ETV Bharat / sukhibhava

ಬೇಸಿಗೆಯಲ್ಲಿ ತಣ್ಣೀರು ಸೇವನೆ ಒಳ್ಳೆಯದಲ್ಲ: ವೈದ್ಯರು ಹೇಳುವುದೇನು?

ವೈದ್ಯರು ಸಾಮಾನ್ಯವಾಗಿ ತಣ್ಣನೆಯ ಅಥವಾ ಮಂಜುಗಡ್ಡೆಯಂತಹ ನೀರನ್ನು ಕುಡಿಯಬೇಡಿ ಎಂದು ಹೇಳುತ್ತಾರೆ. ಆದ್ರೆ ತಕ್ಷಣವೇ ಬಾಯಾರಿಕೆಯನ್ನು ನೀಗಿಸುವ ದೃಷ್ಟಿಯಿಂದ ಜನರು ಇಂತಹ ಸಲಹೆಗಳನ್ನು ಅನುಸರಿಸುವುದಿಲ್ಲ. ತಣ್ಣೀರು ಕುಡಿಯುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ತಿಳಿದಂತೆ ಕಾಣುತ್ತಿಲ್ಲ. ಅಂತವರಿಗೆ ತಣ್ಣೀರು ಕುಡಿಯುವುದರಿಂದ ಆಗುವ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.

drinking chilled water in summer can negatively affect your health
ತಣ್ಣನೆ ನೀರು ಸೇವಿಸುವುದು ದೇಹಕ್ಕೆ ಒಳ್ಳೆಯದಲ್ಲ
author img

By

Published : Apr 15, 2022, 3:42 PM IST

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ತಾಪಮಾನ ಗಗನಕ್ಕೇರುತ್ತಿದೆ. ಜನರು ಬಿಸಿಲಿನ ತಾಪ ತಡೆಯಲಾಗದೇ ದೇಹವನ್ನು ತಂಪಾಗಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹೆಚ್ಚಿನ ವ್ಯಕ್ತಿಗಳು ಬಾಯಾರಿಕೆ ನೀಗಿಸಲು ತುಂಬಾ ತಣ್ಣನೆಯ (ಕೋಲ್ಡ್​​​ ವಾಟರ್​​) ನೀರನ್ನು ಕುಡಿಯಲು ಬಯಸುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದೇ ಇರುವುದಿಲ್ಲ. ಈ ವಿಚಾರವಾಗಿ ಈಟಿವಿ ಭಾರತ ಸುಖೀಭವ ತಂಡ ತಜ್ಞರೊಂದಿಗೆ ಮಾತನಾಡಿದ್ದು, ಅವರು ನೀಡಿದ ಮಾಹಿತಿ ಇಲ್ಲಿದೆ.

ಆಯುರ್ವೇದ ಏನು ಹೇಳುತ್ತದೆ?: ಮುಂಬೈ ಮೂಲದ ಆಯುರ್ವೇದ ವೈದ್ಯೆ ಡಾ.ಮನೀಶಾ ಕಾಳೆ ಹೇಳುವ ಪ್ರಕಾರ, ಫ್ರಿಡ್ಜ್​​ನಲ್ಲಿ ಇಟ್ಟ ತಣ್ಣನೆಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹೀಗೆ ಆದಾಗ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆಗ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ಶ್ರಮಿಸಬೇಕಾಗುತ್ತದೆ. ಇದಲ್ಲದೆ, ಅಸಮರ್ಪಕ ಜೀರ್ಣಕ್ರಿಯೆಯಿಂದಾಗಿ ಆಹಾರದಲ್ಲಿನ ಅಗತ್ಯ ಪೋಷಕಾಂಶಗಳು ದೇಹದಿಂದ ಹೀರಲ್ಪಡುವುದಿಲ್ಲ. ಇಂತಹ ಪೋಷಕಾಂಶಗಳ ಇಳಿಕೆಯು ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಲಬದ್ಧತೆ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಆಯುರ್ವೇದ ಹೇಳುತ್ತದೆ. ಇದಲ್ಲದೆ, ತಣ್ಣೀರಿನ ಅತಿಯಾದ ಸೇವನೆಯು ರಕ್ತ ಪರಿಚಲನೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಏಕೆಂದರೆ ತಣ್ಣೀರು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಅದೇ ಸಮಯದಲ್ಲಿ, ಇದು ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಅದಕ್ಕಾಗಿಯೇ ಆಯುರ್ವೇದವು ಉಗುರು ಬೆಚ್ಚಗಿನ ನೀರನ್ನು ಕುಡಿಯಲು ಸೂಚಿಸುತ್ತದೆ.

ಅಲೋಪತಿ ಅಭಿಪ್ರಾಯವೇನು?: ಅಲೋಪತಿ ಕೂಡ ತಣ್ಣಗಾದ ನೀರಿನ ಸೇವನೆಯನ್ನು ತಪ್ಪಿಸುವಂತೆ ಶಿಫಾರಸು ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನಮ್ಮ ದೇಹದ ಉಷ್ಣತೆಯು ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ವಾತಾವರಣದ ಉಷ್ಣತೆಗೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತದೆ ಎಂದು ದೆಹಲಿ ಮೂಲದ ಹಿರಿಯ ವೈದ್ಯ ಡಾ.ರಾಜೇಶ್ ಶರ್ಮಾ ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಾವು ಹೆಚ್ಚು ತಣ್ಣೀರು ಸೇವಿಸಿದಾಗ, ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳು ದೇಹದ ಉಷ್ಣತೆಯ ಹಠಾತ್ ಬದಲಾವಣೆಗೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳ ಉತ್ಪಾದನೆ ಮತ್ತು ನರಗಳು, ರಕ್ತನಾಳಗಳು ಅಥವಾ ಅಪಧಮನಿಗಳು ಮತ್ತು ಸಂಬಂಧಿತ ಅಂಗಗಳು, ವಿಶೇಷವಾಗಿ ಹೃದಯದ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಗಂಟಲು ನೋವು, ಕಫ ಗಟ್ಟಿಯಾಗುವುದು ಮತ್ತು ಶೀತದಂತಹ ಅನೇಕ ಸಮಸ್ಯೆಗಳು ಜನರು ಕಾಡಬಹುದು. ಅಲ್ಲದೇ ಇದು ಕೆಲವರಿಗೆ ತಲೆನೋವು ಉಂಟುಮಾಡಬಹುದು.

ಸಂಭವಿಸಬಹುದಾದ ಕೆಲವು ಇತರ ಸಮಸ್ಯೆಗಳಿವು: ದಿ ಗಾರ್ಡಿಯನ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆಚ್ಚು ತಣ್ಣೀರು ಕುಡಿಯುವುದರಿಂದ ಹೃದಯಬಡಿತ ಕಡಿಮೆಯಾಗುತ್ತದೆ. ಅಲ್ಲದೆ, ಇದು ಸ್ವನಿಯಂತ್ರಿತ ನರಮಂಡಲದ ಭಾಗವಾಗಿರುವ ವಾಗಸ್ ನರವನ್ನು ಉತ್ತೇಜಿಸುತ್ತದೆ. ವಾಗಸ್ ನರವು ನೀರಿನ ಕಡಿಮೆ ತಾಪಮಾನದಿಂದ ನೇರವಾಗಿ ಪರಿಣಾಮ ಬೀರುವುದರಿಂದ, ನೀರು ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹೃದಯ, ಇದು ನಿಧಾನವಾದ ಹೃದಯ ಬಡಿತ ಮತ್ತು ಇತರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಅನಗತ್ಯ ಗರ್ಭಧಾರಣೆ ತಪ್ಪಿಸಲು ಮಾತ್ರೆಯೊಂದೇ ಅಲ್ಲ ಹಲವು ಮಾರ್ಗಗಳಿವೆ; ಯಾವುವು?

ತಣ್ಣಗಾದ ನೀರನ್ನು ಕುಡಿಯುವುದರಿಂದ ಉಸಿರಾಟದ ವ್ಯವಸ್ಥೆಯಲ್ಲಿ ಲೋಳೆಯ ಸಂಗ್ರಹವಾಗುತ್ತದೆ. ಇದು ವ್ಯಕ್ತಿಯ ದೇಹವನ್ನು ವಿವಿಧ ಸೋಂಕುಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಅತಿಯಾಗಿ ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದು ಕೆಲವೊಮ್ಮೆ ಮೆದುಳಿನ ಫ್ರೀಜ್ಗೆ ಕಾರಣವಾಗಬಹುದು. ಏಕೆಂದರೆ ತಣ್ಣಗಾದ ನೀರು ನಮ್ಮ ಬೆನ್ನುಮೂಳೆಯ ಅನೇಕ ಸೂಕ್ಷ್ಮ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮೆದುಳಿನ ಫ್ರೀಜ್ ಮತ್ತು ತಲೆನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಸೈನುಟಿಸ್ ಹೊಂದಿರುವ ಜನರಿಗೆ ಸಮಸ್ಯೆಗಳು ಉಲ್ಬಣಗೊಳ್ಳಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.