ಲಖನೌ: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆಯು ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾಳೆ. ಭಾರತದಲ್ಲಿ ಈ ರೋಗ ಪತ್ತೆಯಾಗುತ್ತಿರುವ ಮಹಿಳೆಯರ ವಯಸ್ಸು ಪಾಶ್ಚಿಮಾತ್ಯ ದೇಶಗಳಲ್ಲಿ ಪತ್ತೆಯಾಗುತ್ತಿರುವ ಮಹಿಳೆಯರಿಗಿಂತ ಹತ್ತು ವರ್ಷ ಕಡಿಮೆಯಾಗಿದೆ ಎಂದು ವರದಿ ಆಗಿದೆ.
ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಎಂಡೋಕ್ರೈನ್ ಸರ್ಜರಿ ವಿಭಾಗದ ಎಚ್ಒಡಿ ಪ್ರೋ ಆನಂದ್ ಮಿಶ್ರಾ ಈ ವರದಿಯನ್ನು ಗ್ಲೋಬಕೊನ್ 2020 ಅಧ್ಯಯನದಲ್ಲಿ ನೀಡಿದ್ದಾರೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಏರಿಕೆಯಿಂದಾಗಿ ಸ್ತನ ಕ್ಯಾನ್ಸರ್ ಸರ್ಜನ್ ಮತ್ತು ರೋಗಿಗಳ ಚಿಕಿತ್ಸೆಗೆ ಬೇಕಾದ ಸಾಧನಗಳ ಅವಶ್ಯಕತೆ ಹೊಂದಿದೆ ಎಂದು ಪ್ರೋ ಮಿಶ್ರಾ ತಿಳಿಸಿದ್ದಾರೆ.
ಕೆಜಿಎಂಯು ಬ್ರೆಸ್ಟ್ ಅಪ್ಡೇಟ್ 2023ಯ ಎರಡು ದಿನದ ಕಾನ್ಸರ್ ಕುರಿತಾದ ಸಮ್ಮೇಳನ ಶುಕ್ರವಾರದಿಂದ ಆರಂಭವಾಗಲಿದ್ದು, ಸ್ತನ ಕ್ಯಾನ್ಸರ್ ಪತ್ತೆ ಮತ್ತು ಲೆಟ್ಸ್ ಡೂ ಅನ್ಕೊಪ್ಲಸ್ಟೆ ಧ್ಯೇಯದ ಅಡಿ ಅನ್ಕೊಪ್ಲಸ್ಟೆ ಸರ್ಜರಿಗೆ ಗಮನ ಹರಿಸಲಾಗುವುದು ಎಂದು ಪ್ರೊ ಮಿಶ್ರಾ ತಿಳಿಸಿದ್ದಾರೆ.
ಕಾನ್ಫರೆನ್ಸ್ನ ಸಂಘಟನಾ ಕಾರ್ಯದರ್ಶಿ ಡಾ. ಕೌಲ್ ರಂಜನ್ ಮಾತನಾಡಿ, ತಂತ್ರಜ್ಞಾನವೂ ಈ ಮೊದಲು ನಾವು ಸ್ತನ ಕ್ಯಾನ್ಸರ್ ಪತ್ತೆ ಮಾಡುತ್ತಿದ್ದ ವಿಧಾನವನ್ನು ಬದಲಾಯಿಸಿದೆ. ಹಾಗೇ ಚಿಕಿತ್ಸೆ ಕೂಡ ರಾಡಿಕಲ್ ಸರ್ಜರಿಯಿಂದ ಸ್ತನ ಸಂರಕ್ಷಣಾ ಸರ್ಜರಿಗೆ ಬದಲಾಗುತ್ತಿದೆ. ಅನ್ಕೊಪ್ಲಸ್ಟೆ ಸ್ತನ ಸರ್ಜರಿ ಹೊಸ ಸರ್ಜಿಕಲ್ ತಂತ್ರವನ್ನು ಹೊಂದಿದ್ದು, ಪ್ಲಾಸ್ಟಿಕ್ ಸರ್ಜರಿಯಿಂದ ಅಪ್ಟಿಮೈಸ್ ಕ್ಯಾನ್ಸ್ರ್ ಇದರ ಉಪಶಮನ ಮಾಡುವ ಜೊತೆಗೆ ಸ್ತನದ ಆಕಾರವನ್ನು ನಿರ್ವಹಣೆ ಮಾಡುತ್ತದೆ ಎಂದಿದ್ದಾರೆ.
ಭಾರತದಲ್ಲಿ ಸಾಮಾನ್ಯವಾಗಿ ಮಹಿಳೆಯರು, ಈ ಸ್ತನ ಕ್ಯಾನ್ಸರ್ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ರೋಗ ಪತ್ತೆಗೆ ತಡವಾಗಲು ಮತ್ತೊಂದು ಪ್ರಮುಖ ಕಾರಣ ಎಂದರೆ, ರೋಗಿಗೆ ಗಂಭೀರ ಸಮಸ್ಯೆಯಾಗುವವರೆಗೆ ಅವರು ಚಿಕಿತ್ಸೆಯನ್ನು ಮುಂದೂಡುತ್ತಾರೆ ಎಂದು ಎಸ್ಸಿ ತ್ರಿವೇದಿ ಮೆಮೋರಿಯಲ್ ಟ್ರಸ್ಟ್ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ ಡಾ ಅಮಿತಾ ಶುಕ್ಲಾ ತಿಳಿಸಿದ್ದಾರೆ.
ಎಚ್ಚರಿಕೆಯ ಗಂಟೆ: ಗ್ಲೊಬೊಕಾನ್ 2020 ಅಧ್ಯಯನದಲ್ಲಿ ಭಾರತದಲ್ಲಿ ಪ್ರತಿ ವರ್ಷ 1,78,00 ಮಹಿಳೆಯರು ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಸ್ತನ ಕ್ಯಾನ್ಸರ್ ಪ್ರಕರಣಗಳು ಗರ್ಭಕಂಠ ಕ್ಯಾನ್ಸರ್ ಸ್ಥಾನವನ್ನು ಹಿಂದಿಕ್ಕಿದೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಎರಡನೇ ಸಾಮಾನ್ಯ ಕ್ಯಾನ್ಸರ್ ಗರ್ಭಕಂಠದ ಕ್ಯಾನ್ಸರ್ ಆಗಿದೆ.
ಇದಕ್ಕಿಂತ ಹೆಚ್ಚಾಗಿ ಗಮನವಹಿಸಬೇಕಾದ ಅಂಶ ಎಂದರೆ ಪಶ್ಚಿಮ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಯುವ ವಯಸ್ಸಿನ ಮಹಿಳೆಯರಲ್ಲಿ ಈ ಸಮಸ್ಯೆ ಪತ್ತೆಯಾಗುತ್ತಿದ್ದು, ವಾರ್ಷಿಕ 90 ಸಾವಿರ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿದ್ದಾರೆ. ಶೇ 60ರಷ್ಟು ಮಹಿಳೆಯರು ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್