ನವದೆಹಲಿ: ಋತುಮಾನದ ಬದಲಾವಣೆಗಳು ಅನೇಕ ಅನಾರೋಗ್ಯ ಸವಾಲುಗಳನ್ನು ತಂದೊಡ್ಡುತ್ತವೆ. ಇದರಲ್ಲೊಂದು ಜೀರ್ಣಾಂಗವ್ಯೂಹದ ಬಾಧೆಗಳು. ಅಂದರೆ ಹೊಟ್ಟೆ ಜ್ವರ ಮತ್ತು ಫುಡ್ ಪಾಯ್ಸನ್. ಇವೆರಡೂ ಕೂಡಾ ಸಾಮಾನ್ಯ ಗುಣಲಕ್ಷಣ ಹೊಂದಿವೆ. ಆದರೆ ಎರಡರ ನಡುವೆ ಭಿನ್ನತೆ ಇದೆ.
ಹೊಟ್ಟೆ ಜ್ವರ ಎಂದರೇನು?: ಸ್ಟಮಕ್ ಫ್ಲೂ ಅಥವಾ ಹೊಟ್ಟೆ ಜ್ವರ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ್ದಾಗಿದೆ. ಪ್ರಾಥಮಿಕವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ನೊರೊವೈರಸ್, ರೊಟೊ ವೈರಸ್, ಅಡೆನೊವರಸ್ ಇದಕ್ಕೆ ಪ್ರಮುಖ ಕಾರಣ. ಈ ವೈರಸ್ಗಳು ಬಲುಬೇಗ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹರಡುತ್ತವೆ. ಸೋಂಕಿತ ಆಹಾರ/ ನೀರು ಅಥವಾ ಕಲುಷಿತ ಆಹಾರ ಸ್ಪರ್ಶಿಸಿ ಬಾಯಿ ಸೇರುವುದರಿಂದಲೂ ಇದು ಉಂಟಾಗುತ್ತದೆ. ಹೊಟ್ಟೆ ಅಥವಾ ಕರುಳಿನಲ್ಲಿ ಊರಿಯೂತ ಸಂಭವಿಸುವುದು ಆರಂಭಿಕ ಲಕ್ಷಣ. ಇದು ಋತುಮಾನದ ಜ್ವರವಾಗಿದ್ದು, ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಫುಡ್ ಪಾಯ್ಸನ್ ಎಂದರೇನು?: ಕಲುಷಿತ ಆಹಾರ/ ದ್ರವಗಳ ಸೇವನೆಯಿಂದ ಉಂಟಾಗುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾ, ಪ್ಯಾರಾಸೈಟ್ಸ್, ವಿಷ ಅಥವಾ ರಾಸಾಯನಿಕಗಳಿಂದ ಉದ್ಭವಿಸುತ್ತದೆ. ಆಹಾರ ಉತ್ಪಾದನೆ, ಪ್ರಕ್ರಿಯೆ/ ನಿರ್ವಹಣೆಯ ವೇಳೆ ಕಲುಷಿತದಿಂದಾಗಿ ಸಂಭವಿಸುತ್ತದೆ. ಸಲ್ಮೊನೆಲ್ಲಾ, ಇ ಕೊಲಿ ಮತ್ತು ಕ್ಯಾಪೆಲೊಬ್ಯಾಕ್ಟರ್ಗಳು ಫುಡ್ ಪಾಯ್ಸನ್ ತಗಲಿಸುವ ಪ್ರಮುಖ ಬ್ಯಾಕ್ಟೀರಿಯಾಗಳು. ಈ ಬ್ಯಾಕ್ಟೀರಿಯಾಗಳು ದೇಹದಲ್ಲಿ ವಿಷಾಂಶ ಉತ್ಪಾದಿಸುತ್ತವೆ.
ಲಕ್ಷಣಗಳು:
ಹೊಟ್ಟೆ ಜ್ವರ: ತಲೆತಿರುಗುವಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು, ಕಡಿಮೆ ಮಟ್ಟದ ಜ್ವರ.
ಫುಡ್ ಪಾಯ್ಸನ್: ತಲೆ ಸುತ್ತುವಿಕೆ, ಅತಿಸಾರ, ಹೊಟ್ಟೆ ನೋವು, ಜ್ವರ, ಸ್ನಾಯು ನೋವು.
ಫುಡ್ಪಾಯ್ಸನ್ ಆದಾಗ ಆಹಾರ ಸೇವಿಸಿದ ಕೆಲವೇ ಹೊತ್ತಿನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಎಚ್ಚರಿಕೆಯ ಘಂಟೆ.
ಪ್ರಮುಖ ವ್ಯತ್ಯಾಸ:
ಹೊಟ್ಟೆ ಜ್ವರ ಕಾಣಿಸಿಕೊಂಡಾಗ, ವೈರಸ್ ದಾಳಿಗೆ ಒಳಗಾದ ಕೆಲವೇ ಸಮಯದಲ್ಲಿ ಈ ಲಕ್ಷಣಗಳು ಗೋಚರಿಸುತ್ತವೆ. ಒಂದರಿಂದ ಮೂರು ದಿನದಲ್ಲಿ ಸರಿ ಹೋಗುತ್ತದೆ. ಫುಡ್ ಪಾಯ್ಸನ್ನಲ್ಲಿ ಕಲುಷಿತ ಆಹಾರ ಸೇವಿಸಿ, ಕೆಲವೇ ಹೊತ್ತಿನಲ್ಲಿ ಲಕ್ಷಣ ಕಾಣಿಸಿಕೊಂಡು ಅನೇಕ ದಿನಗಳ ಕಾಲ ಇದು ಕಾಡಬಹುದು.
ಎರಡು ಆರೋಗ್ಯ ಸಮಸ್ಯೆಗಳಲ್ಲಿ ಜ್ವರ ಸಾಮಾನ್ಯ. ಫುಡ್ ಪಾಯ್ಸನ್ ಆದಾಗ ಇದರ ಲಕ್ಷಣಗಳ ತೀವ್ರತೆ ಹೆಚ್ಚಿದ್ದು, ಹೊಟ್ಟೆ ಸಮಸ್ಯೆ ಗಮನಾರ್ಹವಾಗಿ ಕಾಡುತ್ತದೆ. ಕೆಲವು ಪ್ರಕರಣಗಳಲ್ಲಿ ರಕ್ತ ಕೂಡ ಇದಕ್ಕೆ ಹಾನಿ ಮಾಡುತ್ತದೆ.
ಚಿಕಿತ್ಸೆ ಹೇಗೆ?: ಹೊಟ್ಟೆ ಜ್ವರದಲ್ಲಿ ವೈದ್ಯಕೀಯ ಹಸ್ತಕ್ಷೇಪ ಕೆಲವೊಮ್ಮೆ ಬೇಡ. ಉತ್ತಮ ವಿಶ್ರಾಂತಿ, ಹೈಡ್ರೇಷನ್ ಮತ್ತು ಸರಳ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ತಡೆಗಟ್ಟುವ ಬಗೆ: ಅಗತ್ಯವಿದ್ದಾಗ ವೈದ್ಯಕೀಯ ಚಿಕಿತ್ಸೆ, ಸರಿಯಾದ ವಿಶ್ರಾಂತಿ, ಹೈಡ್ರೇಷನ್ ಸರಳ ಆಹಾರ ಸೇವನೆ. ಫುಡ್ ಪಾಯ್ಸನ್ ಪ್ರಕರಣದಲ್ಲಿ ವೈದ್ಯಕೀಯ ಹಸ್ತಕ್ಷೇಪ ಅಗತ್ಯವಿದೆ. ಮಳೆಗಾಲದಲ್ಲಿ ಸಾಮಾನ್ಯವಾಗುವ ಈ ಸಮಸ್ಯೆಗಳಲ್ಲಿ ಕಲುಷಿತ ಆಹಾರ ಮತ್ತು ಪಾನೀಯ ಸೇವಿಸುವುದು ಖಾಯಿಲೆಗೆ ಕಾರಣವಾಗುತ್ತದೆ. ಶುದ್ದ ಮತ್ತು ಸುರಕ್ಷಿತ ಕ್ರಮಗಳ ಆರೋಗ್ಯ ಕಾಳಜಿ ಹೊಂದಿರವ ಆಹಾರ ಸೇವಿಸುವುದು ಅವಶ್ಯಕ. (ಐಎಎನ್ಎಸ್)
ಇದನ್ನೂ ಓದಿ: ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡ್ತೀರಾ? ನಿಮಗೆ ಈ 5 ರೀತಿಯ ಆಹಾರ ಸೇವನೆ ಅತ್ಯುತ್ತಮ