ನ್ಯೂ ಯಾರ್ಕ್: ಸಾರ್ಸ್ ಕೋವ್- 2ವಿನ ದೀರ್ಘ ಕಾಲದ ಅಪಾಯದ ಕುರಿತು ಈಗಾಗಲೇ ಅನೇಕ ಸಂಶೋಧನೆಗಳು ನಡೆದಿದೆ. ಇದರಲ್ಲಿ ಈ ಸೋಂಕು ಹುಟ್ಟುವ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಹೊಸ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಗರ್ಭಾವಸ್ಥೆಯಲ್ಲಿ ಸಾರ್ಸ್-ಕೋವ್-2 ಸೋಂಕು ಹೊಂದಿರುವ ತಾಯಂದಿರಿಗೆ ಜನಿಸುವ ಗಂಡು ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ಸಮಸ್ಯೆಗಳು ಕಾಣುತ್ತವೆ. ಮಗು ಜನಿಸಿದ 12 ತಿಂಗಳೊಳಗೆ ಆ ಗಂಡು ಮಕ್ಕಳಲ್ಲಿ ಅಟಿಸಂ ಸ್ಪಕ್ಟ್ರಂ ಸಮಸ್ಯೆಗಳು ಕಾಣುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಜಾಮಾ ನೆಟ್ವರ್ಕ್ ಓಪನ್ನಲ್ಲಿ ಪ್ಟಕಸಿಲಾಗಿದೆ. ಕೋವಿಸ್ ಸಾಕಾರಾತ್ಮಕತೆಯ ಸೋಂಕ ಗಂಡು ಮಕ್ಕಳು ಹುಟ್ಟಿದ 12 ತಿಂಗಳಲ್ಲಿ ನರಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದರೊಂದಿಗೆ ಸಂಬಂಧ ಹೊಂದಿದೆ ಎಂಬುದು ಅಧ್ಯಯನ ತೋರಿಸಿದೆ.
ಹೆಣ್ಣು ಮಕ್ಕಳ ಮೇಲೆ ಯಾವುದೇ ಪರಿಣಾಮ ಇಲ್ಲ: ಮಗು ಹುಟ್ಟಿದ 18 ತಿಂಗಳಿದ್ದಾಗ ಈ ಪರಿಣಾಮ ಹೆಚ್ಚು ಸಾಧಾರಣವಾಗಿರುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿ ಸಾರ್ಸ್ -ಕೋವ್- 2 ಸೋಂಕು ಹೊಂದಿರುವುದು ಮಕ್ಕಳ ನರಗಳ ಮೇಲೆ ಈ ವಯಸ್ಸಿನಲ್ಲಿ ಶೇ 42ರಷ್ಟು ಪರಿಣಾಮ ಬೀರುತ್ತದೆ. ಆದರೆ, ಈ ಅಪಾಯವನ್ನು ಹೆಣ್ಣುಮಕ್ಕಳಲ್ಲಿ ಕಂಡು ಬಂದಿಲ್ಲ. ಗರ್ಭಾವಸ್ಥೆಯಲ್ಲಿ ಸೋಂಕಿಗೆ ತುತ್ತಾಗಿರುವ ತಾಯಂದಿರಿಗೆ ಜನಿಸಿದ ಮಕ್ಕಳ ನರಗಳ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದು ಅಮೆರಿಕದ ಮೆಸಚ್ಯೂಸೆಟ್ ಜನರಲ್ ಹಾಸ್ಪಿಟಲ್ ಸಂಶೋಧಕರು ತಿಳಿಸಿದ್ದಾರೆ.
ನರಗಳ ಬೆಳವಣಿಗೆ ಅಪಾಯ ತಾಯಂದಿರ ಸಾರ್ಸ್-ಕೋವ್-2 ಸೋಂಕಿನೊಂದಿಗೆ ಗಂಡು ಮಕ್ಕಳಲ್ಲಿ ಹೆಚ್ಚಿದೆ. ಪ್ರಸವ ಪೂರ್ವದಲ್ಲಿ ಪ್ರತಿಕೂಲ ಒಡ್ಡುವಿಕೆಗೆ ಗಂಡು ಮಕ್ಕಳು ಒಳಗಾಗುತ್ತಾರೆ ಎಂದು ಅಸೋಸಿಯೇಟ್ ಪ್ರೊಫೆಸರ್ ಆಂಡ್ರೆ ಎಡ್ಲೊ ತೊಳಿಸಿದ್ದಾರೆ.
ಈ ಹಿಂದೆ ಕೂಡ ಅಧ್ಯಯನ: ಈ ಹಿಂದಿನ ಅಧ್ಯಯನದಲ್ಲಿ ಗರ್ಭಾವಸ್ಥೆಯಲ್ಲಿನ ಸೊಂಕಿನಿಂದಾಗಿ ಮಕ್ಕಳ ನರಗಳ ಬೆಳವಣಿಗೆ ಅಸ್ವಸ್ಥತೆಯ ಅಪಾಯ ಅದರಲ್ಲೂ ಅಟಿಸಂ ಸ್ಪೆಕ್ಟಂನಂತಹ ಸಮಸ್ಯೆಯೊಂದಿಗೆ ಸಂಬಂಧ ಪತ್ತೆ ಮಾಡಲಾಗಿತ್ತು. ಆದರೆ ಗರ್ಭಾವಸ್ಥೆಯಲ್ಲಿನ ಸಾರ್ಸ್ ಕೋವ್- 2 ಸೋಂಕು ಮಕ್ಕಳ ಮೇಲೆ ನರಗಳ ಅಭಿವೃದ್ಧಿ ಮೇಲೆ ಎಂಬ ಸಂಬಂಧ ಹೊಂದಿದ್ಯಾ ಎಂಬುದರ ಬಗ್ಗೆ ಸ್ಪಷ್ಟವಾಗಿರಲಿಲ್ಲ. ಇದಕ್ಕಾಗಿ ತಂಡ ಕೋವಿಡ್ ಸಾಂಕ್ರಾಮಿಕತೆ ವೇಳೆ ಜನಿಸಿದ 18,355 ಮಕ್ಕಳ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಇದರಲ್ಲಿ 883 ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿ ತಾಯಂದಿರು ಸಾರ್ಸ್ ಕೋವ್- 2 ಸೋಂಕಿಗೆ ಒಳಗಾಗಿದ್ದರು.
ಈ 883 ಸಾರ್ಸ್- ಕೋವ್-2 ಸೋಂಕಿನ ಪರಿಣಾಮಕ್ಕೆ ಒಳಗಾದ ಮಕ್ಕಳಲ್ಲಿ 26 ಮಕ್ಕಳು 12ತಿಂಗಳೊಳಗೆ ನರಗಳ ಬೆಳವಣಿಗೆ ಅಸ್ವಸ್ಥೆಯನ್ನು ಹೊಂದಿರುವುದು ಪತ್ತೆಯಾಗಿದೆ. ಇದರಲ್ಲಿ ಲಸಿಕೆ ಪಡೆದ ತಾಯಂದಿರಲ್ಲಿ ಈ ಪರಿಣಾಮ ಬೇರೆ ರೀತಿಯ ಆಯಿತಾ ಎಂಬು ಕುರಿತು ಪರಿಶೀಲನೆ ನಡೆಸಲು ಕೆಲವೇ ತಾಯಂದಿರು ಮಾತ್ರ ಲಸಿಕೆ ಪಡೆದಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಈ ಅಪಾಯವನ್ನು ವಿವರಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ 30ರ ಬಳಿಕ ತಪ್ಪದೇ ಈ ಆರೋಗ್ಯ ತಪಾಸಣೆಗೆ ಒಳಗಾಗಿ