ಇಂದು ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ಒಣ ತ್ವಚೆ. ನಿಮ್ಮ ತ್ವಚೆ ನೈಸರ್ಗಿಕವಾಗಿ ಒಣಾಂಶವನ್ನು ಹೊಂದಿಲ್ಲದಿದ್ದರೂ, ಇಂದು ಎಲ್ಲ ವಿಧದ ತ್ವಚೆ ಹೊಂದಿರುವವರು ಈ ಶುಷ್ಕತೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಾಲಿನ್ಯ, ಸೌಂದರ್ಯವರ್ಧಕಗಳಲ್ಲಿ ಬಳಸುವ ರಾಸಾಯನಿಕ, ಸೌಂದರ್ಯ ಚಿಕಿತ್ಸೆ, ವಯಸ್ಸಾಗುವಿಕೆ ಸೇರಿದಂತೆ ಹಲವು ಸಮಸ್ಯೆ.
ಈ ಶುಷ್ಕತೆ ದೀರ್ಘಾವಧಿಯಲ್ಲಿ ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದ ತಜ್ಞರು ತಿಳಿಸುತ್ತಾರೆ. ಈ ಹಿನ್ನೆಲೆ ತ್ವಚೆಗೆ ಮಾಶ್ಚರೈಸರ್ ಅಗತ್ಯವಾಗಿದೆ. ಒಂದು ವೇಳೆ ನೋವು ಒಣ ತ್ವಚೆ ಸಮಸ್ಯೆ ಅನುಭವಿಸುತ್ತಿಲ್ಲ ಎಂದರೂ ಮಾಶ್ವರೈಸರ್ ಪ್ರಮುಖವಾಗಿದೆ. ಈ ಉದ್ದೇಶಕ್ಕಾಗಿ 'ಸ್ಕಿನ್ ಫ್ಲೋಡಿಂಗ್' ಪ್ರಕ್ರಿಯೆಯು ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಸ್ಕಿನ್ ಪ್ಲೋಡಿಂಗ್ ಎಂದಾಕ್ಷಣ ಏನಿದು? ಇದು ತ್ವಚೆಗೆ ಯಾವ ರೀತಿ ಆರೈಕೆ ನೀಡುತ್ತದೆ? ಇದರಿಂದ ಆಗುವ ಲಾಭ ಏನು? ಎಂಬ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಅದಕ್ಕೆಲ್ಲಾ ಇಲ್ಲಿದೆ ಉತ್ತರ.
ಸ್ಕಿನ್ ಫ್ಲೋಡಿಂಗ್ ಎಂದರೇನು?: ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ನಾವು ನಿರ್ಜಲೀಕರಣವನ್ನು ಅನುಭವಿಸುತ್ತೇವೆ. ಇದು ನಮ್ಮ ತ್ವಚೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ಕೇವಲ ಇದು ಮಾತ್ರವಲ್ಲದೇ, ತಾಪಮಾನ, ವಾಯು ಮಾಲಿನ್ಯ. ವಯಸ್ಸಾಗುವಿಕೆ, ಮೆನೊಪಸ್, ಸೌಂದರ್ಯವರ್ದಕದ ರಾಸಾಯನಿಕಗಳು ಸೇರಿದಂತೆ ಹಲವು ಪಾತ್ರವನ್ನು ವಹಿಸುತ್ತದೆ. ಇದು ಅನೇಕರಲ್ಲಿ ಒಣ ತ್ವಚೆಗೆ ಕಾರಣವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಹೆಚ್ಚು ನೀರು ಕುಡಿಯುವಂತೆ ಮತ್ತು ಮಾಶ್ಚರೈಸರ್ ಬಳಕೆ ಮಾಡುವಂತೆ ಸಲಹೆ ಮಾಡುವ ಮೂಲಕ ತ್ವಚೆಯ ರೀ ಮಾಶ್ಚರೈಸರ್ ಸಲಹೆ ನೀಡಬಹುದು. ತಜ್ಞರು ಹೇಳುವಂತೆ ಸ್ಕಿನ್ ಫ್ಲೋಡಿಂಗ್ ಕೂಡ ಇದೇ ರೀತಿ ಪ್ರಕ್ರಿಯೆಯನ್ನು ಹೊಂದಿದೆ. ಈ ವಿಧಾನದ ಪ್ರಮುಖ ಉದ್ದೇಶ ತ್ವಚೆಗೆ ಮಾಶ್ಚರೈಸ್ ಮಾಡುವುದು. ರಾಸಾಯನಿಕವಲ್ಲದ ವಿಶೇಷ ಕಾಸ್ಮೆಟಿಕ್ ಉತ್ಪನ್ನವನ್ನು ಬಳಕೆ ವಿವಿಧ ಹಂತದ ಮಾಡುವ ಮೂಲಕ ಇದನ್ನು ಮಾಡಬಹುದು.
ಸ್ಕಿನ್ ಫ್ಲೋಡಿಂಗ್ನಲ್ಲಿ ವಿಶೇಷವಾಗಿ ನಾಲ್ಕು ಹಂತ ಇದೆ. ಈ ಹಂತದ ಮೂಲಕ ತ್ವಚೆಯ ಆರ್ದ್ರತೆ ಕಾಪಾಡಬಹುದು.
ಕ್ಲೆನ್ಸಿಂಗ್: ತ್ವಚೆಯ ಆರೈಕೆಯಲ್ಲಿ ಕ್ಲೆನ್ಸಿಂಗ್ ಅಗತ್ಯವಾಗಿದೆ. ಆದರೆ, ಇಲ್ಲಿ ನಿಮ್ಮ ತ್ವಚೆಗೆ ಮುದುವಾದ ಕ್ಲೆನ್ಸರ್ ಬಳಕೆ ಮಾಡಬೇಕು. ಫಲಿತಾಂಶವಾಗಿ ನೈಸರ್ಗಿಕ ಎಣ್ಣೆ ಚರ್ಮದಿಂದ ತೆಗೆಯಲಾಗುತ್ತದೆಯೇ ಹೊರತು ತೊಡೆದು ಹಾಕುವುದಿಲ್ಲ. ಇದು ಮಾಶ್ಚರೈಸರ್ ಅನ್ನು ಹಿಡಿದಿಡಲು ಅವಶ್ಯಕ. ಬೆಳಗಿನ ಹೊತ್ತು ನೀವು ಕ್ಲೆನ್ಸರ್ ಬಳಕೆ ಮಾಡದೇ ಬರೀ ನೀರಿನಿಂದ ಮುಖವನ್ನು ತೊಳೆಯಬಹುದು.
ಟೊನಿಂಗ್: ಕ್ಲೆನ್ಸಿಂಗ್ ಬಳಿಕ ಮುಖವನ್ನು ಟವೆಲ್ ಸಹಾಯದಿಂದ ಮೃದುವಾಗಿ ಒತ್ತಿ ತೇವಾಂಶ ತೆಗೆಯಿರಿ. ಆಗ ಮುಖದಲ್ಲಿ ಮಾಶ್ಚರೈಸರ್ ಹಾಗೇ ಉಳಿಯುತ್ತದೆ. ಇದೇ ಸಮಯದಲ್ಲಿ ಮುಖಕ್ಕೆ ಟೊನರ್ ಅಥವಾ ಫೇಶಿಯಲ್ ಮಿಸ್ಟ್ ಅನ್ನು ಹಚ್ಚಿ. ಟೋನಿಂಗ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಚರ್ಮದಲ್ಲಿ ತೇವಾಂಶ ನಷ್ಟವಾಗದಂತೆ ಕಾಪಾಡುತ್ತದೆ.
ಹೈಡ್ರೇಟ್: ಫೇಶಿಯಲ್ ಮಿಸ್ಟ್ ಅನ್ನು ಬಳಕೆ ಮಾಡಿದ ಬಳಿಕ ತ್ವಚೆಯೂ ಸ್ವಲ್ವ ಒಣಗುತ್ತದೆ. ಈ ವೇಳೆ ನೀವು ವಾಟರ್ ಬೇಸ್ಡ್ ಮಾಶ್ಚರೈಸರ್ ಅನ್ನು ಹಚ್ಚಬೇಕು. ಈ ಪ್ರಕ್ರಿಯೆಯಲ್ಲಿ ಎರಡರಿಂದ ಮೂರು ಡ್ರಾಪ್ ಸೆರಂ ಅನ್ನು ಮುಖದ ಮೇಲೆ ಹಚ್ಚಿ ನಿಧಾನವಾಗಿ ಅದನ್ನು ಸವರಿ. ಇದು ತ್ವಚೆಯ ಪದರದಲ್ಲಿ ಮಾಶ್ಚರೈಸರ್ ಅಂಶವನ್ನು ಹಿಡಿದಿಟ್ಟು, ಮೃದುತ್ವನ್ನು ನಿಮಗೆ ನೀಡುತ್ತದೆ.
ಮಾಶ್ವರೈಸಿಂಗ್: ಅಂತಿಮವಾಗಿ ತ್ವಚೆಗೆ ಮಾಶ್ಚರೈಸರ್ ಅನ್ನು ಹಚ್ಚಿ. ಶಿಯಾ ಬಟರ್ ಮತ್ತು ವಿಟಮಿನ್ ಇ ಯಿಂದ ಮಾಡಿದ ಮಾಶ್ಚರೈಸರ್ ಅನ್ನು ಹಚ್ಚಿದರೆ ಉತ್ತಮ. ಅಥವಾ ತೆಂಗಿನ ಎಣ್ಣೆ, ಓಟ್ಮೀಲ್ -ಹನಿ ಮಾಸ್ಕ್, ಆಲಿವ್ ಆಯಿಲ್ಗಳಿಂದ ಕೂಡಿದ ನೈಸರ್ಗಿಕ ಉತ್ಪನ್ನಗಳ ಮಾಶ್ಚರೈಸರ್ ಬಳಕೆ ಮಾಡಬಹುದು. ಇದು ತ್ವೆಯಲ್ಲಿನ ಮಾಶ್ಚರೈಸನ್ನು ಕಾಪಾಡುವ ಕೊತೆಗೆ ಒಣ ತ್ವಚೆ ಸಮಸ್ಯೆಗೆ ಮುಕ್ತಿ ಹಾಡುತ್ತದೆ.
ಸೂಚನೆ: ( ಇದು ಸಾಮಾನ್ಯ ಮಾಹಿತಿಯಾಗಿದ್ದು, ಹೆಚ್ಚಿನ ವಿವರಗಳಿಗಾಗಿ ತಜ್ಞ ವೈದ್ಯರನ್ನ ಭೇಟಿ ಮಾಡಿ)
ಇದನ್ನೂ ಓದಿ: ಪದೇ ಪದೆ ಉಗುರು ತುಂಡಾಗುತ್ತದೆಯೇ, ಹೀಗೆ ಮಾಡಿ ಸಾಕು...