ETV Bharat / sukhibhava

ಹೃದಯಾಘಾತದ ನಂತರ ವ್ಯಾಯಾಮ ಮಾಡಬಾರದು ಎಂಬುದು ಎಷ್ಟು ಸತ್ಯ!? - ಹೃದಯಾಘಾತ

ಹೃದಯಾಘಾತದ ನಂತರ ಮೊದಲ ಕೆಲವು ವಾರಗಳ ವ್ಯಾಯಾಮವನ್ನು ತಪ್ಪಿಸಲು ಸಲಹೆ ನೀಡಬಹುದು. ಅದಾಗಿಯೂ ಮೇಲ್ವಿಚಾರಣೆಯ ವ್ಯಾಯಾಮವು ಎಲ್ಲಾ ರೋಗಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ..

Exercise
ವ್ಯಾಯಾಮ ಮಾಡುತ್ತಿರುವುದು
author img

By

Published : Sep 22, 2021, 10:53 PM IST

ಹೃದಯದ ಆರೋಗ್ಯವನ್ನು ಸುಧಾರಿಸಲು ಸಾಮಾನ್ಯವಾದ ಸಲಹೆಯೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುವುದು. ಆದರೆ, ಹೃದಯಕ್ಕೆ ಯಾವ ರೀತಿಯ ವ್ಯಾಯಾಮ ಉತ್ತಮವಾಗಿದೆ ಮತ್ತು ಎಷ್ಟು ವ್ಯಾಯಾಮ ಸೂಕ್ತ? ಎಂಬುದರ ಕುರಿತು ಇತ್ತೀಚಿಗೆ ಹಲವಾರು ಉಹಾಪೋಹಾಗಳು ಹುಟ್ಟಿಕೊಂಡಿವೆ.

ಇದರಲ್ಲಿ ಕೆಲವು ಸಮಂಜಸವಾದವುಗಳು. ಇನ್ನು, ಹಲವು ನಿಖರವಾಗಿಲ್ಲ. ಅಂತಹ ಒಂದು ಅಸಮಂಜಸ ಸಲಹೆ ಎಂದರೆ ಹೃದಯಾಘಾತದ ನಂತರ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು ಎಂಬುದು.

ಹೃದಯಾಘಾತದ ನಂತರ ವ್ಯಾಯಾಮ ತಪ್ಪಿಸಬೇಕೇ?

ಹೃದಯಾಘಾತದ ನಂತರ ಮೊದಲ ಕೆಲವು ವಾರಗಳ ವ್ಯಾಯಾಮವನ್ನು ತಪ್ಪಿಸಲು ಸಲಹೆ ನೀಡಬಹುದು. ಅದಾಗಿಯೂ ಮೇಲ್ವಿಚಾರಣೆಯ ವ್ಯಾಯಾಮವು ಎಲ್ಲಾ ರೋಗಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಹೃದಯಾಘಾತದ ನಂತರ ಹೆಚ್ಚುವರಿ ಹೃದಯ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ನಿಯಮಿತ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂಬುದನ್ನು ಗಮನಿಸುವುದು ಮುಖ್ಯ. ಹೆಚ್ಚಿನ ರೋಗಿಗಳಿಗೆ ಹೃದಯದ ಆರೋಗ್ಯ ಚೇತರಿಕೆಗಾಗಿ ಸಲಹೆ ನೀಡಲಾಗುತ್ತದೆ. ಇದು ವ್ಯಾಯಾಮ ಕಾರ್ಯಕ್ರಮ, ಆಹಾರ ಸೂಚನೆಗಳು, ಜೀವನಶೈಲಿಯ ಬದಲಾವಣೆಗಳ ಕುರಿತು ಶೈಕ್ಷಣಿಕ ತರಗತಿಗಳು ಮತ್ತು ಸಹವರ್ತಿ ಬೆಂಬಲ ಗುಂಪಿನ ಮೂಲಕ ಭಾವನಾತ್ಮಕ ಬೆಂಬಲ ನೀಡುತ್ತದೆ.

ಹೃದಯದ ಆರೋಗ್ಯ ಚೇತರಿಕೆಗಾಗಿ ಕೆಲ ಮಾರ್ಗಸೂಚಿಗಳು

  • ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಹೃದಯ ರೋಗ, ಸ್ಥಿತಿ, ಹೃದಯದ ಕಾರ್ಯ (ಎಜೆಕ್ಷನ್ ಭಾಗ), ಲಯ ಇತ್ಯಾದಿಗಳನ್ನು ಆಧರಿಸಿ ನಿಮ್ಮ ವೈದ್ಯರು ನಿಮಗೆ ವ್ಯಾಯಾಮದ ಸಲಹೆ ನೀಡುತ್ತಾರೆ.
  • ವ್ಯಾಯಾಮವನ್ನು ನಿಧಾನವಾಗಿ ಆರಂಭಿಸುವುದು ಉತ್ತಮ. ಒಮ್ಮೆ ನೀವು ನಿಯಮಿತವಾಗಿ ನಡೆಯಲು ಪ್ರಾರಂಭಿಸಿದರೆ ಕಾಲಾನಂತರದಲ್ಲಿ ನಿಮ್ಮ ವೇಗವನ್ನು ಕ್ರಮೇಣ ಹೆಚ್ಚಿಸಬಹುದು. ಉಸಿರಾಟದ ತೊಂದರೆ ಅನುಭವಿಸಿದರೆ, ವಾಕಿಂಗ್ ವೇಗವನ್ನು ನಿಧಾನಗೊಳಿಸುವುದು ಉತ್ತಮ.
  • ದಯವಿಟ್ಟು ವ್ಯಾಯಾಮವನ್ನು ಯಾವಾಗಲೂ ಹಂತ-ಹಂತಗಳಲ್ಲಿ ಅಭ್ಯಾಸ ಮಾಡಿ. ಉದಾ: ಮೊದಲ 10 ನಿಮಿಷಗಳಲ್ಲಿ ಸಾಧಾರಣ ವೇಗದಲ್ಲಿ ನಡೆಯುವುದು. ಪ್ರತಿ ದಿನವೂ ಕೆಲವು ನಿಮಿಷಗಳವರೆಗೆ ಇದೇ ವೇಗವನ್ನು ಪ್ರಯತ್ನಿಸುವುದು. ತಿಂಗಳ ಕೊನೆಯಲ್ಲಿ ವಾರದ ಹೆಚ್ಚಿನ ದಿನಗಳಲ್ಲಿ 30 ನಿಮಿಷಗಳ ಕಾಲ ನಡೆಯಲು ಗುರಿ ಹೊಂದುವುದು.
  • ರೋಗಿಯು ಮನೆಯ ಹೊರಗೆ ನಡೆದರೆ, ಮುನ್ನೆಚ್ಚರಿಕೆಯಾಗಿ ಅವರು ಯಾರೊಂದಿಗಾದರೂ ಅಥವಾ ಮನೆಯ ಹತ್ತಿರ ಕಡಿಮೆ ದೂರದಲ್ಲಿ ನಡೆಯಬೇಕು. ಹಾಗಾಗಿ, ಅವರನ್ನು ಹೆಚ್ಚು ದೂರ ಹೋಗಲು ಬಿಡಬೇಡಿ.
  • ನೀವು ನಡೆಯಲು ಪ್ರಾರಂಭಿಸುವ ಮೊದಲು ನಿರ್ಜಲೀಕರಣವನ್ನು ತಡೆಗಟ್ಟಲು ಒಂದು ಲೋಟ ನೀರು ಕುಡಿಯಬೇಕು. ನಂತರ ನೀವು ಇಷ್ಟಪಡುವ ವ್ಯಾಯಾಮ ಅಥವಾ ಚಟುವಟಿಕೆಯನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ: ವಾಕಿಂಗ್, ಸೈಕ್ಲಿಂಗ್, ಏರೋಬಿಕ್ಸ್ ಇತ್ಯಾದಿ.
  • ಭಾರ ಎತ್ತುವ ಮುನ್ನ ವೈದ್ಯರ ಸಲಹೆ ತೆಗೆದುಕೊಳ್ಳಬೇಕು. ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವಾರದಲ್ಲಿ 6 ದಿನ ವ್ಯಾಯಾಮ ಮಾಡುವುದು ಸೂಕ್ತ.
  • ಅಭ್ಯಾಸವನ್ನು ಹೆಚ್ಚಿಸಲು ಪ್ರತಿದಿನ ಒಂದೇ ಸಮಯದಲ್ಲಿ ವ್ಯಾಯಾಮ ಮಾಡುವುದು ಮುಖ್ಯ. ಇದು ವ್ಯಾಯಾಮದ ಮೇಲೆ ಪರಿಣಾಮ ಬೀರುವ ಯಾವುದೇ ಅಸಮತೋಲನವನ್ನು ಕಡಿಮೆ ಮಾಡುತ್ತದೆ.
  • ಉಸಿರಾಟದ ತೊಂದರೆ, ಎದೆಯ ಅಸ್ವಸ್ಥತೆ, ಬಡಿತದಂತಹ ಯಾವುದೇ ಲಕ್ಷಣಗಳು ಕಂಡುಬಂದರೆ, ನೀವು ವ್ಯಾಯಾಮವನ್ನು ನಿಲ್ಲಿಸಬೇಕು ಮತ್ತು ವೈದ್ಯರಿಗೆ ತಿಳಿಸಬೇಕು.
  • ಹೃದಯಾಘಾತದ ನಂತರ ಶಕ್ತಿಯ ಮಟ್ಟಗಳು ಮತ್ತು ಔಷಧಿಗಳಂತಹ ಹಲವಾರು ಬದಲಾವಣೆಗಳು ಸಂಭವಿಸುತ್ತವೆ. ಇದು ವ್ಯಾಯಾಮ ಸಹಿಷ್ಣುತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಗುಣಪಡಿಸುವ ಪ್ರಕ್ರಿಯೆಯ ಮೂಲಕ ವ್ಯಾಯಾಮದ ನಿರೀಕ್ಷೆಯನ್ನು ದಿನದಿಂದ ದಿನಕ್ಕೆ ಇಟ್ಟುಕೊಳ್ಳುವುದು ಮುಖ್ಯವಾಗಿದೆ.
  • ರೋಗಿಯು ಹೃದಯದ ಆರೋಗ್ಯದ ಚೇತರಿಕೆಗಾಗಿ ಸೌಮ್ಯವಾದ ವ್ಯಾಯಾಮವನ್ನು ಪ್ರಾರಂಭಿಸಬೇಕು. ಪ್ರತಿ ರೋಗಿಗೆ ಸೂಚಿಸಲಾದ ವ್ಯಾಯಾಮದ ಪ್ರಮಾಣವು ಹೃದಯಾಘಾತದ ಮೊದಲು ರೋಗಿಯು ಎಷ್ಟು ಸಕ್ರಿಯವಾಗಿದ್ದ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
  • ಒಟ್ಟಾರೆಯಾಗಿ ಅವರು ತಮ್ಮ ಹೃದಯದ ಶಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾದಷ್ಟು ಬೇಗ ವ್ಯಾಯಾಮವನ್ನು ಪ್ರಾರಂಭಿಸಬೇಕು ಎಂಬುದನ್ನು ನೆನಪಿನಲ್ಲಿಡಬೇಕು.

ಓದಿ: ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಬೇಕೇ? ಹಾಗಾದರೆ, 'ಸ್ಕಿನ್​ ಫಾಸ್ಟಿಂಗ್'​ ಬಗ್ಗೆ ತಿಳಿದುಕೊಳ್ಳಿ..

______________________________________________________________________________________________

A very common tip to improve heart health is to exercise regularly. But what form of exercise is best for the heart and how much exercise is too much? There have been several myths about the impact of exercise on the heart, while some sound reasonable, there are many that are inaccurate. One such myth is that one should avoid exercising after a heart attack.

Myth Or Fact: Exercise Must Be Avoided After A Heart Attack

Avoiding exercise for the first few weeks after a heart attack may be advised. However, studies show that supervised exercise helps in improving the outcome for all patients. It is important to note that after a heart attack, one should begin a regular activity program to reduce the chance of additional heart problems. Most patients are provided with a prescription for cardiac rehabilitation which entails an exercise program, diet instruction, educational classes on lifestyle changes and emotional support through a peer support group.

While everyone recovers at a different pace, here are a few guidelines that one may follow to get started:

Consult your doctor before starting exercise. Based on your heart disease, condition, heart function (ejection fraction), rhythm etc. Your doctor will give you an exercise prescription

It is best to start slow. Once you get used to walking regularly, you can increase your pace gradually over time. If shortness of breath is felt, it is best to slow down the walking pace

Exercise should always be done in 3 phases warm-up, peak exercise and cool down, please.

What helps is walking at a moderate pace for the first 10 minutes the first time and each day tries for a few minutes more. At the end of the month aim to walk for 30 minutes on most days of the week.

It is important to keep in mind that one should cool down after finishing the exercise by gradually walking at a slower pace for the last 3 minutes.

If the patient walks outside the house, as a precaution they should walk with someone or in short distances close to home so they do not get too far away.

One should drink a glass of water to prevent dehydration before you start walking.

Choose an exercise or an activity that you enjoy doing. For example, walking, cycling, aerobics, etc.

Doctors' advice should be taken before lifting heavyweights.

Exercise should be done regularly to ensure benefits. 6 days a week of exercise is advisable.

Exercising at the same time daily is important to establish a habit. It also minimizes any variable that may impact the exercise.

If any symptoms such as shortness of breath, chest discomfort, palpitation occur and does not go away, one should stop the exercise and notify the doctor.

There are several changes that take place after a heart attack like energy levels and medications. This affects exercise tolerance. Therefore it is important to keep the exercise expectation day to day as one goes through the healing process.

If a patient does not go through cardiac rehabilitation, they should begin with gentle exercise after a heart attack. The amount of exercise that is advised to each patient will depend on how active the patient was before the cardiac event and how severe the event was. Overall, one must keep in mind that they should start exercising as soon as they can after a heart attack to get their energy and strength back.

(IANS)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.