ಬೆಂಗಳೂರು: ಪ್ರತಿ ಎರಡು ನಿಮಿಷಕ್ಕೆ ಗರ್ಭಿಣಿ ಅಥವಾ ಪ್ರಸವದ ವೇಳೆ ಮಹಿಳೆ ಸಾವನ್ನಪ್ಪುತ್ತಿದ್ದಾಳೆ. ಇದು ಆತಂಕಕಾರಿ ವಿಷಯವಾಗಿದ್ದು, ಈ ಸಂಬಂಧ ಪ್ರತಿ ದೇಶಗಳು ಅಗತ್ಯ ಆರೋಗ್ಯ ಸೇವೆ ಕ್ರಮಕ್ಕೆ ಮುಂದಾಗಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಮೂಲಕ ಮಹಿಳೆಯರ ಆರೋಗ್ಯದ ಕುರಿತು ಎಚ್ಚರಿಕೆ ಕಾಳಜಿ ವಹಿಸಬೇಕಿದೆ ಎಂದಿದೆ. ಈ ಸಂಬಂಧ ಟ್ರೆಂಡ್ಸ್ ಇನ್ ಮೆಟರ್ನಲ್ ಮೊರ್ಟಲಿಟಿ ವರದಿ ಮಾಡಿದ್ದು, ತಾಯಂದಿರ ಆರೋಗ್ಯದ ಕುರಿತು ಮಾಹಿತಿ ಆತಂಕ ಮೂಡಿಸಿದೆ. 2020ರಲ್ಲಿ ಜಗತ್ತಿನಾದ್ಯಂತ 2,87,000 ತಾಯಂದಿರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಾವಿಗೆ ಪ್ರಮುಖ ಕಾರಣಗಳು: ರಕ್ತಸ್ತ್ರಾವ, ಅಧಿಕ ರಕ್ತದೊತ್ತಡ, ಗರ್ಭಿಣಿ ಸಂಬಂಧಿತ ಚುಚ್ಚುಮದ್ದು, ಅಸುರಕ್ಷಿತ ಗರ್ಭಪಾತದ ಸಮಸ್ಯೆ ಮತ್ತು ಎಚ್ಐವಿ, ಏಡ್ಸ್ ಮತ್ತು ಮಲೇರಿಯಾ ತರದಂತಹ ಸಮಸ್ಯೆಗಳು ತಾಯಂದಿರ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಗಳನ್ನು ಉತ್ತಮ ಗುಣಮಟ್ಟ ಮತ್ತು ಜವಾಬ್ದಾರಿಯುತ ಆರೋಗ್ಯ ಸೇವೆಯೊಂದಿಗೆ ತಡೆಗಟ್ಟಬಹುದಾಗಿದೆ ಮತ್ತು ಚಿಕಿತ್ಸೆ ನೀಡಬಹುದಾಗಿದೆ.
ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಭರವಸೆ ಮತ್ತು ಸಕಾರಾತ್ಮಕ ಅನುಭವವನ್ನು ಪ್ರತಿಯೊಬ್ಬರು ಹೊಂದಬೇಕು. ಉತ್ತಮ ಗುಣಮಟ್ಟದ ಚಿಕಿತ್ಸೆ ಕೊರತೆಯನ್ನು ಜಗತ್ತಿನಾದ್ಯಂತ ಅನೇಕ ಮಂದಿ ಅನುಭವಿಸುತ್ತಿರುವುದು ಇಂದಿಗೂ ಆಘಾತಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಟೆಡ್ರೊಸ್ ಅಧನೊಮ್ ಗೇಬ್ರೆಸಸ್ ತಿಳಿಸಿದ್ದಾರೆ.
ಆರೋಗ್ಯ ಸೇವೆಯ ಅಲಭ್ಯತೆ: ಈ ಅಂಕಿ - ಅಂಶಗಳು ಮಹಿಳೆ ಮತ್ತು ಯುವತಿಗೆ ಪ್ರಸವ ನಂತರ ಮತ್ತು ಮುಂಚೆ ತುರ್ತು ಚಿಕಿತ್ಸಾ ಸೇವೆಯನ್ನು ನೀಡಬೇಕು ಎಂಬುದನ್ನು ತಿಳಿಸುತ್ತದೆ. ಸಮುದಾಯ ಕೇಂದ್ರಿತ ಆರೋಗ್ಯ ಕೇಂದ್ರಗಳು ಮಹಿಳೆ, ಮಕ್ಕಳನ್ನು ಭೇಟಿಯಾಗಿ ಅವರಿಗೆ ಪ್ರಸವ ಮುಂಚೆ ಮತ್ತು ನಂತರದಲ್ಲಿರುವ ಚುಚ್ಚುಮದ್ದು, ಪೋಷಕಾಂಶಗಳು ಮತ್ತು ಕುಟುಂಬ ಯೋಜನೆ ಸೇರಿದಂತೆ ಅಗತ್ಯವಿರುವ ಆರೋಗ್ಯ ಸೇವೆಯನ್ನು ನೀಡಬೇಕಿದೆ. ಇನ್ನು ಸಮುದಾಯ ಕೇಂದ್ರಿತ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಉತ್ತಮ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರ ಕೊರತೆ ಮತ್ತು ಗರ್ಭಿಣಿ ಮಹಿಳೆಯರಿಗೆ ಔಷಧಗಳ ಉತ್ತಮ ಪೂರೈಕೆ ಇಲ್ಲದಿರುಂತಹ ಅಪಾಯದ ಪ್ರಗತಿಗಳು ಕೂಡ ಕಾಣಬಹುದಾಗಿದೆ.
ಕೋವಿಡ್ 19 ಸಾಂಕ್ರಾಮಿಕತೆ ತಾಯಂದಿರ ಆರೋಗ್ಯವನ್ನು ಮತ್ತಷ್ಟು ಹಿಂದೆ ತಳ್ಳುವಂತೆ ಮಾಡಿದೆ. ಕೋವಿಡ್ ಇಂಜೆಕ್ಷನ್ಗಳು ಗರ್ಭಿಣಿಯರಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ. ದೇಶಗಳು ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ 2030ರ ಹೊತ್ತಿಗೆ ಈ ಸಂಖ್ಯೆ 1 ಮಿಲಿಯನ್ ದಾಟಲಿದೆ ಎಂದು ವರದಿ ತಿಳಿಸುತ್ತದೆ.
ಅನೇಕ ಗರ್ಭಿಣಿಯರು ಮತ್ತು ಹೆರಿಗೆಯಾದ ಮಹಿಳೆಯರು ಅನಿರೀಕ್ಷಿತವಾಗಿ ಸಾವನ್ನಪ್ಪುತ್ತಿದ್ದಾರೆ. ಒಂದೇ ವರ್ಷದಲ್ಲಿ 2,80,000 ಸಾವು ನೋವುಗಳು ವರದಿಯಾಗಿದೆ ಎಂದು ಯುಎನ್ಎಫ್ಪಿಎ ಕಾರ್ಯಕಾರಿ ನಿರ್ದೇಶಕ ನತಾಲಿಯಾ ಕನೆಮ್ ತಿಳಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಶೇ 34.3 ರಷ್ಟು ಇಳಿಕೆಯಾಗಿದೆ. 2000ನೇ ಇಸವಿಯಲ್ಲಿ ಮಕ್ಕಳಿಗೆ ಜನ್ಮ ನೀಡುವ 1,00,000 ತಾಯಂದಿರ ಪೈಕಿ 339 ತಾಯಂದಿರು ಮೃತಪಡುತ್ತಿದ್ದರು. 2020ಕ್ಕೆ ಇದು 223ಕ್ಕೆ ಇಳಿಕೆಯಾಗಿದೆ. 2020 ರಲ್ಲಿ ಕಡಿಮೆ ಮತ್ತು ಕಡಿಮೆ ಮಧ್ಯಮ-ಆದಾಯದ ದೇಶಗಳಲ್ಲಿ ಸುಮಾರು ಶೇ 95ರಷ್ಟಯ ತಾಯಂದಿರ ಮರಣಗಳು ಸಂಭವಿಸಿವೆ.
ಇದನ್ನೂ ಓದಿ: ವಾರದಲ್ಲಿ 4 ದಿನ ಕೆಲಸದಿಂದ ಉದ್ಯೋಗಿಗಳ ಯೋಗಕ್ಷೇಮ ಹೆಚ್ಚಳ: ಅಧ್ಯಯನ