ETV Bharat / sukhibhava

ಕಣ್ಣಿನ ದೃಷ್ಟಿ ಸಮಸ್ಯೆಗೆ ದೈನಂದಿನ ಅಭ್ಯಾಸಗಳು ಕೂಡ ಕಾರಣ.. ಅದು ಹೇಗೆ? - ಸನ್​ಗ್ಲಾಸ್​ ಹಾಕುವುದು ಮರೆಯದಿರಿ

ವ್ಯಕ್ತಿಯ ನಿತ್ಯದ ಜೀವನ ಶೈಲಿ ಕೂಡ ವ್ಯಕ್ತಿಯ ದೃಷ್ಟಿ ಸಮಸ್ಯೆ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತಿದೆ. ಹಾಗಾದ್ರೆ ಕಣ್ಣಿನ ಸಮಸ್ಯೆ ಹೆಚ್ಚುಸುತ್ತಿರುವ ಈ ಅಭ್ಯಾಸಗಳು ಯಾವುದು?

ಕಣ್ಣಿನ ದೃಷ್ಟಿ ಸಮಸ್ಯೆಗೆ ದೈನಂದಿನ ಅಭ್ಯಾಸಗಳು ಕೂಡ ಕಾರಣ
Daily habits are also the cause of eye vision problem
author img

By

Published : Nov 11, 2022, 3:58 PM IST

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2021ರಲ್ಲಿ ಜಾಗತಿಕವಾಗಿ ಸರಿ ಸುಮಾರು 2.2 ಬಿಲಿಯನ್​ ಜನರು ದೂರ ಮತ್ತು ಸಮೀಪ ದೃಷ್ಟಿ ದೋಷಕ್ಕೆ ಗುರಿಯಾಗಿದ್ದಾರೆ. ಇದರಲ್ಲಿ ಭಾರತದಲ್ಲಿ ಶೇ 20 ರಷ್ಟು ಜನರು ಈ ಸಮಸ್ಯೆಗೆ ಗುರಿಯಾಗಿದ್ದು, ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಜಾಗತಿಕವಾಗಿ ದೃಷ್ಟಿ ದೋಷವೂ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ.

ಇದರಲ್ಲಿ ಅನುವಂಶಿಕ, ವಯೋಸಹಜ ಮತ್ತು ಪರಿಸರತ್ಮಕ ಅಂಶಗಳು ಕೂಡ ಮಂದು ದೃಷ್ಟಿ ದೋಷಕ್ಕೆ ಕಾರಣವಾಗಿದೆ. ಇದಕ್ಕೆ ನಿತ್ಯದ ಅಭ್ಯಾಸಗಳು ಕೂಡ ಕಾರಣವಾಗಿದೆ. ವ್ಯಕ್ತಿಯ ಪ್ರತಿನಿತ್ಯದ ಜೀವನ ಶೈಲಿ ಕೂಡ ವ್ಯಕ್ತಿಯ ದೃಷ್ಟಿ ಸಮಸ್ಯೆ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತಿದೆ. ಹಾಗಾದರೆ ಕಣ್ಣಿನ ಸಮಸ್ಯೆ ಹೆಚ್ಚುಸುತ್ತಿರುವ ಈ ಅಭ್ಯಾಸಗಳು ಯಾವುದು?

ಅತಿಹೆಚ್ಚು ಕಂಪ್ಯೂಟರ್​ ವೀಕ್ಷಣೆ: ದೀರ್ಘಕಾಲ ಅವಧಿವರೆಗೆ ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವುದು ಪ್ರಪಂಚದಲ್ಲಿ ಅನೇಕ ಜನರ ದೃಷ್ಟಿ ದೋಷ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ಕೋವಿಡ್​ ಸೋಂಕಿನ ಬಳಿಕ ವರ್ಕ್​ ಫ್ರಂ ಹೋಂ ಸಂಸ್ಕೃತಿ ಹೆಚ್ಚಿದ್ದು, ಜನರು ಇದರಿಂದ ಕಂಪ್ಯೂಟರ್​ ಮುಂದೆ ಕೂರುವ ಸಮಯವೂ ಗಣನೀಯವಾಗಿ ಏರಿಕೆ ಕಂಡಿದೆ.

ಇದು ಗಮನಾರ್ಹವಾಗಿ ಕಣ್ಣಿನ ಮೆಲೆ ಒತ್ತಡ ಹೆಚ್ಚಿಸುವುದರ ಹೊತೆಗೆ ದೃಷ್ಟಿ ದೋಷ ಸಮಸ್ಯೆಗೆ ಕಾರಣವಾಗುತ್ತಿದೆ. ಇದ್ನು ಕಂಪ್ಯೂಟರ್​ ವಿಷನ್​ ಸಿಂಡ್ರೋಮ್​ ಎಂದು ಕರೆಯಲಾಗುವುದು. ಇದಕ್ಕಿರುವ ಪರಿಹಾರ 20-20-20 ಟೆಕ್ನಿಕ್​ ಬಳಸುವುದು. ಪ್ರತಿ 20 ನಿಮಿಷಕ್ಕೆ ಒಮ್ಮೆ ಕಂಪ್ಯೂಟರ್​ ಪರದೆಯಿಂದ ಬಿಡುವು ಪಡೆಯುವುದರಿಂದ ಕಣ್ಣಿನ ಒತ್ತಡ ಕಡಿಮೆ ಮಾಡಬಹುದಾಗಿದೆ. ಪ್ರತಿ 20 ನಿಮಿಷಕ್ಕೆ ಒಮ್ಮೆ ನಿಮ್ಮ ದೃಷ್ಟಿಯಿಂದ 20 ಅಡಿ ದೂರ ನಿಮ್ಮ ದೃಷ್ಟಿಹಾಯಿಸಬೇಕು.

ಕಣ್ಣಿಗೆ ಆರೋಗ್ಯಕರವಾದ ಆಹಾರ ನಿಮ್ಮ ಡಯಟ್​ನಲ್ಲಿರಲಿ: ಕಣ್ಣಿನ ಆರೋಗ್ಯ ಹೆಚ್ಚಿಸುವ ಒಮೆಗಾ-3 ಫ್ಯಾಟಿ ಆ್ಯಸಿಡ್​, ಜಿಂಕ್​, ವಿಟಮಿನ್​ ಸಿ ಮತ್ತು ಇ ಜೊತೆಗೆ ಹಚ್ಚ ಹಸುರಿನ ಎಲೆಗಳು ಸೇವಿಸುವುದು ಉತ್ತಮ. ಒಣ ಹಣ್ಣುಗಳು, ಮೊಟ್ಟೆ, ಸಮುದ್ರ ಆಹಾರಗಳು ನಿಮ್ಮ ಡಯಟ್​ನಲ್ಲಿರುವಂತೆ ನೋಡಿಕೊಳ್ಳಿ.

ವಿಶ್ರಾಂತಿ ಕೊರತೆ: ನಿದ್ರೆಯ ಕೊರತೆ ಕೂಡ ನಿಮ್ಮ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಇದು ಕಣ್ಣಿನ ದೃಷ್ಟಿ ಅಲ್ಲದೇ, ಪ್ರತಿರಕ್ಷಣಾ ವ್ಯವಸ್ಥೆ, ತೂಕ ಹೆಚ್ಚಳ, ಹೃದಯ ಕಾಯಿಲೆ, ಬಿಪಿ, ಮೂಡ್​ ಬದಲಾವಣೆ, ನೆನಪಿನ ಸಮಸ್ಯೆಗೂ ಕಾರಣವಾಗುತ್ತದೆ. ಇದು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ.

ವಿಶ್ರಾಂತಿ ಕೊರತೆಯಿಂದ ಕಣ್ಣಿನಲ್ಲಿ ರಕ್ತಸ್ರಾವ. ಡಾರ್ಕ್​ ಸರ್ಕಲ್​, ಮಸುಕು ದೃಷ್ಟಿ, ಡ್ರೈನೆಸ್​ ಕೂಡ ಕಾಡುತ್ತದೆ. ಸಂಶೋಧನೆ ಪ್ರಕಾರ, ನಮ್ಮ ಕಣ್ಣಿಗೆ 7 ರಿಂದ 9 ಗಂಟೆಗಳ ಕಾಲ ಉತ್ತಮ ನಿದ್ರೆ ಅವಶ್ಯಕತೆ ಇದೆ.

ಸದಾ ಕಣ್ಣುಜ್ಜುವುದು ಸಮಸ್ಯೆಗೆ ಕಾರಣ: ಸದಾ ಕಣ್ಣು ಉಜ್ಜುವುದರಿಂದ ಕಣ್ಣಿನ ರೆಪ್ಪೆ ಕೆಳಗೆ ಇರುವ ರಕ್ತನಾಳಗಳು ತುಂಡಾಗುವ ಸಾಧ್ಯತೆ ಇದೆ. ಕಣ್ಣಿನಲ್ಲಿ ಕಿರಿಕಿರಿ ಆದರೆ, ಕಣ್ಣು ಉಜ್ಜುವ ಬದಲು ತಂಪು ವಸ್ತುಗಳನ್ನು ಕಣ್ಣಿನ ಮೇಲೆ ಇಡುವುದು ಉತ್ತಮ ಮಾರ್ಗವಾಗಿದೆ.

ಸನ್​ಗ್ಲಾಸ್​ ಹಾಕುವುದು ಮರೆಯದಿರಿ: ನೇರಳಾತೀತ ಕಿರಣಗಳು ನೇರವಾಗಿ ಕಣ್ಣಿನ ಒಳಗೆ ಹೋದಾಗ ನಮ್ಮ ಕಣ್ಣು ದುರ್ಬಲವಾಗುವುದರ ಜೊತೆಗೆ ಅದು ಕಣ್ಣು ದೃಷ್ಟಿಗೆ ಹಾನಿ ಮಾಡುತ್ತದೆ. ಇದಕ್ಕಾಗಿ ಪ್ರಖರ ಕಿರಣಗಳಿಂದ ತಪ್ಪಿಸಿಕೊಳ್ಳಲು ಉತ್ತಮ ಸನ್​ಗ್ಲಾಸ್​ ಅನ್ನು ಧರಿಸಬೇಕು. ಈ ಸನ್​ಗ್ಲಾಸ್​ ಡ್ರೈ ಐಸ್​ ಸಿಂಡ್ರೋಮ್​ ತಡೆಯಲು ಸಹಾಯ ಮಾಡುತ್ತದೆ.

ನಿರ್ಜಲೀಕರಣಗೊಳ್ಳಬೇಡಿ: ನಮ್ಮ ದೇಹಕ್ಕೆ ನೀರು ಅತ್ಯವಶ್ಯಕವಾಗಿದ್ದು, ನಿರ್ಜಲೀಕರಣಗೊಳ್ಳದಂತೆ ತಡೆಯುತ್ತದೆ. ಆದ್ರತೆ ಕಡಿಮೆ ಆದರೆ ಡ್ರೈ ಐ, ಕಣ್ಣು ಕೆಂಪಾಗುವ ಸಮಸ್ಯೆ ಕಾಡುತ್ತದೆ. ಈ ಹಿನ್ನೆಲೆ ಸಾಕಷ್ಟು ಪ್ರಮಾಣದ ನೀರು ಸೇವಿಸುವುದು ಉತ್ತಮ. ಈ ಎಲ್ಲದರ ಜೊತೆಗೆ ಕಾಲ ಕಾಲಕ್ಕೆ ತಕ್ಕಂತೆ ಕಣ್ಣಿನ ಪರೀಕ್ಷೆ ನಡೆಸುವುದು ಅವಶ್ಯ.

ಇದನ್ನೂ ಓದಿ: ಕಣ್ಣಿನ ಕಾಯಿಲೆಗೆ ಬಳಸುವ ಔಷಧವು ಕೋವಿಡ್ ವಿರುದ್ಧ ಹೋರಾಡಲು ಸಹಕಾರಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.