ETV Bharat / sukhibhava

ಹೊಸ ತಂತ್ರಜ್ಞಾನದ ಮೂಲಕ ಪಿತ್ತಕೋಶದಲ್ಲಿದ್ದ 630 ಕಲ್ಲುಗಳನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು!

author img

By

Published : Jul 13, 2023, 4:09 PM IST

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಬರೋಬ್ಬರಿ 630 ಕಲ್ಲುಗಳನ್ನು ಹೊರತೆಗೆದಿದ್ದು, ಇದೊಂದು ದೊಡ್ಡ ಸಾಧನೆಯೇ ಆಗಿದೆ.

doctors-surgically-removed-630-gallstones-using-new-technology

ಅಹಮದಬಾದ್​: ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 630 ಕಲ್ಲುಗಳನ್ನು ಅಹಮದಬಾದ್​ನ ಖಾಸಗಿ ಆಸ್ಪತ್ರೆ ವೈದ್ಯರು, ಆಧುನಿಕ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತೆಗೆದು ಹಾಕಿದ್ದಾರೆ. ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷೆ ನಡೆಸಿದ ವೈದ್ಯರಿಗೆ ವ್ಯಕ್ತಿಯ ದೇಹದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ಈ ವೇಳೆ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಬರೋಬ್ಬರಿ 630 ಕಲ್ಲುಗಳನ್ನು ಹೊರತೆಗೆದಿದ್ದು, ಇದೊಂದು ದೊಡ್ಡ ಸಾಧನೆಯೇ ಆಗಿದೆ.

ಏನಿದು ಘಟನೆ: ವ್ಯಕ್ತಿಯೊಬ್ಬ ಸಿಕಲ್​ ಸೆಲ್​ ಮತ್ತು ಪಿತ್ತ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದ. ಈ ವ್ಯಕ್ತಿಯಲ್ಲಿ ಜಾಂಡೀಸ್​ ಕೂಡ ಪತ್ತೆಯಾಗಿತ್ತು. ಈ ವೇಳೆ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಪಿತ್ತ ಕೋಶದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ. ಇದರಿಂದಾಗಿ ಆತನ ಪಿತ್ತರಸದ ಹರಿವಿಗೆ ಅಡೆತಡೆ ಉಂಟಾಗಿದೆ.

ಈ ವ್ಯಕ್ತಿಯ ದೇಹದಲ್ಲಿ ಕಲ್ಲುಗಳನ್ನು ತೆಗೆಯುವುದಕ್ಕಾಗಿ ವೈದ್ಯರು ಎಂಡೋಸ್ಕೋಪಿಕ್ ರೆಟ್ರೋಗ್ರೇಡ್ ಕೋಲಾಂಜಿಯೋಪಾಂಕ್ರಿಯಾಟೋಗ್ರಫಿ ಚಿಕಿತ್ಸೆಯನ್ನು ಬಳಕೆ ಮಾಡಿ, ಅನುಭವಿ ವೈದ್ಯರ ತಂಡ ಸುಧಾರಿತ ತಂತ್ರಜ್ಞಾನದ ಮೂಲಕ ಈ ಚಿಕಿತ್ಸೆ ನಡೆಸಿದೆ. ಖಾಸಗಿ ಆಸ್ಪತ್ರೆ ವೈದ್ಯರು ಈ ಇಆರ್​ಸಿಬಿ ಬಳಿಕ ಲ್ಯಾಪ್ರೋಸ್ಕೋಪಿಕ್​ ಕೊಲೆಸೆಕ್ಟೋಮಿ ತಂತ್ರಜ್ಞಾನವನ್ನು ಬಳಕೆ ಮಾಡಿ ಶಸ್ತ್ರಚಿಕಿತ್ಸೆ ನಡೆಸಿ, ಕಲ್ಲುಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಯುಷ್​​​​​​ಮಾನ್​ ಭಾರತ್​ ಯೋಜನೆಯಿಂದ ಪ್ರಯೋಜನ: ಇನ್ನು ಈ ರೋಗಿಗಳ ಹೆಚ್ಚಿನ ಪರೀಕ್ಷೆಗಳನ್ನು ಸೂರತ್‌ನಲ್ಲಿ ನಡೆಸಲಾಗಿದೆ. ಇದರ ವೈದ್ಯಕೀಯ ವೆಚ್ಚವನ್ನು ಚಾರಿಟಬಲ್ ಖಾನ್ಹಿ ಆಸ್ಪತ್ರೆ ಭರಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಕಾರ್ಯಾಚರಣೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ರೋಗಿಗೆ ಯಾವುದೇ ರೀತಿಯ ಹೊರೆಯಾಗದಂತೆ ಅಗತ್ಯ ಆರೈಕೆ ಸಿಗುವಂತೆ ನೋಡಿಕೊಳ್ಳಲಾಗಿದೆ.

ಏನಿದು ಪಿತ್ತಕೋಶದ ಕಲ್ಲು: ಪಿತ್ತ ಕೋಶದ ಕಿಬ್ಬೊಟ್ಟೆಯಲ್ಲಿ ಬಲಭಾಗದಲ್ಲಿ ಇದು ಉಂಟಾಗುತ್ತದೆ. ಇದು ಪಿತ್ತ ರಸದ ಜೀರ್ಣಕಾರಿ ದ್ರವವನ್ನು ಇದು ತಡೆ ಹಿಡಿಯುತ್ತದೆ. ಇಲ್ಲಿ ಸಣ್ಣ ಮತ್ತು ಗಾಲ್ಫ್​​ ಬಾಲ್​ ಮಾದರಿಯ ಕಲ್ಲುಗಳು ಶೇಖರಣೆ ಆಗುತ್ತವೆ. ಕೆಲವರಲ್ಲಿ ಒಂದು ಅಥವಾ ಎರಡು ರೀತಿಯ ಕಲ್ಲುಗಳು ಶೇಖರಣೆ ಆದರೆ, ಮತ್ತೆ ಕೆಲವರಲ್ಲಿ ಹೆಚ್ಚಿನ ಪ್ರಮಾಣದ ಕಲ್ಲು ಶೇಖರಣೆ ಆಗುತ್ತದೆ. ಸಣ್ಣ ಪ್ರಮಾಣದ ಗಾಲ್ಫ್​​ ಕಲ್ಲುಗಳು ಅನೇಕ ಬಾರಿ ಯಾವುದೇ ಗುಣ ಲಕ್ಷಣಗಳನ್ನು ತೋರುವುದಿಲ್ಲ.

ಇದರಿಂದ ಆಗುವ ಗಂಭೀರ ಸಮಸ್ಯೆಗಳು; ಸಣ್ಣ ಪ್ರಮಾಣದ ಕಲ್ಲುಗಳು ಯಾವುದೇ ರೀತಿಯ ಹೆಚ್ಚಿನ ಪರಿಣಾಮ ಬೀರದೇ ಹೋದರೂ, ದೊಡ್ಡ ಪ್ರಮಾಣದ ಕಲ್ಲುಗಳು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆ ಬಲಭಾಗದಲ್ಲಿ ಅಸಹನೀಯ ನೋವು ಕಂಡು ಬರುತ್ತದೆ. ಎದೆಯ ಕೆಳಭಾಗದಲ್ಲಿ ತತ್​​ಕ್ಷಣದ ಮತ್ತು ತೀವ್ರವಾದ ನೋವು ಕಾಣುತ್ತದೆ. ತಲೆ ತಿರುಗುವಿಕೆ ಮತ್ತು ವಾಂತಿ ಆಗಬಹುದು.

ಈ ರೀತಿ ಅಸಹನೀಯ ನೋವುಗಳು ಕಂಡು ಬಂದರೆ, ಚರ್ಮ ಮತ್ತು ಕಣ್ಣು ನೀಲಿ ಬಣ್ಣಕ್ಕೆ ತಿರುಗಿದರೆ, ಅಧಿಕ ಜ್ವರದಿಂದ ಬಳಲುತ್ತಿದ್ದರೆ, ತಕ್ಷಣಕ್ಕೆ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Pink Eye: ಮಳೆಗಾಲದಲ್ಲಿ ಹೆಚ್ಚಾಗ್ತಿದೆ ಗುಲಾಬಿ ಕಣ್ಣಿನ ಸಮಸ್ಯೆ; ಏನಿದರ ಲಕ್ಷಣ? ಪರಿಹಾರ ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.