ನ್ಯೂಯಾರ್ಕ್: ವ್ಯಕ್ತಿ ಒಂದೆಡೆಯಿಂದ ಮತ್ತೊಂದೆಡೆ ಚಲಿಸುವುದನ್ನು ಟ್ರ್ಯಾಕ್ ಮಾಡುವ ಮೂಲಕ ಲೋಕೊಮೋಷನ್ ತಿಳಿಯಲು ಅಮೆರಿಕದ ಸಂಶೋಧಕರ ತಂಡ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಎರಡು ಅಥವಾ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು, ವೆಬ್ ಆಧಾರಿತ ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಸ್ನಾಯು ಸಕ್ರಿಯಗೊಳಿಸುವಿಕೆ, ಜಂಟಿ ಲೋಡ್‌ಗಳು ಮತ್ತು ಜಂಟಿ ಚಲನೆಗಳ ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆಯನ್ನು ಈ ತಂಡ ನಡೆಸಿದೆ.
ಹೇಗೆ ಕೆಲಸ ಮಾಡುತ್ತದೆ?: ಈ ಆ್ಯಪ್ ವ್ಯಕ್ತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ಸಾಮರ್ಥ್ಯವನ್ನು ವಿಶ್ಲೇಷಿಸುತ್ತದೆ. ಮಾನವ ಚಲನೆಯಿಂದಾಗಿ ರೋಗಿ ನಡೆಯುವಲ್ಲಿ ಎದುರಿಸುವ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಸರ್ಜರಿ ಬೇಕೇ ಅಥವಾ ಇತರೆ ಚಿಕಿತ್ಸೆ ಅಗತ್ಯವಿದೆಯೇ ಎಂದು ತಿಳಿಸುತ್ತದೆ.
100 ಭಾಗಿದಾರರಿಂದ 10 ಗಂಟೆಗಳ ಕಾಲ ದತ್ತಾಂಶ ಸಂಗ್ರಹ ಮಾಡಲಾಗಿದೆ. 31 ಗಂಟೆಗಳಲ್ಲಿ ಕಂಪ್ಯೂಟೆಷನ್ ಫಲಿತಾಂಶ ಪಡೆಯಲಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಪಿಎಲ್ಒಎಸ್ ಕಂಪ್ಯೂಟೆಷನಲ್ ಬಯೋಲಾಜಿಯಲ್ಲಿ ಪ್ರಕಟಿಸಲಾಗಿದೆ. ಸ್ಟಾಂಡರ್ಡ್ ಯುನಿವರ್ಸಿಟಿಯ ಸ್ಕಾಟ್ ಎಲ್ ಡೆಲ್ಪ್ ಮತ್ತು ಸಹೋದ್ಯೋಗಿಗಳು ಅಧ್ಯಯನ ನಡೆಸಿದ್ದಾರೆ.
ವೆಚ್ಚದಾಯಕ ಚಿಕಿತ್ಸೆ: ಸಾಂಪ್ರದಾಯಿಕವಾಗಿ ಲೋಕೊಮೋಷನ್ ವಿಶ್ಲೇಷನೆಗೆ ನಿಗದಿತ ಲ್ಯಾಬ್ ಸ್ಪೇಸ್ ಮತ್ತು 1,50,000 ಡಾಲರ್ ಮೊತ್ತದ ಸಾಧನಗಳು ಅಗತ್ಯವಾಗಿದೆ. ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಸ್ಪೇಷಲೈಸ್ಡ್ ಕ್ಯಾಮೆರಾಗಳು ತ್ರಿಡಿ ಇಮೇಜ್ ಸೆರೆ ಹಿಡಿಯಬೇಕಿದೆ. ಇಲ್ಲಿ ಸೆರೆ ಹಿಡಿಯಲಾದ ಇಮೇಲ್ ಅನ್ನು ನುರಿತ ತಜ್ಞರು ಹಲವು ದಿನಗಳ ಕಾಲ ವಿಶ್ಲೇಷಣೆ ಮಾಡಬೇಕಿದೆ.
ಚಲನೆಯ ತೊಂದರೆಗಳಿರುವ ರೋಗಿಗಳನ್ನು ಮೌಲ್ಯಮಾಪನ ಮಾಡಲು, ಶಸ್ತ್ರಚಿಕಿತ್ಸೆಯನ್ನು ಯೋಜಿಸಲು ವೈದ್ಯರಿಗೆ ಸಹಾಯ ಮಾಡಲು ಮತ್ತು ಚಿಕಿತ್ಸಾ ವಿಧಾನಗಳ ಫಲಿತಾಂಶ ನಿರ್ಣಯಿಸಲು ಮಾನವ ಚಲನೆಯ ವಿಶ್ಲೇಷಣೆ ಬಳಸಲಾಗುತ್ತದೆ. ಇದಕ್ಕಾಗಿ ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಹೆಲ್ತ್ ಹಣದ ಸಹಾಯ ಒದಗಿಸಿದ್ದು, ಈ ಆ್ಯಪ್ ಶೇ ಒಂದರಷ್ಟು ವಿಶ್ಲೇಷಣಾ ತಂತ್ರಗಳಿಗೆ ವೆಚ್ಚವಾಗಲಿದ್ದು, ಇದು 25 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತದ ಈ ತಂತ್ರಜ್ಞಾನ ನಿಯಮಿತ ಕ್ಲಿನಿಕಲ್ ಬಳಕೆಗೆ ಹೆಚ್ಚು ವೆಚ್ಚದಾಯಕವಾಗಿದೆ. ಆ್ಯಪ್ ರೋಗದ ಅಪಾಯ, ಚಲನೆಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದು ಚಿಕಿತ್ಸೆಗೆ ಸಹಾಯಕವಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಬಿಪಿಯ ಏರಿಳಿತ ಡೆಮನ್ಶಿಯಾ, ಹೃದಯ ಸಮಸ್ಯೆ ಲಕ್ಷಣ: ಅಧ್ಯಯನ