ಸಿಡ್ನಿ: ರಕ್ತದೊತ್ತಡದ ಏರಿಳಿತವೂ ಡೆಮನ್ಶಿಯಾ ಮತ್ತು ವೃದ್ಧರಲ್ಲಿ ನಾಳೀಯ ಸಮಸ್ಯೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆಸ್ಟ್ರೇಲಿಯಾದ ಹೊಸ ಅಧ್ಯಯನ ತಿಳಿಸಿದೆ. 24 ಗಂಟೆಯೊಳಗೆ ಹಾಗೇ ಅನೇಕ ದಿನ ಅಥವಾ ವಾರಗಳ ಕಾಲದ ಕಡಿಮೆ ರಕ್ತದೊತ್ತಡ (ಬಿಪಿ) ಏರಿಳಿತವೂ ಅರಿವಿನ ಕೊರತೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಯುನಿವರ್ಸಿಟಿ ಆಫ್ ಸೌತ್ ಆಸ್ಟ್ರೇಲಿಯಾ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಬಯಲಾಗಿದೆ.
ಆರೋಗ್ಯದ ಅಪಾಯ: ಹೆಚ್ಚಿನ ಸಿಸ್ಟೊಲಿಕ್ ಬಿಪಿ ಏರಿಳಿತವೂ ಹೃದಯ ಸಮಸ್ಯೆ ಹೊಂದಿರುವ ಅಪಧಮನಿ ಗಟ್ಟಿಯಾಗುವುದರೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಅಧಿಕ ರಕ್ತದೊತ್ತಡವೂ ಡೆಮನ್ಶಿಯಾದ ಅಪಾಯ ಹೊಂದಿರುವುದು ತಿಳಿದಿರುವ ವಿಚಾರವಾಗಿದ್ದು, ರಕ್ತದೊತ್ತಡದ ಏರಿಳಿತಕ್ಕೆ ಗಮನ ನೀಡುವ ಅಂಶವಾಗಿದೆ.
ಕ್ಲಿನಿಕಲ್ ಚಿಕಿತ್ಸೆಗಳು ಅಧಿಕ ರಕ್ತದೊತ್ತಡದ ಮೇಲೆ ಕೇಂದ್ರೀಕರಿಸಿವೆ. ಆದರೆ, ರಕ್ತದೊತ್ತಡದ ವ್ಯತ್ಯಾಸವನ್ನು ನಿರ್ಲಕ್ಷಿಸುತ್ತವೆ ಎಂದು ಅಧ್ಯಯನದ ಪ್ರಮುಖ ಲೇಖಕ ಗುಟ್ಟೆರ್ಡ್ಜ್ ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಸೆರೆಬ್ರಲ್ ಸರ್ಕ್ಯೂಲೆಷನ್- ಕಾಗ್ನಿಷನ್ ಅಂಡ್ ಬಿಹೇವಿಯರ್ನಲ್ಲಿ ಪ್ರಕಟಿಸಲಾಗಿದೆ.
ರಕ್ತದೊತ್ತಡದ ಏರಿಳಿತವೂ ಅನೇಕ ವಿಭಿನ್ನ ಸಮಯಗಳನ್ನು ಹೊಂದಿದ್ದು, ಕಡಿಮೆ ಮತ್ತು ಅಧಿಕ ರಕ್ತದೊತ್ತಡವೂ ಡೆಮನ್ಸಿಯಾ ಮತ್ತು ರಕ್ತ ನಾಳ ಆರೋಗ್ಯದ ಅಪಾಯ ಹೊಂದಿದೆ ಎಂದು ಗುಟ್ಟೆರ್ಡ್ಜ್ ತಿಳಿಸಿದ್ದಾರೆ.
ಅಧ್ಯಯನದ ಫಲಿತಾಂಶ: ಬಿಪಿ ಏರಿಳಿತದ ಜೊತೆಗಿನ ಡೆಮನ್ಶಿಯಾ ಸಂಬಂಧದ ಯಾಂತ್ರಿಕೃತ ಅವಿಷ್ಕಾರಕ್ಕೆ ಸಹಾಯ ಮಾಡಲು ಸಂಶೋಧಕರು, 60-80 ವರ್ಷದ 70 ಮಂದಿ ಆರೋಗ್ಯಯು ವೃದ್ಧರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಇವರಲ್ಲಿ ಯಾವುದೇ ಡೆಮನ್ಶಿಯಾ ಅಥವಾ ಅರಿವಿನ ದುರ್ಬಲತೆ ಲಕ್ಷಣಗಳು ಅಧ್ಯಯನದ ಆರಂಭದಲ್ಲಿ ಕಂಡು ಬಂದಿಲ್ಲ
ಅವರ ರಕ್ತದೊತ್ತಡವನ್ನು ನಿರ್ವಹಣೆ ಮಾಡಲಾಗಿದ್ದು, ಸಂಪೂರ್ಣ ಅರಿವಿನ ಪರೀಕ್ಷೆ ಮತ್ತು ಮಿದುಳಿನಲ್ಲಿನ ಅಪಧಮನೀಯ ಬಿಗಿತನವನ್ನು ನಿರ್ವಹಿಸಲಾಗಿದೆ. ಅಪಧಮನಿಯನ್ನು ಸೋನೊಗ್ರಾಫಿ ಮತ್ತು ನಾಡಿ ಅಲೆಗಳ ವಿಶ್ಲೇಷಣೆ ಮೂಲಕ ಮಾಪನ ಮಾಡಲಾಗಿದೆ.
ಒಂದೇ ದಿನದಲ್ಲಿ, ದಿನವಿಡಿ ಅಧಿಕ ರಕ್ತದೊತ್ತಡದ ಏರಿಳಿತವನ್ನು ಪತ್ತೆ ಮಾಡಿದೆವು. ಇದು ಅರಿವಿನ ಕಾರ್ಯಕ್ಷಮತೆ ಕಡಿಮೆ ಮಾಡುವುದರೊಂದಿಗೆ ಸಂಬಂಧ ಹೊಂದಿದೆ. ಇದೇ ವೇಳೆ, ಅಧಿಕ ರಕ್ತದೊತ್ತಡದೊಂದಿಗಿನ ಸಿಸ್ಟೊಲಿಕ್ ಬಿಪಿ ಅಪದಮನಿಯಲ್ಲಿನ ಅಧಿಕ ರಕ್ತ ನಾಳದ ಬಿಗಿತನದೊಂದಿಗೆ ಸಂಬಂಧ ಹೊಂದಿದೆ ಎಂದು ಲೇಖಕರು ತಿಳಿಸಿದ್ದಾರೆ.
ಇದರ ಫಲಿತಾಂಶವೂ ವಿಭಿನ್ನ ಬಗೆತ ಬಿಪಿ ಏರಿಳಿತವೂ ವಿಭಿನ್ನ ಜೈವಿಕ ಯಾಂತ್ರಿಕೃತೆಯ ಪ್ರತಿಬಿಂಬಿಸುತ್ತದೆ. ಸಿಸ್ಟೊಲಿಕ್ ಮತ್ತು ಡಯಸ್ಟೊಲಿಕ್ ರಕ್ತದೊತ್ತಡದ ಏರಿಳಿವೂ ವೃದ್ಧರಲ್ಲಿನ ಅರಿವಿನ ಕಾರ್ಯಾಚರಣೆಯನ್ನು ಅಗತ್ಯವಾಗಿದೆ ಎಂಬುದನ್ನು ಗಮನಿಸಬೇಕಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಹೈ ಬಿಪಿ ನಿಯಂತ್ರಿಸಿದರೆ ಭಾರತ 2040ರ ಹೊತ್ತಿಗೆ 46 ಲಕ್ಷ ಜನರ ಸಾವು ತಡೆಯಬಹುದಂತೆ!