ETV Bharat / sukhibhava

ಹಾಲುಣಿಸುವ ತಾಯಂದಿರ ಆಹಾರ ಪದ್ಧತಿ ಹೇಗಿರಬೇಕು ?

ಸ್ತನ್ಯಪಾನ , ಭೂಮಿಗೆ ಬಂದ ಮಗುವಿಗೆ ಸಿಗುವ ಮೊದಲ ಆಹಾರ. ಗಟ್ಟಿ ಪದಾರ್ಥಗಳನ್ನು ಮತ್ತು ಘನಾಹಾರಗಳನ್ನು ಸೇವಿಸಲು ಸಾಧ್ಯವಾಗದಂತಹ ಪುಟ್ಟ ಕಂದನಿಗೆ ತಾಯಿಯ ಎದೆಹಾಲು ಶ್ರೇಷ್ಠವಾದ ಅಮೃತ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಎದೆಹಾಲು ಮಗುವಿಗೆ ರಕ್ಷಾಕವಚದಂತೆ.

ಸ್ತನಪಾನ ಮಾಡುವ ತಾಯಂದಿರ ಆಹಾರ ಪದ್ಧತಿ
ಸ್ತನಪಾನ ಮಾಡುವ ತಾಯಂದಿರ ಆಹಾರ ಪದ್ಧತಿ
author img

By

Published : Sep 3, 2020, 9:20 PM IST

ಎದೆಹಾಲಿನಲ್ಲಿ ಪ್ರೊಟೀನ್ , ಕಾರ್ಬೊಹೈಡ್ರೇಡ್ , ವಿಟಮಿನ್​ಗಳು ಇವೆ . ಮಗುವಿನ ಮಾನಸಿಕ , ದೈಹಿಕ ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಇದು ಬಹಳಷ್ಟು ಸಹಕಾರಿಯಾಗಿದೆ. ಮಗುವಿನ ಹೊಟ್ಟೆ ಹಸಿವನ್ನು ನೀಗಿಸಲು ಮತ್ತು ಮಗುವಿಗೆ ಶಕ್ತಿ ಒದಗಿಸಲು ಅಗತ್ಯವಾದಷ್ಟು ಹಾಲನ್ನು ತಾಯಿ ತನ್ನಲ್ಲಿ ಉತ್ಪತ್ತಿ ಮಾಡಲೇಬೇಕು . ಇಲ್ಲವೆಂದರೆ ಮಗು ಶಕ್ತಿ ಹೀನವಾಗಿ ಅದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಂದು ಹೋಗಿ ಮಗು ನಾನಾ ರೋಗಗಳಿಗೆ ತುತ್ತಾಗುತ್ತದೆ. ಹಾಗಾಗಿ ತಾಯಿಯಾದವಳು ಹಾಲನ್ನು ಹೆಚ್ಚಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗಿದೆ.

ಹೈದರಾಬಾದ್‌ನ ಎಎಮ್‌ಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ರಾಜ್ಯಲಕ್ಷ್ಮಿ ಮಾಧವಂ ಅವರು ಕೆಲವು ಆಹಾರ ಪದಾರ್ಥಗಳನ್ನು ಸೂಚಿಸಿದ್ದಾರೆ. “ಗರ್ಭಾವಸ್ಥೆಯಲ್ಲಿ ಇರುವಾಗ ಹಾಲು, ತುಪ್ಪ ಮತ್ತು ಬೆಣ್ಣೆಯಿಂದ ಕೂಡಿದ ಆಹಾರವನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಹಾಲುಣಿಸುವಿಕೆಗೆ ಕಾರಣವಾಗಿರುವ ರಾಸಾತುವನ್ನು ಪೋಷಿಸಲು ಇವು ಸಹಾಯ ಮಾಡುತ್ತವೆ. ಬಳಿಕ ತಾಯಿ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ದೈನಂದಿನ ಆಹಾರದಲ್ಲಿ ಸೇವಿಸಬಹುದಾದ ಕೆಲವು ಆಹಾರಗಳು ಇಲ್ಲಿವೆ.”

ಸ್ತನಪಾನ ಮಾಡುವ ತಾಯಂದಿರ ಆಹಾರ ಪದ್ಧತಿ
ಹಾಲುಣಿಸುವ ತಾಯಂದಿರ ಆಹಾರ ಪದ್ಧತಿ ಹೇಗಿರಬೇಕು ?

ನೀರು:

ಏಕಕಾಲದಲ್ಲಿಯೇ ತುಂಬಾ ಪ್ರಮಾಣದಲ್ಲಿ ನೀರನ್ನು ಕುಡಿಯುವ ಬದಲು, ದಿನವಿಡೀ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಿರಿ. ಬೆಚ್ಚಗಿನ ಮತ್ತು ತಂಪಾದ ನೀರನ್ನು ಸಹ ಸೇವಿಸಬಹುದಾಗಿದೆ.

ಎಳನೀರು:

ಎದೆ ಹಾಲನ್ನು ಹೆಚ್ಚಿಸಲು ಎಳನೀರು ಅಥವಾ ತೆಂಗಿನ ಹಾಲು ಸಹ ಸಹಕಾರಿಯಾಗಿದೆ. ಇದು ಪೋಷಕಾಂಶಗಳು ಮತ್ತು ಹೈಡ್ರೇಟ್‌ಗಳಿಂದ ಕೂಡಿರುತ್ತದೆ.

ಹಾಲು:

ಹಾಲನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ವಿಶೇಷವಾಗಿ ಇದು ಕ್ಯಾಲ್ಸಿಯಂ ಹೊಂದಿರುವುದರಿಂದ ತುಂಬಾ ಉಪಕಾರಿಯಾಗಿದೆ.

ಹಾಲುಣಿಸುವ ತಾಯಂದಿರು ಸೇವಿಸಬಹುದಾದ ಆಹಾರಗಳು:

ಗೋಧಿ:

ಡೇಲಿಯಾದಂತಹ ಗೋಧಿ ಉತ್ಪನ್ನಗಳು ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತವೆ. ಓಟ್ ಮೀಲ್ ತೆಗೆದುಕೊಳ್ಳುವುದನ್ನು ಸಹ ನೀವು ಪರಿಗಣಿಸಬಹುದು.

ಮಸಾಲೆಗಳು:

ಕರಿಮೆಣಸು, ಜೀರಿಗೆ, ದಾಲ್ಚಿನ್ನಿ, ಕ್ಯಾರಮ್ ಬೀಜಗಳು ಮುಂತಾದ ಮಸಾಲೆಗಳನ್ನು ದೈನಂದಿನ ಅಡುಗೆಗೆ ಸೇರಿಸಬಹುದಾದ ಮಸಾಲೆ ಪದಾರ್ಥಗಳಾಗಿವೆ. ಇದರಿಂದ ನೀವು ಕಾರದ ಪುಡಿ ಅಥವಾ ಹಸಿ ಮೆಣಸಿನಕಾಯಿಯನ್ನು ತಪ್ಪಿಸಬಹುದು.

ಶುಂಠಿ:

ಶುಂಠಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಇದನ್ನು ದೈನಂದಿನ ಅಡುಗೆಗೆ ಸೇರಿಸಬಹುದು.

ಬೆಳ್ಳುಳ್ಳಿ:

ಪ್ರತಿ ಅಡುಗೆಮನೆಯಲ್ಲಿ ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಎದೆ ಹಾಲನ್ನು ಹೆಚ್ಚಿಸುವ ನೈಸರ್ಗಿಕ ಸಸ್ಯವಾಗಿದೆ.

ಮೆಂತೆ ಕಾಳು:

ಇದು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೆಚ್ಚಾಗಿ ಹೊಂದಿದೆ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಮುಖ್ಯವಾಗಿದೆ. ಇದನ್ನು ದೈನಂದಿನ ಆಹಾರ, ಅಡುಗೆಯಲ್ಲಿ ಮಸಾಲೆ ಪದಾರ್ಥವಾಗಿ ಬಳಸಬಹುದು. ನೀವು ಕೆಲವು ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನಸಿ ತೆಗೆದುಕೊಳ್ಳಬಹುದು.

ಸೋಂಪು ಕಾಳುಗಳು:

ಇದು ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಕಾರಿಯಾಗಿದೆ. ನೀವು ಅದನ್ನು ಹಾಗೆಯೇ ತಿನ್ನಬಹುದು ಅಥವಾ ನೀವು 100 ml ಹಾಲಿನೊಂದಿಗೆ ಇದರ ಪುಡಿಯನ್ನ ಹಾಕಿ ಸೇವಿಸಬಹುದು.

ಹಣ್ಣುಗಳು:

ಭಾರತದಲ್ಲಿ ಬೆಳೆದ ಹಣ್ಣುಗಳನ್ನು ಹೊರತುಪಡಿಸಿ ಆಮದು ಮಾಡಿಕೊಳ್ಳುವ ಹಣ್ಣುಗಳನ್ನು ಸೇವಿಸಲಾಗುವುದಿಲ್ಲ. ಎಲ್ಲಾ ಕಾಲೋಚಿತ ಹಣ್ಣುಗಳನ್ನು ತಿನ್ನುವುದು ಉತ್ತಮ. ವಿಶೇಷವಾಗಿ ದಾಳಿಂಬೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ತಾಯಿಯಲ್ಲಿ ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಎಳ್ಳು:

ಎಳ್ಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ, ಇದು ಮೂಳೆಯ ಆರೋಗ್ಯಕ್ಕೆ ಕಾರಣವಾಗಿದೆ. ಆದ್ದರಿಂದ, ಇದರ ಸೇವನೆಯು ತಾಯಿ ಮತ್ತು ಮಗುವಿನ ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ನಟ್ಸ್​​:

ಗೋಡಂಬಿ, ಬಾದಾಮಿ, ಆಕ್ರೋಡು ಮುಂತಾದವುಗಳನೆಲ್ಲಾ ಸೇವಿಸಬಹುದು. ನೀವು ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ, ಪುಡಿಮಾಡಿ ಮತ್ತು ಹಾಲಿಗೆ ಸೇರಿಸಿ ಸೇವಿಸಬಹುದು.

ಸ್ತನಪಾನ ಮಾಡುವ ತಾಯಂದಿರ ಆಹಾರ ಪದ್ಧತಿ
ಹಾಲುಣಿಸುವ ತಾಯಂದಿರ ಆಹಾರ ಪದ್ಧತಿ ಹೇಗಿರಬೇಕು?

ಡಾ.ರಾಜ್ಯಲಕ್ಷ್ಮಿ ಅವರು ಈ ಕೆಳಗಿನ ಆಹಾರಗಳನ್ನು ತಿನ್ನದಂತೆ ಸೂಚಿಸುತ್ತಾರೆ.

  • ತುಂಬಾ ಮಸಾಲೆಯುಕ್ತ ಆಹಾರ
  • ಕಾರವಾದ ಆಹಾರ ತಿನ್ನಬೇಡಿ
  • ಬಿಸಿ ಆಹಾರ ಸೇವಿಸುವುದು ಬೇಡ
  • ಬ್ರೆಡ್
  • ಬರ್ಗರ್ಸ್ / ಪಿಜ್ಜಾಗಳು
  • ಆಲ್ಕೋಹಾಲ್
  • ಧೂಮಪಾನ
  • ತಂಬಾಕು
  • ಕಾಫಿ / ಕೆಫೀನ್ ಉತ್ಪನ್ನಗಳು

ಈ ಎಲ್ಲಾ ಆಹಾರಗಲು ಎದೆ ಹಾಲಿನ ಉತ್ಪಾದನೆಗೆ ಅಡ್ಡಿಯಾಗುವುದರಿಂದ ಅವುಗಳನ್ನು ತಿನ್ನದಂತೆ ವೈದ್ಯರು ಸೂಚಿಸುತ್ತಾರೆ. ಅಲ್ಲದೇ ಯಾವುದೇ ಮಾನಸಿಕ ಒತ್ತಡ ಇರಬಾರದು ಮತ್ತು ತಾಯಿ ಆರೋಗ್ಯಕರ ಹಾಗೂ ಸಂತೋಷದ ವಾತಾವರಣದಲ್ಲಿ ಇರಬೇಕು. ಆರೋಗ್ಯವಂತ ತಾಯಿಯು ಆರೋಗ್ಯಕರ ಮಗುವನ್ನು ಹೊಂದಿರುತ್ತಾಳೆ. ಆದ್ದರಿಂದ, ಗರ್ಭಧಾರಣೆ ಮತ್ತು ನಂತರದ ಹೆರಿಗೆಯ ಸಮಯದಲ್ಲಿ ನಿಮ್ಮ ಆಹಾರ ಮತ್ತು ಜೀವನಶೈಲಿಯ ಕಡೆ ಗಮನ ಕೊಡುವುದು ಬಹಳ ಮುಖ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.