ETV Bharat / sukhibhava

ನಿಮ್ಮ ಡಯಟ್​ನಲ್ಲಿ ಸೇರಿಸಿ ಮೆಂತ್ಯೆ ಕಾಳಿನ ರಸ; ಆಮೇಲೆ ನೋಡಿ ಮ್ಯಾಜಿಕ್​ - ಈಟಿವಿ ಭಾರತ್​ ಕನ್ನಡ

Fenugreek seed water: ಮೆಂತ್ಯೆಕಾಳಿನ ನೀರನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನ ಪಡೆಯಬಹುದು.

http://10.10.50.85:6060/reg-lowres/27-November-2023/fenugreek_2711newsroom_1701075395_279.jpg

author img

By ETV Bharat Karnataka Team

Published : Nov 27, 2023, 3:21 PM IST

ಮೆಂತ್ಯೆ ಕಾಳಿನಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಇದು ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಹಲವು ಸಾಮಾನ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಮೆಂತ್ಯೆಕಾಳಿನ ನೀರನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಲಾಭ ನೀಡುತ್ತದೆ.

ಚರ್ಮಕ್ಕೆ ಉತ್ತಮ: ಮೆಂತ್ಯೆ ಕಾಳಿನ ನೀರು ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿ ವಿಟಮಿನ್​ ಕೆ ಮತ್ತು ವಿಟಮಿನ್​ ಸಿ ಅಂಶ ಇದ್ದು, ಇದು ಚರ್ಮವನ್ನು ಮೃದುಗೊಳಿಸುತ್ತದೆ. ತ್ವಚೆಯ ಸಾಮಾನ್ಯ ಸಮಸ್ಯೆಗಳಾದ ಮೊಡವೆ ಮತ್ತು ಕಣ್ಣಿನ ಕಪ್ಪು ವರ್ತುಲ ನಿವಾರಣೆಯಲ್ಲಿ ಇದು ಪ್ರಯೋಜನ ನೀಡುತ್ತದೆ.

ಮಧುಮೇಹ ನಿರ್ವಹಣೆ: ಮೆಂತ್ಯೆಕಾಳಿನ ನೀರು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮ್ಯಾಜಿಕ್​ ರಸವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಇನ್ಸುಲಿನ್​ ನಿಯಂತ್ರವನ್ನು ಮಾಡುವ ಮೂಲಕ ಮಧುಮೇಹ ಹೆಚ್ಚಾಗದಂತೆ ಕಾಪಾಡುತ್ತದೆ.

ವಿಷಪೂರಿತ ಅಂಶ ಹೊರಕ್ಕೆ: ದೇಹದಲ್ಲಿನ ವಿಷಪೂರಿತ ಅಂಶವನ್ನು ತೆಗೆದು ಹಾಕಿ, ಹೊಟ್ಟೆ ಸಮಸ್ಯೆ ನಿವಾರಣೆ ಮಾಡುವಲ್ಲಿ ಮೆಂತ್ಯೆ ನೀರು ಪ್ರಯೋಜನವನ್ನು ನೀಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಹೋಗಲಾಡಿಸುತ್ತದೆ.

ಜೀರ್ಣಶಕ್ತಿ ವೃದ್ಧಿ: ಮೆಂತ್ಯೆ ಕಾಳಿನ ನೀರಿನಲ್ಲಿ ಆ್ಯಂಟಿಬ್ಯಾಕ್ಟಿರಿಯಾ ಸಾಮರ್ಥ್ಯ ಇದೆ. ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಗ್ಯಾಸ್ಟ್ರಿಕ್​ ಮತ್ತು ಉಬ್ಬರದಂತಹ ಸಮಸ್ಯೆ ನಿವಾರಣೆ ಮಾಡುತ್ತದೆ. ಮೆಂತ್ಯೆ ಅತಿ ಹೆಚ್ಚು ತಂಪು ಆಹಾರವಾಗಿರುವ ಹಿನ್ನೆಲೆ ಇದನ್ನು ಚಳಿಗಾಲದ ಸಮಯದಲ್ಲಿ ಅತಿ ಹೆಚ್ಚಿನ ಸೇವನೆ ಮಾಡದಿರುವುದು ಒಳ್ಳೆಯದು.

ಕೊಲೆಸ್ಟ್ರಾಲ್​ ಕಡಿಮೆ: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​ ತೆಗೆದು ಹಾಕಲು ಮತ್ತು ಟ್ರಿಗ್ಲೆಸೆರೈಡ್​ ಮಟ್ಟ ಹೆಚ್ಚಿಸಿ, ಆರೋಗ್ಯಯುತ ಎಚ್​ಡಿಎಲ್​ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಮೆಂತ್ಯೆಕಾಳಿನಲ್ಲಿ ಸ್ಟೆರೊಯ್ಡಲ್​ ಸಫೋನಿನ್ಸ್​ ಅಂಶವಿದ್ದು, ಇದು ಕರುಳಿನಲ್ಲಿರುವ ಕೊಲೆಸ್ಟ್ರಾಲ್​ ಹೀರಿಕೊಳ್ಳುತ್ತದೆ.

ಕೂದಲ ಆರೋಗ್ಯ: ಕೂದಲಿನ ಸಮಸ್ಯೆಗೂ ಇದು ಪರಿಹಾರ ನೀಡಬಲ್ಲದು. ಇದು ಕೂದಲು ಸೋಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿಗೆ ಬೇಕಾದ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಅಲ್ಲದೇ, ಅಕಾಲಿಕವಾಗಿ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ, ಇದರಲ್ಲಿನ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್​, ಪೌಷ್ಠಿಕಾಂಶಗಳು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ. (ಎಎನ್​ಐ)

ಇದನ್ನೂ ಓದಿ: ಪೋಷಕಾಂಶಗಳ ಆಗರ ಸಬ್ಬಕ್ಕಿ; ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.