ನವದೆಹಲಿ: ಜಾಗತಿಕವಾಗಿ ನೂರಾರು ಕೋಟಿ ಡಾಲರ್ ಹಣದ ವಹಿವಾಟು ಹೊಂದಿರುವ COWI ಎ/ಎಸ್ ಜಾಗತಿಕ ಇಂಜಿನಿಯರಿಂಗ್ ಮತ್ತು ವಿನ್ಯಾಸ ಸಲಹಾ ಸಂಸ್ಥೆಯಾಗಿದೆ. ಈ COWI ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ಇದೀಗ ಮೊದಲ ಬಾರಿಗೆ ಪಿತೃತ್ವ ರಜೆ ನೀಡಲು ಮುಂದಾಗಿದೆ. ಭಾರತದಲ್ಲಿನ ಪುರುಷ ಉದ್ಯೋಗಿಗಳು ಮಗುವಿನ ಜನನ ಅಥವಾ ದತ್ತು ಸ್ವೀಕಾರ ಸಮಯದಲ್ಲಿ 30 ದಿನಗಳ ಪಿತೃತ್ವ ರಜೆ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಡೆನ್ಮಾರ್ಕ್ ಮೂಲಕ ಈ COWI ಸಂಸ್ಥೆ, ಭಾರತದಲ್ಲಿ ಮಗು ದತ್ತು ಸ್ವೀಕಾರ ಅಥವಾ ಜನನದ ವೇಳೆ ಅವರ ವೃತ್ತಿ ಮತ್ತು ಕೌಟುಂಬಿಕ ಜೀವನದ ಸಮತೋಲನ ಕಾಪಾಡಲು ವರ್ಷದ 12 ತಿಂಗಳ ಕಾಲ ಸಹಾಯ ಮಾಡಲಿದೆ.
ನಮ್ಮ ಪ್ರಮುಖ ಮೌಲ್ಯಗಳಲ್ಲಿ ಒಂದಾದ 'ವಿ ಕೇರ್' ನಮ್ಮ ಗ್ರಾಹಕರು, ಜನರು ಮತ್ತು ಭೂಮಿಯ ಬಗ್ಗೆ ಕಾಳಜಿ ವಹಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಭಾರತದಲ್ಲಿನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬದವರ ಜೀವನದ ಸಮತೋಲನ ಕಾಪಾಡಲು ಹಾಗೂ ಗ್ರಾಹಕರು ಮತ್ತು ವ್ಯವಹಾರದ ಕಾರ್ಯಕ್ಷಮತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಇದು ಸಹಾಯ ಮಾಡುತ್ತದೆ ಎಂದು ಗ್ರೂಪ್ ಸಿಒಒ ಮತ್ತು COWI ಇಂಡಿಯಾದ ಅಧ್ಯಕ್ಷ ರಾಸ್ಮಸ್ ಓಡಮ್ ತಿಳಿಸಿದ್ದಾರೆ.
ಪಿತೃತ್ವ ರಜೆಯು ಅಂತರ್ಗತ ಮತ್ತು ಮುಕ್ತ ಕೆಲಸದ ವಾತಾವರಣವನ್ನು ಬೆಳೆಸಲು ಕಂಪನಿಯ ಬದ್ಧತೆಯ ಭಾಗವಾಗಿದೆ. ಈ ಮೂಲಕ ಉದ್ಯೋಗಿಗಳು ತಮ್ಮ ತಂದೆ ಮತ್ತು ಸಹಭಾಗಿಗಳ ಜವಾಬ್ದಾರಿಯನ್ನು ಮುಗಿಸಿ ಸುಲಭವಾಗಿ ತಮ್ಮ ವೃತ್ತಿಪರ ಸ್ಥಳಗಳಿಗೆ ಮರಳಲು ಸಹಾಯ ಮಾಡಬಹುದು ಎಂದಿದ್ದಾರೆ.
ಮಾತೃತ್ವ ರಜೆ ಮುಗಿಸಿಕೊಂಡು ಸಂಸ್ಥೆಗೆ ಬರುವ ಮಹಿಳೆಯಿರೂ ಕೂಡ ಮತ್ತೆ ಹೆಚ್ಚುವರಿಯಾಗಿ ಆರು ತಿಂಗಳ ಕಾಲ ಮನೆಯಲ್ಲಿಯೇ ಇರುವಂತಹ ಸೌಲಭ್ಯದ ಆಯ್ಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಾವು ರಜೆ ವಿಚಾರದಲ್ಲಿ ನಂಬಿಕೆ ಆಧಾರಿತ ವಿಚಾರದಲ್ಲಿ ಭರವಸೆ ಹೊಂದಿದ್ದೇವೆ. ಇದೇ ಕಾರಣಕ್ಕೆ ನಮ್ಮ ಸಂಸ್ಥೆಯಲ್ಲಿ ಸಿಕ್ ಲೀವ್ (ಅನಾರೋಗ್ಯದ ರಜೆ)ಯನ್ನು ಹೊಂದಿಲ್ಲ. ಉದ್ಯೋಗಿಗಳ ಒಟ್ಟಾರೆ ಯೋಗಕ್ಷೇಮ ಪ್ರೋತ್ಸಾಹಿಸುವ ಉದ್ದೇಶದಿಂದ ನಾವು ಪಿತೃತ್ವ ರಜೆ ಪ್ರಯೋಜನವನ್ನು ಪ್ರೋತ್ಸಾಹಿಸುತ್ತೇವೆ. ಗರ್ಭಾವಸ್ಥೆ ಎಂಬುದು ದಂಪತಿಗಳಿಬ್ಬರಿಗೂ ನಿರ್ಣಾಯಕ ಸಮಯವಾಗಿದೆ ಎಂದು ಕೌಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರ್ಯಾನ್ಕೋರ್ಟ್ ತಿಳಿಸಿದ್ದಾರೆ.
COWI ಕಂಪನಿಯು ಜಾಗತಿಕವಾಗಿ 86 ವಿವಿಧ ದೇಶಗಳಲ್ಲಿ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಜನರ ಹಠಾತ್ ಸಾವಿಗೆ ಕಾರಣವೇನು?: ಆರೋಗ್ಯ ಸಚಿವಾಲಯದ ವಿವರಣೆ ಹೀಗಿದೆ