ETV Bharat / sukhibhava

ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯು ಗುಣಮಟ್ಟ; ಟ್ರಕ್​ಗಳಿಗೆ ನಿರ್ಬಂಧ, ವರ್ಕ್​ ಫ್ರಂ ಹೋಮ್​ ಮೊರೆ

Delhi air quality worsens: ದೆಹಲಿ ವಾಯು ಗುಣಮಟ್ಟ ದಿನ ದಿನಕ್ಕೆ ಹದಗೆಡುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

author img

By ETV Bharat Karnataka Team

Published : Nov 6, 2023, 10:20 AM IST

delhi air quality worsen state government taken some action to reduce pollution

ನವದೆಹಲಿ: ದೆಹಲಿ ಮತ್ತು ಎನ್​ಸಿಆರ್​ನಲ್ಲಿ ಮಾಲಿನ್ಯ ಮಟ್ಟ ಭಾನುವಾರ ರಾತ್ರಿ ಮತ್ತಷ್ಟು ಬಿಗಾಡಾಯಿಸಿದೆ. ವಾಯು ಗುಣಮಟ್ಟ ಸೂಚ್ಯಂಕ 471ರಷ್ಟು ದಾಖಲಾಗಿದೆ. ಹೀಗಾಗಿ, ವಾತಾವರಣ ದಟ್ಟ ಹೊಗೆಯಿಂದ ಕೂಡಿದೆ ಎಂದು ವಾಯು ಗುಣಮಟ್ಟ ವ್ಯವಸ್ಥೆ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್​ಎಎಫ್​ಎಆರ್​​) ದತ್ತಾಂಶದ ವರದಿಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಆನಂದ್​ ವಿಹಾರ್​ ಸ್ಟೇಷನ್ ಅತ್ಯಂತ ಕಳಪೆ ವಾಯುಗುಣ ಹೊಂದಿದ್ದು, ಪಿಎ2.5 ವರದಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.

  • #WATCH | A morning walker, Surender Gupta, says, "There has been a high level of pollution for the past four to five days. It has reduced a little bit today... The decision to ban diesel vehicles done by Arvind Kejriwal is right..." pic.twitter.com/TKMY2vn4wc

    — ANI (@ANI) November 6, 2023 " class="align-text-top noRightClick twitterSection" data=" ">

ಟ್ರಕ್​ಗಳಿಗೆ ನಿರ್ಬಂಧ: ದೆಹಲಿ, ಎನ್​ಸಿಆರ್​ನಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗ್ರೇಡೆಡ್​ ರೆಸ್ಪಾನ್ಸ್​ ಆ್ಯಕ್ಷನ್​ ಪ್ಲಾನ್​ (ಜಿಆರ್​ಎಪಿ) 4ನೇ ಹಂತ ಜಾರಿಗೆ ತರಲು ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕೆಲವು ಕ್ರಮಕ್ಕೆ ಮುಂದಾಗಿದೆ. ಅದರನುಸಾರ, ಟ್ರಕ್​ಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

  • #WATCH | Delhi: The air quality in Delhi is in the 'Severe' category as per the Central Pollution Control Board.

    (Drone camera visuals from Karol Bagh area, shot at 9.20 a.m) pic.twitter.com/G31DCjyLtl

ನಾಲ್ಕನೇ ಹಂತ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಗಾಗಿದ್ದು ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ. ಜಿಆರ್​ಎಪಿಯ ನಾಲ್ಕನೇ ಹಂತದ ಪ್ರಕಾರ, 8 ಅಂಶಗಳ ಕ್ರಿಯಾ ಯೋಜನೆಯು ಎನ್​ಸಿಆರ್​ನಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಡಿ ದೆಹಲಿಗೆ ಟ್ರಕ್​ಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದಾಗ್ಯೂ ಕೆಲವು ಅಗತ್ಯ ವಸ್ತು, ಸೇವೆಗಳನ್ನು ನೀಡುವ ವಾಹನ, ಎಲ್​ಎನ್​ಜಿ, ಸಿಎನ್​ಜಿ ಮತ್ತು ಎಲೆಕ್ಟ್ರಿಕ್​ ಟ್ರಕ್​ಗಳಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ಇದೆ. ದೆಹಲಿ ರಿಜಿಸ್ಟರ್​​ನ ಡೀಸೆಲ್-ಚಾಲಿತ ಮಧ್ಯಮ ಸರಕುಗಳ ವಾಹನಗಳು (ಎಂಜಿವಿ) ಭಾರಿ ಸರಕುಗಳ ವಾಹನಗಳು (ಎಚ್​ಜಿವಿ) ಅಗತ್ಯ ಸರಕು-ಸೇವೆ ನೀಡುವ ವಾಹನಗಳಿಗೂ ಪ್ರವೇಶ ನಿರ್ಬಂಧವಿದೆ.

    (Drone camera visuals from near DND Flyover, shot at 9.30 a.m) pic.twitter.com/mt3A2FWaWl

ಆನ್​ಲೈನ್​ ಕಲಿಕೆ: ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ, 6 ರಿಂದ 9 ಮತ್ತು 11ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಹಾಜರಾಗುವ ಬದಲಾಗಿ ಆನ್​ಲೈನ್​ ಮೂಲಕ ತರಗತಿ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿ, ಎನ್​ಸಿಆರ್​ ರಾಜ್ಯ ಸರ್ಕಾರಗಳು ಸಾರ್ವಜನಿಕ, ಮುನ್ಸಿಪಲ್​ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ 50ರಷ್ಟು ಉದ್ಯೋಗಿಗಳನ್ನು ಮಾತ್ರ ಬರುವಂತೆ ತಿಳಿಸಿ, ಉಳಿದ ಉದ್ಯೋಗಿಗಳಿಗೆ ವರ್ಕ್​ ಫ್ರಂ ನೀಡುವಂತೆ ಕೋರಿದೆ. ಇದರೊಂದಿಗೆ ಕಾಲೇಜು, ಶಿಕ್ಷ ಸಂಸ್ಥೆಗಳು, ವಾಣಿಜ್ಯ ಚಟುವಟಿಕೆಗಳನ್ನು ಬಂದ್​ ಮಾಡುವ ಮತ್ತು ಸಮ ಮತ್ತು ಬೆಸ ಸಂಖ್ಯೆಯಲ್ಲಿ ವಾಹನ ಸೇವೆಗೆ ಅವಕಾಶ ನೀಡುವ ಹಲವು ಕ್ರಮವನ್ನು ಕೂಡ ರಾಜ್ಯ ಸರ್ಕಾರ ಪರಿಗಣಿಸಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜಗತ್ತಿನ ಬೇರೆ ದೇಶಗಳಿಂದ ಭಾರತೀಯರಿಗೆ ಹೆಚ್ಚು ಮಾರಣಾಂತಿಕವಾಗುತ್ತಿರುವ ವಾಯು ಮಾಲಿನ್ಯ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.