಈ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅವಶ್ಯಕವಾಗಿದೆ. ಇಂತಹ ಆಹಾರ ಸೇವನೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ..

ಕಲುಷಿತ, ಕಡಿಮೆ ಬೇಯಿಸಿದ ಆಹಾರ ಸೇವಿಸುವುದು

ಅಡುಗೆಗೆ ಅಶುದ್ಧ ನೀರಿನ ಬಳಕೆ, ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆಯದಿರುವುದು.

ಹಾಳಾದ ಮೊಸರು, ಹಾಲು ಮುಂತಾದ ಉತ್ಪನ್ನಗಳ ಬಳಕೆ

ಮಾಂಸವನ್ನು ಸರಿಯಾಗಿ ತೊಳೆಯದೇ ಬೇಯಿಸುವುದು ಅಥವಾ ಅರ್ಧ ಬೇಯಿಸುವುದು

ಆಹಾರವನ್ನು ಸರಿಯಾಗಿ ಮುಚ್ಚದೇ ಇರುವುದು

ಅಡುಗೆ ಮನೆ ಶುಚಿತ್ವ, ಅಡುಗೆ ಮಾಡುವಾಗ, ತಿನ್ನುವಾಗ ಅಥವಾ ಆಹಾರ ಸೇವಿಸುವ ಸ್ಥಳದಲ್ಲಿ ಶುಚಿತ್ವ ಕಾಪಾಡದೇ ಹೋಗುವುದು

ರಸ್ತೆ ಬದಿಯ ಮುಚ್ಚಿಲ್ಲದ ಆಹಾರ ಸೇವೆಯಿಂದ ಅದಕ್ಕೆ ಧೂಳು, ಮಾಲಿನ್ಯ ಸೇರುತ್ತದೆ. ಅಲ್ಲದೆ, ಇದಕ್ಕೆ ಕೀಟಗಳು ಮುತ್ತಿಕ್ಕುವ ಸಾಧ್ಯತೆ

ಅಶುಚಿತ್ವದ ಸ್ಥಳದಲ್ಲಿ ಪಾನೀಯ ಸೇವಿಸುವುದು

ಆಹಾರ ಸೇವಿಸುವ ಮುನ್ನ ಸರಿಯಾಗಿ ಕೈ ತೊಳೆಯದೇ ಇರುವುದು.

ಕಾಡುವ ಸಮಸ್ಯೆ: ಫುಡ್​ ಪಾಯಸನ್​ ಆದಾಗ ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಸಾಮಾನ್ಯವಾಗಿ ಕಾಡುವ ಲಕ್ಷಣಗಳು. ಇದರ ಹೊರತಾಗಿ ಕಾಡುವ ಸಮಸ್ಯೆಗಳೆಂದರೆ

ತೀವ್ರವಾದ ಹೊಟ್ಟೆ ನೋವು ಅಥವಾ ಜೀರ್ಣಕ್ರಿಯೆ ಸಮಸ್ಯೆ

ಶೀತ ಅಥವಾ ಕಡಿಮೆ ಅಥವಾ ಅಧಿಕ ಜ್ವರ

ಸುಸ್ತು ಮತ್ತು ನಿಶಕ್ತಿ ಕಾಡುವುದು

ಮಲದಲ್ಲಿ ರಕ್ತ

ತಲೆ ನೋವು

ಬಾಯಿ ಒಣಗುವಿಕೆ

ನಿರ್ಜಲೀಕರಣ

ಈ ಕ್ರಮ ಅನುಸರಿಸಿ: ಫುಡ್​ ಪಾಯಿಸನ್​ ತಡೆಯಲು ಅಥವಾ ಇನ್ನಿತರ ಆಹಾರ ಅನಾರೋಗ್ಯ ತಡೆಯಲು ಈ ನಿಯಮಗಳನ್ನು ಅನುಸರಿಸುವುದು ಅವಶ್ಯವಾಗಿದೆ.

ಆಹಾರ ತಯಾರಿಕೆಗೆ ಮುನ್ನ ಮತ್ತು ಊಟಕ್ಕೆ ಮುನ್ನ ಕೈಯನ್ನು ಸೋಪನ್ನು ಚೆನ್ನಾಗಿ ತೊಳೆಯಬೇಕು.

ಅಡುಗೆ ಬಳಕೆ ಮಾಡುವ ತರಕಾರಿ, ತಿನ್ನುವ ಹಣ್ಣುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಮಾವು, ಸೇವು, ಕಲ್ಲಂಗಡಿ, ದ್ರಾಕ್ಷಿ, ಪಪ್ಪಾಯವನ್ನು ನೀರಿನಲ್ಲಿ ನೆನಸಿ ತೊಳೆದು ಸೇವಿಸಬೇಕು.

ಅಡುಗೆ ಮನೆಯಲ್ಲಿ ಕೀಟ, ಜಿರಳೆ ಮುಂದಾದವು ಇರದಂತೆ ಶುಚಿತ್ವ ಕಾಪಾಡುವುದು.

ಆಹಾರವನ್ನು ಸರಿಯಾಗಿ ಬೇಯಿಸುವುದು

ಆಹಾರವನ್ನು ಶುಚಿ ಪಾತ್ರಯಲ್ಲಿ ಇಡುವುದು. ಅಹಾರವನ್ನು ತೆರೆದಿಡದಂತೆ ಕಾಪಾಡಬೇಕು.

ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ, ಹೆಚ್ಚಿನ ಶುಚಿತ್ವಕ್ಕೆ ಆದ್ಯತೆ ನೀಡಿ.

ಬೇಸಿಗೆಯಲ್ಲಿ ನೀರು, ಜ್ಯೂಸ್​, ಮಜ್ಜಿಗೆ, ಏಳನೀರು ಮತ್ತು ಹೆಚ್ಚು ಸೇವಿಸಿ, ಟೀ, ಕಾಫಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಜ್ಯೂಸ್​ ಕುಡಿಯಲು ಶಾಪ್​ಗೆ ಹೋದರೆ ಅಲ್ಲಿನ ಶುಚಿತ್ವ ಗಮನಿಸುವುದು ಅವಶ್ಯ

ಈ ಋತುಮಾನದಲ್ಲಿ ಸಾಧ್ಯವಾದಷ್ಟು ತಾಜಾ ಹಣ್ಣು, ಹಗುರ, ಸುಲಭವಾಗಿ ಜೀರ್ಣವಾಗುವ ಮನೆ ಆಹಾರ ಸೇವನೆಗೆ ಆದ್ಯತೆ ಅವಶ್ಯಕ.

ಕೆಲವು ವೇಳೆ ಕಲುಷಿತ ಆಹಾರ ಸೇವನೆಯನ್ನು ನಿರ್ಲಕ್ಷ್ಯ ಮಾಡುವುದು. ಅಥವಾ ಇದಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆಯದೇ ಇರುವುದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ಮತ್ತು ರೋಗ ನಿರೋಧಕ ಶಕ್ತಿ ಹೊಂದಿರುವವರು ಹೆಚ್ಚಿನ ಕಾಳಜಿ ವಹಿಸಬೇಕು. ಮೇಲಿನ ಯಾವುದೇ ಸಾಮಾನ್ಯ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಇಂದಿಗೂ ಮರೀಚಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.