ETV Bharat / sukhibhava

ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ? - ಪರಿಣಾಮಕಾರಿ ಊಟದ ಯೋಜನೆ ರೂಪಿಸುವುದು

ತೂಕ ನಿರ್ವಹಣೆ, ವೈದ್ಯಕೀಯ ಸ್ಥಿತಿ ನಿರ್ವಹಣೆ ಗಮನದಲ್ಲಿರಿಸಿಕೊಂಡು ಹೊಸ ಆಹಾರ ಕ್ರಮಕ್ಕೆ ಪರಿಣಾಮಕಾರಿ ಊಟದ ಯೋಜನೆ ರೂಪಿಸುವುದು ಅವಶ್ಯಕ.

Effective meal planning is much easier in the age of healthy eating

author img

By

Published : May 19, 2023, 2:00 PM IST

Updated : May 19, 2023, 10:19 PM IST

ಆಹಾರ ಆರೋಗ್ಯ ವಿಚಾರದಲ್ಲಿ ರಾಜಿ ಮುಖ್ಯ ಎಂಬ ಮಾತಿದೆ. ಲಭ್ಯವಿರುವ ಸಮೃದ್ಧ ಆಹಾರಗಳನ್ನು ಸೇವಿಸುವ ಮೂಲಕ ಆರೋಗ್ಯದ ಕಾಳಜಿ ಮಾಡಬೇಕಿದೆ. ತೂಕ ನಿರ್ವಹಣೆ, ವೈದ್ಯಕೀಯ ಸ್ಥಿತಿ ನಿರ್ವಹಣೆಯನ್ನು ಗಮನದಲ್ಲಿರಿಸಿಕೊಂಡು ಹೊಸ ಆಹಾರ ಕ್ರಮಕ್ಕೆ ಪರಿಣಾಮಕಾರಿ ಊಟದ ಯೋಜನೆ ರೂಪಿಸಬೇಕು. ಈ ಆರೋಗ್ಯ ಗುರಿಯಲ್ಲಿ ನಿಮ್ಮ ಆಯ್ಕೆಗನುಗುಣವಾಗಿ ಹೊಂದಾಣಿಕೆ ನಡೆಸಬಹುದು ಎಂಬುದನ್ನು ಮರೆಯದಿರಿ. ಇಂತಹ ಪರಿಣಾಮಕಾರಿ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಲು ಮುಂದಾದರೆ ಅದಕ್ಕೂ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿಡಬೇಕಿರುವುದು ಅಗತ್ಯವಾಗಿದೆ.

ಆರೋಗ್ಯ ಗುರಿ ಹುಡುಕಿ: ಪರಿಣಾಮಕಾರಿ ಆಹಾರದ ಮೊದಲ ಹಂತವೇ ಆಹಾರದ ಗುರಿಯನ್ನು ಗುರುತಿಸುವುದು. ಇದು ತೂಕ, ವೈದ್ಯಕೀಯ ತಪಾಸಣೆ ವರದಿ/ವೈಯಕ್ತಿಕ ಗುರಿಗಳ ಸಾಧನೆ ಹೊಸ ಡಯಟ್​​ಗೆ ಕಾರಣವಾಗುತ್ತದೆ. ಇದನ್ನು ಅಳವಡಿಸಿಕೊಳ್ಳುವ ಮೊದಲ ಆಹಾರ ತಜ್ಞರ ಸಮಾಲೋಚನೆ ನಡೆಸುವುದು ಅವಶ್ಯಕ. ಆಹಾರ ಪದ್ದತಿ ಅಳವಡಿಕೆಯ ಬಳಿಕ ಪ್ರಗತಿ ಪತ್ತೆಗೆ ಮಾಡಿಕೊಳ್ಳಿ. ಇದಕ್ಕಾಗಿ ನಿಮ್ಮ ಮನೆ ಫ್ರಿಡ್ಜ್​/ ಆ್ಯಪ್, ಸ್ಮಾರ್ಟ್​ವಾಚ್/ಆರೋಗ್ಯ ನಿರ್ವಹಣೆ ಗ್ಯಾಜೆಟ್​ನಲ್ಲಿ ಇದರ ಪರಿಣಾಮವನ್ನು ಟ್ರಾಕ್​ ಮಾಡಬಹುದು. ​

ಇಂಟರ್​ನೆಟ್​ ಜೊತೆಗೆ ಡಯಟ್​​ ಬದಲಾವಣೆ: ಆರೋಗ್ಯ ಗುರಿಯ ಪ್ರಮುಖ ಸವಾಲೆಂದರೆ ಹೊಸ ವಸ್ತುಗಳನ್ನು ಹೇಗೆ ಬೇಯಿಸಬೇಕು ಎನ್ನುವುದು. ನಿಮ್ಮ ತಾಯಿಯ ರೀತಿ ಸರಿಯಾಗಿ ಅಡುಗೆ ಮಾಡಲು ಸಾಧ್ಯವಿಲ್ಲದಿದ್ದರೂ, ನಿಮ್ಮ ಮನೆ ಮಂದಿ ತಿನ್ನುವ ಅಭ್ಯಾಸದಲ್ಲಿ ಹೊಸ ಬದಲಾವಣೆ ತರಬಹುದು. ಅದರಲ್ಲೂ ಈಗಿನ ಇಂಟರ್​ನೆಟ್​ ಯುಗ ನಿಮಗೆ ಮತ್ತಷ್ಟು ನೆರವು ನೀಡುತ್ತದೆ. ಇಲ್ಲಿ ಅನೇಕ ಹೊಸ ವಿಧಾನ ಮತ್ತು ತಂತ್ರಗಳನ್ನು ಕಲಿಯಬಹುದು. ಟ್ಯೂಷನ್​​, ಬ್ಲಾಗ್​ ಮತ್ತು ವಿಡಿಯೋಗಳು ಆರೋಗ್ಯಕರ ಆಹಾರ ಬೇಯಿಸುವ ಪ್ರಕ್ರಿಯೆಗಳು ನಿಮಗೆ ಸಹಾಯ ಮಾಡುತ್ತದೆ.

ರುಚಿಯ ಆದ್ಯತೆಗಳಲ್ಲಿ ರಾಜಿ ಬೇಡ: ಈ ಹಿಂದೆ ಹೊಸ ಡಯಟ್​ ಅಳವಡಿಸಿಕೊಂಡಾಗ ನಾವು ಅನೇಕ ಅಂಶಗಳಲ್ಲಿ ಹೊಂದಾಣಿಕೆಯಾಗುತ್ತಿದ್ದೇವೆ. ಇಂದಿನ ಜಗತ್ತಿನಲ್ಲಿ ಅನೇಕ ಆರೋಗ್ಯಯುತ ಆಹಾರದಲ್ಲಿ ಒಂದಿಲ್ಲೊಂದು ಆಯ್ಕೆಗಳಿದ್ದು, ಇದು ನಿಮ್ಮ ನಾಲಿಗೆ ರುಚಿ ತಣಿಸುತ್ತವೆ. ನಿಮಗೆ ಇಂಟರ್ನೆಟ್​ನಲ್ಲಿ ಈ ವಿಧಗಳು ಪತ್ತೆಯಾಗದಿದ್ದರೆ, ಯಾಕೆ ನೀವೇ ಒಂದನ್ನು ತಯಾರಿಸಬಾರದು? ಉದಾಹರಣೆಗೆ ಚಾಟ್​ ಜಿಟಿಪಿಯಿಂದ ಕಡಿಮೆ ಕ್ಯಾಲೋರಿ​ ಆಹಾರ ಬಳಸಿಕೊಂಡು ರುಚಿಯಾದ ಆಹಾರದ ಸಲಹೆಯನ್ನು ಪಡೆಯಬಹುದು. ಇಂಟರ್​ನೆಟ್​ಗಳು ನಿಮಗಿಷ್ಟವಾದ ಆರೋಗ್ಯಕರ ಪರ್ಯಾಯ ಆಹಾರಗಳನ್ನು ಪತ್ತೆ ಮಾಡುವ ದೊಡ್ಡ ಮೂಲ ಎಂದರೂ ತಪ್ಪಲ್ಲ. ಇದರ ಆಯ್ಕೆಯಲ್ಲಿ ನೀವು ಎಚ್ಚರದಿಂದಿರಬೇಕು ಅಷ್ಟೇ.

ಪರಿಣಾಮಕಾರಿ ಆಹಾರದ ಯೋಜನೆ ಆರೋಗ್ಯಕರ ತಿನ್ನುವಿಕೆಯಲ್ಲಿ ಅವಶ್ಯವಾಗಿದೆ. ನಿಮ್ಮ ಆರೋಗ್ಯಕರ ಗುರಿಯನ್ನು ಪತ್ತೆ ಮಾಡಿ ಹೊಸ ವಿಧಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಮುಂದಾಬೇಕಿದೆ. ಕಡಿಮೆ ಕೊಬ್ಬಿನ ಆಹಾರಕ್ಕೆ ಹಲವು ಪರ್ಯಾಯಗಳು ನಿಮ್ಮ ರುಚಿಗೆ ತಕ್ಕಂತೆ ಆಯ್ಕೆ ಮಾಡಬಹುದು.

ಇದನ್ನೂ ಓದಿ: ಅಸುರಕ್ಷಿತ ಆಹಾರ ಕ್ರಮದಿಂದ ವರ್ಷಕ್ಕೆ 4 ಲಕ್ಷ ಮಂದಿ ಸಾವು! ತಡೆಯುವುದು ಹೇಗೆ?

Last Updated : May 19, 2023, 10:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.