ಮಾನಸಿಕ ಆರೋಗ್ಯದ ತುರ್ತುಸ್ಥಿತಿಗಳಿಗೆ ತೀವ್ರವಾದ ಸೂರ್ಯನ ಶಾಖವು ಹೇಗೆ ಪರಿಣಾಮ ಬೀರಲಿದೆ ಎಂಬ ಕುರಿತು ಅಧ್ಯಯನವೊಂದನ್ನು ಮಾಡಲಾಗಿದ್ದು, ಇದು ಪ್ರಮುಖ ಜರ್ನಲ್ JAMA ದಲ್ಲಿ ಪ್ರಕಟವಾಗಿದೆ. ಅಮೆರಿಕದಲ್ಲಿ ಬೇಸಿಗೆಯ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರುವುದರಿಂದ ವ್ಯಕ್ತಿಗಳಲ್ಲಿ ಮಾನಸಿಕ ಆರೋಗ್ಯದ ಮೇಲೆ ಆತಂಕ, ಒತ್ತಡ ಮತ್ತು ಮಾನಸಿಕ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆ ಇದ್ದು, ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಕಂಡುಬಂದಿದೆ.
ಮಾನಸಿಕ ಆರೋಗ್ಯಕ್ಕೆ 'ಶಾಖ': ದೈಹಿಕ ಆರೋಗ್ಯದ ಮೇಲೆ ಶಾಖದ ಪ್ರಭಾವವನ್ನು ಉತ್ತಮವಾಗಿ ದಾಖಲಿಸಲಾಗಿದೆ. ಆದರೆ, ಕೆಲವು ಅಧ್ಯಯನಗಳು ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ಶಾಖವು ಬೀರುವ ಪರಿಣಾಮಗಳನ್ನು ಪರೀಕ್ಷಿಸಿವೆ. ಈ ರಾಷ್ಟ್ರವ್ಯಾಪಿ ಅಧ್ಯಯನವು ಎಲ್ಲ ವಯಸ್ಸಿನ ಅಮೆರಿಕದ ವಯಸ್ಕರಲ್ಲಿ ನಡೆದ ಅತಿದೊಡ್ಡ ಮತ್ತು ಸಮಗ್ರ ವಿಶ್ಲೇಷಣೆಯಾಗಿದೆ.
ಹದಗೆಡುತ್ತಿರುವ ಹವಾಮಾನ ಬದಲಾವಣೆಯಿಂದಾಗಿ ತೀವ್ರವಾದ ಶಾಖದ ದಿನಗಳು ಹೆಚ್ಚಾಗುವ ನಿರೀಕ್ಷೆಯಿದೆ. ಪರಿಣಾಮ ಸಂಶೋಧನೆಗಳು ತನ್ನ ಸಂಶೋಧನೆಯಲ್ಲಿ ನಿರ್ಣಾಯಕ ಅಂಶವನ್ನು ಅಡಕ ಮಾಡಿ ಶಾಖ-ಸಂಬಂಧಿತ ಬಿಕ್ಕಟ್ಟುಗಳನ್ನು ಕಡಿಮೆ ಮಾಡುವ ನೀತಿ ಪರಿಹಾರಗಳಿಗೆ ಪುರಾವೆ ಆಧಾರಿತ ಬೆಂಬಲವನ್ನು ನೀಡಿವೆ.
ಇದನ್ನೂ ಓದಿ: ಭಾರತದಲ್ಲಿ ಬಾಯಿಯ ಕ್ಯಾನ್ಸರ್ನಿಂದ ಪ್ರತಿ ಗಂಟೆಗೆ 5 ಜನ ಬಲಿ: ಇದಕ್ಕೆ ಕಾರಣ ಹೀಗಿದೆ..
ಅಧ್ಯಯನದ ಪ್ರಮುಖ ಲೇಖಕಿ, ಪರಿಸರ ಆರೋಗ್ಯದ ಪ್ರಾಧ್ಯಾಪಕರಾದ ಡಾ. ಅಮೃತಾ ನೋರಿ - ಶರ್ಮಾ ಹೀಗೆ ಹೇಳಿದ್ದಾರೆ. ಸಂಶೋಧನೆಗಳು, ತೀವ್ರತರವಾದ ಶಾಖದ ಮುನ್ಸೂಚನೆಯ ಸಮಯದಲ್ಲಿ ಮಾನಸಿಕ ಆರೋಗ್ಯ ಸೇವೆಗಳಲ್ಲಿ ಹೆಚ್ಚಿದ ಅಗತ್ಯವನ್ನು ಒತ್ತಿ ಹೇಳುವ ಆರೋಗ್ಯ ಪೂರೈಕೆದಾರರನ್ನು ಪ್ರೇರೇಪಿಸಬೇಕು ಎಂದು ಹೇಳಿದ್ದಾರೆ.
ಈಶಾನ್ಯ, ಮಧ್ಯಪಶ್ಚಿಮ ಮತ್ತು ವಾಯುವ್ಯದಲ್ಲಿ ಶಾಖದ ಪ್ರಭಾವವು ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಲೇಖಕರು ಕಂಡುಕೊಂಡಿದ್ದಾರೆ. ಆ ಪ್ರದೇಶಗಳು ಸಾಮಾನ್ಯವಾಗಿ ಆಗ್ನೇಯ ಅಥವಾ ನೈಋತ್ಯ ಅಮೆರಿಕಕ್ಕಿಂತ ಕಡಿಮೆ ತಾಪಮಾನವನ್ನು ಹೊಂದಿವೆ. ಆದರೆ, ಹೆಚ್ಚಿನ ತಾಪಮಾನದ ಸಮಯದಲ್ಲಿ ಈ ಪ್ರದೇಶಗಳಲ್ಲಿನ ಜನಸಂಖ್ಯೆಯು ಹೆಚ್ಚು ಬಳಲುತ್ತದೆ ಎಂದು ತಿಳಿಸಿದ್ದಾರೆ.
ಈ ಅಧ್ಯಯನದಿಂದ ಎಲ್ಲರಿಗೂ ಅನುಕೂಲ : ಹವಾಮಾನವು ಬೆಚ್ಚಗಾಗುತ್ತಲೇ ಇರುವುದರಿಂದ ಶಾಖದ ಘಟನೆಗಳು ಇನ್ನಷ್ಟು ತೀವ್ರವಾಗುತ್ತವೆ. ಪರಿಣಾಮ ಹೆಚ್ಚು ದುರ್ಬಲವಾಗಿರುವ ಜನಸಂಖ್ಯೆಯನ್ನು ಗುರುತಿಸುವುದು ಮತ್ತು ಬೆಚ್ಚಗಿನ ಬೇಸಿಗೆಯ ಪರಿಸ್ಥಿತಿಗಳಿಗೆ ಅವರನ್ನು ಹೊಂದಿಕೊಳ್ಳಲು ಸಹಾಯ ಮಾಡುವುದು ಈಗ ಪ್ರಮುಖ ಕೆಲಸವಾಗಿದೆ ಎಂದಿದ್ದಾರೆ.
ದೈಹಿಕ ಆರೋಗ್ಯದ ಮೇಲೆ ಶಾಖದ ಪ್ರಭಾವವನ್ನು ಉತ್ತಮವಾಗಿ ದಾಖಲಿಸಲಾಗಿದೆ. ಆದರೆ, ಕೆಲವು ಅಧ್ಯಯನಗಳು ಮಾನಸಿಕ ಆರೋಗ್ಯದ ಮೇಲೆ ತೀವ್ರವಾದ ಶಾಖದ ಪರಿಣಾಮಗಳನ್ನು ಪರೀಕ್ಷಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಒಳನೋಟದಿಂದ ಸಾಮಾನ್ಯ ಜನರು ಸಹ ಪ್ರಯೋಜನ ಪಡೆಯಬಹುದು ಎಂದು ಬೋಸ್ಟನ್ ವಿಶ್ವವಿದ್ಯಾನಿಲಯದ ಹವಾಮಾನ ಮತ್ತು ಆರೋಗ್ಯ ಕಾರ್ಯಕ್ರಮದ ನಿರ್ದೇಶಕ, ಅಧ್ಯಯನದ ಹಿರಿಯ ಲೇಖಕ ಡಾ.ಗ್ರೆಗೊರಿ ವೆಲ್ಲೆನಿಯಸ್ ಹೇಳಿದ್ದಾರೆ.
ಮಾನಸಿಕ ಆರೋಗ್ಯದ ಮೇಲೆ ಶಾಖದ ಪ್ರಭಾವವು ವಯಸ್ಸಿನ ಗುಂಪುಗಳಲ್ಲಿ ಒಂದೇ ರೀತಿಯದ್ದಾಗಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಮತ್ತು ದೇಶದ ಪ್ರತಿಯೊಂದು ಪ್ರದೇಶದಲ್ಲಿಯೂ ಸ್ಪಷ್ಟವಾಗಿ ಕಂಡುಬರುತ್ತದೆ. ವಯಸ್ಸು, ಲಿಂಗ ಅಥವಾ ಅವರು ವಾಸಿಸುವ ಸ್ಥಳವನ್ನು ಲೆಕ್ಕಿಸದೆಯೇ ಜನರ ಮಾನಸಿಕ ಆರೋಗ್ಯದ ಮೇಲೆ ಶಾಖವು ಗಾಢವಾಗಿ ಪರಿಣಾಮ ಬೀರುತ್ತದೆ ಎಂದು ಈ ಫಲಿತಾಂಶಗಳು ತೋರಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.
ಮುನ್ನೆಚ್ಚರಿಕೆಗೆ ಅಗತ್ಯ: ತೀವ್ರವಾದ ಬಿಸಿಲಿನ ದಿನಗಳಲ್ಲಿ, ನಾವು ಪ್ರತಿಯೊಬ್ಬರೂ ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇದರಿಂದ ನೆರೆಹೊರೆಯವರು ಅಥವಾ ಶಾಖದ ಪ್ರಭಾವದಿಂದ ಆರೋಗ್ಯದ ಪರಿಣಾಮಗಳಿಗೆ ಒಳಗಾಗಬಹುದಾದ ಕುಟುಂಬದ ಸದಸ್ಯರನ್ನು ಪರಿಶೀಲಿಸುವುದು ಸುಲಭವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ, ಅಧ್ಯಯನಕಾರರು ಮತ್ತು ಸಹೋದ್ಯೋಗಿಗಳು OptumLabs ಡೇಟಾ ವೇರ್‌ಹೌಸ್‌ನಿಂದ ಮಾನಸಿಕ ಆರೋಗ್ಯ-ಸಂಬಂಧಿತ ಎಮರ್ಜೆನ್ಸಿ ಡಿಪಾರ್ಮೆಂಟ್ ಭೇಟಿಗಳ ವೈದ್ಯಕೀಯ ಡೇಟಾವನ್ನು ಪಡೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದು ಅಮೆರಿಕಾದ್ಯಂತ ಭಾರೀ ಸಂಖ್ಯೆಯಲ್ಲಿ ತನ್ನದೇ ರೀತಿಯಲ್ಲಿ ಅಧ್ಯಯನ ನಡೆಸಿದೆ.
2010 ರಿಂದ 2019 ರವರೆಗೆ ಬೆಚ್ಚಗಿನ ಋತುವಿನಲ್ಲಿ (ಮೇ ನಿಂದ ಸೆಪ್ಟೆಂಬರ್) ವಾಣಿಜ್ಯ ಅಥವಾ ಮೆಡಿಕೇರ್ ಅಡ್ವಾಂಟೇಜ್ ಆರೋಗ್ಯ ವಿಮೆಯನ್ನು ಹೊಂದಿರುವ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 2.2 ಮಿಲಿಯನ್ ವಯಸ್ಕರಲ್ಲಿ ಸಂಶೋಧಕರು ಅಧ್ಯಯನ ನಡೆಸಿ ವಿಶ್ಲೇಷಿಸಿದ್ದಾರೆ.