ETV Bharat / sukhibhava

ಮಾರಣಾಂತಿಕ 2023 ಶಾಖದ ಅಲೆಗಳು ಭವಿಷ್ಯದಲ್ಲಿ ಸಾಮಾನ್ಯವಾಗಲಿದೆ; ಅಧ್ಯಯನ

ಈ ವರ್ಷ ಜಾಗತಿಕ ತಾಪಮಾನ ಹೆಚ್ಚಳಗೊಂಡಿದ್ದು, ಯುರೋಪ್​ ಸೇರಿದಂತೆ ಜಗತ್ತಿನೆಲ್ಲೆಡೆ ಬಿಸಿಲ ತಾಪಕ್ಕೆ ಜನರು ತತ್ತರಿಸಿದ್ದಾರೆ.

Deadly 2023 Heat waves will become more common in the future

author img

By ETV Bharat Karnataka Team

Published : Aug 26, 2023, 4:55 PM IST

ನವದೆಹಲಿ: 2023ರಲ್ಲಿ ಕಂಡಂತಹ ಮಾರಣಾಂತಿಕ ಶಾಖದ ಅಲೆಗಳು ಮುಂಬರುವ ವರ್ಷದಲ್ಲಿ ಸಾಮಾನ್ಯವಾಗಲಿದೆ. ಕಳೆದ 20 ವರ್ಷದಲ್ಲಿ ಈ ಶಾಖದ ಅಲೆಯ ಅಪಾಯಗಳು, ಸಾವಿನ ಪ್ರಮಾಣಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನ ಜರ್ನಲ್​ ನೇಚರ್ ಕಮ್ಯೂನಿಕೇಷನ್​ ತಿಳಿಸಿದೆ.

ಈ ವರ್ಷ ಅಂದರೆ, 2023ರಲ್ಲಿ ಜಗತ್ತಿನೆಲ್ಲೆಡೆ ನಾವು ಇದೀಗ ಶಾಖದ ಅಲೆಯನ್ನು ಕಾಣುತ್ತಿದ್ದೇವೆ. ಯು​​ರೋಪ್​ನಲ್ಲಿ ತಾಪಮಾನ 47.5 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದೆ. ಇತ್ತೀಚಿಗೆ ಜರುಗಿನ ಕೆಟ್ಟ ನೈಸರ್ಗಿಕ ವಿಕೋಪ ಇದಾಗಿದೆ. ಇದರಿಂದಾಗಿ 45,00 ರಿಂದ 70 ಸಾವಿರ ಸಂತ್ರಸ್ತರು ಪರಿಣಾಮಕ್ಕೆ ಒಳಗಾಗಿದ್ದಾರೆ.

ಬಿಸಿಲ ತಾಪದಿಂದ ಅರಣ್ಯಗಳಲ್ಲಿ ಕಾಡ್ಬಿಚ್ಚು ಕಂಡು ಬಂದವು, ಬೆಳೆಗಳು ನಾಶವಾದವು. ಶಾಖದ ಅಲೆಯಿಂದಾಗಿ ನಗರ ಪ್ರದೇಶದಲ್ಲಿ ತುರ್ತು ವಾರ್ಡ್​​ಗಳು ರೋಗಿಗಳಿಂದ ತುಂಬಿದವು. ಜಾಗತಿಕವಾಗಿ 13 ಬಿಲಿಯನ್​ ನಷ್ಟ ಇದರಿಂದ ಉಂಟಾಯಿತು.

ಶತಮಾನ ಅಲ್ಲ ದಶಕಗಳಿಗೆ ಮರುಕಳಿಸುತ್ತಿರುವ ಶಾಖದ ಅಲೆ: 2023ಲ್ಲಿ ಅಧಿಕ ಬೇಸಿಗೆ ದಾಖಲಾಗಿದ್ದು, ಇದರಿಂದ ಅನೇಕ ಸಾವುಗಳು ಕಂಡು ಬಂದವು. ಈ ರೀತಿಯ ಘಟನೆ ಶತಮಾನದಲ್ಲಿ ಒಮ್ಮೆ ಬರುತ್ತಿತ್ತು. ಆದರೆ ಇದೀಗ ಇದನ್ನು ಪ್ರತಿ 10 ರಿಂದ 20 ವರ್ಷಕ್ಕೆ ಒಮ್ಮೆ ನಿರೀಕ್ಷಿಸುತ್ತಿದ್ದೇವೆ ಎಂದು ಸ್ವಿಟ್ಜರ್ಲೆಂಡ್​ನ ಇನ್ಸುಟಿಟ್ಯೂಟ್​ ಫಾರ್​ ಎನ್ವರಮೆಂಟಲ್​ ಡಿಸಿಷನ್​ನ ಸಂಶೋಧಕರು, ಅಧ್ಯಯನದ ಮುಖ್ಯ ಲೇಖಕರಾದ ಸ್ಯಾಮ್ಯುಯಲ್​ ಲುಥಿ ತಿಳಿಸಿದ್ದಾರೆ.

ಜಗತ್ತಿನ ಅನೇಕ ಪ್ರದೇಶದಲ್ಲಿ ಎರಡರಿಂದ ಮೂರು ವರ್ಷಕ್ಕೆ ಜಗತ್ತು 2 ಡಿಗ್ರಿ ಉಷ್ಣಾಂಶ ಏರಿಕೆ ಮಾಡುತ್ತಿದೆ. ಶಾಖದ ಸಾವಿನ ಪ್ರಮಾಣವನ್ನು ಪತ್ತೆ ಹಚ್ಚುವುದು ಹೆಚ್ಚು ಅಸಂಭವನೀಯ. ಇದು ಪ್ರತಿ 100 ವರ್ಷದಲ್ಲಿ 14 ಬಾರಿ ಆಗುತ್ತಿದ್ದು, 2 ಡಿಗ್ರಿ ತಾಪಮಾನ ಹೆಚ್ಚುತ್ತಿದೆ. ಈ ಶಾಖದ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಭಾವಿಸಿದರೆ, ಅಂತಹ ತೀವ್ರ ಶಾಖದ ಅಲೆಗಳಿಂದ ಮರಣದ ಸಂಭವನೀಯತೆಯು 69 ಅಂಶಗಳಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ಈ ಅಧ್ಯಯನಕ್ಕಾಗಿ ತಂಡವು ವ್ಯವಸ್ಥಿತವಾಗಿ ದೈನಂದಿನ ಶಾಖದ ಅಲೆಯಿಂದ 748 ನಗರ ಮತ್ತು ಯುರೋಪ್​ನ 47 ದೇಶದ ಸಮುದಾಯಗಳಿಂದ ಮರಣಪ್ರಮಾಣದ ದತ್ತಾಂಶವನ್ನು ಪಡೆದಿದೆ. 2013ರಿಂದ ಯುರೋಪ್​, ಲ್ಯಾಟಿನ್​ ಅಮೆರಿಕ, ಅಮೆರಿಕ ಮತ್ತು ಕೆನಡಾದಿಂದ ದತ್ತಾಂಶ ಸಂಗ್ರಹಿಸಿದೆ.

ಸಾವಿನ ಪ್ರಮಾಣವೂ ಹೆಚ್ಚಳ: ಸಂಶೋಧಕರು, ಸರಾಸರಿ ಜಾಗತಿಕ ತಾಪಮಾನ 2000ದಲ್ಲಿ 0.7 ಡಿಗ್ರಿ, 2020ರಲ್ಲಿ 1.2 ಡಿಗ್ರಿ, 1.5 ಮತ್ತು 2 ಡಿಗ್ರಿಗಳ ಹೆಚ್ಚಳದೊಂದಿಗೆ ಸಾವಿನ ಮರಣವು ಹೇಗೆ ಬೆಳವಣಿಗೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕಿದ್ದಾರೆ. ಫಲಿತಾಂಶದಲ್ಲಿ ಅಧಿಕ ಶಾಖದ ಅಲೆ ಜೊತೆಗೆ ಅಧಿಕ ಸಾವಿನ ಸಂಖ್ಯೆಗಳು ಕಳೆದ 20 ವರ್ಷದಿಂದ ಗಣನೀಯವಾಗಿ ಹೆಚ್ಚಳ ಕಂಡಿದೆ.

ಗಲ್ಫ್​​ ಮತ್ತು ಅಮೆರಿಕದ ಅಟ್ಲಾಂಟಿಕ್​ ಕೋಸ್ಟ್, ಕೋಸ್ಟ್ ಆಫ್​ ಲ್ಯಾಟಿನ್​ ಅಮೆರಿಕ, ಮಿಡಲ್​ ಈಸ್ಟ್​​, ಆಗ್ನೇಯ ಏಷ್ಯಾ, ಮೆಡಿಟೇರಿಯನ್​ ಪ್ರದೇಶದ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಅಪಾಯದ ಶಾಖದ ಅಲೆ ಹೆಚ್ಚಿದೆ. ಆದಾಗ್ಯೂ ಸುಧಾರಿತ ಹವಾಮಾನ ಬದಲಾವಣೆ ಈ ಪ್ರದೇಶದಲ್ಲಿನ ಬೇಸಿಗೆಯೂ ದೇಶದಲ್ಲಿನ ಶಾಖದ ಅಲೆಯ ಸಾವಿನ ಪ್ರಮಾಣದಲ್ಲಿ ಶೇ 10ರಷ್ಟು ಹೆಚ್ಚಿಸಿದೆ ಎಂದು ಅಧ್ಯಯನ ಎಚ್ಚರಿಸಿದೆ.

ಅಧ್ಯಯನ ಅಂದಾಜಿಸಿದಂತೆ ಜಾಗತಿಕ ಸರಾಸರಿ ತಾಪಮಾನ ಗರಿಷ್ಠ 1.5 ರಿಂದ 2 ಡಿಗ್ರಿ ಸೆಲ್ಸಿಯಸ್​ ಹೆಚ್ಚಳದ ಟ್ರಾಕ್​ ಅನ್ನು ಹೊಂದಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಲೇಖಕರು ಹೇಳಿದ್ದಾರೆ.

ಇದನ್ನೂ ಓದಿ: ಮಾನಸಿಕ ಆರೋಗ್ಯದ ಮೇಲೂ ಬೀರುತ್ತದೆ ಬಿಸಿಲಿನ ತಾಪಮಾನ; ಕೆಜಿಎಂಯು ತಜ್ಞರ ಅಭಿಮತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.