ಜಾಗತಿಕವಾಗಿ 10 ಮಿಲಿಯನ್ಗಿಂತ ಹೆಚ್ಚಿನ ಜನರು ಮಿದುಳಿನ ಅಸ್ವಸ್ಥತೆಯಾದ ಪಾರ್ಕಿನ್ಸನ್‌ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮತ್ತು ಅದರ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಇಂದಿಗೂ ಕೂಡ ಅನೇಕರಿಗೆ ಪಾರ್ಕಿನ್ಸನ್ ಕಾಯಿಲೆ ಎಂದಾಗ ಅದರ ಕುರಿತ ಮಾಹಿತಿ ಬದಲಾಗಿ ಸಮಸ್ಯೆಗೆ ತುತ್ತಾದ ಮೊಹಮ್ಮದ್ ಅಲಿ ಅಥವಾ ರಾಬಿನ್ ವಿಲಿಯಂ ಹೆಸರು ನೆನಪಿಗೆ ಬರುತ್ತದೆ.
ಇದು ರೋಗದ ಸಂಕ್ಷಿಪ್ತ ವ್ಯಾಪ್ತಿ ಒದಗಿಸುತ್ತದೆ. ಜಾಗೃತಿ ಉಂಟುಮಾಡುತ್ತದೆ. ಈ ಸಮಸ್ಯೆ ಕುರಿತು ಸಾರ್ವಜನಿಕವಾಗಿ ಚರ್ಚಿಸಿದಾಗ ಇಂತಹ ಸಮಸ್ಯೆ ಅನುಭವಿಸುತ್ತಿರುವ ವ್ಯಕ್ತಿ ಇದನ್ನು ನಿಭಾಯಿಸಲು ಸಹಾಯ ಆಗುತ್ತದೆ. ಪಾರ್ಕಿನ್ಸನ್ ಕಾಯಿಲೆಯ ಸುತ್ತ ಜಗತ್ತನ್ನು ಸೆಳೆದು, ಈ ಕುರಿತು ಚರ್ಚೆಗೆ ಕಾರಣವಾದ ಕೆಲವು ವ್ಯಕ್ತಿಗಳು ಇದ್ದಾರೆ.
ಮೊಹಮ್ಮದ್ ಅಲಿ: ಬಾಕ್ಸಿಂಗ್ನಲ್ಲಿ ಚಾಂಪಿಯನ್ ಆಗಿ ಸಾಧನೆ ಮಾಡಿ ನಿವೃತ್ತಿ ಹೊಂದಬೇಕಿದ್ದ ಮೊಹಮ್ಮದ್ ಅಲಿ ನಿವೃತ್ತಿಗೆ ಮೂರು ವರ್ಷ ಇರುವ ಮುಂಚೆ ಪಾರ್ಕಿಸನ್ಗೆ ತುತ್ತಾದರು. ಈ ಸಮಸ್ಯೆಗೆ ತುತ್ತಾದ ಬಳಿಕ ತಮ್ಮ ಉಳಿದ ಜೀವನವನ್ನು ಅವರು 2012ರಲ್ಲಿ ಒಲಿಂಪಿಕ್ ಧ್ವಜ ಹಿಡಿದು ಪಾರ್ಕಿನ್ಸನ್ ಸಂಶೋಧನೆಗೆ ಹಣ ಸಂಗ್ರಹಿಸಲು ಮುಂದಾದರು. ಜಾಗತಿಕವಾಗಿ ಪಾರ್ಕಿನ್ಸನ್ ಕುರಿತು ಅರಿವು ಮೂಡಿಸಲು ಮುಂದಾದರು. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲೆಂದು ಅಮೆರಿಕದ ಅರಿಜೋನಾದಲ್ಲಿ ದಿ ಮೊಹಮ್ಮದ್ ಅಲಿ ಪಾರ್ಕಿನ್ಸನ್ ಸೆಂಟರ್ ಸ್ಥಾಪಿಸಿದರು.
ರಾಬಿನ್ ವಿಲಿಯಂ: ನಟ ಮತ್ತು ಹಾಸ್ಯ ಕಲಾವಿದರಾಗಿದ್ದ ರಾಬಿನ್ 2013 ಆಗಸ್ಟ್ನಲ್ಲಿ ಅವರ ಸಾವಿಗೆ ಮೂರು ತಿಂಗಳ ಮುಂಚೆ ಈ ಸಮಸ್ಯೆಗೆ ಗುರಿಯಾದರು. ಅಕಾಡೆಮಿ ವಿಜೇತ ನಟನಿಗೆ ಕಾಣಿಸಿಕೊಂಡ ಈ ಸಮಸ್ಯೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಹುಟ್ಟು ಹಾಕಿತು.
ಜಾರ್ಜ್ ಡಬ್ಲ್ಯೂ ಬುಷ್: ಪಾರ್ಕಿನ್ಸನ್ ಸಮಸ್ಯೆಗೆ ಗುರಿಯಾಗಿ ದೀರ್ಘ ಕಾಲ ಬದುಕಿದ ಅಮೆರಿಕನ್ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್. 94ನೇ ವಯಸ್ಸಿನಲ್ಲಿ ಮೃತಪಟ್ಟ ಬುಷ್ ಎರಡು ಬಾರಿ ಉಪಾಧ್ಯಕ್ಷರಾಗಿ ಮತ್ತು ಅಮೆರಿಕದ 41ನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪಾರ್ಕಿಸನ್ ಸಮಸ್ಯೆಗೆ ಗುರಿಯಾದ ಬಳಿಕವೂ ಹೆಚ್ಚು ಕಾಲ ಭರವಸೆಯಲ್ಲಿ ಹೋರಾಟ ನಡೆಸಿದರು.
ಪೋಪ್ ಜಾನ್ ಪೌಲ್ 2: 400 ವರ್ಷದ ಬಳಿಕ ಮೊದಲ ಇಟಲಿಯೇತರ ಪೋಪ್ ಆಗಿದ್ದ ಇವರು ತಮ್ಮ 81ನೇ ವಯಸ್ಸಿನಲ್ಲಿ ಅಂದರೆ 2001ರಲ್ಲಿ ಪಾರ್ಕಿನ್ಸನ್ ಸಮಸ್ಯೆಗೆ ತುತ್ತಾದರು. ಸಾರ್ವಜನಿಕರು ಅವರ ನಡಿಗೆ, ಭಂಗಿ ಮತ್ತು ಧ್ವನಿಯಲ್ಲಿ ಬದಲಾವಣೆ ಗಮನಿಸಿದರು. 25 ವರ್ಷಗಳಿಗೂ ಹೆಚ್ಚು ಕಾಲ ಮಾನವ ಹಕ್ಕುಗಳಿಗಾಗಿ ಬಲವಾಗಿ ಪ್ರತಿಪಾದಿಸಿದ್ದು 2005ರಲ್ಲಿ ನಿಧನರಾದರು.
ಅಲನ್ ಅಲ್ಡ: ಮಾಜಿ ನಟ, ನಿರ್ದೇಶಕ. ಚಿತ್ರಕಥೆ ಮತ್ತು ಲೇಖಕರಾಗಿದ್ದ ಆಲ್ಡ 2015ರಲ್ಲಿ ಈ ಸಮಸ್ಯೆಗೆ ತುತ್ತಾದರು. ಎರಡೂವರೆ ವರ್ಷಗಳ ಹಿಂದೆ ರೋಗ ಪತ್ತೆ ಮಾಡಿ, 2018ರಲ್ಲಿ ಇದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅಂದಿನಿಂದ ಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ.
ನೀಲ್ ಡೈಮಂಡ್: ಗ್ರಾಮಿ ಪುರಸ್ಕೃತ, ಹಾಡು ಬರಹಗಾರರಾಗಿದ್ದ ಇವರು 2018 ರಲ್ಲಿ ಅವರ 50 ನೇ ವಾರ್ಷಿಕೋತ್ಸವದ ಪ್ರವಾಸದ ವೇಳೆ ತಮ್ಮ ಕಾಯಿಲೆಯನ್ನು ಬಹಿರಂಗಗೊಳಿಸಿದರು. ಈ ವೇಳೆ ಅವರ ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಪಾರ್ಕಿನ್ಸನ್‌ನ ಸಂಶೋಧನೆಗೆ ಗಾಯಕನ ಪರವಾಗಿ ದಾನ ಮಾಡಿದರು.
ಸಾಲ್ವಡಾರ್ ಡಾಲಿ: ಪ್ರಸಿದ್ಧ ವರ್ಣಚಿತ್ರಕಾರನಾಗಿದ್ದ ಡಾಲಿ 76 ನೇ ವಯಸ್ಸಿನಲ್ಲಿ ಬಲಗೈ ಅಲುಗಾಡಲು ಪ್ರಾರಂಭಿಸಿದಾಗ ಗಂಭೀರ ರೋಗಲಕ್ಷಣಗಳು ಗೋಚರಿಸಿದವು. ಇತ್ತೀಚಿನ ಅಧ್ಯಯನಗಳಲ್ಲಿ ಸಂಶೋಧಕರು ಅವರ ಕೆಲವು ವರ್ಣಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸಿದ್ದಾರೆ.
ಇದನ್ನೂ ಓದಿ: ಪಾರ್ಕಿನ್ಸನ್ ಕಾಯಿಲೆ; ವೃದ್ಧಾಪ್ಯದಲ್ಲಿ ಕಾಡುವ ಈ ಸಮಸ್ಯೆ ಕುರಿತು ನಿರ್ಲಕ್ಷ್ಯ ಬೇಡ