ETV Bharat / sukhibhava

ಮಾನಸಿಕ ಆರೋಗ್ಯ ವೃದ್ಧಿಗೆ ಸೈಕಲ್​ ತುಳಿಯಿರಿ: ಅಧ್ಯಯನ

ಸೈಕಲ್​ ಪ್ರಯಾಣವೂ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರತಿಕ್ರಿಯೆ ತೋರುತ್ತದೆ. ಇದರಿಂದ ವಿಶಾಲ ವ್ಯಾಪ್ತಿಯ ಪ್ರಯೋಜನವಿದೆ ಎಂದು ಅಧ್ಯಯನ ತಿಳಿಸಿದೆ.

author img

By ETV Bharat Karnataka Team

Published : Jan 16, 2024, 3:51 PM IST

Cycling beneficial for your mental health

ಲಂಡನ್​: ಕಾರು, ಬೈಕ್​, ಬಸ್​ ಬದಲಾಗಿ ಕೆಲಸಕ್ಕೆ ನಿತ್ಯ ಸೈಕಲ್​ನಲ್ಲಿ ಪ್ರಯಾಣಿಸುವುದರಿಂದ ಪರಿಸರಕ್ಕೆ ಮಾತ್ರವಲ್ಲ, ನಿಮ್ಮ ಮಾನಸಿಕ ಆರೋಗ್ಯಕ್ಕೂ ಪ್ರಯೋಜನವಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಸೈಕಲ್​ ಅನ್ನು ತಮ್ಮ ಸಾರಿಗೆಯಾಗಿ ಬಳಕೆ ಮಾಡುವವರು ಇತರ ಸಾರಿಗೆ ವ್ಯವಸ್ಥೆ ಬಳಕೆ ಮಾಡುವುದಕ್ಕಿಂತ ಕಡಿಮೆ ಮಟ್ಟದಲ್ಲಿ ಆತಂಕ ಮತ್ತು ಖಿನ್ನತೆಗೆ ಔಷಧ ಶಿಫಾರಸು ಮಾಡಲಾಗುವುದು ಎಂದು ಅಧ್ಯಯನ ತೋರಿಸಿದೆ.

ಇಂಟರ್​ನ್ಯಾಷನಲ್​ ಜರ್ನಲ್​ ಆಫ್​ ಎಪಿಡೆಮಿಲೊಜಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 16 ರಿಂದ 72 ವಯೋಮಾನದ 3,78,253 ಸ್ಕಾಟ್ಲ್ಯಾಂಡ್​ನ ಭಾಗಿದಾರರನ್ನು ಐದು ವರ್ಷಗಳ ಕಾಲ ವಿಶ್ಲೇಷಣೆ ಮಾಡಲಾಗಿದೆ.

ಈ ವೆಳೆ ಸೈಕಲ್​ ಸವಾರಿಯನ್ನು ಹೆಚ್ಚು ಮಾಡುವವರಲ್ಲಿ ಮಾನಸಿಕ ಆರೋಗ್ಯದ ಅಪಾಯ ಕಡಿಮೆ ಮಟ್ಟದಲ್ಲಿರುವುದು ಕಂಡು ಬಂದಿದೆ. ಅಧ್ಯಯನದಲ್ಲಿ ಎಡಿನ್ಬರ್ಗ್​ ಅಥವಾ ಗ್ಲಾಸ್​ಗೌನಲ್ಲಿ ಕೆಲಸ ಮಾಡುವ ಅಥವಾ ಜೀವಿಸುವವರು ಒಂದು ಮೈಲಿ ಸೈಕಲ್ ಓಡಿಸುವವರು ಈ ಅಧ್ಯಯನದ ಭಾಗವಾಗಿದ್ದಾರೆ. ಇವರೆಲ್ಲ ಆರಂಭದಲ್ಲಿ ಮಾನಸಿಕ ಸಮಸ್ಯೆಗೆ ಯಾವುದೇ ವೈದ್ಯಕೀಯ ಶಿಫಾರಸನ್ನು ಹೊಂದಿರಲಿಲ್ಲ

ಐದು ವರ್ಷದ ಅಧ್ಯಯನದಲ್ಲಿ ಸೈಕಲ್​ ತುಳಿಯದವರಿಗೆ ಹೋಲಿಕೆ ಮಾಡಿದಾಗ ಸೈಕಲ್​ ತುಳಿಯುವವರು ಆತಂಕ ಮತ್ತು ಖಿನ್ನತೆಗೆ ಶೇ 15ರಷ್ಟು ಔಷಧಗಳ ಶಿಫಾರಸುಗಳನ್ನು ಕಡಿಮೆ ಹೊಂದಿದ್ದಾರೆ. ಇದು ಅವರ ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸೈಕಲ್​ ಪ್ರಯಾಣ ನಡೆಸುವುದರಿಂದ ಮಾನಸಿಕ ಆರೋಗ್ಯದಲ್ಲಿ ಪುರಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಡಿಮೆ ಆರೋಗ್ಯದ ಶಿಫಾರಸನ್ನು ಹೊಂದಿದ್ದಾರೆ. ಈ ಅಧ್ಯಯನದ ಫಲಿತಾಂಶವೂ ಸಕ್ರಿಯ ಸೈಕಲ್​ ಪ್ರಯಾಣವನ್ನು ಬೆಂಬಲಿಸಿದೆ. ಅಲ್ಲದೇ ಈ ಸಂಬಂಧದ ಮೂಲ ಸೌಕರ್ಯಗಳ ಹೂಡಿಕೆಗೆ ಪ್ರೋತ್ಸಾಹಿಸಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.

ಈ ಅಧ್ಯಯನದ ಮೂಲಕ ಕೆಲಸದ ವೇಳೆ ಆರ್ಥಿಕ ಚೇತರಿಕೆ ಹಾಗೂ ಸುಸ್ಥಿರ ಜೀವನಕ್ಕೆ ಈ ಸೈಕಲ್​ ಪ್ರಯಾಣ ಪೂರಕ ನೆರವು ನೀಡಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ ಎಂದು ಯುಕೆಯ ಎಡಿನ್​ಬರ್ಗ್​​ ಯುನಿವರ್ಸಿಟಿ ಸಂಶೋಧಕರಾದ ಕ್ರಿಸ್​ ಡಿಬ್ಬೆನ್​ ತಿಳಿಸಿದ್ದಾರೆ. ಇದು ಕೇವಲ ಜನರ ಮಾನಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸುವುದಿಲ್ಲ. ಜೊತೆಗೆ ಇದು ಇಂಗಾಲದ ಹೊರ ಸೂಸುವಿಕೆ, ಟ್ರಾಫಿಕ್​ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಒಟ್ಟಾರೆ ಸೈಕಲ್​ ತುಳಿಯುವುದರಿಂದ ಹಲವು ಪ್ರಯೋಜನಗಳಿರುವುದಂತೂ ನಿಜ (ಐಎಎನ್​ಎಸ್​)

ಇದನ್ನೂ ಓದಿ: ಸುರಕ್ಷಿತ ಎಂದು ಕುಡಿಯುವ ನೀರಿನ ಬಾಟಲ್​ನಲ್ಲಿ ಪತ್ತೆಯಾಯ್ತು ನ್ಯಾನೋಪ್ಲಾಸ್ಟಿಕ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.