ವಾಷಿಂಗ್ಟನ್ ಡಿಸಿ: ಮಧುಮೇಹ ಮತ್ತು ಇತರೆ ಸಮಸ್ಯೆಗಳಿಗೆ ಹೊಸ ಕೋಶಾಧಾರಿತ ಚಿಕಿತ್ಸೆ ನೀಡಲು ಸ್ವೀಡಿಶ್ ಸಂಶೋಧಕರು ಕಣ್ಣಿಗೆ ಅಳವಡಿಸುವ ಮೈಕ್ರೋಸ್ಕೇಲ್ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಮೆಧೋಜಿರಕ ಗ್ರಂಥಿ ಕೋಶದ ಇನ್ಸುಲಿನ್ ಉತ್ಪಾದನೆಯನ್ನು ಎಲೆಕ್ಟ್ರಾನಿಕ್ ಸೆನ್ಸಾರ್ ಮೂಲಕ ಪತ್ತೆ ಮಾಡಲಾಗುತ್ತದೆ. 3ಡಿ ಸಾಧನವನ್ನು ಕೆಟಿಎಚ್ ರಾಯಲ್ ಇನ್ಸುಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕರೊಲಿನ್ಸಕಾ ಇನ್ಸುಟಿಟ್ಯೂಟ್ ಸಂಶೋಧಕರ ತಂಡ ಅಭಿವೃದ್ಧಿ ಮಾಡಿದೆ. ಜರ್ನಲ್ ಅಡ್ವಾನ್ಸ್ಡ್ ಮೆಟಿರಿಯಲ್ಸ್ನಲ್ಲಿ ಈ ಕುರಿತ ವರದಿ ಪ್ರಕಟಗೊಂಡಿದೆ. ಈ ಸಾಧನವು ಟೈಪ್ 1 ಮತ್ತು ಟೈಪ್ 2 ಮಧುಮೇಹಕ್ಕೆ ಕೋಶಾಧಾರಿತ ಚಿಕಿತ್ಸೆ ನೀಡುತ್ತದೆ.
ಕಣ್ಣು ಈ ತಂತ್ರಜ್ಞಾನಕ್ಕೆ ಸೂಕ್ತವಾಗಿದೆ. ಇದಕ್ಕೆ ಕಾರಣ, ಇಲ್ಲಿ ಸಾಧನ ಅಳವಡಿಸಿದಾಗ ಮೊದಲ ಹಂತದಲ್ಲಿ ಯಾವುದೇ ಇಮ್ಯೂನ್ ಕೋಶಗಳು ಪ್ರತಿಕೂಲವಾಗಿ ಪ್ರತಿಕ್ರಿಯಿಸುವುದಿಲ್ಲ. ಇದು ದೃಷ್ಟಿಯ ಪಾರದರ್ಶಕತೆಗೆ ಅವಕಾಶ ಮಾಡಿ ಕೊಡುತ್ತದೆ. ಸಾಧನದ ಅಳವಡಿಕೆಯ ಬಳಿಕ ಮೈಕ್ರೋಸ್ಕೋಪಿಕ್ ಅಧ್ಯಯನ ನಡೆಸಲಾಗುತ್ತದೆ ಎಂದು ಕೆಟಿಎಚ್ನ ಹಿರಿಯ ಪ್ರಾಧ್ಯಾಪಕ ಅನ್ನಾ ಹೆರಾಲ್ಡ್ ತಿಳಿಸಿದರು.
ನಮ್ಮ ದೇಹದ ಏಕೈಕ ಕಿಟಕಿ ಎಂದರೆ ಅದು ಕಣ್ಣು. ಇದು ರೋಗ ನಿರೋಧಕ ವ್ಯವಸ್ಥೆ ಹೊಂದಿದೆ. ಈ ಸಾಧನವನ್ನು ವೆಡ್ಜ್ ವಿನ್ಯಾಸ ಮಾಡಿದೆ. 240 ಮೈಕ್ರೋಮೀಟರ್ ಉದ್ದವಿದೆ. ಐರಿಸ್ ಮತ್ತು ಕಾರ್ನಿಯಾದ ಮುಂಭಾಗದ ಪ್ರದೇಶದ ನಡುವೆ ಯಾಂತ್ರೀಕೃತವಾಗಿ ಅಳವಡಿಕೆ ಮಾಡಲಾಗುತ್ತದೆ.
ಈ ವೈದ್ಯಕೀಯ ಸಾಧನವನ್ನು ಜೀವಂತ ಸಣ್ಣ ಅಂಗಾಂಶವಾಗಿ ವಿನ್ಯಾಸ ಮಾಡಲಾಗಿದ್ದು, ಪ್ಲಾಪ್ ಡೋರ್ ತಂತ್ರದ ಮೂಲಕ ಬಳಕೆಗೆ ಪರಿಚಯಿಸಲಾಗಿದೆ ಎಂದು ಕೆಟಿಎಚ್ನ ಡಿವೈಸ್ ಆಫ್ ಮೈಕ್ರೋ ಆ್ಯಂಡ್ ನ್ಯಾನೋಸಿಸ್ಟಂನ ಪ್ರೊ.ವಔಟರ್ ವಾನ್ ಡೆಲ್ ವಿವರಿಸಿದರು.
ಅಭಿವೃದ್ಧಿ ಹೊಂದಿದ ವೈದ್ಯಕೀಯ ಮೈಕ್ರೋ ಸಾಧನದತ್ತ ನಮ್ಮ ಮೊದಲ ಹೆಜ್ಜೆ. ಇದು ಸ್ಥಳೀಯವಾಗಿದ್ದು, ಕೋಶಾಧಾರಿತವಾಗಿ ನಿರ್ವಹಣೆ ಮಾಡಲಿದೆ. ಅರ್ಗನಾಯ್ಡ್ ರೀತಿಯಲ್ಲಿಯೇ ಸಣ್ಣ ಅರ್ಗನ್ ಆಗಿ ಇದರ ಸ್ಥಳವನ್ನು ಗುರುತಿಸಿ ವಿನ್ಯಾಸ ಮಾಡಲಾಗಿದೆ. ಐಸ್ಲೆಟ್ ಯಾವುದೇ ಮಿತಿ ಇಲ್ಲದೇ ಕೋಶಗಳಿಗೆ ಪೋಷಕಾಂಶ ಪೂರೈಕೆ ಮಾಡುತ್ತದೆ. ನಮ್ಮ ವಿನ್ಯಾಸವು ಭವಿಷ್ಯದ ಏಕೀಕರಣ ಮತ್ತು ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್ ಅಥವಾ ಡ್ರಗ್ ಬಿಡುಗಡೆಯಂತಹ ಹೆಚ್ಚು ಸುಧಾರಿತ ಸಾಧನ ಕಾರ್ಯಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. (ಎಎನ್ಐ)