ETV Bharat / sukhibhava

ಮೌತ್​​ವಾಶ್ ಬಳಕೆಯಿಂದ ಕೊರೊನಾ ವೈರಸ್ ಹರಡುವಿಕೆ ತಡೆಯಬಹುದಾ...ಸಂಶೋಧಕರು ಹೇಳೋದೇನು...? - German scientists

ಪ್ರತಿದಿನ ಮೌತ್​ವಾಶ್​​​​​​​​​​​​​ ಬಳಸಿ ಬಾಯಿ ಸ್ವಚ್ಛಗೊಳಿಸಿದರೆ ಕೊರೊನಾ ವೈರಸ್​ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಸಂಶೋಧನೆಯಲ್ಲಿ ತಿಳಿದುಬಂದಿರುವುದಾಗಿ ಜರ್ಮನಿಯ ಹೆಲ್ತ್​ ಮ್ಯಾಗಜಿನ್​​​​ ಒಂದು ಪ್ರಕಟಿಸಿದೆ.

Daily Mouthwash
ಮೌತ್​​ವಾಶ್
author img

By

Published : Aug 13, 2020, 5:20 PM IST

ಬರ್ಲಿನ್/ಜರ್ಮನಿ: ದಿನೇ ದಿನೆ ಎಲ್ಲೆಡೆ ಕೊರೊನಾ ವೈರಸ್​​​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಡೀ ದೇಶದಲ್ಲಿ ಮಹಾರಾಷ್ಟ್ರವೊಂದರಲ್ಲೇ 5 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1.96 ಲಕ್ಷ ದಾಟಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಅಥವಾ ಆಗ್ಗಾಗ್ಗೆ ಕೈ ತೊಳೆಯುವುದು, ಮಾಸ್ಕ್​ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನಾದಿಂದ ದೂರ ಉಳಿಯಬಹುದು ಎಂಬ ವಿಚಾರ ನಿಮಗೆ ತಿಳಿದಿದೆ. ಆದರೆ ಇದರೊಂದಿಗೆ ನೀವು ಪ್ರತಿದಿನ ಬಾಯಿಯನ್ನು ಮೌತ್​​​ವಾಶ್​​​​​​​ನಿಂದ ತಪ್ಪದೆ ಸ್ವಚ್ಛಗೊಳಿಸಿದರೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಮೌತ್​​ವಾಶ್​​​​ಗಳನ್ನು ಬಳಸಿ ನಿಮ್ಮ ಬಾಯಿಯನ್ನು ಪ್ರತಿದಿನ ಸ್ವಚ್ಛಗೊಳಿಸುತ್ತಿದ್ದರೆ ವೈರಸ್​ ಹರಡುವ ಸಾಧ್ಯತೆ ಕಡಿಮೆ ಎಂದು ಜರ್ಮನಿಯ ವಿಜ್ಞಾನಿಗಳು ತಿಳಿಸಿರುವುದಾಗಿ ಜಮರ್ನಿಯ ಹೆಲ್ತ್ ಮ್ಯಾಗಜಿನ್​​​​ ಒಂದರಲ್ಲಿ ಪ್ರಕಟವಾಗಿದೆ.

ಅಧ್ಯಯನಗಳ ಪ್ರಕಾರ, ಮೌತ್​ವಾಶ್​​​​​​​​​​​​​​ಗಳನ್ನು ಬಳಸುವುದರಿಂದ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದು ಹಾಗೂ ಇದರಿಂದ ಉಸಿರಾಟದ ಸಮಸ್ಯೆಗಳಾಗಲಿ, ಕೂಡಾ ಇರುವುದಿಲ್ಲ ಎನ್ನಲಾಗಿದೆ. ಮೌತ್​ವಾಶ್​​​ನಿಂದ ಬಾಯಿಯನ್ನು ಸ್ವಚ್ಛಗೊಳಿಸುವುದರಿಂದ ಜೀವಕೋಶಗಳಲ್ಲಿ ವೈರಸ್ ಉತ್ಪಾದನೆ ತಡೆಯಲು ಸಾಧ್ಯವಿಲ್ಲ. ಆದರೆ ಅಲ್ಪಾವಧಿಯಲ್ಲಿ ವೈರಸ್​ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಜರ್ಮನಿ ಬೊಚಮ್​ನ ರೊಹ್ರ್ ವಿಶ್ವವಿದ್ಯಾನಿಲಯದ ಸಂಶೋಧಕ ಟೋನಿ ಮೈಸ್ಟರ್ ಹೇಳಿದ್ದಾರೆ ಎನ್ನಲಾಗಿದೆ.

ಈ ಅಧ್ಯಯನ್ನಾಗಿ ಸಂಶೋಧನಾ ತಂಡವು ಜರ್ಮನಿಯ ಫಾರ್ಮಸಿ ಹಾಗೂ ಮೆಡಿಕಲ್ ಸ್ಟೋರ್​​​ಗಳಲ್ಲಿ ಲಭ್ಯವಿರುವ ಸುಮಾರು 8 ಬಗೆಯ ಮೌತ್​ವಾಶ್​​​ಗಳನ್ನು ಬಳಸಿಕೊಂಡಿದೆ. ಈ ಎಲ್ಲಾ ಮೌತ್​​ವಾಶ್​​ಗಳನ್ನು ವೈರಸ್ ಕಣಗಳೊಂದಿಗೆ ಬೆರೆಸಿ ಸುಮಾರು 30 ಸೆಕೆಂಡ್​​ಗಳ ಕಾಲ ಅಲುಗಾಡಿಸಿದ ನಂತರ ವೈರಸ್ ಕಣಗಳು ಅಲ್ಲಿ ಕಂಡುಬರಲಿಲ್ಲ ಎಂದು ಸಂಶೋಧಕರ ತಂಡ ತಿಳಿಸಿದೆ.

ಆದರೆ ಕೊರೊನಾ ಸೋಂಕು ತಗುಲಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಮೌತ್​​ವಾಶ್​​​ಗಳು ಪರಿಣಾಮಕಾರಿಯಾಗಿಲ್ಲ. ಇದರಿಂದ ವೈರಸ್ ಹರಡುವ ಸಾಮರ್ಥ್ಯವನ್ನು ಅಲ್ಪಾವಧಿಯವರೆಗೆ ತಡೆಗಟ್ಟಬಹುದು ಎನ್ನಲಾಗಿದೆ. ಇದರ ಬಗ್ಗೆ ಹೆಚ್ಚಿನ ಅಗತ್ಯ ಇದೆ ಎಂದು ಲೇಖಕರ ಅಭಿಪ್ರಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.