ಸಾಮಾನ್ಯವಾಗಿ ನಿರ್ಜಲೀಕರಣ ಎಂಬುದು ಬೇಸಿಗೆಯಲ್ಲಿ ಮಾತ್ರ ಆಗುತ್ತದೆ ಎಂಬುದಾಗಿ ಬಹಳಷ್ಟು ಜನರು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ಯಾವುದೇ ವಾತಾವರಣ ಇರಲಿ, ಪ್ರತಿನಿತ್ಯ ಜನರು ದೇಹಕ್ಕೆ ಅಗತ್ಯವಾದ ಪ್ರಮಾಣದ ನೀರನ್ನು ಸೇವನೆ ಮಾಡಬೇಕು. ಯಾವುದೇ ಋತುಮಾನದಲ್ಲೂ ನಿರ್ಜಲೀಕರಣದ ಸಮಸ್ಯೆ ಕಾಡಬಹುದಾಗಿದ್ದು, ಇದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ತಜ್ಞರು ಹೇಳುವಂತೆ ದೇಹಕ್ಕೆ ಅಗತ್ಯ ಪ್ರಮಾಣದ ನೀರು ಸಿಗದೇ ಹೋದಾಗ ಅದು ಕೆಲವು ರೋಗ ಮತ್ತು ಗಂಭೀರ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳೇ ಹೆಚ್ಚು.
ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ನ ಅಧ್ಯಯನ ಅನುಸಾರ, ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದೇ ಇರುವುದರಿಂದ ಅವಧಿ ಪೂರ್ವ ಸಾವು ಸಂಭವಿಸಬಹುದು. ಕಡಿಮೆ ಪ್ರಮಾಣದ ನೀರನ್ನು ಸೇವಿಸುವುದರಿಂದ ದೇಹದಲ್ಲಿನ ಸೋಡಿಯಂ ಮಟ್ಟ ಕಡಿಮೆಯಾಗುತ್ತದೆ. ಇದರ ಪ್ರಮಾಣ ಲೀಟರ್ಗೆ 145 ಮಿಲಿ ಲೀಟರ್ ಹೆಚ್ಚಾದರೆ ಶೇ 21 ಮಂದಿಯಲ್ಲಿ ಇದು ಅವಧಿ ಪೂರ್ವಕ ಸಾವಿಗೆ ಕಾರಣವಾಗುತ್ತದೆ. ಅಲ್ಲದೇ ಇದು ದೀರ್ಘಾವಧಿ ರೋಗಗಳಿಗೂ ಕಾರಣವಾಗುತ್ತದೆ.
ಅಧ್ಯಯನಗಳು ಹೀಗೆ ಹೇಳುತ್ತವೆ: ನ್ಯೂ ಹ್ಯಾಮ್ಸ್ಪೈರ್ ಯೂನಿವರ್ಸಿಟಿ ಅಧ್ಯಯನದ ಪ್ರಕಾರ, ಚಳಿಗಾಲದಲ್ಲೂ ಈ ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಉಂಟಾಗುವ ಈ ನಿರ್ಜಲೀಕರಣ ಬೇಸಿಗೆಯಂತೆ ಗೋಚರವಾಗದೇ ಹೋಗಬಹುದು. ನ್ಯೂಟ್ರಿಷಿಯನ್ ಮ್ಯಾನೇಜ್ಮೆಂಟ್ ಅಂಡ್ ಔಟ್ಕಮ್ಸ್ ಇನ್ ಮಾಲ್ ನರಿಷ್ಡ್ ಮೆಡಿಕಲ್ ಪೇಷಂಟ್ ಲೇಖನದಲ್ಲಿ ದೇಹಕ್ಕೆ ನೀರಿನ ಪ್ರಮಾಣ ಕಡಿಮೆಯಾದರೆ ಏನಾಗಲಿದೆ ಎಂಬ ವಿವರವಾದ ಮಾಹಿತಿ ನೀಡಲಾಗಿದೆ. ಈ ಸಂಬಂಧ ಅನೇಕ ವರದಿಗಳು ಪ್ರಕಟವಾಗಿದ್ದು, ದೇಹದಲ್ಲಿ ನೀರಿನ ಕೊರತೆ ಕಾಣಿಸಿದರೆ, ಅದು ಪರೋಕ್ಷ ಅಥವಾ ಅಪರೋಕ್ಷವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಾನವ ದೇಹದ ಮೂರನೇ ಎರಡು ಭಾಗ ನೀರಿನಿಂದ ಆಗಿದೆ. ಇದರಲ್ಲಿ 85ರಷ್ಟು ಮಿದುಳಿನಲ್ಲಿ, 22ರಷ್ಟು ಮೂಳೆ, 20ರಷ್ಟು ಚರ್ಮದಲ್ಲಿರುತ್ತದೆ. ಶೇ 75ರಷ್ಟು ಸ್ನಾಯುವಿನಲ್ಲಿ, 80 ರಷ್ಟ ಶ್ವಾಸಕೋಶ ನೀರಿನಿಂದ ಕೂಡಿದೆ. ಈ ಎಲ್ಲ ಅಂಗಾಂಗಳು ಆರೋಗ್ಯಯುತವಾಗಿರಬೇಕಾದರೆ, ದೇಹಕ್ಕೆ ನೀರು ಅತ್ಯಗತ್ಯವಾಗಿದೆ.
ದೇಹದ ಅಂಗಾಂಗದ ಮೇಲೆ ಪರಿಣಾಮ: ದೇಹಕ್ಕೆ ಅಗತ್ಯ ಪ್ರಮಾಣದ ನೀರು ಸಿಗದೇ ಹೋದಾಗ, ಮೆಟಾಬಲಿಸಮ್ ಮೇಲೆ ಪರಿಣಾಮ ಬೀರುತ್ತದೆ. ದೇಹಕ್ಕೆ ಅಗತ್ಯವಾದ ನೀರಿನ ಪ್ರಮಾಣ ಸಿಕ್ಕಿದಲ್ಲಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಮ್ರೂತ ಸಂಬಂಧಿಸಿದ ಹಾಗೂ ರಕ್ತ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ. ದೇಹಕ್ಕೆ ಆಮ್ಲಜನಕದ ಪೂರೈಕೆ, ತಾಪಮಾನ ನಿಯಂತ್ರಣ, ಮೋಳೆ ಆರೋಗ್ಯಕ್ಕೆ ಸಹಾಯವಾಗಲಿದೆ. ಇದೇ ಹಿನ್ನೆಲೆ ವೈದ್ಯರು ಯಾವುದೇ ಋತುಮಾನವಾದರೂ ಪ್ರತಿಯೊಬ್ಬರು ದಿನಕ್ಕೆ 3 ರಿಂದ 4 ಲೀಟರ್ ನೀರು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.
ಭೋಪಾಲ್ನ ಪಿಸಿಶಿಯನ್ ಡಾ ರಾಕೇಶ್ ಶರ್ಮಾ ಹೇಳುವಂತೆ, ಋತುಮಾನಕ್ಕೆ ತಕ್ಕಂತೆ ನಮ್ಮ ಕುಡಿಯುವ ಮತ್ತು ತಿನ್ನುವ ಅಭ್ಯಾಸಗಳು ಬದಲಾಗುತ್ತದೆ. ಬೇಸಿಗೆಯಲ್ಲಿ ನಮಗೆ ಹೆಚ್ಚು ಬಾಯರಿಕೆ ಆಗುತ್ತದೆ. ಈ ಹಿನ್ನೆಲೆ ನೀರು ಹಾಗೂ ನೀರಿನ ಆಹಾರ ಹೆಚ್ಚು ಸೇವನೆ ಮಾಡುತ್ತೇವೆ. ಆದರೆ, ಚಳಿಗಾಲದಲ್ಲಿ ನಮಗೆ ಬಾಯರಿಕೆ ಆಗುತ್ತಿಲ್ಲ, ಈ ಹಿನ್ನೆಲೆ ಬಹುತೇಕ ಮಂದಿ ಜ್ಯೂಸ್, ಮೊಸರು, ಲಸ್ಸಿಮ ಮಜ್ಜಿಗೆಯಂತಹ ನೀರಿನ ಪದಾರ್ಥಗಳ ಸೇವನೆ ನಿಲ್ಲಿಸುತ್ತಾರೆ.
ಚಳಿಗಾಲದಲ್ಲೂ ಕುಡಿಯಬೇಕು ಹೆಚ್ಚು ನೀರು: ಚಳಿಗಾಲದಲ್ಲಿ ಬಾಯರಿಕೆ ಕಡಿಮೆ ಆದ ಮಾತ್ರಕ್ಕೆ ನಿಮ್ಮ ದೇಹಕ್ಕೆ ನೀರಿನ ಅಗತ್ಯವಿಲ್ಲ ಎಂದು ಅರ್ಥವಲ್ಲ. ಈ ಋತುಮಾನದಲ್ಲೂ ನೀರಿನ ಅವಶ್ಯಕತೆ ಇದೆ. ಇದೇ ಕಾರಣ ಕಡಿಮೆ ಪ್ರಮಾಣ ನೀರಿನ ಸೇವನೆ ದೇಹಕ್ಕೆ ಅಪಾಯ ತರುತ್ತದೆ. ಡಯಾಬೀಟಿಸ್ ಮತ್ತಿತ್ತರ ದೀರ್ಘಾವಧಿ ಸಮಸ್ಯೆಯಿಂದ ಬಳಲುತ್ತಿರುವರು ಕಡಿಮೆ ನೀರು ಸೇವಿಸುವುದರಿಂದ ಅಪಾಯಕ್ಕೆ ಒಳಗಾಗುತ್ತಾರೆ. ಅಲ್ಲದೇ ಇದು ಕಡಿಮೆ ರಕ್ತದೊತ್ತಡ, ಮಲಬದ್ದತೆ, ಜೀರ್ಣಾಂಗವ್ಯೂಹದ ಮೇಲೆ ಪರಿಣಾ ಬೀರುತ್ತದೆ. ಕಿಡ್ನಿಯಲ್ಲಿ ಕಲ್ಲು ಬೆಳೆಯಲು, ಕಿಡ್ನಿ ವಿಫಲವಾಗಲು ಕೂಡ ನೀರಿನ ಕೊರತೆ ಪ್ರಮುಖ ಕಾರಣವಾಗಿದೆ.
ಎಲ್ಲ ವಯೋಮಾನದವರ ದೇಹದಲ್ಲೂ ಈ ನೀರಿನ ಅಭಾವತೆ ಕಾಡಬಹುದು. ಆದರೆ, ಈ ಲಕ್ಷಣ ವಿಭಿನ್ನವಾಗಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಕಡಿಮೆ ನೀರಿನ ಸೇವನೆಯಿಂದ ಗಂಟಲು, ಬಾಯಿ ಒಣಗಬಹುದು. ಅಳುವಾಗ ಕಣ್ಣೀರಿನ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ಕಡಿಮೆ ಮೂತ್ರದ ಸಮಸ್ಯೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಚಾಕೊಲೇಟ್ ಏಕೆ ತುಂಬಾ ಒಳ್ಳೆಯ ಸ್ವಾದ ನೀಡುತ್ತದೆ?: ಆರೋಗ್ಯಕರ ಚಾಕೊಲೇಟ್ ಅಭಿವೃದ್ದಿಗೆ ವಿಜ್ಞಾನಿಗಳ ಹೊಸ ಸಂಶೋಧನೆ