ETV Bharat / sukhibhava

ಇ-ಫಾರ್ಮಸಿಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು.. ಕಠಿಣ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ - ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ

ಇ- ಫಾರ್ಮಸಿಗಳಿಂದ ಕಾನೂನು ಉಲ್ಲಂಘನೆ ಆಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಈ ನಡುವೆ ಔಷಧ ದುರುಪಯೋಗ ಆಗದಂತೆ ತಡೆಯಲು ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

E-pharmacies under radar; Union Health Ministry to initiate stern action
ಇ-ಫಾರ್ಮಸಿಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು.. ಕಠಿಣ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ
author img

By

Published : Feb 17, 2023, 8:03 AM IST

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಇ - ಫಾರ್ಮಸಿಗಳ ಔಷಧಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

"ಇ-ಫಾರ್ಮಸಿಗಳು ಪ್ರಸ್ತುತ ಅನುಸರಿಸುತ್ತಿರುವ ವ್ಯವಹಾರ ಮಾದರಿ ಆತಂಕಕಾರಿಯಾಗಿದೆ. ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವ ರೋಗಿಗಳಿಗೆ ಈ ವ್ಯಾಪಾರ ನೀತಿ ಸಮಸ್ಯಾತ್ಮಕವಾಗಬಹುದು. ಹಾಗೂ ಔಷಧ ಖರೀದಿಸುವವರ ಡೇಟಾ ಗೌಪ್ಯತೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದು, ಔಷಧಗಳ ದುರುಪಯೋಗದ ಸಾಧ್ಯತೆಯೂ ಇದೆ ಎಂಬುದು ಆರೋಗ್ಯ ಇಲಾಖೆಯ ಕಳವಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂತರ್ಜಾಲದಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿರುವ ಅಕ್ರಮ ಇ-ಫಾರ್ಮಸಿಗಳಿಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಈಗಾಗಲೇ ಶೋಕಾಸ್ ನೋಟಿಸ್ ನೀಡಿದೆ. ಫೆಬ್ರವರಿ 8 ರಂದು ಡಿಸಿಜಿಐ ಆನ್‌ಲೈನ್ ಫಾರ್ಮಸಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದು, ಎರಡು ದಿನಗಳಲ್ಲಿ ಪ್ರತಿಕ್ರಿಯಿಸಲು ಅಥವಾ ದೇಶದಲ್ಲಿ ಔಷಧಗಳ ಮಾರಾಟ ಮತ್ತು ವಿತರಣೆಯ ಕುರಿತು ಯಾವುದೇ ಸೂಚನೆಯಿಲ್ಲದೇ ಕಠಿಣ ಕ್ರಮಕ್ಕೆ ಸಿದ್ಧರಾಗಿ ಎಂದು ನೋಟಿಸ್​ನಲ್ಲಿ ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ಮೂಲಗಳ ಪ್ರಕಾರ, ಇ-ಫಾರ್ಮಸಿಗಳು 1940 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ವಿವಿಧ ಅಂಶಗಳನ್ನು ಉಲ್ಲಂಘನೆ ಮಾಡುತ್ತಿವೆ ಎಂದು ಹೇಳಿವೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ CDSCO 20 ಕ್ಕೂ ಹೆಚ್ಚು ಆನ್‌ಲೈನ್ ಫಾರ್ಮಸಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿದೆ. ಟಾಟಾ1mg, ಪ್ರಾಕ್ಟೋ, ಅಪೊಲೊ ಅಮೆಜಾನ್, ಫ್ಲಿಪ್‌ಕಾರ್ಟ್, ಇತ್ಯಾದಿ ದೊಡ್ಡ ದೊಡ್ಡ ಉಧ್ಯಮಗಳು ಇದರಲ್ಲಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅಖಿಲ ಭಾರತೀಯ ಮೂಲದ ರಸಾಯನಶಾಸ್ತ್ರಜ್ಞರು ಮತ್ತು ವಿತರಕರು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದೆ. ಔಷಧ ಕಾಯಿದೆಗಳು, ಫಾರ್ಮಸಿ ಕಾಯಿದೆ ಮತ್ತು ಇತರ ಔಷಧಗಳಿಗೆ ಸಂಬಂಧಿಸಿದ ನಿಯಮಗಳು/ಆದೇಶಗಳು, ನೀತಿ -ಸಂಹಿತೆಗಳು, ಅಂತರ್ಜಾಲದಲ್ಲಿ ಔಷಧಗಳ ಮಾರಾಟ ಮತ್ತು ಔಷಧದ ಪ್ರಚಾರಕ್ಕೆ AIOCD ಅನುಮತಿಸುವುದಿಲ್ಲ. ರಿಯಾಯಿತಿಗಳು ಮತ್ತು ಯೋಜನೆಗಳೊಂದಿಗೆ ಜಾಹೀರಾತು ಮಾಡುವ ಮೂಲಕ ಮಾರಾಟ ಮಾಡುವುದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿ ಎಂದು ಎಐಒಸಿಡಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲಾ ನ್ಯಾಯಸಮ್ಮತ ಮನವಿ, ವಿನಂತಿ, ಸಭೆಗಳನ್ನು ನಡೆಸಿದ್ದಾಗ್ಯೂ ಮತ್ತು ಹೈಕೋರ್ಟ್ ಆದೇಶಗಳ ಹೊರತಾಗಿಯೂ, ಕಾರ್ಪೊರೇಟ್ ಸಂಸ್ಥೆಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಇ-ಫಾರ್ಮಸಿಗಳು ಆನ್‌ಲೈನ್‌ನಲ್ಲಿ ಔಷಧಗಳ ಮಾರಾಟವನ್ನು ಪ್ರಾರಂಭಿಸಿದಾಗಿನಿಂದ ಹೆಚ್ಚು ಅಪಾಯಕಾರಿಯಾಗಿದೆ. ದೇಶದ ರಾಜ್ಯಗಳ ಗಡಿಗಳಲ್ಲಿ, ನಕಲಿ ಮತ್ತು ನಕಲಿ ಔಷಧಗಳ ಹಠಾತ್ ಏರಿಕೆಯನ್ನು ನಾವು ಕಂಡುಕೊಂಡಿದ್ದೇವೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಎಐಒಸಿಡಿ ಹೇಳಿದೆ.

ಆನ್‌ಲೈನ್ ಅಪ್ಲಿಕೇಶನ್‌ಗಳು ನಾರ್ಕೋಟಿಕ್ ಡ್ರಗ್ಸ್, ಪ್ರೆಗ್ನೆನ್ಸಿ ಟರ್ಮಿನೇಷನ್ ಕಿಟ್‌ಗಳು, ಆಂಟಿಬಯಾಟಿಕ್‌ಗಳು ಮತ್ತು ನಿದ್ರಾಜನಕ ಔಷಧಗಳನ್ನು ಸುಲಭವಾಗಿ ಇ- ಕಾಮರ್ಸ್ ಮೂಲಕ ಮಾರಾಟ ಮಾಡುತ್ತಿವೆ. ಗಡಿಗಳಲ್ಲಿ ಇಂತಹ ವ್ಯವಹಾರ ಮತ್ತು ಪೂರೈಕೆಗಳನ್ನ ರಾಜ್ಯ ಎಫ್‌ಡಿಎ ಮೂಲಕ ಪತ್ತೆಹಚ್ಚಲು ಮತ್ತು ಟ್ರ್ಯಾಕ್ ಮಾಡಲು ತುಂಬಾ ಕಷ್ಟಕರವಾಗಿದೆ ಎಂದು ಎಐಒಸಿಡಿ ಹೇಳಿದೆ.

ಇದನ್ನು ಓದಿ: ಅಂಗಾಂಗ ದಾನ ಮತ್ತು ಸಾರಿಗೆ: ಒಂದು ರಾಷ್ಟ್ರ ಒಂದು ನೀತಿ ಜಾರಿಗೆ ಕೇಂದ್ರದ ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.