ಬೆಂಗಳೂರು: ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬ ಉದ್ಯೋಗಿಯ ಸುರಕ್ಷತೆ ಜೊತೆ ಆರೋಗ್ಯಕ್ಕೆ ಒತ್ತು ನೀಡುವುದು ಅವಶ್ಯ. ಇದೆ ಕಾರಣ ಈ ಕೆಲಸದ ಸ್ಥಳಗಳಲ್ಲಿ ಈ ಮೂಲಭೂತ ತತ್ವಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಇದಕ್ಕಾಗಿ ಏಪ್ರಿಲ್ 28ನ್ನು ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವನ್ನಾಗಿ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಲೇಬರ್ ಕಾನ್ಫರೆನ್ಸ್ (ಐಎಲ್ಸಿ) ಇಂಟರ್ನ್ಯಾಷನಲ್ ಲೇಬರ್ ಅರ್ಗನೈಸೇಶನ್(ಐಎಲ್ಒ)ನ ಮೂಲಭೂತ ತತ್ವಗಳು ಮತ್ತು ಹಕ್ಕುಗಳ ಅಡಿ ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ವಾತಾವರಣ ವನ್ನು ಸೇರಿಸಲು ನಿರ್ಧರಿಸಿತು.
ಐಎಲ್ಒ ಏಪ್ರಿಲ್ 28, 2023ರಲ್ಲಿ ಗಮನಿಸಿ, ಕೆಲಸದ ಪ್ರಪಂಚದ ಮೇಲೆ ಅದರ ಪರಿಣಾಮಗಳನ್ನು ಚರ್ಚಿಸಲು ಮತ್ತು ಕೆಲಸದ ಜಗತ್ತಿನಲ್ಲಿ ಈ ಹಕ್ಕನ್ನು ಪ್ರಾಯೋಗಿಕವಾಗಿ ಹೇಗೆ ಕಾರ್ಯಗತಗೊಳಿಸಬಹುದು ಎಂದು ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದೆ. ಆರಂಭದಲ್ಲಿ ಈ ದಿನವನ್ನು 2003ರಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ಆಗಿ ಗುರುತಿಸಲಾಗಿದೆ. ಈ ಮೂಲಕ ಒಕ್ಕೂಟಗಳು, ಉದ್ಯೋಗದಾತರು ಮತ್ತು ಸರ್ಕಾರದ ನಡುವಿನ ಸಹಯೋಗದಿಂದ ಸಾಮಾಜಿಕ ಸಂವಾದವನ್ನು ಬಳಸಿಕೊಂಡು ಕೆಲಸದಲ್ಲಿ ಅಪಘಾತಗಳು ಮತ್ತು ರೋಗಗಳ ತಡೆಗಟ್ಟುವಿಕೆಗೆ ಒತ್ತು ನೀಡಲಾಯಿತು.
ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಮೇಲಿನ ಜಾಗತಿಕ ಕಾರ್ಯತಂತ್ರದ ಈ ದಿನದ ಆಚರಣೆಯು ಅತ್ಯಗತ್ಯ ಭಾಗವಾಗಿದೆ ಎಂದು 2003ರಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ತೀರ್ಮಾನ ನಡೆಸಲಾಗಿದೆ. ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಅರಿವಿನ ಕುರಿತು ಉದ್ಯೋಗಿಗಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಕೆಲಸದ ಸ್ಥಳಗಳಲ್ಲಿ ಗಾಯಗೊಂಡ ಮತ್ತು ಸಾವನ್ನಪ್ಪಿದವರ ಅಂತರಾಷ್ಟ್ರೀಯ ಸ್ಮರಣಾರ್ಥ ದಿನವಾಗಿ ಕೂಡ ಈ ದಿನವನ್ನು ಗುರುತಿಸಲಾಗಿದೆ. ಇದನ್ನು 1996 ರಿಂದ ಟ್ರೇಡ್ ಯೂನಿಯನ್ ಚಳವಳಿಯಿಂದ ವಿಶ್ವದಾದ್ಯಂತ ಆಯೋಜಿಸಲಾಗಿದೆ.
ಕೆಲಸ ಸಂಬಂಧಿತ ಸಾವುಗಳು ಮತ್ತು ಗಾಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸುರಕ್ಷತೆ ಮತ್ತು ಆರೋಗ್ಯ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ರಚಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಕಾರ್ಮಿಕರಿಗೆ ಅಗತ್ಯ ಮೂಲಭೂತ ವ್ಯವಸ್ಥೆ, ಕಾನೂನು ಮತ್ತು ಸೇವೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಉದ್ಯಮಗಳು ಅಭಿವೃದ್ಧಿ ಹೊಂದಲು ರಾಷ್ಟ್ರೀಯ ನೀತಿ ಮತ್ತು ಕಾರ್ಯಕ್ರಮದ ಅಭಿವೃದ್ಧಿ ಮತ್ತು ಔದ್ಯೋಗಿಕ ಅನುಸರಣೆಯನ್ನು ಜಾರಿಗೊಳಿಸಸುವುದನ್ನು ಒಳಗೊಂಡಿದ್ದು, ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಕಾನೂನು, ನೀತಿಗೆ ಆದ್ಯತೆ ನೀಡಿದೆ.
ಕೆಲಸದ ಸ್ಥಳದಲ್ಲಿ ಸಾವು ಮತ್ತು ಗಾಯಗಳು ಆಗದಂತೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಉದ್ಯೋಗಿಯಾಗಿ ಕೆಲಸದ ವಾತಾವರಣ ಸುರಕ್ಷಿತ ಮತ್ತು ಆರೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಕೆಲವು ಹೊಸ ಮತ್ತು ಉದಯೋನ್ಮುಖ ಔದ್ಯೋಗಿಕ ಅಪಾಯಗಳನ್ನು ಹೇಳುತ್ತದೆ, ಇದು ತಾಂತ್ರಿಕ ನಾವೀನ್ಯತೆ ಅಥವಾ ಸಾಮಾಜಿಕ ಅಥವಾ ಸಾಂಸ್ಥಿಕ ಬದಲಾವಣೆಯಿಂದ ಉಂಟಾಗಬಹುದು. ಕೆಲಸ-ಸಂಬಂಧಿತ ಒತ್ತಡದ ಮೇಲೆ ಮಾನಸಿಕ ಸಾಮಾಜಿಕ ಅಂಶಗಳ ಪರಿಣಾಮಗಳಂತಹ ಕೆಲವು ಅಪಾಯಕಾರಿ ಅಂಶಗಳ ಪ್ರಾಮುಖ್ಯತೆಯ ಬಗ್ಗೆ ಗ್ರಹಿಕೆಗಳಲ್ಲಿನ ಬದಲಾವಣೆಗಳಲ್ಲಿ ಅವರು ಪ್ರಭಾವಗಳನ್ನು ಕಂಡುಕೊಳ್ಳಬಹುದು.
ಇದನ್ನೂ ಓದಿ: ಮಕ್ಕಳ ಶಾಲಾ ರಜಾದಿನಗಳು ಸ್ಕ್ರೀನ್ ಟೈಂನಲ್ಲಿ ಕಳೆದು ಹೋಗದಿರಲಿ