ETV Bharat / sukhibhava

ತೂಕ ಕಡಿಮೆ ಮಾಡಿಕೊಳ್ಳುವ ಮಹಿಳೆಯರಲ್ಲಿ ಗರ್ಭದ ಫಲವತ್ತತೆ ಹೆಚ್ಚಾಗುತ್ತಾ..? - ಮಹಿಳೆಯರಲ್ಲಿ ಗರ್ಭದ ಫಲವತ್ತತೆ ಕಡಿಮೆಯಾಗಲು ಕಾರಣಗಳೇನು

ತೂಕ ನಷ್ಟ ಕಾರ್ಯಕ್ರಮ ಪೂರ್ಣಗೊಳಿಸಿದ 188 ಮಹಿಳೆಯರಲ್ಲಿ 23 ಮಂದಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ವ್ಯಾಯಾಮ ಮಾತ್ರದ ಕಾರ್ಯಕ್ರಮ ಪೂರ್ಣಗೊಳಿಸಿದ 191 ಮಂದಿಯಲ್ಲಿ 29 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅತಿಯಾದ ತೂಕ ಅಥವಾ ಕಡಿಮೆ ತೂಕ ಎರಡೂ ಬಂಜೆತನಕ್ಕೆ ಕಾರಣವಾಗಬಹುದೇ ಎಂಬುದರ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

Does weight loss increase fertility chances?
ತೂಕ ಕಡಿಮೆ ಮಾಡಿಕೊಳ್ಳುವ ಮಹಿಳೆಯರಲ್ಲಿ ಗರ್ಭದ ಫಲವತ್ತತೆ ಹೆಚ್ಚಾಗುತ್ತಾ..?
author img

By

Published : Mar 16, 2022, 1:13 PM IST

ಹೈದರಾಬಾದ್‌: ಮಹಿಳೆಯರಲ್ಲಿ ಸ್ಥೂಲಕಾಯತೆ ಮಧುಮೇಹ ಸೇರಿದಂತೆ ಇತರ ಕಾಯಿಲೆಗಳನ್ನು ಆಹ್ವಾನಿಸುವುದರ ಜೊತೆಗೆ ಗರ್ಭ ಧರಿಸಲು ಅಡ್ಡಿಯುಂಟು ಮಾಡುತ್ತದೆ. ಕಡಿಮೆ ತೂಕ ಹೊಂದಿದ್ದರೂ ಕೆಲವೊಮ್ಮೆ ಗರ್ಭ ಧರಿಸಲು ಆಗುವುದಿಲ್ಲ. ಆದ್ದರಿಂದ ಅತಿಯಾದ ತೂಕ ಅಥವಾ ಕಡಿಮೆ ತೂಕ ಎರಡೂ ಬಂಜೆತನಕ್ಕೆ ಕಾರಣವಾಗಬಹುದು.

ಸ್ಥೂಲಕಾಯತೆ ಮತ್ತು ಬಂಜೆತನ ಹೊಂದಿರುವ 379 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ತೀವ್ರವಾದ ಜೀವನಶೈಲಿಯಲ್ಲಿನ ಬದಲಾವಣೆ ಹಾಗೂ ತೂಕ ಹೆಚ್ಚಿರುವುದು ಗರ್ಭಧಾರಣೆ ಮತ್ತು ಆರೋಗ್ಯಕರ ಜನನದ ಉತ್ತಮ ಅವಕಾಶಗಳಿಗೆ ಅಡ್ಡಿಯಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದು ವರ್ಜೀನಿಯಾ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸೆಂಟರ್ ಫಾರ್ ರಿಸರ್ಚ್ ಇನ್ ರಿಪ್ರೊಡಕ್ಷನ್‌ನ ಸಂಶೋಧಕ ಡೇನಿಯಲ್ ಜೆ ಹೈಸೆನ್‌ಲೆಡರ್ ಹೇಳಿದ್ದಾರೆ.

ಸ್ಥೂಲಕಾಯದ ಮಹಿಳೆಯರು ಸಾಮಾನ್ಯವಾಗಿ ಗರ್ಭಿಣಿಯಾಗಲು ಕಷ್ಟಪಡುತ್ತಾರೆ ಎಂದು ನಾವು ದಶಕಗಳಿಂದ ತಿಳಿದಿದ್ದೇವೆ. ಈ ಕಾರಣಕ್ಕಾಗಿ ಅನೇಕ ವೈದ್ಯರು ಗರ್ಭಧಾರಣೆಗೂ ಮುನ್ನ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಫಿಟ್‌ ಪ್ಲೀಸ್‌ ಎಂಬ ಸಂಸ್ಥೆ ದೇಶದಾದ್ಯಂತ 9 ಶೈಕ್ಷಣಿಕ ವೈದ್ಯಕೀಯ ಕೇಂದ್ರಗಳಲ್ಲಿ ಸಂಶೋಧನೆ ನಡೆಸಿದೆ. ಇದರಲ್ಲಿ ಭಾಗವಹಿಸಿದ್ದವರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಅರ್ಧದಷ್ಟು ಮಹಿಳೆಯರು ಊಟದ ಬದಲಿಗೆ ಔಷಧಗಳು, ಹೆಚ್ಚಿದ ದೈಹಿಕ ಚಟುವಟಿಕೆಯನ್ನು ಬಳಸಿಕೊಂಡು ತೀವ್ರವಾಗಿ ಪಥ್ಯದಲ್ಲಿರುತ್ತಾರೆ.

ಉಳಿದ ಅರ್ಧದಷ್ಟು ಜನರು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸದೇ ತಮ್ಮ ದೈಹಿಕ ಚಟುವಟಿಕೆ ಹೆಚ್ಚಿಸಿಕೊಳ್ಳುತ್ತಾರೆ. ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಎರಡೂ ಗುಂಪುಗಳು ಮೂರು ಸುತ್ತಿನ ಪ್ರಮಾಣಿತ ಬಂಜೆತನ ಚಿಕಿತ್ಸೆಗಳನ್ನು ಸ್ವೀಕರಿಸಿದ್ದಾರೆ. ತೂಕ ನಷ್ಟ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ದೇಹದ ತೂಕದ ಸರಾಸರಿ ಶೇ.7ರಷ್ಟು ಕಳೆದುಕೊಳ್ಳುತ್ತಾರೆ. ಆದರೆ, ಕೊನೆಯಲ್ಲಿ, ಆರೋಗ್ಯಕರ ಜನನ ಆವರ್ತನದ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸಗಳಿಲ್ಲ.

ಒಟ್ಟಾರೆಯಾಗಿ, 16 ವಾರಗಳ ತೀವ್ರ ತೂಕ ನಷ್ಟ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ 188 ಮಹಿಳೆಯರಲ್ಲಿ 23 ಮಂದಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ವ್ಯಾಯಾಮ ಮಾತ್ರದ ಕಾರ್ಯಕ್ರಮ ಪೂರ್ಣಗೊಳಿಸಿದ 191 ಮಂದಿಯಲ್ಲಿ 29 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತೀವ್ರವಾದ ಆಹಾರ ಕ್ರಮದ ಕಾರ್ಯಕ್ರಮ ಪೂರ್ಣಗೊಳಿಸಿದ ಮಹಿಳೆಯರು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದಾರೆ. ಜೊತೆಗೆ ಮೆಟಾಬಾಲಿಕ್ ಸಿಂಡ್ರೋಮ್‌ನಲ್ಲಿ ಪ್ರಮುಖ ಇಳಿಕೆಯನ್ನು ಕಂಡಿದ್ದಾರೆ.

ಗುಪ್ತ ಬಂಜೆತನದ ಸಂಭವನೀಯ ಕಾರಣಗಳು ಯಾವುವು?: ಕ್ಲೌಡ್ ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಫರ್ಟಿಲಿಟಿ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಶ್ವೇತಾ ಗೋಸ್ವಾಮಿ ಬಂಜೆತನಕ್ಕೆ ಏನು ಕಾರಣ ಎಂಬುದರ ಬಗ್ಗೆ ಕೆಲವು ಅಂಶಗಳನ್ನು ಇಲ್ಲಿ ವಿವರಿಸಿದ್ದಾರೆ.

ಕಳಪೆ ಮೊಟ್ಟೆಯ ಗುಣಮಟ್ಟ

  • ಎಎಂಹೆಚ್‌ ಅಥವಾ ಆಂಟಿ-ಮುಲ್ಲೆರಿಯನ್ ಹಾರ್ಮೋನ್ ಪರೀಕ್ಷೆಯನ್ನು ನಡೆಸುವ ಮೂಲಕ ಇದನ್ನು ನಿರ್ಧರಿಸಬಹುದು. ಎಎಂಹೆಚ್‌ ಹಾರ್ಮೋನ್ ಅಂಡಾಶಯದ ಕಿರುಚೀಲಗಳಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ. ಮೊಟ್ಟೆಯ ಪ್ರಮಾಣವನ್ನು ಗುರುತಿಸುವಂತೆ ಕಾರ್ಯವನ್ನು ಇದು ನಿರ್ವಹಿಸುತ್ತದೆ.
  • ಮಹಿಳೆಯು ಸಂಪೂರ್ಣವಾಗಿ ಆರೋಗ್ಯವಾಗಿರಲು ಸಾಧ್ಯವಿದೆ. ಆದರೆ ಎಎಂಹೆಚ್‌ ಪರೀಕ್ಷೆಯಲ್ಲಿ ದುರ್ಬಲ ಫಲಿತಾಂಶವನ್ನು ಹೊಂದಿರುತ್ತಾರೆ. ಫಲಿತಾಂಶವು ಸಾಮಾನ್ಯವಾಗಿದ್ದರೂ ಮಹಿಳೆಯರು ಮೊಟ್ಟೆಯ ಗುಣಮಟ್ಟ ಕಡಿಮೆಗೊಳಿಸಬಹುದು. ಸೀಮಿತ ಮೂಲಭೂತ ಪರೀಕ್ಷೆಗಳು ಮಾತ್ರ ಲಭ್ಯವಿರುವುದರಿಂದ ಅದನ್ನು ನಿರ್ಧರಿಸುವುದು ತುಂಬಾ ಕಷ್ಟ.
  • ನಿಷ್ಕ್ರಿಯ ಫಾಲೋಪಿಯನ್ ಟ್ಯೂಬ್‌ಗಳು ಸೋನೋಸಲ್ಪಿಂಗೋಗ್ರಫಿ (ಎಸ್‌ಎಸ್‌ಜಿ) ಮತ್ತು ಹಿಸ್ಟರೋಸಲ್ಪಿಂಗೋಗ್ರಫಿ (ಎಚ್‌ಎಸ್‌ಜಿ) ನಂತಹ ಪರೀಕ್ಷೆಗಳು ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಯಾವುದೇ ರೀತಿಯ ಅಡಚಣೆ ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಆದರೆ, ಫಾಲೋಪಿಯನ್ ಟ್ಯೂಬ್‌ಗಳು ಸಾಮಾನ್ಯವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆಯೇ ಎಂದು ನಿರ್ಧರಿಸಲು ಸಹಾಯ ಮಾಡುವ ಯಾವುದೇ ಪರೀಕ್ಷೆಗಳಿಲ್ಲ.
  • ಸಾಮಾನ್ಯ ಹೆಚ್‌ಎಸ್‌ಜಿ ಮತ್ತು ಎಸ್‌ಎಸ್‌ಜಿ ವರದಿಗಳನ್ನು ಹೊಂದಿದ್ದರೂ ಸಹ ಕ್ರಿಯಾತ್ಮಕ ಅಸಹಜತೆಗಳನ್ನು ಹೊಂದಲು ಸಾಧ್ಯವಿದೆ. ಈ ಸಂದರ್ಭದಲ್ಲಿ, ಮೊಟ್ಟೆಯು ಟ್ಯೂಬ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿದಿಲ್ಲ. ಇದು ಅಲ್ಟ್ರಾಸೌಂಡ್ ಅಥವಾ ಯಾವುದೇ ಇತರ ಇಮೇಜಿಂಗ್ ವಿಧಾನವು ಪ್ರವೇಶಿಸಲು ಸಾಧ್ಯವಾಗದ ಸಂಗತಿಯಾಗಿದೆ.
  • ವೀರ್ಯ ದೋಷಗಳು ವೀರ್ಯದ ಗುಣಮಟ್ಟ, ಪ್ರಮಾಣ ಮತ್ತು ಚಲನಶೀಲತೆಯಂತಹ ಇತರ ವೀರ್ಯ ನಿಯತಾಂಕಗಳು ಸಾಮಾನ್ಯವಾಗಿದ್ದರೂ, ವೀರ್ಯವು ಮೊಟ್ಟೆಯನ್ನು ಚೆನ್ನಾಗಿ ಫಲವತ್ತಾಗಿಸಲು ಸಾಧ್ಯವಾಗುವುದಿಲ್ಲ ಅಥವಾ ಸಾಮಾನ್ಯ ಫಲೀಕರಣವನ್ನು ತಡೆಯುವ ವೀರ್ಯದ ಡಿಎನ್‌ಎ ಹಾನಿಯಾಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.