ನವದೆಹಲಿ: ನೆರೆಯ ಚೀನಾ ದೇಶದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವುದು ಭಾರತದಲ್ಲೂ ಆತಂಕ ಮೂಡಿಸಿದೆ. ಆದರೆ, ದೆಹಲಿ ಸೇರಿದಂತೆ ದೇಶದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣದಲ್ಲಿದೆ. ಪ್ರಸ್ತುತ ದೆಹಲಿಯಲ್ಲಿ ಸೋಂಕಿನ ಪ್ರಮಾಣ 0.26ರಷ್ಟಿದೆ. ಆದರೂ, 20 ಲಕ್ಷ ದೆಹಲಿಗರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡನೇ ಅಲೆಯಲ್ಲಿ ರಾಷ್ಟ್ರ ರಾಜಧಾನಿ ಕೋವಿಡ್ ಹೊಡೆತಕ್ಕೆ ಸಿಲುಕಿದ ಹಿನ್ನೆಲೆ ಮುನ್ನೆಚ್ಚರಿಗೆ ಮುಂದಾಗಲಾಗಿದ್ದು, ಸದ್ಯ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಮುಂಜಾಗ್ರತೆಗಳನ್ನು ವಹಿಸಲಾಗಿದೆ. ಈ ಹಿಂದೆ ಮಾಸ್ಕ್ ಧರಿಸುವ ನಿಯಮವನ್ನು ಸಡಿಸಲಾಗಿದ್ದು, ಮತ್ತೆ ಜಾರಿಗೆ ತರಲು ಮುಂದಾಗಲಾಗಿದೆ.
ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ದ ಹಿನ್ನೆಲೆ ಕಳೆದ ಹಲವು ತಿಂಗಳಿನಿಂದ ನವರಾತ್ರಿ, ದೀಪಾವಳಿ ಮತ್ತು ಛತ್ ಪೂಜಾ ಸಮಾರಂಭದ ಹಿನ್ನೆಲೆ ಜನರ ಹಬ್ಬದ ಆಚರಣೆಗಾಗಿ ಕೋವಿಡ್ ನಿಯಮ ಸಡಿಲಿಸಲಾಗಿತ್ತು.
ಚೀನಾದಲ್ಲಿ ಹೆಚ್ಚಿದ ಸೋಂಕು: ಸದ್ಯ ಸೋಂಕಿನ ಏರಿಕೆ ರಾಷ್ಟ್ರ ರಾಜಧಾನಿ ಸೇರಿದಂತೆ ಇತರ ರಾಜ್ಯದಲ್ಲಿ ಕಂಡಿಲ್ಲ. ಕೊರೋನಾ ವೈರಸ್ ದುರ್ಬಲವಾಗಿದೆ ಎಂದು ಭಾವಿಸಲಾಗಿತ್ತು. ಇದೇ ಹಿನ್ನೆಲೆ ಯಾವುದೇ ಹಾನಿ ಆಗುವುದಿಲ್ಲ ಎನ್ನಲಾಗಿತ್ತು. ಆದರೆ, ಈಗ ಚೀನಾ, ಜಪಾನ್, ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ದೇಶದಲ್ಲೂ ಆತಂಕ ಮೂಡಿಸಿದೆ. ಈ ಕುರಿತು ಸಲಹೆ ನೀಡಿರುವ ತಜ್ಞರು ಆತಂಕದ ಅವಶ್ಯಕತೆ ಇಲ್ಲ, ಜನರು ಮುನ್ನೆಚ್ಚರಿಕೆ ಪಾಲಿಸುವುದು ಒಳ್ಳೆಯದು ಎಂದು ಸೂಚನೆ ನೀಡಿದ್ದಾರೆ.
ಮೊದಲ ಕೋವಿಡ್ ಅಲೆಯಲ್ಲಿ ಕೋವಿಡ್ ಪತ್ತೆಯಾದಾಗ ಅಲ್ಪಾ ವೆರಿಯಂಟ್ 'ಆರ್2' ಇತ್ತು. 2020 ರಲ್ಲಿ ಆಲ್ಫಾ ರೂಪಾಂತರದಿಂದ ಸೋಂಕು ಹೆಚ್ಚಾದಾಗ ಜನರಲ್ಲಿ ಭೀತಿ ಇತ್ತು. ನಂತರ 5-6 ರ ರೂಪಾಂತರದೊಂದಿಗೆ ಡೆಲ್ಟಾ ರೂಪಾಂತರವು 2021 ರಲ್ಲಿ ಅನೇಕ ಹಾನಿಗೆ ಕಾರಣವಾಯಿತು.
ಚೀನಾದಲ್ಲಿ ಸೋಂಕಿನ ಹರುಡುವಿಕೆ ಹೆಚ್ಚು: ಪ್ರಸ್ತುತ ಚೀನಾದಲ್ಲಿ ಸಮಾನಾಂತರದ ರೂಪಾಂತಾರ ಇದ್ದು, ಇದರ ಉತ್ಪಾದನ ಅಂಶ 18 ಆಗಿದೆ. ಇದರಿಂದ ಸೋಂಕು ತೀವ್ರತರದಲ್ಲಿ ಹರಡುತ್ತದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಬೇಕಿದೆ. ವೈರಸ್ ಪರಿಣಾಮ ಉಸಿರಾಟದ ಸಮಸ್ಯೆ ಹೊಂದಿರುವವರಲ್ಲಿ ಪತ್ತೆಯಾಗುತ್ತಿದ್ದು, ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಂಡು ಬರುತ್ತಿದೆ.
ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಆಡಳಿತ ಕಾರಣವಾಗಿದೆ. ಜೀರೋ ಟೊಲೊರೆನ್ಸ್ ಪಾಲಿಸಿ ಜೊತೆಗೆ ಅಲ್ಲಿನ ಲಸಿಕೆ ಪರಿಣಾಮಕಾರಿಯಾಗಿಲ್ಲ. ಜೊತೆಗೆ 19ರಿಂದ 60 ವರ್ಷದ ವಯೋಮಾನದೊಳಗಿನವರಿಗೆ ಮಾತ್ರ ಪ್ರಾಮುುಖ್ಯತೆ ಆಧಾರದ ಮೇಲೆ ಲಸಿಕೆ ನೀಡಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಡಾ. ರಾಮ್ ಎಸ್ ಉಪಾಧ್ಯಾಯ ತಿಳಿಸಿದ್ದಾರೆ.
ಸಾವನ್ನಪ್ಪುತ್ತಿರುವುದು ಆರೋಗ್ಯವಂತರಲ್ಲ: ಶೇ 40 ರಷ್ಟು ಲಸಿಕೆಯನ್ನು 60 ವರ್ಷದ ಮೇಲ್ಪಟ್ಟರಿಗೆ ನೀಡಲಾಗಿದೆ. ಚೀನಾದಲ್ಲಿ ಜನಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ ಅಧಿಕವಾಗಿದೆ. ಅಲ್ಲಿ ಕೋವಿಡ್ನಿಂದ ಸಾವನ್ನಪ್ಪಿದವರಲ್ಲಿ ಧೂಮಪಾನ, ಬೊಜ್ಜಿನ ಸಮಸ್ಯೆ ಮತ್ತು ಗರ್ಭಿಣಿಯರ ಸಂಖ್ಯೆ ಅಧಿಕವಿದೆ.
ಸಮರ್ಪಕ ನಿರ್ಹಣೆ ಕೊರತೆ: ಪತ್ತೆ ಮಾಡು ಮತ್ತು ಚಿಕಿತ್ಸೆ ನೀಡು ನಿಯಮ ಚೀನಾದಲ್ಲಿದೆ. ಅಲ್ಲಿ ಜ್ವರದ ತಾಪಮಾನ ಅಥವಾ ನೋವು ನಿವಾರಕಗಳಂತಹ ಮೆಡಿಸಿನ್ಗಳನ್ನು ಮಾತ್ರ ನೀಡಲಾಗುತ್ತಿದೆ. ಕೋವಿಡ್ ಸೋಂಕಿತರಿಗೆ ನೋವು ನಿವಾರಕ ಮಾತ್ರ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಚೀನಾದಲ್ಲಿನ ಸೋಂಕಿತರಲ್ಲಿ ಜ್ವರ, ಗಂಟಲು ನೋವು, ಭೇದಿ ಮತ್ತು ವಾಂತಿ ಕಾಣಿಸಿಕೊಳ್ಳುತ್ತಿದೆ.
ಅಲ್ಲಿ ಸರ್ಕಾರ ಜೀರೋ ಟಾಲರೆನ್ಸ್ ನಿಯಮ ಜಾರಿ ಮಾಡಿದ ಹಿನ್ನೆಲೆ ಪರಿಸ್ಥಿತಿ ಬಿಗಾಡಾಯಿಸಿದೆ ಎಂದು ಹೇಳಲಾಗಿದೆ. ಪ್ರಕರಣಗಳ ಪತ್ತೆಗೆ ತಕ್ಷಣದ ಲಾಕ್‌ಡೌನ್ ಜಾರಿ ಮಾಡಿರುವುದರಿಂದ, ನೈಸರ್ಗಿಕ ವಿಧಾನದ ಮೂಲಕ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸುವ ಕಾರ್ಯ ಆಗಿಲ್ಲ ಎಂದಿದ್ದಾರೆ ರಾಮ್ ಎಸ್ ಉಪಾದ್ಯಾಯ್
ಭಾರತದಲ್ಲಿ ಆತಂಕ ಬೇಡ: ಭಾರತದಲ್ಲಿ ಕೋವಿಡ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಲಸಿಕೆಗಳ ನೀಡುವಿಕೆಗೆ ಒತ್ತು ನೀಡಲಾಗಿದೆ. ಶೇ 90ರಷ್ಟು ದೇಶದ ಜನರಿಗೆ ಲಸಿಕೆ ಲಭ್ಯವಾಗಿದೆ. ಜೊತೆಗೆ ದೀರ್ಘಕಾಲದವರೆ ಲಾಕ್‌ಡೌನ್ ಅನ್ನು ವಿಧಿಸಲಾಗಲಿಲ್ಲ. ಇದರಿಂದ ನೈಸರ್ಗಿಕ ವಿಧಾನದ ಮೂಲಕ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲಾಗಿರುವುದರಿಂದ ಸೋಕು ದುರ್ಬಲವಾಗಿದೆ.
ಇದರ ಜೊತೆಗೆ ಮುನ್ನೆಚ್ಚರಿಕೆ ಹಾಗೂ ವಿಟಮಿನ್ ಡಿ,ಎ,ಇ, ಕೆ, ಜಿಂಕ್ ಮತ್ತು ವಿಟಮಿನ್ ಸಿ ಹೊಂದಿರುವ ಸಸ್ಯಾಧಾರಿತ ಪೂರಕ ಡಯಟ್ ನೀಡುವ ಮೂಲಕ ರೋಧಕ ಶಕ್ತಿಯನ್ನು ಸುಸ್ಥಿರ ನಡೆಸುವ ಕಾರ್ಯ ಮಾಡಲಾಗಿದೆ ಎಂದರು.
ಚೀನಾದಲ್ಲಿ ಕೋವಿಡ್ ಹೆಚ್ಚುತ್ತಿರುವುದು ಕಾಳಜಿ ವಿಷಯವಾಗಿದೆ. ಆದರೆ, ನಾವು ಗಾಬರಿಯಾಗುವುದು ಬೇಡ. ನಾವು ಉತ್ತಮ ಗುಣಮಟ್ಟದ ಲಸಿಕೆಯನ್ನು ಎಲ್ಲರಿಗೆ ನೀಡಿಮ ದಾಖಲೆ ನಿರ್ಮಿಸಿದ್ದೇವೆ. ಸರ್ಕಾರದ ಮಾರ್ಗದರ್ಶನ ಬಗ್ಗೆ ನಂಬಿಕೆ ಹೊಂದಿ, ಅದನ್ನು ಫಾಲೋ ಮಾಡಬೇಕು ಎಂದು ಕೋವಿಶೀಲ್ಡ್ ಲಸಿಕೆ ಉತ್ಪಾದನಾ ಸಂಸ್ಥೆ ಸೆರಾಂನ ಪ್ರಧಾನ ಕಾರ್ಯದರ್ಶಿ ಆಧಾರ್ ಪೂನವಾಲಾ ತಿಳಿಸಿದ್ದಾರೆ.
ಇದನ್ನು ಓದಿ: ಮತ್ತೆ ಕೋವಿಡ್ ಆತಂಕ.. ಗುಜರಾತ್ನಲ್ಲಿ ಓಮಿಕ್ರಾನ್ ಹೊಸ ಬಿಎಫ್ 7 ರೂಪಾಂತರ ಪತ್ತೆ