ಲಂಡನ್: ಸಾಮಾನ್ಯ ತೂಕದ ವ್ಯಕ್ತಿಗಳಿಗೆ ಹೋಲಿಸಿ ನೋಡಿದಾಗ ಹೆಚ್ಚಿನ ಸ್ಥೂಲಕಾಯತೆ ಹೊಂದಿರುವವರಲ್ಲಿ ಕೋವಿಡ್ 19 ಲಸಿಕೆಯ ರಕ್ಷಣಾತ್ಮಕತೆ ಬಲು ಬೇಗ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಸ್ಥೂಲಕಾಯತೆ ಹೊಂದಿರುವ ಜನರು ಬಲು ಬೇಗ ಆಸ್ಪತ್ರೆಗೆ ಒಳಗಾಗಿ, ವೆಂಟಿಲೇಷನ್ ಅವಶ್ಯಕತೆ ಬೇಡುತ್ತಾರೆ. ಜೊತೆಗೆ ಇವರಲ್ಲಿ ಸಾವಿನ ಪ್ರಕರಣಗಳು ವರದಿ ಆಗುತ್ತವೆ. ಆದರೂ, ಇವರಿಗೆ ಲಸಿಕೆಗಳೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.
ಈ ಸಂಬಂಧ ಕೇಂಬ್ರಿಡ್ಜ್ ಮತ್ತು ಎಡಿನಬರ್ಗ್ ಯುನಿವರ್ಸಿಟಿ ತಂಡ ಅಧ್ಯಯನ ನಡೆಸಿದೆ. ಸ್ಥೂಲಕಾಯತೆ ಹೊಂದಿರುವ ಮಂದಿ ತಮ್ಮ ಪ್ರತಿರಕ್ಷಣಾ ವ್ಯವಸ್ಥೆ ನಿರ್ವಹಣೆ ಮಾಡಲು ಪದೇ ಪದೆ ಬೂಸ್ಟರ್ ಡೋಸ್ ಪಡೆಯುವುದು ಅವಶ್ಯಕ. ಆದಾಗ್ಯೂ ಬೂಸ್ಟರ್ನ ಆ್ಯಂಟಿಬಾಡಿಸ್ 15 ವಾರಗಳ ಸಮಯಕ್ಕೆ ಇಳಿಯುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ನೇಚರ್ ಮೆಡಿಸಿನ್ ನಲ್ಲಿ ಪ್ರಕಟಿಸಲಾಗಿದೆ.
ಸ್ಥೂಲಕಾಯದವರಲ್ಲಿ ಇಮ್ಯೂನಿಟಿ ಇಳಿಕೆ: 3.5 ಮಿಲಿಯನ್ ಜನರ ಆರೋಗ್ಯದ ನೈಜ ಸಮಯದ ದತ್ತಾಂಶವನ್ನು ಎಡಿನಬರ್ಗ್ ಯುನಿವರ್ಸಿಟಿ ತಂಡ ಟ್ರಾಕ್ ಮಾಡಿದೆ. ಕೋವಿಡ್ 19ನಲ್ಲಿ ಎರಡು ಲಸಿಕೆ ಪಡೆದ ವಯಸ್ಕರಲ್ಲಿ ಆಸ್ಪತ್ರೆ ದಾಖಲೀಕರಣ ಮತ್ತು ಸಾವಿನ ಪ್ರಮಾಣವನ್ನು ನೋಡಲಾಗಿದೆ. ಸಾಮಾನ್ಯ ಬಿಎಂಐ ಹೊಂದಿರುವವರಿಗೆ ಹೋಲಿಕೆ ಮಾಡಿದಾಗ ಹೆಚ್ಚಿನ ಸ್ಥೂಲಕಾಲ ಹೊಂದಿರುವವರು ಶೇ 76ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ
ಸಾಮಾನ್ಯ ತೂಕ ಹೊಂದಿರುವವರ ಜನರನ್ನು ಹೆಚ್ಚಿನ ಸ್ಥೂಲಕಾಲ ಹೊಂದಿರುವ ಜನರ ರಕ್ತದಲ್ಲಿನ ಪ್ರತಿರಕ್ಷಣಾ ಕೋಶವನ್ನು ಕೆಂಬ್ರೀಡ್ಜ್ ತಂಡ ಅಧ್ಯಯನ ನಡೆಸಿದೆ. ಎರಡನೇ ಡೋಸ್ ಕೋವಿಡ್ ಲಸಿಕೆ ಬಳಿಕ ಆರು ತಿಂಗಳ ಕಾಲ ಸ್ಥೂಲಕಾಯ ಹೊಂದಿರುವ ಜನರು ಸಾಮಾನ್ಯ ತೂಕ ಹೊಂದಿರುವ ಕೋವಿಡ್ ವೈರಸ್ ಹೊಂದಿರುವರಷ್ಟೇ ಮಟ್ಟದ ಆ್ಯಂಟಿಬಾಡಿಸ್ ಹೊಂದಿರುವುದು ಪತ್ತೆ ಆಗಿದೆ.
ಆದರೆ, ಸ್ಥೂಲಕಾಲ ಹೊಂದಿರುವ ಜನರಲ್ಲಿ ವೈರಸ್ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಕಾರ್ಯಕ್ಷಮತೆ ಕಡಿಮೆಯಾಗಿದೆ. ಹೆಚ್ಚಿನ ಸ್ಥೂಲಕಾಲ ಹೊಂದಿರುವ ಶೇ 55ರಷ್ಟು ಹೊಂದಿರುವವರಲ್ಲಿ ಪತ್ತೆಯಾಗದ ತಟಸ್ಥ ಸಾಮರ್ಥ್ಯ ಪತ್ತೆಯಾಗಿದೆ.
ಬ ಈ ಅಧ್ಯಯನವೂ ಸ್ಥೂಲಕಾಯ ಹೊಂದಿರುವವರಲ್ಲಿ ಲಸಿಕೆಯ ಪ್ರತಿಕ್ರಿಯೆ ಸೋಂಕಿನ ಅಪಾಯದ ಮೇಲೆ ಪರಿಣಾಮ ಹೊಂದಿದೆ ಎಂದು ಡಾ ಅಗತಾ ತಿಳಿಸಿದ್ದಾರೆ. ಅಲ್ಲದೇ ಪ್ರತಿರಕ್ಷಣಾ ಕಾರ್ಯ ಹೇಗೆ ರೂಪಿಸುವುದು ಮತ್ತು ಆರೋಗ್ಯದ ಅಪಾಯವನ್ನು ಕಡಿಮೆ ಮಾಡುವುದು ಎಂಬುದರ ಕುರಿತು ತುರ್ತಾಗಿ ಅರ್ಥೈಸಿಕೊಳ್ಳಬೇಕಿದೆ ಎಂದಿದ್ದಾರೆ.
ಸ್ಥೂಲಕಾಯ ಹೊಂದಿರುವವರಲ್ಲಿ ಆ್ಯಂಟಿಬಾಡಿಸ್ ಕಡಿಮೆ ಪರಿಣಾಮದ ಸಾಮಾರ್ಥ್ಯ ಹೊಂದಿರುತ್ತದೆ. ಕಾರಣ ಆ್ಯಂಟಿಬಾಡಿಗಳನ್ನು ಅದೇ ಶಕ್ತಿಯೊಂದಿಗೆ ವೈರಸ್ನೊಂದಿಗೆ ಹೊಂದಿಕೊಳ್ಳುವುದಿಲ್ಲ. ಮೂರನೇ ಡೋಸ್ (ಬೂಸ್ಟರ್) ಕೋವಿಡ್ ಲಸಿಕೆ ನೀಡಿದಾಗ ಈ ಆ್ಯಂಟಿಬಾಡಿ ಸ್ಥೂಲಕಾಯ ಮತ್ತು ಹೆಚ್ಚಿನ ಅಪಾಯ ಹೊಂದಿರುವವರಲ್ಲಿ ಮತ್ತೆ ಸ್ಥಾಪಿತವಾಗುತ್ತದೆ. ಆದರೆ, ಈ ಇಮ್ಯೂನಿಟಿ ಹೆಚ್ಚಿನ ಸ್ಥೂಲಕಾಯ ಹೊಂದಿರುವವರಲ್ಲಿ ಬಲು ಬೇಗ ಇಳಿಕೆ ಮಾಡುತ್ತದೆ. ಇದರಿಂದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಜನಸಂಖ್ಯೆಗೆ ಅನುಗುಣವಾಗಿ ದೀರ್ಘ ಕೋವಿಡ್ ಲಕ್ಷಣ ವ್ಯತ್ಯಾಸ