ETV Bharat / sukhibhava

ಹೆಚ್ಚುತ್ತಲಿವೆ ಡೆಂಘೀ ಪ್ರಕರಣಗಳ ಸಂಖ್ಯೆ: ವೈರಲ್​ ಸೋಂಕಿನ ಬಗ್ಗೆ ತಿಳಿಯಬೇಕಿರುವ ಮಾಹಿತಿಗಳಿವು!

ಪ್ರಸ್ತುತ ಡೆಂಘೀಗೆ ಯಾವುದೇ ಸೂಕ್ತ ಲಸಿಕೆಯ ಚಿಕಿತ್ಸೆ ಇಲ್ಲ. ಸೋಂಕಿನ ಲಕ್ಷಣ ಆಧಾರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

author img

By ETV Bharat Karnataka Team

Published : Oct 17, 2023, 3:27 PM IST

dengue-fever-all-you-need-to-know-about-the-viral-infection-vector-borne-disease

ನವದೆಹಲಿ: ಈಡಿಸ್​ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಬರುವ ಸೋಂಕೇ ಈ ಡೆಂಘೀ ಆಗಿದೆ. ವಾಹಕದ ಮೂಲಕ ಈ ಸೋಂಕು ಹರಡುತ್ತದೆ. ವಿಶೇಷವಾಗಿ ಜಗತ್ತಿನ ಉಷ್ಣವಲಯ ಮತ್ತು ಉಪಉಷ್ಣಲಯದ ಪರಿಸರದಲ್ಲಿ ಈ ಸೋಂಕು ಹೆಚ್ಚು ಕಂಡು ಬರುತ್ತದೆ. ಪ್ರತಿ ವರ್ಷ ಅಂದಾಜು 100-400 ಮಿಲಿಯನ್​ ಮಂದಿ ಈ ಸೋಂಕಿಗೆ ಒಳಗಾಗುತ್ತಿದ್ದು, ಜಗತ್ತಿನ ಅರ್ಧದಷ್ಟು ಮಂದಿ ಇದರ ಅಪಾಯವನ್ನು ಹೊಂದಿದ್ದಾರೆ.

ವರ್ಗಾವಣೆ: ಈಡಿಸ್​ ಈಜಿಪ್ಟಿ ಸೊಳ್ಳೆ ಈ ಡೆಂಘೀ ವಾಹಕವಾಗಿದೆ. ಇದು ಕಡಿಯುವ ಮೂಲಕ ಮನುಷ್ಯರಲ್ಲಿ ಡೆಂಘೀ ಸೋಂಕನ್ನು ಹರಡುತ್ತದೆ. ಈ ಸೊಳ್ಳೆಗಳು 25ರಿಂದ 28 ಡಿಗ್ರಿ ಸೆಲ್ಸಿಯಸ್​ನಲ್ಲಿ 8-12 ಅವಧಿಯಲ್ಲಿ ವೈರಸ್​​ ಪ್ರಸರಣದ ಎಕ್ಸ್​ಟ್ರಿನ್ಸಿಕ್​ ಇನ್ಕ್ಯೂಬೆಷನ್​ ಪಿರಿಯಡ್​ ಅನ್ನು ಹೊಂದಿರುತ್ತದೆ. ಈ ಅವಧಿಯು ತಾಪಮಾನ ಸೇರಿದಂತೆ ಹಲವು ಅಂಶವನ್ನು ಹೊಂದಿದೆ. ಸೋಂಕಿತ ಸೊಳ್ಳೆಯು ಈ ವೈರಸ್​ ಅನ್ನು ತನ್ನ ಜೀವಮಾನವೀಡಿ ಸೋಂಕಿನ ಪ್ರಸರಣ ನಡೆಸುತ್ತದೆ

ಮನುಷ್ಯರಿಂದ ಸೊಳ್ಳೆಗೆ ಪ್ರಕರಣ: ಡೆಂಘೀಯನ್ನು ಹೊಂದಿರುವ ಮನುಷ್ಯರಿಂದಲೂ ಸೊಳ್ಳೆಗಳು ಈ ಸೋಂಕಿಗೆ ಗುರಿಯಾಗುತ್ತವೆ. ಇದು ಕೇವಲ ಡೆಂಘೀ ಸೋಂಕಿನ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಸೊಳ್ಳೆ ಕಡಿದಾಗ ಉಂಟಾಗುತ್ತದೆ. ಮನುಷ್ಯರಿಂದ ಸೊಳ್ಳೆಗಳಿಗೆ ಎರಡು ರೀತಿಯಲ್ಲಿ ಸೋಂಕು ಪ್ರಸರಣವಾಗುತ್ತದೆ. ಒಂದು ಅನಾರೋಗ್ಯದ ಸೋಂಕು ಲಕ್ಷಣ ಗೋಚರವಾಗುವ ಎರಡು ದಿನ ಮೊದಲು, ಜ್ವರದ ಲಕ್ಷಣ ಹೊಂದಿರುವ ಎರಡು ದಿನದ ಬಳಿಕ ಈ ಪರಿಣಾಮ ಕಾಣಿಸುತ್ತದೆ.

ತಾಯ್ತನದ ಪ್ರಸರಣ: ಡೆಂಘೀ ಪ್ರಸರಣ ಮನುಷ್ಯರಿಂದ ಸೊಳ್ಳೆಗೆ ವಾಹಕದ ಮೂಲಕ ಆಗುತ್ತದೆ. ಈ ಸೋಂಕು ಗರ್ಭಿಣಿಯಿಂದ ಹುಟ್ಟಲಿರುವ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ನೇರ ಪ್ರಸರಣ ದರ ಕಡಿಮೆ ಇರುವುದು ಕಂಡು ಬಂದಿದೆ. ಗರ್ಭಿಣಿ ಡೆಂಘೀ ಸೋಂಕಿನ ಲಕ್ಷಣಕ್ಕೆ ಒಳಗಾದಾಗ ಮಗುವು ಅವಧಿ ಪೂರ್ವ ಜನನ, ಕಡಿಮೆ ದೇಹ ತೂಕ ಮತ್ತು ಮಾರಾಣಾಂತಿಕ ಸಮಸ್ಯೆ ಅನುಭವಿಸಬಹುದು. ಇದು ರಕ್ತ, ಅಂಗಾಂಗ ದಾನ ಸೇರಿದಂತೆ ಹಲವು ಮಾರ್ಗದಲ್ಲಿ ವರ್ಗಾವಣೆ ಆಗಬಹುದು.

ಲಕ್ಷಣ: ಡೆಂಘೀ ಸೌಮ್ಯ ಅಥವಾ ಗಂಭೀರ ಲಕ್ಷಣವನ್ನು ಹೊಂದಿದೆ. ಸೌಮ್ಯ ಲಕ್ಷಣದಲ್ಲಿ ಅಧಿಕ ಜ್ವರ, ಭಾರಿ ತಲೆನೋವು, ಸ್ನಾಯು ಮತ್ತು ಕೀಲು ನೋವು, ತಲೆತಿರುಗುವಿಕೆ, ವಾಂತಿ ಸೇರಿದಂತೆ ಹಲವು ಲಕ್ಷಣ ಕಾಣಿಸುತ್ತದೆ.

ಗಂಭೀರ ಲಕ್ಷಣದಲ್ಲಿ ಹೊಟ್ಟೆ ನೋವು, ತೀವ್ರ ಉಸಿರಾಟ, ಒಸಡು ಅಥವಾ ಮೂಗಿನಲ್ಲಿ ರಕ್ತಸ್ರಾವ, ಅವಿಶ್ರಾಂತಿ, ದೇಹದ ದುರ್ಬಲತೆ, ರಕ್ತದ ವಾಂತಿ ಯಂತಹ ಲಕ್ಷಣಗಳು ಕಂಡು ಬರುತ್ತವೆ.

ಜಾಗತಿಕ ಕಾಳಜಿ: ಇತ್ತೀಚಿನ ದಶಕದಲ್ಲಿ ಡೆಂಘೀ ಪ್ರಕರಣ ಹೆಚ್ಚಳ ಕಂಡಿದೆ. 2000ದಲ್ಲಿ 5,05,430 ಇದ್ದ ಪ್ರಕರಣ 2019ರಲ್ಲಿ 52 ಲಕ್ಷವಾಗಿದೆ ಎಂದು ಡಬ್ಲ್ಯೂಎಚ್​ಒ ವರದಿ ಮಾಡಿದೆ. ಈ ರೋಗವೂ 100 ದೆಶದಲ್ಲಿ ಕಣಡು ಬಂದಿದ್ದು, ಏಷ್ಯಾದಲ್ಲಿ ಶೇ 70ರಷ್ಟಿದೆ. ಯುರೋಪ್​ ಸೇರಿದಂತೆ ಹೊಸ ಪ್ರದೇಶದಲ್ಲೂ ಕೂಡ ಈ ಡೆಂಘೀ ಪ್ರಕರಣ ಕಂಡು ಬರುತ್ತಿದೆ.

ಅಂದಾಜಿನ ಪ್ರಕಾರ 390 ಮಿಲಿಯನ್​ ಜನರು ಡೆಂಘೀ ವೈರಸ್​​ಗೆ ತುತ್ತಾಗಿದ್ದಾರೆ. ಅಧ್ಯಯನದ ಪ್ರಕಾರ ಡೆಂಘಿಯಿಂದಾಗಿ 3.9 ಬಿಲಿಯನ್​ ಮಂದಿ ಈ ಸೋಂಕಿನ ಅಪಾಯದಲ್ಲಿದ್ದಾರೆ. ಡಬ್ಲ್ಯೂಎಚ್​ಒ ಪ್ರಕಾರ, 2019ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಡೆಂಘೀ ಪ್ರಕರಣ ವರದಿ ಆಗಿದೆ. ಎಲ್ಲ ಪ್ರದೇಶದಲ್ಲಿ ಇದರ ಪರಿಣಾಮ ಹೊಂದಿದ್ದು, ಮೊದಲ ಬಾರಿಗೆ ಅಫ್ಘಾನಿಸ್ತಾನದ ಡೆಂಘೀ ಪ್ರಸರಣದ ವರದಿ ಆಗಿದೆ. ಅಮೆರಿಕ ದೇಶದಲ್ಲಿ 3.1 ಮಿಲಿಯನ್​ ಪ್ರಕರಣ ವರದಿ ಆಗಿದ್ದು, ಬಾಂಗ್ಲಾದೇಶದಲ್ಲಿ 1,01,000, ಮಲೇಷ್ಯಾದಲ್ಲಿ 1,31,000, ಫಿಲಿಪ್ಪಿನ್ಸ್​ ​​ 4,20,00, ವಿಯೆಟ್ನಾಂನಲ್ಲಿ 3,20,000 ವರದಿ ಆಗಿದೆ.

ತಡೆ ಮತ್ತು ಚಿಕಿತ್ಸೆ: ಡೆಂಘೀ ಅಪಾಯ ಹೊಂದಿರುವ ಸೊಳ್ಳೆಗಳ ಕಡಿತವನ್ನು ತಪ್ಪಿಸುವುದು ನಿರ್ಣಾಯಕವಾಗಿದೆ. ಪ್ರಸ್ತುತ ಡೆಂಘೀಗೆ ಯಾವುದೇ ಸೂಕ್ತ ಲಸಿಕೆ ಇಲ್ಲ ಹಾಗೂ ನಿರ್ಧಿಷ್ಟ ಚಿಕಿತ್ಸೆಯೂ ಇಲ್ಲ. ಸೋಂಕಿನ ಲಕ್ಷಣ ಆಧಾರಿಸಿ ಚಿಕಿತ್ಸೆ ನೀಡಲಾಗುವುದು. ಇಬುಪ್ರೊಫೆನ್​ ಮತ್ತು ಆಸ್ಪಿರಿನ್​ನಂತಹ ಸ್ಟಿರಿಯಾಡಲ್​ ಊರಿಯುತ ವಿರೋಧಿ ಔಷಧಗಳು ರಕ್ತಸ್ರಾವ ಅಪಾಯವನ್ನು ಕಡಿಮೆ ಮಾಡುತ್ತದೆ.

ಇನ್ನು ಇದಕ್ಕೆ ಮನೆಯಲ್ಲಿ ಅಗತ್ಯವಾದ ವಿಶ್ರಾಂತಿ, ದ್ರವ ಆಹಾರ ಹೆಚ್ಚಿನ ಸಮಯ, ಪ್ಯಾರೋಸಿಟಮಲ್​ ಬಳಕೆ, ಹಣ್ಣು ಮತ್ತು ಬೆಚ್ಚಗಿನ ನೀರು ಸೇವನೆ ಮಾಡಬೇಕಿದೆ.

ಲಸಿಕೆ ಅಭಿವೃದ್ಧಿ: ಡೆಂಗ್ವಾಕ್ಸಿಯ ಸದ್ಯ ಡೆಂಘೀಗೆ ಅನುಮತಿ ನೀಡಿರುವ ಲಸಿಕೆ ಆಗಿದೆ. ಇದು ಹಿಂದಿನ ಡೆಂಘೀ ಸೋಂಕಿನ ರಕ್ಷಣೆಯನ್ನು ನೀಡುತ್ತದೆ. ಅನೇಕ ಡೆಂಘೀ ಲಸಿಕೆಗಳು ಮೌಲ್ಯಮಾಪನ ಹಂತದಲ್ಲಿವೆ.

ಭಾರತದಲ್ಲಿ ಡೆಂಘೀ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಜಾರ್ಖಂಡ್​, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಬಿಹಾರ ಮತ್ತು ನವದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು ವರದಿ ಆಗಿವೆ. ಬಿಹಾರದಲ್ಲಿ ಸೆಪ್ಟೆಂಬರ್​ನಲ್ಲಿ ಒಂದೇ ದಿನದಲ್ಲಿ 300 ಪ್ರಕರಣ ವರದಿ ಆಗಿದದೆ. ದೆಹಯಲ್ಲಿ ಕಳೆದ ಸೆಪ್ಟೆಂಬರ್​​ 17ರಿಂದ ಇಲ್ಲಿಯವರಗೆ 5,221 ಪ್ರಕರಣಗಳು ವರದಿ ಆಗಿವೆ. ಉತ್ತರ ಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ತೀವ್ರವಾಗಿ ವರದಿಯಾಗುತ್ತಿವೆ.

ರಾಷ್ಟ್ರೀಯ ವಾಹಕ ಆಧಾರಿತ ರೋಗ ನಿಯಂತ್ರಣ ಕೇಂದ್ರದ ಪ್ರಕಾರ 2023ರಲ್ಲಿ 94,198 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, 91 ಸೋಂಕು ಮಾರಾಣಾಂತಿಕವಾಗಿದೆ.

ಇದನ್ನೂ ಓದಿ: ಎಲ್ಲೆಡೆ ಹೆಚ್ಚುತ್ತಿದೆ ಡೆಂಘೀ; ಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ತಜ್ಞರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.