ಗರ್ಭಾವಸ್ಥೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ ತಾಯಿಯಿಂದ ಜನಿಸಿದ ಮಗುವಿನಲ್ಲಿ ಸ್ಥೂಲಕಾಲ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ತಿಳಿಸಿದೆ. 2019ರಲ್ಲಿ ಅಮೆರಿಕದಲ್ಲಿ 100 ಮಿಲಿಯನ್ಗೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಈ ಸೋಂಕು ದೀರ್ಘ ಅವಧಿಯಲ್ಲಿ ಆರೋಗ್ಯ ಪರಿಣಾಮ ಹೊಂದಿದೆ ಎಂಬ ಸಂಬಂಧ ಮಾಹಿತಿ ಸೀಮಿತವಾಗಿದೆ ಎಂದು ವರದಿ ತಿಳಿಸಿದೆ.
ಕೋವಿಡ್ ಹೊಂದಿರುವ ಸಂತಾನೋತ್ಪತ್ತಿ ವಯಸ್ಸಿನ ಗರ್ಭಿಣಿಯರು ಶೇ 9ರಷ್ಟಿದಿದ್ದಾರೆ. ಇದು ಮುಂದಿನ ಐದು ವರ್ಷಗಳಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ತಾಯಂದಿರು ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಗರ್ಭಾವಸ್ಥೆಯಲ್ಲಿ ಸೋಂಕಿಗೆ ತುತ್ತಾಗುವ ಮಗು, ಜನಿಸಿದ ಬಳಿಕ ಅದರ ಬೆಳವಣಿಗೆಯಲ್ಲಿ ಸ್ಥೂಲಕಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಭವಿಷ್ಯದಲ್ಲಿ ಮಗುವು ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಬಹುದು ಎಂದು ಬೋಸ್ಟನ್ನ ಮೆಸ್ಸಾಚ್ಯೂಸೆಟ್ ಜನರಲ್ ಆಸ್ಪತ್ರೆಯ ಎಂಡಿ ಲಿಂಡ್ಸೆ ಟಿ ಫೋರ್ಮನ್ ತಿಳಿಸಿದ್ದಾರೆ.
ಸೋಂಕಿತ ಗರ್ಭಿಣಿಯರು ಮತ್ತು ಅವರ ಮಕ್ಕಳ ಮೇಲೆ ಕೋವಿಡ್ ಪರಿಣಾಮ ಕುರಿತು ಅರ್ಥೈಸಿಕೊಳ್ಳಲು ಬಹಳಷ್ಟು ಅಧ್ಯಯನವಾಗಬೇಕಿದೆ ಎಂದಿದ್ದಾರೆ ಅವರು. ಈ ಸಂಶೋಧನೆಗಾಗಿ ಗರ್ಭಾವಸ್ಥೆಯಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿ ಜನಿಸಿದ ಕಡಿಮೆ ತೂಕದ 150 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸೋಂಕಿತ ತಾಯಿಯಿಂದ ಜನಿಸಿದ ಮಕ್ಕಳ ವರ್ಷದೊಳಗೆ ಉತ್ತಮ ತೂಕ ಪಡೆದರೆ, ಸೋಂಕಿತರಲ್ಲದ ತಾಯಿಯಿಂದ ಮಕ್ಕಳು ಜನಿಸಿದ ತೂಕ ಕಡಿಮೆ ಇದೆ. ಈ ಬದಲಾವಣೆಗಳು ಸ್ಥೂಲಕಾಲ, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆ ಜೊತೆ ಹೊಂದಿರುವ ಸಂಬಂಧ ತೋರಿಸುತ್ತದೆ.
ಭ್ರೂಣದಿಂದ ಜನನದವರೆಗೆ ಸೋಂಕಿತ ತಾಯಂದಿರ ಮಕ್ಕಳು ದೀರ್ಘಾವಧಿ ಸಂಬಂಧ ಹೊಂದಿದ್ಯಾ ಎಂಬುದರ ಸಂಬಂಧ ಹೆಚ್ಚಿನ ಅಧ್ಯಯನ ಬೇಕಿದೆ. ಇದು ಕೋವಿಡ್-19 ತಡೆಗಟ್ಟುವ ವ್ಯಕ್ತಿಗಳಲ್ಲಿ ತಂತ್ರಗಳ ವ್ಯಾಪಕ ಅನುಷ್ಠಾನವನ್ನು ಒತ್ತಿ ಹೇಳುತ್ತದೆ ಎಂದು ಮೆಸ್ಸಾಚ್ಯೂಸೆಟ್ ಜನರಲ್ ಆಸ್ಪತ್ರೆಯ ಆಂಡ್ರಿಯಾ ಜಿ ಎಡ್ಲೊ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ದೀರ್ಘವಾದ ಅಧ್ಯಯನದ ಅವಶ್ಯಕತೆ ಇದೆ. ಈ ಅಧ್ಯಯನ ಎಂಡೋಕ್ರೈನ್ ಸೊಸೈಟಿಯ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಂನಲ್ಲಿ ಅಧ್ಯಯನವನ್ನು ಪ್ರಕಟಿಸಲಾಗಿದೆ
ನರಗಳ ಮೇಲೆ ಪ್ರಭಾವ: ಸಾರ್ಸ್ ಕೋವ್- 2ವಿನ ದೀರ್ಘ ಕಾಲದ ಅಪಾಯದ ಕುರಿತು ಈಗಾಗಲೇ ಅನೇಕ ಸಂಶೋಧನೆಗಳು ನಡೆದಿದೆ. ಇದರಲ್ಲಿ ಈ ಸೋಂಕು ಹುಟ್ಟುವ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಹೊಸ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಗರ್ಭಾವಸ್ಥೆಯಲ್ಲಿ ಸಾರ್ಸ್-ಕೋವ್-2 ಸೋಂಕು ಹೊಂದಿರುವ ತಾಯಂದಿರಿಗೆ ಜನಿಸುವ ಗಂಡು ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ಸಮಸ್ಯೆಗಳು ಕಾಣುತ್ತವೆ. ಮಗು ಜನಿಸಿದ 12 ತಿಂಗಳೊಳಗೆ ಆ ಗಂಡು ಮಕ್ಕಳಲ್ಲಿ ಅಟಿಸಂ ಸ್ಪಕ್ಟ್ರಂ ಸಮಸ್ಯೆಗಳು ಕಾಣುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಜಾಮಾ ನೆಟ್ವರ್ಕ್ ಓಪನ್ನಲ್ಲಿ ಪ್ಟಕಸಿಲಾಗಿದೆ. ಕೋವಿಸ್ ಸಾಕಾರಾತ್ಮಕತೆಯ ಸೋಂಕ ಗಂಡು ಮಕ್ಕಳು ಹುಟ್ಟಿದ 12 ತಿಂಗಳಲ್ಲಿ ನರಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದರೊಂದಿಗೆ ಸಂಬಂಧ ಹೊಂದಿದೆ ಎಂಬುದು ಅಧ್ಯಯನ ತೋರಿಸಿದೆ.
ಇದನ್ನೂ ಓದಿ: ಲಸಿಕೆಯಿಂದ ಕೋವಿಡ್ ಸೋಂಕು ಅಪಾಯ ಕಡಿಮೆ