ETV Bharat / sukhibhava

ಸುರಕ್ಷಿತ ಪ್ರಯಾಣದ ವೇಳೆ ಅಪ್ಪಿ-ತಪ್ಪಿ ವಾಹನ ಸವಾರರು ಈ ತಪ್ಪುಗಳನ್ನು ಮಾಡಬೇಡಿ..

author img

By

Published : Nov 30, 2022, 12:30 PM IST

ರಸ್ತೆ ಪಯಣ ಮಾಡುವ ವೇಳೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಈ ಅಪಘಾತಗಳನ್ನು ಕಡಿಮೆ ಮಾಡಬಹುದು. ರಸ್ತೆ ಪ್ರಯಾಣದ ವೇಳೆ ಈ ಐದು ತಪ್ಪುಗಳನ್ನು ಮಾಡದಿರುವುದರಿಂದ ನಿಮ್ಮ ಪ್ರಯಾಣ ಸುಖಕರವಾಗುತ್ತದೆ.

ಸುರಕ್ಷಿತ ಪ್ರಯಣದ ವೇಳೆ ಅಪ್ಪಿ-ತಪ್ಪಿ ವಾಹನ ಸವಾರರು ಈ ತಪ್ಪುಗಳನ್ನು ಮಾಡಬೇಡಿ!

ಹೈದರಾಬಾದ್​: ಚಾಲಕರು ಮಾಡುವ ಸಣ್ಣ ತಪ್ಪುಗಳಿಂದಾಗಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತದ ಸಂಖ್ಯೆ ಏರಿಕೆ ಕಾಣುತ್ತಿದೆ. ರಸ್ತೆಯಲ್ಲಿ ಪಯಣ ಮಾಡುವ ವೇಳೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಈ ಅಪಘಾತಗಳನ್ನು ಕಡಿಮೆ ಮಾಡಬಹುದು. ರಸ್ತೆ ಪ್ರಯಾಣದ ವೇಳೆ ಈ ಐದು ತಪ್ಪುಗಳನ್ನು ಮಾಡದಿರುವುದರಿಂದ ನಿಮ್ಮ ಪ್ರಯಾಣ ಸುಖಕರವಾಗುತ್ತದೆ.

ಹಳದಿ ಲೈಟ್​ಬಂದಾಗ ವೇಗ ಬೇಡ.. ಬಹುತೇಕ ಮಂದಿ ಹಳದಿ ಲೈಟ್​ ಬಂದಾಕ್ಷಣ ಆಕ್ಸಲೇಟರ್​ ಅನ್ನು ಜೋರು ಮಾಡಿ ದಾಟಲು ಪ್ರಯತ್ನಿಸುತ್ತಾರೆ. ಆದರೆ, ಹಳದಿ ಲೈಟ್​ ಬಂದಾಕ್ಷಣ ಆಕ್ಸಿಲೇಟರ್ ನಿಧಾನಗೊಳಿಸಬೇಕು. ಹಳದಿ ಲೈಟ್​ ಕೆಂಪು ಲೈಟ್​ ಬರುವ ಸೂಚನೆ ನೀಡುವ ಹಿನ್ನೆಲೆ ತಕ್ಷಣಕ್ಕೆ ಸವಾರರು ಮುಂಜಾಗ್ರತೆ ವಹಿಸುವುದರಿಂದ ನಿಮಗೂ ಹಾಗೂ ನಿಮ್ಮ ಹತ್ತಿರದ ಇತರ ವಾಹನಗಳನ್ನು ಅಪಾಯದಿಂದ ತಪ್ಪಿಸಬಹುದಾಗಿದೆ.

ಕರೆ ಸ್ವೀಕಾರ ಬೇಡ.. ಎಷ್ಟೇ ಅಗತ್ಯವಿದ್ದರೂ ವಾಹನ ಚಾಲನೆ ವೇಳೆ ಮೊಬೈಲ್​ ಕರೆಗಳನ್ನು ಸ್ವೀಕರಿಸಬೇಡಿ. ಇದು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವುದಲ್ಲದೇ, ನಿಮ್ಮ ಡ್ರೈವಿಂಗ್​ ಟೆಕ್ನಿಕ್​ ಟ್ರ್ಯಾಕ್​​ ಮರೆತು ಅಪಘಾತಕ್ಕೆ ಕಾರಣವಾಗಬಹುದು.

ಸೈಡ್​ ಮಿರರ್​ ಬಗ್ಗೆ ನಿರ್ಲಕ್ಷ್ಯ ಬೇಡ.. ವಾಹನ ಚಾಲನೆ ವೇಳೆ ಮುಂದೆ ಗಮನಿಸುವಷ್ಟೇ ಅಕ್ಕ-ಪಕ್ಕ ಮತ್ತು ಹಿಂಭಾಗದ ಬಗ್ಗೆ ಕೂಡ ಗಮನವನ್ನು ಹೊಂದಿರಬೇಕು. ನಿಮ್ಮ ವಾಹನದ ಪಕ್ಕದಲ್ಲಿ ಅಥವಾ ಹಿಂದೆ ಯಾವ ವಾಹನಗಳು ಬರುತ್ತವೆ ಎಂಬುದನ್ನು ಸೈಡ್​ ಮಿರರ್​ ಮೂಲಕ ಅರಿಯಬಹುದು. ಇದರಿಂದ ನಿಮ್ಮ ಟ್ರ್ಯಾಕ್​ನಲ್ಲಿ ನೀವು ಸುರಕ್ಷಿತವಾಗಿ ಹೋಗಬಹುದು.

ಇಂಡಿಕೇಟರ್​ ಇಲ್ಲದೆ ವಾಹನ ತಿರುಗಿಸಬೇಡಿ.. ರಸ್ತೆಯಲ್ಲಿ ಕೆಲವೊಮ್ಮೆ ತಿರುವುಗಳನ್ನು ಪಡೆಯುವುದು ಸಾಮಾನ್ಯ. ಆದರೆ, ಈ ತಿರುವು ನೀಡುವ ಮುನ್ನ ನಿಮ್ಮ ಹಿಂದಿನ ವಾಹನ ಸವಾರರ ಸುರಕ್ಷಿತ ಪಯಣಕ್ಕೆ ಅನುಕೂಲವಾಗುವಂತೆ ಇಂಡಿಕೇಟರ್ ಬಳಸಿ. ಏಕಾಏಕಿ ನೀವು ತಿರುವ ತೆಗೆದುಕೊಂಡರೆ ಹಿಂದಿನ ವಾಹನಗಳ ನಡುವೆ ಸರಣಿ ಅಪಘಾತವಾಗುವ ಸಾಧ್ಯತೆ ಕೂಡ ಕಡಿಮೆ ಇಲ್ಲ.

ಬ್ರೇಕ್​ ಜೊತೆ ಆಕ್ಸಿಲೇಟರ್​ ​ಬೇಡ.. ರಸ್ತೆ ಪಯಣದ ವೇಳೆ ಒಂದು ಕಾಲು ಆಕ್ಸಿಲೇಟರ್​ ಮತ್ತೊಂದು ಬ್ರೇಕ್​ ಮೇಲೆ ಇರುವುದು ಸಾಮಾನ್ಯ. ಆದರೆ ಇವೆರಡನ್ನು ಏಕಕಾಲದಲ್ಲಿ ಒಟ್ಟಿಗೆ ತುಳಿಯುವುದರಿಂದ ನಿಮ್ಮ ವಾಹನ ಜರ್ಕ್​ ಆಗುವ ಸಾಧ್ಯತೆ ಇದೆ. ಒಂದೇ ಸಲ ನೀವು ಬ್ರೇಕ್​ ಒತ್ತಿದಾಗ ಹಿಂದಿನ ಸವಾರರಿಗೂ ಕೂಡ ಕಷ್ಟವಾಗುತ್ತದೆ. ಕಾರನ್ನು ಏಕಾಏಕಿ ನಿಲ್ಲಿಸುವುದು ಸರಣಿ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ರೇಸಿಂಗ್ ಕಾರು ತಯಾರಿಸಿದ ಮದ್ರಾಸ್ ಐಐಟಿ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.